8 ತಿಂಗಳ ಮಗಳನ್ನು ದಡದಲ್ಲಿ ಬಿಟ್ಟು ಕೆರೆಗೆ ಹಾರಿದ ತಾಯಿ; ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರಿಂದ ತಾಯಿಗಾಗಿ ಹುಡುಕಾಟ
ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ತಾಯಿ ಪರಿಮಳಾಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಪತಿ ಮುನಿರಾಜು ಮದ್ಯವೆಸನಿ ಆಗಿದ್ದರಿಂದ ಮನನೊಂದಿದ್ದ ಪರಿಮಳಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಚಿಕ್ಕಬಳ್ಳಾಪುರ: 8 ತಿಂಗಳ ಮಗಳು ಚರಿತ್ರಾಳನ್ನ ದಡದಲ್ಲಿ ನಿಲ್ಲಿಸಿ ಕೆರೆಯಲ್ಲಿ(pond) ಮುಳುಗಿ ಮಹಿಳೆ ಪರಿಮಳ ಆತ್ಮಹತ್ಯೆ(Suicide) ಮಾಡಿಕೊಂಡ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ನೂಗಲಬಂಡೆಯಲ್ಲಿ ನಡೆದಿದೆ. ತಾಯಿ ನೀರಿನಲ್ಲಿ ಮುಳುಗುವುದನ್ನು ನೋಡಿದ 8 ತಿಂಗಳ ಮಗು ತಾಯಿ ಹುಡುಕಿಕೊಂಡು ನೀರಿಗಿಳಿದಿದೆ. ಇದನ್ನು ಗಮನಿಸಿದ ಸ್ಥಳೀಯರು ಮಗುವನ್ನು ರಕ್ಷಿಸಿದ್ದಾರೆ.
ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ತಾಯಿ ಪರಿಮಳಾಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಪತಿ ಮುನಿರಾಜು ಮದ್ಯವೆಸನಿ ಆಗಿದ್ದರಿಂದ ಮನನೊಂದಿದ್ದ ಪರಿಮಳಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇತ್ತೀಚಿಗಷ್ಟೇ ಮುನಿರಾಜುನನ್ನು ಮದ್ಯ ವೇಸನ ಮುಕ್ತ ಕೇಂದ್ರಕ್ಕೆ ದಾಖಲು ಮಾಡಲಾಗಿತ್ತು. ಆದ್ರೆ ಮುನಿರಾಜು, ಪರಿಮಳಳಾ ತಂದೆ ತಾಯಿಯನ್ನು ಕಚ್ಚಿ ಗಾಯಗೋಳಿಸಿದ್ದ. ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಪವಿತ್ರಾ ಲೋಕೇಶ್ ನಮ್ಮ ಮನೆಗೆ ಬಂದಾಗ ಬೆಳ್ಳಿ ತಟ್ಟೆಯಲ್ಲಿ ಊಟ ಹಾಕಿದ್ವಿ; ನರೇಶ್ ಹೆಂಡತಿಯ ಮಾತು
ಬುದ್ಧಿ ಹೇಳಲು ಬಂದ ಮಾವನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಅಳಿಯ ಯಾದಗಿರಿ: ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರ ಗ್ರಾಮದಲ್ಲಿ ಅಮಾನವೀಯ ಕೃತ್ಯವೊಂದು ನಡೆದಿದ್ದು, ಬುದ್ಧಿ ಹೇಳಲು ಬಂದವರ ನಾಲ್ವರ ಮೇಲೆ ದುಷ್ಕರ್ಮಿ ಪೆಟ್ರೋಲ್ (Petrol) ಸುರಿದು ಬೆಂಕಿ (Fire) ಹಚ್ಚಿದ್ದಾನೆ. ಪರಿಣಾಮ ಓರ್ವ ಸಜೀವ ದಹನವಾಗಿದ್ದು, ಮೂವರ ಸ್ಥಿತಿ ಗಂಭೀರವಾಗಿದೆ. ಕೆಲ ದಿನಗಳಿಂದ ಪತಿ ಶರಣಪ್ಪ ಮತ್ತು ಪತ್ನಿ ಹುಲಿಗಮ್ಮ ನಡುವೆ ಜಗಳವಾಗಿತ್ತು. ಈ ಸಂಬಂಧ ಶರಣಪ್ಪನಿಗೆ ಬುದ್ಧಿ ಹೇಳಲು ಪತ್ನಿ ಹುಲಿಗೆಮ್ಮಳ ತಂದೆ ಹಾಗೂ ಮೂವರು ಸಂಬಂಧಿಕರು (Relatives) ಬಂದಿದ್ದರು. ಈ ವೇಳೆ ಶರಣಪ್ಪ ನಾಲ್ಕು ಜನರನ್ನು ಕೋಣೆಯಲ್ಲಿ ಕೂಡಿ ಹಾಕಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ.
ಪರಿಣಾಮ ನಾಗಪ್ಪ ಎಂಬಾತ ಸಾವನ್ನಪ್ಪಿದ್ದು, ಸಿದ್ರಾಮಪ್ಪ, ಮುತ್ತಪ್ಪ, ಶರಣಪ್ಪಗೆ ಗಂಭೀರ ಗಾಯಗಳಾಗಿವೆ. ಪತ್ನಿಯ ತವರು ಮನೆಯವರು ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದ ಇಬ್ಬರು ಹಾಗೂ ಸರೂರು ಗ್ರಾಮದ ಇಬ್ಬರು ಎಂದು ತಿಳಿದು ಬಂದಿದೆ. ಗಾಯಾಳುಗಳನ್ನ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ನಾರಾಯಣಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
Published On - 3:35 pm, Wed, 29 June 22