ಗುಡಿಬಂಡೆ: ಸರ್ಕಾರಿ ಹಾಸ್ಟಲ್ ರೂಮ್ ನಲ್ಲಿಯೇ ಅಪ್ರಾಪ್ತರ ಪ್ರೇಮ-ಕಾಮ: ಸಂಸಾರಸ್ಥರೇ ನಾಚಿನೀರಾಗಿದ್ದರು!
ಮೃತ ಮನೋಹರ್ ಹಾಸ್ಟಲ್ ಬಳಿ ಬ್ಲೇಡ್ ನಿಂದ ಕೈ ಕೊಯ್ದುಕೊಂಡಿದ್ದಾನೆ. ಸುರಿಯುವ ರಕ್ತದಲ್ಲಿ ಹೆದ್ದಾರಿ ಬಳಿ ಆಗಮಿಸಿ ಲಾರಿ ಕೆಳಗೆ ತೂರಿದ್ದಾನೆ. ಆಗಲೂ ಆತನ ಪ್ರಿಯತಮೆ ಜೊತೆಯಲ್ಲಿಯೇ ಇದ್ದಳು - ಮೃತನ ಸಂಬಂಧಿಗಳ ಆರೋಪ
ಅವು ಇನ್ನೂ ಅಪ್ರಾಪ್ತ ವಯಸ್ಸಿನ (Minor) ಕಂದಮ್ಮಗಳು. ಅವಳೋ ಎಸ್.ಎಸ್.ಎಲ್.ಸಿ ವಿದ್ಯಾರ್ಥಿನಿಯಾದ್ರೆ… ಅವನು ಕ್ಲೀನರ್ ಕೆಲಸ ಮಾಡಿಕೊಂಡಿದ್ದ. ಶಾಲೆಗೆ ಹೋಗಿಬರುವಾಗ ಪರಿಚಯವಾಗಿ ಸ್ನೇಹವು ಪ್ರೀತಿ-ಪ್ರೇಮ-ಕಾಮಕ್ಕೆ (Love Story) ತಿರುಗಿತ್ತು. ಕೊನೆಗೆ ಇಬ್ಬರೂ ಒಬ್ಬರನ್ನೊಬ್ಬರು ಬಿಟ್ಟು ಇರದಂತಾಗಿತ್ತು. ಆದ್ರೆ ಆಕೆಗೆ ಈಗ ಎಸ್.ಎಸ್.ಎಲ್.ಸಿ ಪರೀಕ್ಷೆಗಳು ನಡೆಯುತ್ತಿವೆ. ಇದ್ರಿಂದ ಪ್ರಿಯತಮನನ್ನು ಅವಾಯ್ಡ್ ಮಾಡುತ್ತಿದ್ದಳು. ಇದ್ರಿಂದ ಜಿಗುಪ್ಸೆಗೊಂಡ ಅಪ್ರಾಪ್ತ ಪ್ರಿಯತಮ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಲಾರಿ ಕೆಳಗೆ ತೂರಿ ಅನುಮಾನಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾನೆ. ಅಷ್ಟಕ್ಕೂ ಅಲ್ಲಿ ಆಗಿದ್ದಾದ್ರೂ ಏನ್ ಅಂತ ಡೀಟೇಲ್ ಸ್ಟೋರಿ (Love Tragedy) ಇಲ್ಲಿದೆ ನೋಡಿ!! ನಿಜವಾದ ಗಂಡ ಹೆಂಡತಿಯೇ ನಾಚುವಂತೆ ಅಪ್ರಾಪ್ತ ಜೋಡಿಯೊಂದು ಓದೋ ವಯಸ್ಸಿನ ಹದಿಹರೆಯದಲ್ಲಿ ಲವ್ವಿಡವ್ವಿ ಶುರುವಚ್ಚಿಕೊಂಡಿದ್ರು. ಆಕೆ ಇನ್ನೂ ಈಗ ತಾನೆ 16 ವರ್ಷ ವಯಸ್ಸು ದಾಟಿದ್ದಾಳೆ, ಅವನೋ ಪ್ರಥಮ ಪಿ.ಯು.ಸಿ ಬಿಟ್ಟು ಕ್ಲೀನರ್ ಕೆಲಸ ಮಾಡಿಕೊಂಡಿದ್ದ. ಆಕೆ ಚಿಕ್ಕಬಳ್ಳಾಪುರ ಜಿಲ್ಲೆಯ (Chikkaballapur) ಗುಡಿಬಂಡೆ (Gudibande) ತಾಲೂಕಿನ ಬೀಚಗಾನಹಳ್ಳಿ ಕ್ರಾಸ್ ಬಳಿ ಸರ್ಕಾರಿ ಬಾಲಕಿಯರ ಹಾಸ್ಟಲ್ ನಲ್ಲಿ ಆಶ್ರಯ ಪಡೆದು ಎಸ್.ಎಸ್.ಎಲ್.ಸಿ ವಿದ್ಯಾಭ್ಯಾಸ ಮಾಡುತ್ತಿದ್ದಳು.
ಆಗ ಶಾಲೆಗೆ ಹೋಗಿ ಬರುವಾಗ ಪರಿಚಯವಾದ ಬೀಚಗಾನಹಳ್ಳಿ ನಿವಾಸಿ 17 ವರ್ಷದ ಮನೋಹರ್ ಎಂಬಾತ ಪ್ರೀತಿ ಪ್ರೇಮ ಅಂತ ಆಕೆಯ ಜೊತೆ ಹಾಸ್ಟೆಲ್ ಗೆ ಬಂದು ಹೋಗುವುದನ್ನು ಮಾಡುತ್ತಿದ್ದ. ಆದ್ರೆ ನಿನ್ನೆ ರಾತ್ರಿ ಆಕೆಗೆ ಕರೆ ಮಾಡಿದ ಮನೋಹರ್… ಆಕೆಯ ಹತ್ತಿರ ಬಂದು ಹೋಗಿದ್ದಾನಂತೆ. ಕೊನೆಗೆ ಮಧ್ಯರಾತ್ರಿಯಲ್ಲಿ ಚಲಿಸುವ ಲಾರಿಗೆ ಸಿಲುಕಿ ಸಾವಿಗೆ ಶರಣಾಗಿದ್ದಾನೆ. ಈ ಮಧ್ಯೆ, ಆತನ ಸಂಬಂಧಿಗಳು ಸಾವಿನಲ್ಲಿ ಅನುಮಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಬೇಸಿಗೆ ರಜೆ ನಿಮಿತ್ತ ಅಜ್ಜಿ ಮನೆಗೆ ಬಂದಿದ್ದ ಬಾಲಕ ಶವವಾಗಿ ಪತ್ತೆ: ಅತ್ಯಾಚಾರ ಮಾಡಿ ಕೊಲೆ ಮಾಡಿರುವ ಶಂಕೆ
ಇನ್ನೂ 17 ವರ್ಷದ ಮನೋಹರ್ ಹಾಗೂ ಎಸ್.ಎಸ್.ಎಲ್.ಸಿ ವಿದ್ಯಾರ್ಥಿನಿ ಕಳೆದ ಎರಡು ವರ್ಷಗಳಿಂದಲೂ ಗಾಢವಾಗಿ ಪ್ರೀತಿಸುತ್ತಿದ್ದರಂತೆ! ಒಬ್ಬರನ್ನೊಬ್ಬರು ಬಿಟ್ಟು ಇರುತ್ತಿರಲಿಲ್ಲವಂತೆ. ಮನೋಹರನನ್ನು ಮದುವೆಯಾಗುವುದಾಗಿ ಆಕೆಯೇ ಹೇಳಿಕೊಂಡಿದ್ದಳಂತೆ. ಕೊನೆಗೆ ನಿನ್ನೆ ಹಾಸ್ಟಲ್ ಬಳಿ ಹೋದಾಗ ಏನೊ ಆಗಿದೆ… ಅವನ ಸಾವಿಗೆ ಅವಳು ಹಾಗೂ ಅವಳ ಸಂಬಂಧಿಗಳೆ ಕಾರಣ ಅಂತ ಮೃತನ ಸಂಬಂಧಿಗಳು ಇದೀಗ ಆರೋಪ ಮಾಡಿದ್ದಾರೆ.
ಮೃತ ಮನೋಹರ್, ಲಾರಿ ಕೆಳಗೆ ಸಿಲುಕುವುದಕ್ಕೂ ಮುನ್ನ… ಹಾಸ್ಟಲ್ ಬಳಿ ಬಂದು ಬ್ಲೇಡ್ ನಿಂದ ತನ್ನ ಕೈ ಕೊಯ್ದುಕೊಂಡಿದ್ದಾನೆ. ಸುರಿಯುವ ರಕ್ತದಲ್ಲಿ ಹೆದ್ದಾರಿ ಬಳಿ ಆಗಮಿಸಿ ಲಾರಿ ಕೆಳಗೆ ತೂರಿದ್ದಾನೆ. ಆಗಲೂ ಆತನ ಪ್ರಿಯತಮೆ ಆತನ ಜೊತೆಯಲ್ಲಿಯೇ ಇದ್ದಳು ಎಂದು ಮೃತನ ಸಂಬಂಧಿಗಳು ಆರೋಪಿಸಿದ್ದಾರೆ. ಗುಡಿಬಂಡೆ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.
ವರದಿ: ಭೀಮಪ್ಪ ಪಾಟೀಲ, ಟಿವಿ 9, ಚಿಕ್ಕಬಳ್ಳಾಪುರ
ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:39 am, Tue, 11 April 23