ಚಿಕ್ಕಬಳ್ಳಾಪುರ ಅಭಿವೃದ್ದಿಗೆ 100 ಕೋಟಿ ರೂ ಅನುದಾನ ತಂದಿದ್ದೇನೆ: ವಿಜಯೇಂದ್ರ ಹೇಳಿಕೆಗೆ ಪ್ರದೀಪ್ ಈಶ್ವರ್ ಟಾಂಗ್

‘ಪ್ರದೀಪ್ ಈಶ್ವರ್ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ತಂದಿಲ್ಲ’ ಎಂಬ ವಿಚಾರವಾಗಿ ಚಿಕ್ಕಬಳ್ಳಾಪುರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಪ್ರದೀಪ್ ಈಶ್ವರ್​, ಚಿಕ್ಕಬಳ್ಳಾಪುರ ಅಭಿವೃದ್ಧಿಗೆ 100 ಕೋಟಿ ರೂ. ಅನುದಾನ ತಂದಿದ್ದೇನೆ. ಬಿ.ವೈ.ವಿಜಯೇಂದ್ರ ಪಕ್ಕದಲ್ಲಿದ್ದವರು ಮಿಸ್ ಗೈಡ್ ಮಾಡಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರಗೆ ಅಸಲಿ ಮಾಹಿತಿ ನೀಡುತ್ತೇನೆ ಎಂದು ತಿರುಗೇಟು ನೀಡಿದ್ದಾರೆ.

ಚಿಕ್ಕಬಳ್ಳಾಪುರ ಅಭಿವೃದ್ದಿಗೆ 100 ಕೋಟಿ ರೂ ಅನುದಾನ ತಂದಿದ್ದೇನೆ: ವಿಜಯೇಂದ್ರ ಹೇಳಿಕೆಗೆ ಪ್ರದೀಪ್ ಈಶ್ವರ್ ಟಾಂಗ್
ಶಾಸಕ ಪ್ರದೀಪ್ ಈಶ್ವರ್
Follow us
ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ
| Updated By: ಗಂಗಾಧರ​ ಬ. ಸಾಬೋಜಿ

Updated on: Feb 17, 2024 | 3:25 PM

ಚಿಕ್ಕಬಳ್ಳಾಪುರ, ಫೆಬ್ರವರಿ 17: ಚಿಕ್ಕಬಳ್ಳಾಪುರ ಅಭಿವೃದ್ದಿಗೆ 100 ಕೋಟಿ ರೂ. ಅನುದಾನ ತಂದಿದ್ದೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರಗೆ  ಕಾಂಗ್ರೆಸ್ ಶಾಸಕ ಪ್ರದೀಪ್​ ಈಶ್ವರ್ (Pradeep Eshwar) ಟಾಂಗ್​ ನೀಡಿದ್ದಾರೆ. ‘ಪ್ರದೀಪ್ ಈಶ್ವರ್ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ತಂದಿಲ್ಲ’ ಎಂಬ B.Y.ವಿಜಯೇಂದ್ರ ಹೇಳಿಕೆಗೆ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿ.ವೈ.ವಿಜಯೇಂದ್ರ ಪಕ್ಕ ಇದ್ದವರು ಮಿಸ್ ಗೈಡ್ ಮಾಡಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರಗೆ ಅಸಲಿ ಮಾಹಿತಿ ನೀಡುತ್ತೇನೆ ಎಂದು ತಿರುಗೇಟು ನೀಡಿದ್ದಾರೆ. ಸಿಎಂ ಸಿದ್ದರಾಮಯ್ಯರನ್ನು ಆಧುನಿಕ ಬಸವಣ್ಣ ಎನ್ನಬಹುದು. ಎಲ್ಲಾ ಸಮುದಾಯಗಳಿಗೆ ನ್ಯಾಯ ಕೊಡಿಸುವ ಕೆಲಸ ಮಾಡುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಆಧುನಿಕ ಅಭಿವೃದ್ಧಿಯ ಹರಿಕಾರರಾಗಿದ್ದಾರೆ ಎಂದು ಹಾಡಿಹೊಗಳಿದ್ದಾರೆ.

ಸಿದ್ದಗಂಗಾ ಶಿವಕುಮಾರ್ ಶ್ರೀಗಳಿಂದ ಭಾರತ ರತ್ನ ಪ್ರಶಸ್ತಿಯ ಗೌರವ ಹೆಚ್ಚಾಗುತ್ತದೆ

ಸಿದ್ದಗಂಗಾ ಶಿವಕುಮಾರ್ ಶ್ರೀಗಳಿಗೆ ಭಾರತ ರತ್ನ ನೀಡುವ ವಿಚಾರವಾಗಿ ಮಾತನಾಡಿದ ಅವರು, ಭಾರತ ರತ್ನ ಪ್ರಶಸ್ತಿಯಿಂದ ಶಿವಕುಮಾರ್ ಶ್ರೀಗಳಿಗೆ ಗೌರವ ಹೆಚ್ಚಾಗಲ್ಲ. ಸಿದ್ದಗಂಗಾ ಶಿವಕುಮಾರ್ ಶ್ರೀಗಳಿಂದ ಭಾರತ ರತ್ನ ಪ್ರಶಸ್ತಿಯ ಗೌರವ ಹೆಚ್ಚಾಗುತ್ತದೆ. ಸಿದ್ದಗಂಗಾದ ಈಗಿನ ಶ್ರೀಗಳಿಗೆ ಮನವಿ ಮಾಡಲಾಗಿದೆ. ಭಾರತ ರತ್ನ ಪ್ರಶಸ್ತಿ ಕೇಳದಂತೆ ಮನವಿ ಮಾಡಲಾಗಿದೆ. ಮಠದ ಹಳೆಯ ವಿದ್ಯಾರ್ಥಿಗಳಿಂದ ಮನವಿ ಮಾಡಿದ್ದಾಗಿ ಹೇಳಿದ್ದಾರೆ.

ಡಾ. ಶಿವಕುಮಾರ ಸ್ವಾಮೀಜಿ ಅವರಿಗೆ ಮರಣೋತ್ತರವಾಗಿ ಭಾರತ ರತ್ನ ಕೊಡಿ: ಡಿಕೆ ಶಿವಕುಮಾರ್​ ಆಗ್ರಹ

ಇತ್ತೀಚೆಗೆ ಭಾರತದ ಮಾಜಿ ಪ್ರಧಾನಿ, ಬಿಜೆಪಿ ಹಿರಿಯ ಧುರೀಣ ಎಲ್​​ ಕೆ ಅಡ್ವಾಣಿ ಅವರಿಗೆ ಭಾರತ ರತ್ನ ಘೋಷಿಸಿರುವ ವಿಚಾರವಾಗಿ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ಪಟ್ಟಣದಲ್ಲಿ ಡಿಸಿಎಂ ಡಿಕೆ ಶಿವಕುಮಾರ್​ ಪ್ರತಿಕ್ರಿಯಿಸಿ, ಅಡ್ವಾಣಿಯವರು ದೇಶದ ಹಿರಿಯ ರಾಜಕಾರಣಿ. ಅವರಿಗೆ ಭಾರತ ರತ್ನ ನೀಡಿದ್ದಕ್ಕೆ ನಮ್ಮ ತಕರಾರೇನೂ ಇಲ್ಲ.

ಇದನ್ನೂ ಓದಿ: ಮಂಗಳೂರು ಜೆರೋಸಾ ಶಾಲೆ ಪ್ರಕರಣ; IAS ಅಧಿಕಾರಿ ನೇತೃತ್ವದಲ್ಲಿ ತನಿಖೆಗೆ ಆದೇಶ

ಆದರೆ ನಡೆದಾಡುವ ದೇವರೆಂದೇ ಖ್ಯಾತರಾದ ತ್ರಿವಿಧ ದಾಸೋಹಿ, ಶತಾಯುಷಿ, ಸಿದ್ಧಗಂಗಾ ಮಠಾಧೀಶ ಡಾ. ಶಿವಕುಮಾರ ಸ್ವಾಮೀಜಿ ಅವರಿಗೆ ಮರಣೋತ್ತರವಾಗಿ ಭಾರತ ರತ್ನ ಕೊಡಿ ಎಂದು ಡಿಕೆ ಶಿವಕುಮಾರ್​ ಆಗ್ರಹಿಸಿದ್ದರು.

ಪ್ರತಿ ಶಾಲೆಯಲ್ಲಿ ಒಂದು ಗಂಟೆಗಳ ಕಾಲ ಬಸವಣ್ಣ ಬಗ್ಗೆ ತಿಳಿಸುವಂತಾಬೇಕು: ಶಾಸಕ ಕೆಎಸ್​ ಬಸವಂತಪ್ಪ

ದಾವಣಗೆರೆ ಜಿಲ್ಲಾ ಭವನದಲ್ಲಿ ನಡೆದ ಬಸವಣ್ಣ ಭಾವಚಿತ್ರ ಅನಾವರಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಶಾಸಕ ಕೆಎಸ್​ ಬಸವಂತಪ್ಪ, ರಾಜ್ಯದಲ್ಲಿ ಬಸವಣ್ಣ ತತ್ವ ಸಿದ್ಧಾಂತ ಆಚರಣೆಗೆ ಬರಬೇಕಿದ್ದರೇ, ಪ್ರತಿ ಶಾಲೆಯಲ್ಲಿ ಒಂದು ಗಂಟೆಗಳ ಕಾಲ ಬಸವಣ್ಣ ಹಾಗೂ ಶರಣ ಕ್ರಾಂತಿ ಬಗ್ಗೆ ಮಕ್ಕಳಿಗೆ ತಿಳಿಸುವಂತಹದು ಜಾರಿಗೆ ಬರಬೇಕು ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಮಂಗಳೂರಿನಲ್ಲಿ ಮೊದಲಿದ್ದ ಶಾಂತಿ ಈಗ ಇಲ್ಲ: ಜಿ ಪರಮೇಶ್ವರ್

ಬಸವಣ್ಣ ತತ್ವ ಜಾರಿಗೆ ಬರಬೇಕಾದರೆ ಪೌರಕಾರ್ಮಿಕ‌ಗೆ ಆಗುವ ಶೋಷಣೆ ತಡೆಯಬೇಕು. ಕೆಲ ಗುತ್ತಿಗೆದಾರರು ಪೌರ ಕಾರ್ಮಿಕರನ್ನ ಶೋಷಣೆ ಮಾಡುತ್ತಿದ್ದಾರೆ. ಸುಲಿಗೆ ಮಾಡುತ್ತಿದ್ದಾರೆ. ಪೌರಕಾರ್ಮಿಕರಿಗೆ ಸಂಬಳವೇ ಸಿಗುತ್ತಿಲ್ಲ. ಅವರ ಸೇವೆಯನ್ನ ಕಾಯಂ ಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.