ಹೆರಿಗೆ ಲಂಚ ಪ್ರಕರಣ-ವೈದ್ಯರ ಬದಲು ಮಾವನ ವಿರುದ್ಧವೇ ಹೇಳಿಕೆ ನೀಡಿದ ಅಳಿಯ
ಸಿಜರಿಯನ್ ಹೆರಿಗೆ ಲಂಚಾವತಾರ ಪ್ರಕರಣದಲ್ಲಿ ಚಿಕ್ಕಬಳ್ಳಾಪುರ ಆಸ್ಪತ್ರೆಯ ವೈದ್ಯರು ಷಡ್ಯಂತ್ರ ಮಾಡಿ, ಪ್ರಕರಣವೇ ನಡೆದಿಲ್ಲವೆನ್ನುವ ರೀತಿಯಲ್ಲಿ ದಾಖಲೆ ಸೃಷ್ಠಿಸಲು ಯತ್ನಿಸಿರುವ ಬಗ್ಗೆ ಟಿವಿ-9 ಡಿಜಿಟಲ್ ಇಂದು ಬೆಳಿಗ್ಗೆಯೇ ವರದಿ ಪ್ರಕಟ ಮಾಡಿತ್ತು.
ಚಿಕ್ಕಬಳ್ಳಾಪುರ, ಸೆ.30: ಜಿಲ್ಲೆಯ ಗೌರಿಬಿದನೂರು ನಗರದ ಹಿರೇಬಿದನೂರು ನಿವಾಸಿ ಎನ್.ಅಮೃತಗೆ ಸಿಜರಿಯನ್ ಹೆರಿಗೆ ಮಾಡಲು ಚಿಕ್ಕಬಳ್ಳಾಪುರ(Chikkaballapur) ಸರ್ಕಾರಿ ವೈದ್ಯಕೀಯ ಕಾಲೇಜಿನ ವೈದ್ಯೆಯೊಬ್ಬರು 6000 ರೂಪಾಯಿ ಲಂಚ ಕೇಳಿ, 4000 ರೂಪಾಯಿಗೆ ಒಪ್ಪಿಕೊಂಡು, 2000 ರೂಪಾಯಿ ಲಂಚ ನೀಡಿದ ಮೇಲೆ ಸಿಜರಿಯನ್ ಹೆರಿಗೆ ಮಾಡಿಸಿ, ನಂತರ ಬಾಕಿ ಲಂಚಕ್ಕಾಗಿ ಚಿಕಿತ್ಸೆ ನೀಡದೇ ಸತಾಯಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಚಿಕ್ಕಬಳ್ಳಾಪುರ ವೈದ್ಯಕೀಯ ಕಾಲೇಜಿನಲ್ಲಿ ತನಿಖೆ ಮುಂದುವರೆದಿದೆ.
ವೈದ್ಯರ ಬದಲು ಮಾವನ ವಿರುದ್ಧ ಹೇಳಿಕೆ ನೀಡಿದ ಅಳಿಯ
ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಾಣಂತಿ ಅಮೃತಳ ಸಾಕು ತಂದೆ ರವಿಕುಮಾರ್ ಚಿಕ್ಕಬಳ್ಳಾಪುರ ಆಸ್ಪತ್ರೆಯ ಲಂಚಾವತಾರವನ್ನು ಬಯಲು ಮಾಡಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದ. ಇನ್ನು ಈ ಕೇಸ್ ತನಿಖೆ ನಡೆಸುತ್ತಿರುವ ವೈದ್ಯರು ರವಿಕುಮಾರ್ ಅವರ ಸ್ವಯಂ ಹೇಳಿಕೆ ಪಡೆಯುವುದರ ಬದಲು ತಮಗೆ ಅನುಕೂಲವಾಗುವ ರೀತಿಯಲ್ಲಿ ಬಾಣಂತಿಯ ಗಂಡ ರಘುವನ್ನು ಕರೆಯಿಸಿ ಸ್ವಯಂ ಹೇಳಿಕೆ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ:ಚಿಕ್ಕಬಳ್ಳಾಪುರ: ಹೆರಿಗೆ ಲಂಚ ಪ್ರಕರಣವನ್ನು ಮುಚ್ಚು ಹಾಕಲು ಯತ್ನಿಸಿದರಾ ವೈದ್ಯರು?
ಹೌದು, ಅದರಲ್ಲಿ ರಘು ನಡೆದ ನೈಜ ಘಟನೆಯನ್ನು ಹೇಳುವುದರ ಬದಲು ವೈದ್ಯರಿಗೆ ಅನುಕೂಲವಾಗುವ ರೀತಿಯಲ್ಲಿ ವೈದ್ಯರ ಪರವಾಗಿ ಹೇಳಿಕೆ ನೀಡಿದ್ದು, ರವಿಕುಮಾರ್ ಯಾರೋ ಗೊತ್ತಿಲ್ಲ, ಅವರು ಆಸ್ಪತ್ರೆಗೆ ಬಂದೇ ಇಲ್ಲ, ತನ್ನನ್ನು ಯಾರೂ ಹಣ ಕೇಳಿಲ್ಲ.ಜೊತೆಗೆ ಮಾದ್ಯಮದಲ್ಲಿ ವರದಿ ಬಂದಿರುವುದು ನನಗೆ ಗೊತ್ತಿಲ್ಲ. ಇನ್ನು ಕಾಲ್ಚೈನು, ಪೋನ್ನ್ನು ಅಡವಿಟ್ಟಿಲ್ಲ ಎಂದು ಹೆಂಡತಿಯ ಸಾಕು ತಂದೆ ರವಿಕುಮಾರ್ ಹಾಗೂ ಅತ್ತೆ ರತ್ನಮ್ಮನವರ ವಿರುದ್ದವೇ ಹೇಳಿಕೆ ನೀಡಿದ್ದಾರೆ.
ಘಟನೆ ಕುರಿತು ಬೆಳಿಗ್ಗೆಯೇ ವರದಿ ಮಾಡಿದ್ದ ಟಿವಿ9
ಸಿಜರಿಯನ್ ಹೆರಿಗೆ ಲಂಚಾವತಾರ ಪ್ರಕರಣದಲ್ಲಿ ಚಿಕ್ಕಬಳ್ಳಾಪುರ ಆಸ್ಪತ್ರೆಯ ವೈದ್ಯರು ಷಡ್ಯಂತ್ರ ಮಾಡಿ, ಪ್ರಕರಣವೇ ನಡೆದಿಲ್ಲವೆನ್ನುವ ರೀತಿಯಲ್ಲಿ ದಾಖಲೆ ಸೃಷ್ಠಿಸಲು ಯತ್ನಿಸಿರುವ ಬಗ್ಗೆ ಟಿವಿ-9 ಡಿಜಿಟಲ್ ಇಂದು ಬೆಳಿಗ್ಗೆಯೇ ವರದಿ ಪ್ರಕಟ ಮಾಡಿತ್ತು. ಮಧ್ಯಾಹ್ನ ಬಾಣಂತಿಯ ಗಂಡ ರಘುವನ್ನು ಕರೆಯಿಸಿ ತಮಗೆ ಬೇಕಾದಂತೆ ನೈಜ್ಯ ಘಟನೆಯನ್ನು ತಿರುಚಿ ಹೇಳಿಕೆಯನ್ನು ದಾಖಲು ಮಾಡಿಕೊಂಡಿದ್ದಾರೆ.
ಮಗಳ ಹೆರಿಗೆ ಸಂದರ್ಭದಲ್ಲಿ ನೋವು ಅನುಭವಿಸಿದ್ದ ತಂದೆ-ತಾಯಿ
ಬಾಣಂತಿ ಅಮೃತ ಆಸ್ಪತ್ರೆಯಲ್ಲಿ ಹೆರಿಗೆಗೆ ದಾಖಲಾಗಿದ್ದಾಗ ಆಕೆಯ ಜೊತೆಯಲ್ಲಿ ಆಗಮಿಸಿದ್ದ ಆಕೆಯ ಸಾಕು ತಂದೆ ರವಿಕುಮಾರ್, ಪತ್ನಿ ರತ್ನಮ್ಮ (ಅಮೃತ ತಾಯಿ) ಹೆರಿಗೆ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿಯೇ ಇದ್ದು, ಮಗಳ ಹೆರಿಗೆಗೆಂದು ವೈದ್ಯರು ಕೇಳಿದ್ದಾರೆನ್ನಲಾದ 4000 ರೂಪಾಯಿ ಲಂಚದ ಹಣ ಹೊಂದಿಸಿದ್ದರು. ಮೊದಲು 2000 ರೂಪಾಯಿ ನೀಡಿ ಹೆರಿಗೆ ಮಾಡಿಸಿದ್ದರು, ನಂತರ ರವಿಕುಮಾರ್ ಮಗಳ ಕಾಲ್ಚೈನು ಅಡವಿಟ್ಟು 2000 ರೂಪಾಯಿ ತಂದುಕೊಟ್ಟಿದ್ದರು.
ಇದೇ ಸಂದರ್ಭದಲ್ಲಿ ಮಗಳು ಅಮೃತಳ ಕತ್ತಿನಲ್ಲಿದ್ದ 8 ಗ್ರಾಂ. ತೂಕದ ಕತ್ತುಚೈನನ್ನು ಮುತ್ತೂಟ್ ಫೈನಾನ್ಸ್‍ನಲ್ಲಿ ಅಡವಿಟ್ಟು 19000 ರೂಪಾಯಿ ಹಣ ತೆಗೆದುಕೊಂಡು ಬಂದಿದ್ದ. ಅದರಲ್ಲಿಯೂ ಅಳಿಯ ರಘು ತನಗೆ 6000 ರೂಪಾಯಿ ನೀಡುವಂತೆ ಆಸ್ಪತ್ರೆಯಲ್ಲೇ ಗಲಾಟೆ ಮಾಡಿದ್ದನೆಂದು ಹಾಗೂ ವೈದ್ಯರ ಲಂಚಾವತಾರ ಟಿವಿ-9ನಲ್ಲಿ ಬಯಲಾಗುತ್ತಿದ್ದಂತೆ ರಘು ಅತ್ತೆ ಹಾಗೂ ಮಗಳ ಜೊತೆ ಜಗಳ ಕಾದು ಹಲ್ಲೆ ಸಹಾ ಮಾಡಿದ್ದನಂತೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ