ಸರ್ಕಾರವಲ್ಲ, ಜನ ಮುಖ್ಯ: ಬಹಿರಂಗವಾಗಿ ರಾಜೀನಾಮೆ ಪತ್ರ ಪ್ರದರ್ಶಿಸಿದ ಶಾಸಕಿ ನಯನಾ ಮೋಟಮ್ಮ

ಹಾಸನ, ಚಿಕ್ಕಮಗಳೂರು ಜಿಲ್ಲೆಯ ಕಾಡಾನೆಗಳು ಜನಪ್ರತಿನಿಧಿಗಳಿಗೆ ಸಂಕಷ್ಟ ತಂದಿಟ್ಟಿವೆ. ಹಾಸನದಲ್ಲಿ ಇಬ್ಬರು ಸಾವನ್ನಪ್ಪಿರುವ ಬೆನ್ನಲ್ಲೇ ಕಾಡಾನೆಗಳನ್ನು ಭದ್ರಾಕ್ಕೆ ಓಡಿಸುವ ಕಾರ್ಯಚರಣೆಗೆ ಚಿಕ್ಕಮಗಳೂರಿನಲ್ಲಿ ತೀವ್ರ ವಿರೋಧಗಳು ವ್ಯಕ್ತವಾಗಿದ್ದು, ಈ ಸಂಬಂಧ ಕಾಂಗ್ರೆಸ್ ಶಾಸಕರೇ ರಾಜೀನಾಮೆ ಎಚ್ಚರಿಕೆ ನೀಡಿದ್ದಾರೆ. ಅಲ್ಲದೇ ಶಾಸಕಿ ನಯನಾ ಮೋಟಮ್ಮ ಅವರು ಸುದ್ದಿಗೋಷ್ಠಿಯಲ್ಲಿ ರಾಜೀನಾಮೆ ಪತ್ರ ಪ್ರದರ್ಶನ ಮಾಡಿದ್ದಾರೆ. ಮೂವರು ಶಾಸಕರ ಜಂಟಿ ಸುದ್ದಿಗೋಷ್ಠಿ ವಿವರ ಇಲ್ಲಿದೆ.

ಸರ್ಕಾರವಲ್ಲ, ಜನ ಮುಖ್ಯ: ಬಹಿರಂಗವಾಗಿ ರಾಜೀನಾಮೆ ಪತ್ರ ಪ್ರದರ್ಶಿಸಿದ ಶಾಸಕಿ ನಯನಾ ಮೋಟಮ್ಮ
ನಯನಾ, ರಾಜೇಗೌಡ, ತಮ್ಮಯ್ಯ
Edited By:

Updated on: Nov 22, 2026 | 5:38 PM

ಚಿಕ್ಕಮಗಳೂರು, (ನವೆಂಬರ್ 22): ಒಂದೆಡೆ ಮಾನವ-ಕಾಡಾನೆ ಸಂಘರ್ಷ ಹೆಚ್ಚಾಗಿದ್ದರೆ, ಇನ್ನೊಂದೆಡೆ ಕಾಡಾನೆಯಿಂದ ಜನಪ್ರತಿನಿಧಗಳ ನಡುವೆ ಮುಸುಕಿನ ಗುದ್ದಾಟ ಶುರುವಾಗಿದೆ. ಹೌದು…ಕಾಡಾನೆಗಳನ್ನು ಹಾಸನದಿಂದ ಭದ್ರಾಕ್ಕೆ ಸ್ಥಳಾಂತರಕ್ಕೆ ಚಿಕ್ಕಮಗಳೂರು ಜಿಲ್ಲೆಯ ಶಾಸಕರು ವಿರೋಧ ವ್ಯಕ್ತಪಡಿಸಿದ್ದಾರೆ. ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಶಿವಲಿಂಗೇಗೌಡರ ನಡೆಗೆ ಆಕ್ಷೇಪ ವ್ಯಕ್ತಪಡಿಸಿದ್ದು.  ರಾಜೀನಾಮೆ ಎಚ್ಚರಿಕೆ ನೀಡಿದ್ದಾರೆ. ಈ ಸಂಬಂಧ ಶಾಸಕರಾದ ನಯನಾ ಮೋಟಮ್ಮ , HD ತಮ್ಮಯ್ಯ, ಟಿಡಿ ರಾಜೇಗೌಡ ಜಂಟಿ ಪತ್ರಿಕಾಗೋಷ್ಠಿ ನಡೆಸಿ, ತಮ್ಮ ಗಮನಕ್ಕೆ ಇಲ್ಲದೇ ಕಾಡಾನೆಗಳನ್ನ ಸ್ಥಳಾಂತರ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ನಯನಾ ಮೋಟಮ್ಮ, ನನಗೆ ಸರ್ಕಾರ ಮುಖ್ಯ ಅಲ್ಲ, ಜನ ಮುಖ್ಯ ಎಂದು ತಮ್ಮ ರಾಜೀನಾಮೆ ಪತ್ರವನ್ನು ಪ್ರದರ್ಶಿಸಿ ಗಮನಸೆಳೆದರು.

ಪತ್ರಿಕಾಗೋಷ್ಠಿಯಲ್ಲಿ ನಯನಾ ಮೋಟಮ್ಮ‌ ಮಾತು

ಹಾಸನದಲ್ಲಿ ಇಬ್ಬರ ಸಾವನ್ನಪ್ಪಿದ ಬಳಿಕ ಹಾಸನ ಉಸ್ತುವಾರಿ ಸಚಿವರು ಭದ್ರಾಕ್ಕೆ ಓಡಿಸಲು ಕಾರ್ಯಚರಣೆ ನಡೆಸುವುದಾಗಿ ಹೇಳಿದ್ರು. ಇದಕ್ಕೆ ನಮ್ಮ ವಿರೋಧವಿದೆ ನವೆಂಬರ್ 25ಕ್ಕೆ ಅರಣ್ಯ ಸಚಿವರ ಸಭೆ ಇತ್ತು. ಸಭೆಯಲ್ಲಿ ಹಾಸನ ಚಿಕ್ಕಮಗಳೂರು ಶಾಸಕರು ಅಧಿಕಾರಿಗಳು ಭಾಗಿಯಾಗ್ಬೇಕಿತ್ತು. ಆದ್ರೆ ಯಾವುದೇ ಮಾಹಿತಿ ನೀಡದೆ ಕಾಡಾನೆ ಓಡಿಸಿದ್ದಾರೆ. ACCF ನೇತೃತ್ವದಲ್ಲಿ ಕಾರ್ಯಚರಣೆ ಮಾಡಲಾಗಿದೆ. ಯಾವುದೇ ಸಮ್ಮತಿ ಇಲ್ಲದೆ ಕಾರ್ಯಚರಣೆ ಮಾಡಿದ್ದಾರೆ. pccf ,accf ಗೆ ನಾನು ಮೆಸೇಜ್ ಮಾಡಿದ್ದೇನೆ. ನಾನು ಇದನ್ನ ಒಪ್ಪಲು ಸಾಧ್ಯವಿಲ್ಲ. ನಾನು ರಾಜೀನಾಮೆ ನೀಡುವುದಾಗಿ ಮೆಸೇಜ್ ಮಾಡಿದ್ದೆ ಎಂದಿದ್ದಾರೆ.

Loading...

ಇದನ್ನೂ ಓದಿ: ಹಾಸನ ಜಿಲ್ಲೆಯಿಂದ ಭದ್ರಾ ಅಭಯಾರಣ್ಯಕ್ಕೆ ಕಾಡಾನೆಗಳ ಸ್ಥಳಾಂತರಕ್ಕೆ ತೀವ್ರ ವಿರೋಧ: ಹೋರಾಟದ ಎಚ್ಚರಿಕೆ

ರಾಜೀನಾಮೆ ಪತ್ರ ಪ್ರದರ್ಶಿಸಿದ ನಯನಾ

ರಾಜೀನಾಮೆ ಪತ್ರ ಸಿದ್ದವಿದೆ. ನಾನು ರಾಜೀನಾಮೆ ನೀಡಲು ಸಿದ್ದ. ಈ ಕಾರ್ಯಚರಣೆ ನಿಲ್ಲಿಸಬೇಕು, ಇಲ್ಲವೇ ರಾಜೀನಾಮೆ ನೀಡುತ್ತೇನೆ. ಚಿಕ್ಕಮಗಳೂರು ಜನರ ಜೀವಕ್ಕೆ ಬೆಲೆ ಇಲ್ವಾ? ನನಗೆ ಜನ ಮುಖ್ಯ ,ಸರ್ಕಾರವಲ್ಲ. ರಾತ್ರಿ ಎಲ್ಲಿಂದ ಕಾಡಾನೆ ಬಂದಿವೆಯೋ ಅಲ್ಲಿಗೆ ವಾಪಸ್ ಹೋಗಬೇಕು. ಇಲ್ಲವಾದಲ್ಲಿ ಬೆಳಗ್ಗೆ ರಾಜೀನಾಮೆ ನೀಡುವುದಾಗಿ ಪತ್ರವನ್ನು ಪ್ರದರ್ಶಿಸಿ ಎಚ್ಚರಿಕೆ ನೀಡಿದರು.Chikamagaluru MLA's: ಸರ್ಕಾರಕ್ಕೆ ಶಾಕಿಂಗ್ ನಿರ್ಧಾರ ತಿಳಿಸಿದ ಚಿಕ್ಕಮಗಳೂರಿನ ಕಾಂಗ್ರೆಸ್ ಶಾಸಕರು |#TV9D

ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ಮಾತು

ಇನ್ನು ಈ ಸುದ್ದಿಗೋಷ್ಠಿಯಲ್ಲಿ ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, ಮೂಡಿಗೆರೆ ,ಶೃಂಗೇರಿ ,ಚಿಕ್ಕಮಗಳೂರು ಕ್ಷೇತ್ರದಲ್ಲಿ ದಿನದಿಂದ ದಿನಕ್ಕೆ ಪ್ರಾಣಿ ಮಾನವ ಸಂಘರ್ಷವಾಗಿದ್ದು,
ಶೃಂಗೇರಿ ಕ್ಷೇತ್ರದಲ್ಲಿ 13 ಜನ ಸಾವನ್ನಪ್ಪಿದ್ದರೆ, ಮೂಡಿಗೆರೆಯಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಇದರ ನಡುವೆ
ಹಾಸನದಲ್ಲಿ 54 ಕಾಡಾನೆಗಳನ್ನ ಭದ್ರಾ ಅಭಯಾರಣ್ಯಕ್ಕೆ ಸ್ಥಳಾಂತರ ಮಾಡುವ ಆಪರೇಷನ್ ಮಾಡುತ್ತಿದ್ದಾರೆ. ಮೂಡಿಗೆರೆ ತಾಲೂಕಿನಲ್ಲಿ 50 ಕ್ಕೂ ಅಧಿಕ ಕಾಡಾನೆಗಳು ಬಂದಿವೆ. ನಮ್ಮ ಗಮನೆ ಇಲ್ಲದಂತೆ ಡ್ರೈವ್ ಮಾಡಿದ್ದಾರೆ ಎಂದು ಅಸಮಾಧನ ಹೊರಹಾಕಿದರು.

ಸ್ಥಳಾಂತರ ಮುಂದುವರಿದರೆ ಎಲ್ಲಾ ತ್ಯಾಗಕ್ಕೂ ಸಿದ್ಧ

ಯಾವುದೇ ಕಾರಣಕ್ಕೂ ಆನೆಗಳ ಸ್ಥಳಾಂತರವನ್ನು ನಾವು ಒಪ್ಪಲ್ಲ. ನಮ್ಮ ಭಾಗಕ್ಕೆ ಹೊರಗಿನಿಂದ ಕಾಡಾನೆ ಸ್ಥಳಾಂತರವನ್ನು ಒಪ್ಪುವುದಿಲ್ಲ. ಭದ್ರಾ ಅಭಯಾರಣ್ಯದಲ್ಲಿ ಸಾಕಷ್ಟು ಪ್ರಾಣಿಗಳಿವೆ. ಭದ್ರಾ ಅಭಯಾರಣ್ಯ 492 ಚದರ ಕಿಲೋ ಮೀಟರ್ ವಿಸ್ತೀರ್ಣವಿದೆ. ರಾಜ್ಯದಲ್ಲಿ ಇದಕ್ಕಿಂತಲೂ ಹೆಚ್ಚು ದೊಡ್ಡದಾದ ಅರಣ್ಯ ಪ್ರದೇಶವಿದೆ. ಅದನ್ನೆಲ್ಲ ಬಿಟ್ಟು ಭದ್ರಾ ಅಭಯಾರಣ್ಯಕ್ಕೆ ಸ್ಥಳಾಂತರ ಮಾಡುವುದೇಕೆ? ಕಾರ್ಯಾಚರಣೆ ನಿಲ್ಲಿಸಲು ಅರಣ್ಯ ಮಂತ್ರಿ ಆದೇಶಿಸುವುದಾಗಿ ಹೇಳಿದ್ದಾರೆ. ಒಂದು ವೇಳೆ ಕಾಡಾನೆ ಸ್ಥಳಾಂತರ ಮುಂದುವರಿದರೆ ಎಲ್ಲಾ ತ್ಯಾಗಕ್ಕೂ ನಾವು ಸಿದ್ಧ ಎಂದು ಸ್ಪಷ್ಟಪಡಿಸಿದರು.

ರಾಜೀನಾಮೆ ಕೊಟ್ಟೇ ಕೊಡ್ತೇವೆ ಎಂದ ತಮ್ಮಯ್ಯ

ಹಾಸನದಿಂದ ಚಿಕ್ಕಮಗಳೂರಿಗೆ ಕಾಡಾನೆಗಳ ಸ್ಥಳಾಂತರ ವಿಚಾರದಲ್ಲಿ ನಮ್ಮ ಮೂರು ಶಾಸಕರ ತೀರ್ಮಾನ ಒಂದೇ. ನಮಗೆ ಜನರ ಜೀವ ಮುಖ್ಯ, ಅಧಿಕಾರ ಮುಖ್ಯ ಅಲ್ಲ. ಇಂದು ರಾತ್ರಿ ಆನೆಗಳು ಬೇಲೂರಿಗೆ ವಾಪಸ್ ಹೋಗಬೇಕು. ಇಲ್ಲವಾದರೆ, ನಾಳೆ ನಾವು ಮೂರು ಜನ ರಾಜೀನಾಮೆ ನೀಡುತ್ತೇವೆ. ಸರ್ಕಾರದಿಂದ ಜನ ಅಲ್ಲ, ಜನರಿಂದ ಸರ್ಕಾರ. ಆನೆಗಳು ವಾಪಸ್ ಹೋಗದಿದ್ರೆ ರಾಜೀನಾಮೆ ಕೊಟ್ಟೇ ಕೊಡುತ್ತೇವೆ ಎಂದು ಖಡಕ್ ಎಚ್ಚರಿಕೆ ನೀಡಿದರು.

ಒಟ್ಟಿನಲ್ಲಿ ಕಾಡಾನೆಗಳನ್ನು ಭದ್ರಾಕ್ಕೆ ಸ್ಥಳಾಂತರಕ್ಕೆ ಚಿಕ್ಕಮಗಳೂರಿನ ಮೂವರು ಶಾಸಕರು ಒಟ್ಟಾಗಿ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ರಾಜೀನಾಮೆ ನೀಡುವುದಾಗಿ ಬಹಿರಂಗ ಎಚ್ಚರಿಕೆ ನೀಡಿದ್ದಾರೆ.  ಮುಂದೆ ಇದು ಯಾವ ಹಂತಕ್ಕೆ ಹೋಗಿ ನಿಲ್ಲುತ್ತೆ ಎನ್ನುವುದನ್ನು ಕಾದುನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:28 pm, Sun, 22 November 26

ಅಶ್ವಿತ್ ಮಾವಿನಗುಣಿ, ಚಿಕ್ಕಮಗಳೂರು

ಕಾಫಿನಾಡು ಚಿಕ್ಕಮಗಳೂರಿನ ಮಲೆನಾಡಿನ ಮಾವಿನಗುಣಿ ಗ್ರಾಮದಿಂದ ಬೆಂಗಳೂರಿಗೆ ಬಂದು ಪತ್ರಿಕೋದ್ಯಮ ವೃತ್ತಿ ಆರಂಭಿಸಿ, ಹಾಯ್ ಬೆಂಗಳೂರು, ಜನಶ್ರೀ, ಕಸ್ತೂರಿ, ಟೈಮ್ಸ್ ನೌ ನಲ್ಲಿ ಕೆಲಸ ಮಾಡಿದ್ದು. ಸದ್ಯ ಟಿವಿ9 ಕನ್ನಡದಲ್ಲಿ ಚಿಕ್ಕಮಗಳೂರು ಜಿಲ್ಲಾ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದು. 8 ವರ್ಷಗಳ ಕಾಲ ರಾಜಕೀಯ, ಕ್ರೈಮ್ ಸೇರಿದಂತೆ ಚಿಕ್ಕಮಗಳೂರು ಜಿಲ್ಲಾ ವರದಿಗಾರನಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದು. ಉತ್ತಮ ಸಮಾಜಕ್ಕಾಗಿ ಟಿವಿ9 ಜೊತೆ ವೃತ್ತಿ ಜೀವನ ಸಾಗಿದೆ.

Read More
Loading...
Unable to load recommendations.
Follow Us