ಭುವಿಯನ್ನು ಮೂರೇ ತಿಂಗಳಲ್ಲಿ ಮನೆ ಬಿಟ್ಟು ಓಡಿಸ್ತೀನಿ; ಹೊಸ ಚಾಲೆಂಜ್ ಹಾಕಿದ ವರುಧಿನಿ
ಹರ್ಷ ಹಾಗೂ ಭುವಿಯ ಮದುವೆಯನ್ನು ನಿಲ್ಲಿಸಬೇಕು ಎಂದು ವರು ಹಾಗೂ ಸಾನಿಯಾ ಪ್ಲ್ಯಾನ್ ಮಾಡಿದ್ದರು. ಆದರೆ, ಇಬ್ಬರ ಪ್ಲ್ಯಾನ್ ಕೂಡ ಫ್ಲಾಪ್ ಆಯಿತು. ಕೆಲವು ಅಡಚಣೆ ಉಂಟಾದರೂ ಮದುವೆ ನಡೆಯಿತು. ಈ ವಿಚಾರ ವರುಧಿನಿಗೆ ಬೇಸರ ಮೂಡಿಸಿದೆ.
‘ಕನ್ನಡತಿ’ ಧಾರಾವಾಹಿಯಲ್ಲಿ (Kannadathi Serial) ಭುವಿ ಹಾಗೂ ಹರ್ಷನ ಮದುವೆ ನಡೆದಿದೆ. ಆಸ್ಪತ್ರೆಯಲ್ಲಿ ಮಾಂಗಲ್ಯ ಧಾರಣೆ ನಡೆದರೆ, ಈ ಮದುವೆಗಾಗಿ ಹಾಕಿದ್ದ ದೊಡ್ಡ ಸೆಟ್ನಲ್ಲಿ ಈ ದಂಪತಿ ಸಪ್ತಪದಿ ತುಳಿದಿದೆ. ಕನ್ನಡದಲ್ಲೇ ಈ ಮದುವೆ ನಡೆದಿದ್ದು ವಿಶೇಷ. ಯಾವ ಸಂಪ್ರದಾಯವನ್ನು ಏಕೆ ಮಾಡಿಸಲಾಗುತ್ತದೆ ಎಂಬುದನ್ನು ಸಂಪೂರ್ಣವಾಗಿ ಕನ್ನಡದಲ್ಲೇ ಹೇಳಲಾಯಿತು. ‘ರಾಮಾಚಾರಿ’ ಧಾರಾವಾಹಿಯ ಕಥಾನಾಯಕ ರಾಮಾಚಾರಿ ಈ ಮದುವೆಯನ್ನು ನಡೆಸಿಕೊಟ್ಟಿದ್ದಾನೆ. ಈಗ ‘ಕನ್ನಡತಿ’ ಧಾರಾವಾಹಿಗೆ ಹೊಸ ಟ್ವಿಸ್ಟ್ ಸಿಕ್ಕಿದೆ. ಮದುವೆ ಆದರೂ ವರುಧಿನಿ ಸುಮ್ಮನೆ ಕೂರುವ ಸೂಚನೆ ಸಿಗುತ್ತಿಲ್ಲ.
ಹರ್ಷ ಹಾಗೂ ಭುವಿಯ ಮದುವೆಯನ್ನು ನಿಲ್ಲಿಸಬೇಕು ಎಂದು ವರು ಹಾಗೂ ಸಾನಿಯಾ ಪ್ಲ್ಯಾನ್ ಮಾಡಿದ್ದರು. ಆದರೆ, ಇಬ್ಬರ ಪ್ಲ್ಯಾನ್ ಕೂಡ ಫ್ಲಾಪ್ ಆಯಿತು. ಕೆಲವು ಅಡಚಣೆ ಉಂಟಾದರೂ ಮದುವೆ ನಡೆಯಿತು. ಈ ವಿಚಾರ ವರುಧಿನಿಗೆ ಬೇಸರ ಮೂಡಿಸಿದೆ. ಈ ಬಗ್ಗೆ ಸಾನಿಯಾ ಹಾಗೂ ವರುಧಿನಿ ಚರ್ಚೆ ಮಾಡಿದ್ದಾರೆ.
ಭುವಿ ಹಾಗೂ ಹರ್ಷ ಇಬ್ಬರೂ ಪ್ರೀತಿ ಮಾಡಿ ಮದುವೆ ಆಗಿದ್ದಾರೆ ಎಂಬ ವಿಚಾರವನ್ನು ಅರಗಿಸಿಕೊಳ್ಳಲು ವರುಧಿನಿಗೆ ಸಾಧ್ಯವಾಗುತ್ತಿಲ್ಲ. ಹರ್ಷ-ಭುವಿ ಮದುವೆ ಮುಗಿದಿದೆ. ಆದರೂ ಹರ್ಷನ ಪತ್ನಿ ಆಗಬೇಕು ಎಂಬ ಕನಸನ್ನು ವರು ಬಿಟ್ಟಿಲ್ಲ. ಈ ಕುರಿತು ಆಕೆ ಹೊಸ ಕನಸು ಕಾಣುತ್ತಿದ್ದಾಳೆ. ಸಾನಿಯಾಗೆ ಚಾಲೆಂಜ್ ಕೂಡ ಮಾಡಿದ್ದಾಳೆ.
‘ಹರ್ಷ-ಭುವಿ ಮದುವೆ ಆದರೂ ಇಬ್ಬರಿಗೂ ಸಂಸಾರ ನಡೆಸಲು ನಾನು ಅವಕಾಶ ನೀಡುವುದಿಲ್ಲ. ಅವರಿಬ್ಬರಿಗೂ ಮ್ಯಾಚ್ ಆಗುವುದಿಲ್ಲ. ಆದರೂ ಇಬ್ಬರೂ ಮದುವೆ ಆಗಿದ್ದು ಹೇಗೆ ಎಂಬುದನ್ನು ನಾನು ಪತ್ತೆ ಹಚ್ಚುತ್ತೇನೆ. ಭುವಿ ಮೂರೇ ತಿಂಗಳಿಗೆ ಮನೆ ಬಿಟ್ಟು ಹೋಗಬೇಕು ಹಾಗೆ ಮಾಡುತ್ತೇನೆ’ ಎಂದು ಚಾಲೆಂಜ್ ಮಾಡಿದ್ದಾಳೆ ವರುಧಿನಿ. ಈ ಚಾಲೆಂಜ್ನಲ್ಲಿ ಯಾರು ಗೆಲ್ಲುತ್ತಾರೆ ಅನ್ನೋದನ್ನು ಕಾದು ನೋಡಬೇಕಿದೆ.
ಮತ್ತೊಂದು ಕಡೆ ಹರ್ಷನ ತಾಯಿ ರತ್ನಮಾಲಾ ಆರೋಗ್ಯ ಹದಗೆಟ್ಟಿದೆ. ಶೀಘ್ರವೇ ಆ ಪಾತ್ರ ಅಂತ್ಯವಾದರೂ ಅಚ್ಚರಿ ಏನಿಲ್ಲ. ರತ್ನಮಾಲಾ ಮದುವೆ ಮಂಟಪದಿಂದ ಆಸ್ಪತ್ರೆಗೆ ಹೋಗಿದ್ದಾಳೆ. ಅವಳು ಚೇತರಿಕೆ ಕಾಣುತ್ತಾಳೋ ಅಥವಾ ಅವಳ ಪಾತ್ರ ಅಂತ್ಯವಾಗುತ್ತದೆಯೋ ಎಂಬುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ: ಕೊನೆಗೂ ನಡೆಯಿತು ಹರ್ಷ-ಭುವಿ ಮದುವೆ, ಒದ್ದಾಡಿದ ವರು; ಈ ವಿವಾಹಕ್ಕೆ ಕನ್ನಡದ ಮಂತ್ರ
ಹಿಂದಿಗೆ ಡಬ್, ಮರಾಠಿಗೆ ರಿಮೇಕ್ ಆದ ‘ಕನ್ನಡತಿ’: ಈ ಧಾರಾವಾಹಿಗೆ ಹೇಗಿದೆ ರೆಸ್ಪಾನ್ಸ್? ಇಲ್ಲಿದೆ ಉತ್ತರ
Published On - 3:26 pm, Thu, 30 June 22