ಚಿಕ್ಕಬಳ್ಳಾಪುರದಲ್ಲಿ ಹಾಲು ಉತ್ಪಾದನೆಯಲ್ಲಿ ಕುಂಠಿತ: ಹೈನೋದ್ಯಮದಿಂದ ವಿಮುಖರಾಗುತ್ತಿದ್ದಾರಾ ರೈತರು?

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಹಾಲು ಉತ್ಪಾದನೆ ಕುಸಿಯುತ್ತಿದೆ. ರೈತರು ಹೈನೋದ್ಯಮದಿಂದ ದೂರ ಸರಿಯುತ್ತಿದ್ದಾರೆ. ಹೆಚ್ಚುತ್ತಿರುವ ಖರ್ಚು ಮತ್ತು ಕಡಿಮೆಯಾಗುತ್ತಿರುವ ಲಾಭ ಇದಕ್ಕೆ ಕಾರಣ ಎನ್ನಲಾಗುತ್ತಿದೆ. ಮೆಗಾ ಡೈರಿಗಳಿಗೆ ಹಾಲಿನ ಗುರಿ ತಲುಪುತ್ತಿಲ್ಲ. ಸರ್ಕಾರ ರೈತರಿಗೆ ಉತ್ತೇಜನ ನೀಡುವ ಬಗ್ಗೆ ಚರ್ಚಿಸುತ್ತಿದೆ. ಹಾಲಿನ ಬರದ ಆತಂಕ ಜಿಲ್ಲೆಯನ್ನು ಆವರಿಸಿದೆ.

ಚಿಕ್ಕಬಳ್ಳಾಪುರದಲ್ಲಿ ಹಾಲು ಉತ್ಪಾದನೆಯಲ್ಲಿ ಕುಂಠಿತ: ಹೈನೋದ್ಯಮದಿಂದ ವಿಮುಖರಾಗುತ್ತಿದ್ದಾರಾ ರೈತರು?
ಚಿಕ್ಕಬಳ್ಳಾಪುರದಲ್ಲಿ ಹಾಲು ಉತ್ಪಾದನೆಯಲ್ಲಿ ಕುಂಠಿತ: ಹೈನೋದ್ಯಮದಿಂದ ವಿಮುಖರಾಗುತ್ತಿದ್ದಾರಾ ರೈತರು?
Edited By:

Updated on: Dec 20, 2024 | 7:44 PM

ಚಿಕ್ಕಬಳ್ಳಾಪುರ, ಡಿಸೆಂಬರ್​ 20: ಆ ಜಿಲ್ಲೆಯ ರೈತರು ಸಿಲ್ಕ್, ಮಿಲ್ಕ್​​ಗೆ ಖ್ಯಾತಿ. ಬರ ಬರಲಿ, ಪ್ರಕೃತಿ ವಿಕೋಪನೆ ಬರಲಿ ಯಾವುದಕ್ಕೂ ಜಗ್ಗದೆ ಸಿಲ್ಕ್, ಮಿಲ್ಕ್ (milk) ಉತ್ಪಾದನೆಯಲ್ಲಿ ತೊಡಗುವುದರ ಮೂಲಕ ಬರಕ್ಕೆ ಬರೆ ಎಳೆದಿದ್ದರು. ಆದರೆ ಇತ್ತೀಚೆಗೆ ಆ ಜಿಲ್ಲೆಯ ರೈತರು ಹೈನೋದ್ಯಮದಿಂದ ವಿಮುಖರಾಗುತ್ತಿದ್ದಾರೆ. ಇನ್ನೂ ಅಲ್ಲಿಯರುವ ಮೆಗಾ ಡೈರಿಗೆ ನಿಗದಿತ ಗುರಿಯಂತೆ ಹಾಲು ಬರುತ್ತಿಲ್ಲ. ಇದ್ರಿಂದ ಮುಂದಿನ ದಿನಗಳಲ್ಲಿ ಹಾಲಿಗೂ ಬರ ಬರಲಿದೆ. ಈ ಕುರಿತ ಒಂದು ವರದಿ ಇಲ್ಲಿದೆ.

ಹೈನೋದ್ಯಮದಿಂದ ವಿಮುಕರಾಗುತ್ತಿದ್ದಾರಾ ರೈತರು?

ಜಿಲ್ಲೆಯ ಬಹುತೇಕ ರೈತರು ಉಳುಮೆ ಮಾಡದಿದ್ದರೂ ಕಡ್ಡಾಯವಾಗಿ ಹೈನೋದ್ಯಮ ಮಾಡುವುದರ ಮೂಲಕ ದಕ್ಷಿಣ ಕರ್ನಾಟಕದಲ್ಲಿ ಹಾಲು ಉತ್ಪಾದನೆಗೆ ಖ್ಯಾತಿಯಾಗಿದ್ದರು. ಆದರೆ ಇತ್ತೀಚೆಗೆ ಮಳೆ, ಬೆಳೆ ಕೊರತೆ ಉಂಟಾಗಿ ಹಾಲು ಉತ್ಪಾದನೆ ಕಡಿಮೆಯಾಗಿದೆ. ಇನ್ನೂ ಹಸು ಸಾಕಾಣಿಕೆಗೆ ತಗಲುವ ಖರ್ಚು ಹೆಚ್ಚಾಗಿ ಲಾಭ ಕಡಿಮೆಯಾಗುತ್ತಿದೆ. ಇದ್ರಿಂದ ರೈತರು ಕೃಷಿ ಹಾಗೂ ಹೈನೋದ್ಯಮದಿಂದ ವಿಮುಕರಾಗ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಇದ್ರಿಂದ ಸ್ವತಃ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್, ಹಾಲು ಉತ್ಪಾದಕರು ಹೈನೋದ್ಯಮ ಮಾಡಲು ಉತ್ತೇಜನ ನೀಡುವ ಕುರಿತು ಸುಳಿವು ನೀಡಿದ್ದಾರೆ.

ಇದನ್ನೂ ಓದಿ: ಫೆಂಗಲ್​ ಎಫೆಕ್ಟ್: 2-3 ದಿನಗಳಲ್ಲಿ ಕೆಎಂಎಫ್​​​ ಹಾಲು ಉತ್ಪಾದನೆಯಲ್ಲಿ ಗಣನೀಯ ಇಳಿಕೆ

ಇನ್ನೂ ಇತ್ತೀಚೆಗೆ ಕೋಲಾರ ಚಿಕ್ಕಬಳ್ಳಾಪುರ ಹಾಲು ಉತ್ಪಾದಕರ ಸಹಕಾರ ಸಂಘ ಕೊಚಿಮುಲ್​​ನಿಂದ ವಿಭಜನೆ ಆದ ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘದ ಮೆಗಾ ಡೈರಿಗೆ ಹಾಲಿನ ಕೊರತೆ ಉಂಟಾಗಿದೆ. ಆರುವರೆ ಲಕ್ಷ ಲೀಟರ್ ಹಾಲಿನಿಂದ ಏಳುವರೆ ಲಕ್ಷ ಲೀಟರ್ ಹಾಲು ಬೇಕಾಗಿದೆ. ಆದರೆ ಪ್ರಸ್ತುತ ಜಿಲ್ಲೆಯಲ್ಲಿ ನಾಲ್ಕು ಲಕ್ಷ 70 ಸಾವಿರ ಲೀಟರ್ ಹಾಲು ಮಾತ್ರ ಉತ್ಪಾದನೆ ಆಗ್ತಿದೆ. ಇದ್ರಿಂದ ನಿಗದಿತ ಗುರಿ ತಲುಪಲು ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘದ ಮೆಗಾ ಡೈರಿ ಆಡಳಿತ ಮಂಡಳಿ ಪ್ರಯತ್ನ ಮುಂದುರೆಸಿದೆ.

ಇದನ್ನೂ ಓದಿ: ಕೆಎಂಎಫ್​​ ನಂದಿನಿ ತುಪ್ಪಕ್ಕೆ ಭಾರಿ ಡಿಮ್ಯಾಂಡ್; ಮತ್ತಷ್ಟು ತುಪ್ಪ ಪೂರೈಸುವಂತೆ ಟಿಟಿಡಿ ಮನವಿ

ದಿನದಿಂದ ದಿನಕ್ಕೆ ರೈತರು ಹಸು, ಎಮ್ಮೆ ಸಾಕಲು ಹಿಂದೇಟು ಹಾಕ್ತಿದ್ದಾರೆ. ಹಾಲು ಉತ್ಪಾದನೆಯಲ್ಲಿ ಲಾಭಕ್ಕಿಂತ ಖರ್ಚು ಹೆಚ್ಚಾಗುತ್ತಿರುವ ಕಾರಣ ಹೈನೋದ್ಯಮದಿಂದ ವಿಮುಕರಾಗ್ತಿರುವುದು ಗೊತ್ತಾಗಿದೆ. ಇದೆ ರೀತಿ ಮುಂದುವರೆದರೆ, ಮುಂದು ಒಂದು ದಿನ ಹಾಲಿಗೂ ಬರ ಬಂದ್ರೂ ಆಶ್ಚರ್ಯವಿಲ್ಲ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.