ಅಪಘಾತದಲ್ಲಿ ಮೆದುಳು ನಿಷ್ಕ್ರಿಯಗೊಂಡಿದ್ದ ಪುತ್ರನ ದೇಹ, ಅಂಗಾಂಗ ದಾನ ಮಾಡಿ ಹೃದಯ ವೈಶಾಲ್ಯತೆ ಮೆರೆದ ಪೋಷಕರು
ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಸುಗಟೂರು ಗ್ರಾಮದ ನಿವಾಸಿ ಚಂದ್ರಶೇಖರ್(26) ಬೈಕ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಮೆದುಳು ನಿಷ್ಕ್ರಿಯಗೊಂಡಿತ್ತು.
ಚಿಕ್ಕಬಳ್ಳಾಪುರ: ಮಗನ ಸಾವಿನ ನೋವಲ್ಲೂ ಪೋಷಕರು ಹೃದಯ ವೈಶಾಲ್ಯತೆ ಮೆರೆದಿದ್ದಾರೆ. ಪುತ್ರನ ದೇಹದಾನ, ಅಂಗಾಂಗ, ಕಣ್ಣು ದಾನ ಮಾಡಿ ಪೋಷಕರು(Body Organs Donate), ತಮ್ಮ ಮಗನ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಸುಗಟೂರು ಗ್ರಾಮದ ನಿವಾಸಿ ಚಂದ್ರಶೇಖರ್(26) ಬೈಕ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಮೆದುಳು ನಿಷ್ಕ್ರಿಯಗೊಂಡಿತ್ತು. ಹೀಗಾಗಿ ತಂದೆ ನಾರಾಯಣಸ್ವಾಮಿ, ತಾಯಿ ಸಂಪಿಗೆಮ್ಮ ಬೆಂಗಳೂರಿನ ಆಸ್ಟರ್ ಆಸ್ಪತ್ರೆಗೆ ಪುತ್ರನ ದೇಹದಾನ ಮಾಡಿದ್ದಾರೆ. ಹಾಗೂ ಬೆಂಗಳೂರಿನ ವಿವಿಧ ಸಂಘಸಂಸ್ಥೆಗಳು ಹಾಗೂ ಆಸ್ಪತ್ರೆಗಳಿಗೆ ಅಂಗಾಂಗ ದಾನ ಮಾಡಿ ಸಾರ್ಥಕತೆ ಮೆರೆದಿದ್ದಾರೆ. ಇದನ್ನೂ ಓದಿ: ನಾಳೆ ಆಷಾಢದ ಮೊದಲ ಶುಕ್ರವಾರ; ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಹೋಗುವ ಭಕ್ತಾದಿಗಳಿಗೆ ಮೈಸೂರು ಪಾಕ್ ಪ್ರಸಾದ
ಅಂಗಾಂಗ ದಾನ ಎಂದರೇನು? ಬದುಕಿರುವ ಅಥವಾ ಸತ್ತ ವ್ಯಕ್ತಿಯ ದೇಹದಿಂದ ಆರೋಗ್ಯವಂತ ಅಂಗವನ್ನು ತೆಗೆದು ಅಗತ್ಯವಿರುವ ವ್ಯಕ್ತಿಗೆ ನೀಡುವಂಥದ್ದು ಅಂಗಾಂಗ ದಾನ. ಇದನ್ನ ಶಸ್ತ್ರಚಿಕಿತ್ಸೆಯ ಮೂಲಕ ನುರಿತ ವೈದ್ಯರು ಅಂಗಾಂಗ ವರ್ಗಾವಣೆ ಅಥವಾ ಮರುಜೋಡಣೆ ಮಾಡ್ತಾರೆ. ಬದುಕಿರುವ ವ್ಯಕ್ತಿಯ ದೇಹದಿಂದ ದಾನ ನೀಡಬಹುದಾದಂಥಾ ಅಂಗಾಗಗಳು- ಕಿಡ್ನಿ, ರಕ್ತ, ಕೂದಲು, ಚರ್ಮ. ಇದನ್ನೂ ಓದಿ: ಭುವಿಯನ್ನು ಮೂರೇ ತಿಂಗಳಲ್ಲಿ ಮನೆ ಬಿಟ್ಟು ಓಡಿಸ್ತೀನಿ; ಹೊಸ ಚಾಲೆಂಜ್ ಹಾಕಿದ ವರುಧಿನಿ