ಕೊರೊನಾ ಟೆಸ್ಟ್ ಮಾಡಿಸಲು ಪರದಾಡಿ ವ್ಯಕ್ತಿ ಸಾವು; ಚಿಕ್ಕಮಗಳೂರಿನ 41 ವರ್ಷದ ಬಸವರಾಜ್ ಇನ್ನಿಲ್ಲ

ಟೆಸ್ಟ್ ಬಳಿಕ ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಲು ಪರದಾಟ ನಡೆಸಿದ ಬಸವರಾಜ್ ಕೊನೆಗೆ ನಿನ್ನೆ ರಾತ್ರಿ 8.30ರ ವೇಳೆಗೆ ಸಾವನ್ನಪ್ಪಿದ್ದಾರೆ. ಸದ್ಯ ಜಿಲ್ಲಾಸ್ಪತ್ರೆಯ ಅವ್ಯವಸ್ಥೆಗೆ ಬಸವರಾಜ್ ಕುಟುಂಬಸ್ಥರು ಮತ್ತು ಸ್ನೇಹಿತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • TV9 Web Team
  • Published On - 9:52 AM, 4 May 2021
ಕೊರೊನಾ ಟೆಸ್ಟ್ ಮಾಡಿಸಲು ಪರದಾಡಿ ವ್ಯಕ್ತಿ ಸಾವು; ಚಿಕ್ಕಮಗಳೂರಿನ 41 ವರ್ಷದ ಬಸವರಾಜ್ ಇನ್ನಿಲ್ಲ
ಬಸವರಾಜ್(41)

ಚಿಕ್ಕಮಗಳೂರು: ಕೊವಿಡ್‌ ಪರೀಕ್ಷೆಗೆ 3 ದಿನದಿಂದ ಪರದಾಟ ನಡೆಸಿದ್ದರು, ಎಲ್ಲಿಯೂ ಅವಕಾಶ ಸಿಗದೆ ವ್ಯಕ್ತಿಯೊರ್ವ ಸಾವನ್ನಪ್ಪಿದ ಘಟನೆ ಚಿಕ್ಕಮಗಳೂರು ತಾಲೂಕಿನ ಉಳುವಾಗಿಲು ಗ್ರಾಮದಲ್ಲಿ ನಡೆದಿದೆ. ಉಳುವಾಗಿಲು ಗ್ರಾಮದ ಬಸವರಾಜ್(41) ಮೃತ ದುರ್ದೈವಿ. ಜಿಲ್ಲಾಸ್ಪತ್ರೆಯಲ್ಲಿ ನೂರಾರು ಜನರ ಕ್ಯೂ ನೋಡಿ ಪರೀಕ್ಷೆಗೆ ಹಿಂದೇಟು ಹಾಕಿದ ಬಸವರಾಜ್ ನಿನ್ನೆ ರಾತ್ರಿ ಸಾವನ್ನಪ್ಪಿದ್ದಾರೆ.

ಸರತಿಸಾಲಿನಲ್ಲಿ ನಿಲ್ಲಲಾಗದೆ ಪರದಾಡಿದ್ದ ಬಸವರಾಜ್. ಸಾಲು ಸಾಲು ಕ್ಯೂ ನೋಡಿ ಒಂದು ಕಡೆಯಿಂದ ಮತ್ತೊಂದೆಡೆಗೆ ಓಡಾಟ ನಡೆಸಿದ್ದು, ನಿನ್ನೆ ಮಧ್ಯಾಹ್ನ ಮಲ್ಲಂದೂರು ಆರೋಗ್ಯ ಕೇಂದ್ರದಲ್ಲಿ ಕೊರೊನಾ ಪರೀಕ್ಷೆ ಮಾಡಿಸಿದ್ದಾರೆ. ಟೆಸ್ಟ್ ಬಳಿಕ ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಲು ಪರದಾಟ ನಡೆಸಿದ ಬಸವರಾಜ್
ಕೊನೆಗೆ ನಿನ್ನೆ ರಾತ್ರಿ 8.30ರ ವೇಳೆಗೆ ಸಾವನ್ನಪ್ಪಿದ್ದಾರೆ. ಸದ್ಯ ಜಿಲ್ಲಾಸ್ಪತ್ರೆಯ ಅವ್ಯವಸ್ಥೆಗೆ ಬಸವರಾಜ್ ಕುಟುಂಬಸ್ಥರು ಮತ್ತು ಸ್ನೇಹಿತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಿಮ್ಸ್ ಆಸ್ಪತ್ರೆಯಲ್ಲಿ ಕೋರೋನಾ ವಾರಿಯರ್ ಕೊವಿಡ್​ಗೆ ಬಲಿ
ಹುಬ್ಬಳ್ಳಿಯ ಭವಾನಿನಗರದ 46 ವರ್ಷದ ಸೋಫಿಯಾ ಕನವಳ್ಳಿ ಕೊರೊನಾಗೆ ಬಲಿಯಾಗಿದ್ದಾರೆ. ಕೊರೋನಾ ವಾರಿಯರ್ ಆಗಿ ಕಿಮ್ಸ್ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಸ್ಟಾಫ್ ನರ್ಸ್ ಸೋಫಿಯಾ​ ಮೃತಪಟ್ಟಿದ್ದಾರೆ.
ಸೋಫಿಯಾ​ಗೆ ಪತಿ ಹಾಗೂ ಇಬ್ಬರು ಪುತ್ರಿಯರು ಇದ್ದು, ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಕಳೆದ 16 ವರ್ಷದಿಂದ ಸ್ಟಾಫ್ ನರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

ಸೋಫಿಯಾರವರು ಕೊವಿಡ್ ವಾರ್ಡ್​ನಲ್ಲೂ ಕಾರ್ಯನಿರ್ವಹಿಸಿದ್ದರು. ಸೋಫಿಯಾರಿಗೆ ಏಪ್ರಿಲ್ 23 ರಂದು ಕೊವಿಡ್ ಸೊಂಕು ದೃಡಪಟ್ಟಿತ್ತು. ಅದರೆ ಕೊರೊನಾಗೆ ಚಿಕಿತ್ಸೆ ಪಡೆಯುತ್ತಿದ್ದ ಸೋಫಿಯಾ ಅವರಿಗೆ ಏಪ್ರಿಲ್ 29 ರಂದು ಏಕಾಏಕಿ ಉಸಿರಾಟದ ತೊಂದರೆ ಕಂಡುಬಂದಿದ್ದು, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಸ್ಟಾಫ್ ನರ್ಸ್ ಸೋಫಿಯಾರ ನಿಧನಕ್ಕೆ ಕಿಮ್ಸ್ ಸಿಬ್ಬಂದಿಗಳು ವಿಷಾದ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:

Dance Master Madhu Death: ಐಸಿಯು ಬೆಡ್ ಸಿಗದೆ ಬೆಂಗಳೂರಿನ ಕಿಮ್ಸ್ ಆಸ್ಪತ್ರೆಯಲ್ಲಿ 21 ವರ್ಷದ ಡ್ಯಾನ್ಸ್ ಮಾಸ್ಟರ್ ಸಾವು

ಹಾಸನ: ಬೆಂಗಳೂರಿನಿಂದ ಬಂದಿದ್ದ ಯುವತಿ ಕಿಲ್ಲರ್ ಕೊರೊನಾಗೆ ಬಲಿ, 3 ದಿನ ಐಸಿಯುನಲ್ಲಿದ್ದು ಪ್ರಾಣ ಬಿಟ್ಳು