ಚಿಕ್ಕಮಗಳೂರು-ಹಾಸನ ಗಡಿ ಗ್ರಾಮಕ್ಕೆ ಬೀಟಮ್ಮ‌-2 ಗ್ಯಾಂಗ್ ಎಂಟ್ರಿ: ಜನರಲ್ಲಿ ಆತಂಕ

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿಗೆ 8 ಕಾಡಾನೆಗಳ ಬೀಟಮ್ಮ-2 ಗ್ಯಾಂಗ್ ಪ್ರವೇಶಿಸಿದ್ದು, ಜನರಲ್ಲಿ ಆತಂಕ ಮೂಡಿಸಿದೆ. ಶೃಂಗೇರಿ ಘಟನೆ ಬಳಿಕ ಮತ್ತೆ ಕಾಡಾನೆ ಉಪಟಳ ಹೆಚ್ಚಿದ್ದು, ಒಂಟಿ ಕಾಡಾನೆ ಭೀಮಾ ಕೂಡ ಈ ಗ್ಯಾಂಗ್ ಸೇರುವ ಆತಂಕ ಕಾಫಿ ಬೆಳೆಗಾರರನ್ನು ಚಿಂತೆಗೀಡು ಮಾಡಿದೆ. ಅರಣ್ಯ ಇಲಾಖೆ ಬೀಟಮ್ಮ ಗ್ಯಾಂಗ್ ಚಲನವಲನಗಳ ಮೇಲೆ ಹದ್ದಿನ ಕಣ್ಣಿಟ್ಟಿದೆ.

ಚಿಕ್ಕಮಗಳೂರು-ಹಾಸನ ಗಡಿ ಗ್ರಾಮಕ್ಕೆ ಬೀಟಮ್ಮ‌-2 ಗ್ಯಾಂಗ್ ಎಂಟ್ರಿ: ಜನರಲ್ಲಿ ಆತಂಕ
ಬೀಟಮ್ಮ‌-2 ಗ್ಯಾಂಗ್
Edited By:

Updated on: Nov 10, 2025 | 7:02 PM

ಚಿಕ್ಕಮಗಳೂರು, ನವೆಂಬರ್​ 10: ಜಿಲ್ಲೆಯ ಶೃಂಗೇರಿಯಲ್ಲಿ ಕಾಡಾನೆ (Wild Elephants) ದಾಳಿಗೆ ಇಬ್ಬರು ಬಲಿಯಾಗಿದ್ದರು. ಬಲಿ ಪಡೆದ ಕಾಡಾನೆಯನ್ನು ಸೆರೆ ಹಿಡಿದು ಸ್ಥಳಾಂತರ ಬೆನ್ನಲ್ಲೇ ಚಿಕ್ಕಮಗಳೂರು-ಹಾಸನ ಗಡಿ ಗ್ರಾಮದಲ್ಲಿ ಬೀಟಮ್ಮ‌-2 ಗ್ಯಾಂಗ್ (Beetamma-2 gang) ಎಂಟ್ರಿಯಾಗಿದೆ. 8 ಕಾಡಾನೆಗಳಿರುವ ಬೀಟಮ್ಮ ಗ್ಯಾಂಗ್ ಎಲ್ಲೆಡೆ ಆತಂಕ ಸೃಷ್ಟಿ ಮಾಡಿದೆ. ದಾಂಧಲೆ ಮಾಡುತ್ತಿರುವ ಭೀಮಾ ಕಾಡಾನೆ ಕೂಡ ಈ ಗ್ಯಾಂಗ್​​ನಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿದೆ. ಒಂಟಿಯಾಗಿರುವ ಭೀಮಾ, ಬೀಟಮ್ಮ ಗ್ಯಾಂಗ್ ಹುಡುಕಿಕೊಂಡು ಕಾಫಿನಾಡಿಗೆ ಬರುವ ಆತಂಕ ಎದುರಾಗಿದೆ.

8 ಕಾಡಾನೆಗಳ ಹಿಂಡು 

ಚಿಕ್ಕಮಗಳೂರು-ಹಾಸನ ಜಿಲ್ಲೆಯ ಗಡಿ ಗ್ರಾಮದಲ್ಲಿ ಸಂಚಾರ ಮಾಡುತ್ತಿದ್ದ 8 ಕಾಡಾನೆಗಳ ಹಿಂಡಿನ ಬೀಟಮ್ಮ-2 ಗ್ಯಾಂಗ್ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿಗೆ ಎಂಟ್ರಿ ನೀಡಿದೆ. ಮೂಡಿಗೆರೆ ತಾಲೂಕಿನ ಗೋಣಿಬೀಡು, ಜಿ.ಹೊಸಹಳ್ಳಿ, ಮಾಕೋನಹಳ್ಳಿ, ಬಾರದಹಳ್ಳಿ ಸುತ್ತಮುತ್ತಲಿನ ಗ್ರಾಮದಲ್ಲಿ ಕಳೆದ‌ ನಾಲ್ಕು ದಿನಗಳಿಂದ ಬೀಟಮ್ಮ ‌ಗ್ಯಾಂಗ್ ಬೀಡುಬಿಟ್ಟಿದೆ.

ಇದನ್ನೂ ಓದಿ: ಶೃಂಗೇರಿ ಕಿಲ್ಲರ್ ಕಾಡಾನೆ ಸೆರೆ: ಏಕಲವ್ಯ ತಂಡದಿಂದ ಕಾರ್ಯಾಚರಣೆ ಯಶಸ್ವಿ

ಹಾಸನ ಜಿಲ್ಲೆಯ ಬೇಲೂರು ಭಾಗವಾಗಿ ಬೀಟಮ್ಮ ಗ್ಯಾಂಗ್ ಬಂದಿದ್ದು, ಭೀಮಾ ಬರುವ ಆತಂಕ ಸೃಷ್ಟಿಯಾಗಿದೆ. ಹೆಚ್ಚಾಗಿ ಬೀಟಮ್ಮ-2 ಗ್ಯಾಂಗ್​ನಲ್ಲಿ ಇರುತ್ತಿದ್ದ ಭೀಮಾ ಒಂಟಿಯಾಗಿ ದಾಂಧಲೆ ನಡೆಸುತ್ತಿದ್ದು, ಬೀಟಮ್ಮ ಗ್ಯಾಂಗ್ 2 ಹುಡುಕಿಕೊಂಡು ಕಾಫಿನಾಡಿಗೆ ಬರುವ ಆತಂಕ ಸೃಷ್ಟಿಯಾಗಿದೆ.

ಕಳೆದ ವರ್ಷ ಕೂಡ ಇದೇ ತಿಂಗಳಲ್ಲಿ ಹಾಸನದಿಂದ ಬೇಲೂರು ಮಾರ್ಗವಾಗಿ ಬಂದಿದ್ದ ಬೀಟಮ್ಮ ಗ್ಯಾಂಗ್ 2 ಮತ್ತೆ ಬಂದಿದೆ. ಕಾಫಿತೋಟದಲ್ಲಿ‌ ಕಾಫಿ ಕೊಯ್ಲು ಕೂಡ ಆರಂಭವಾಗಿದೆ. ಕಾರ್ಮಿಕರು, ಬೆಳೆಗಾರರು ‌ಕಾಫಿತೋಟಕ್ಕೆ ತೆರಳಲು ಆತಂಕ ಪಡುವ ಸ್ಥಿತಿ ಎದರಾಗಿದೆ.

ಹದ್ದಿನ ಕಣ್ಣಿಟ್ಟ ಅರಣ್ಯ ಇಲಾಖೆ

ಕಳೆದ ನಾಲ್ಕು ದಿನಗಳಿಂದ ಗೋಣಿಬೀಡು ಗ್ರಾಮದ ಕಾಫಿ ತೋಟದಲ್ಲಿ ಬೀಡುಬಿಟ್ಟಿರುವ 8 ಕಾಡಾನೆಗಳ ಬೀಟಮ್ಮ ಗ್ಯಾಂಗ್, ರಾತ್ರಿ ಒಂದು ಕಡೆಯಿಂದ ಮತ್ತೊಂದು ಕಡೆ ಸಂಚಾರ ಮಾಡುತ್ತಿದೆ. ಮೂಡಿಗೆರೆ ಅರಣ್ಯ ಇಲಾಖೆಯ ಸಿಬ್ಬಂದಿ, ETF ಸಿಬ್ಬಂದಿಗಳು ಬೀಟಮ್ಮ ಗ್ಯಾಂಗ್ ಮೇಲೆ ಹದ್ದಿನ ಕಣ್ಣಿಟ್ಟು ಕಾಯುತ್ತಿದ್ದಾರೆ.

ಇದನ್ನೂ ಓದಿ: ಹಾಸನದಲ್ಲಿ ಕಾಡಾನೆಗಳ ದಾಂಧಲೆ: ಕಾಳಗದಲ್ಲಿ ದಂತ ಮುರಿದುಕೊಂಡ ಭೀಮಾ

ಪ್ರತಿ ವರ್ಷ ನವೆಂಬರ್, ಡಿಸೆಂಬರ್ ತಿಂಗಳಲ್ಲಿ ಎಂಟ್ರಿ ನೀಡುತ್ತಿರುವ ಬೀಟಮ್ಮ ಗ್ಯಾಂಗ್ ಈ ವರ್ಷವೂ 8 ಸದಸ್ಯರ ಜೊತೆ ಎಂಟ್ರಿ ನೀಡಿದೆ. ಇನ್ನು ಭೀಮಾ ಕೂಡ ಬರುವ ಆತಂಕದಲ್ಲಿ ಕಾಫಿನಾಡಿನ ಜನರಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಅಶ್ವಿತ್ ಮಾವಿನಗುಣಿ, ಚಿಕ್ಕಮಗಳೂರು

ಕಾಫಿನಾಡು ಚಿಕ್ಕಮಗಳೂರಿನ ಮಲೆನಾಡಿನ ಮಾವಿನಗುಣಿ ಗ್ರಾಮದಿಂದ ಬೆಂಗಳೂರಿಗೆ ಬಂದು ಪತ್ರಿಕೋದ್ಯಮ ವೃತ್ತಿ ಆರಂಭಿಸಿ, ಹಾಯ್ ಬೆಂಗಳೂರು, ಜನಶ್ರೀ, ಕಸ್ತೂರಿ, ಟೈಮ್ಸ್ ನೌ ನಲ್ಲಿ ಕೆಲಸ ಮಾಡಿದ್ದು. ಸದ್ಯ ಟಿವಿ9 ಕನ್ನಡದಲ್ಲಿ ಚಿಕ್ಕಮಗಳೂರು ಜಿಲ್ಲಾ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದು. 8 ವರ್ಷಗಳ ಕಾಲ ರಾಜಕೀಯ, ಕ್ರೈಮ್ ಸೇರಿದಂತೆ ಚಿಕ್ಕಮಗಳೂರು ಜಿಲ್ಲಾ ವರದಿಗಾರನಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದು. ಉತ್ತಮ ಸಮಾಜಕ್ಕಾಗಿ ಟಿವಿ9 ಜೊತೆ ವೃತ್ತಿ ಜೀವನ ಸಾಗಿದೆ.

Read More
Follow Us