ಚಿಕ್ಕಮಗಳೂರು: ಕುರಿಗಾವಲು ಉಳಿಸಲು ಕಡೂರಿನಲ್ಲಿ ರೈತರು, ಕುರಿಗಾಹಿಗಳಿಂದ ಬೃಹತ್ ಪ್ರತಿಭಟನೆ

TV9 Digital Desk

| Edited By: guruganesh bhat

Updated on:Sep 02, 2021 | 7:48 PM

ಗೋಮಾಳದಲ್ಲಿ ಕುರಿಗಳು ಮೇಯುವುದು, ಸಾರ್ವಜನಿಕರು ಪ್ರವೇಶ ಮಾಡುವುದನ್ನು ಈ ಪ್ರದೇಶದಲ್ಲಿ ನಿರ್ಬಂಧಿಸಲಾಗಿದೆ. ಇದು ರೈತರು ಮತ್ತು ಕುರಿಗಾಹಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಚಿಕ್ಕಮಗಳೂರು: ಕುರಿಗಾವಲು ಉಳಿಸಲು ಕಡೂರಿನಲ್ಲಿ ರೈತರು, ಕುರಿಗಾಹಿಗಳಿಂದ ಬೃಹತ್ ಪ್ರತಿಭಟನೆ
ಎಮ್ಮೆದೊಡ್ಡಿ ಕುರಿಗಾವಲು ಪ್ರದೇಶ

ಚಿಕ್ಕಮಗಳೂರು: ಕುರಿಗಾವಲು ಉಳಿವಿಗಾಗಿ ನೂರಾರು ಕುರಿಗಾಹಿಗಳು, ರೈತರು ಚಿಕ್ಕಮಗಳೂರು ಜಿಲ್ಲೆ ಕಡೂರು ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ನೂರಾರು ಸಂಖ್ಯೆಯಲ್ಲಿ ಸೇರಿದ್ದ ಪ್ರತಿಭಟನಾಕಾರರ ಮೆರವಣಿಗೆಗೆ ಪೊಲೀಸರು ಬ್ಯಾರಿಕೇಡ್​ಗಳನ್ನು ಹಾಕಿ ಅಡ್ಡಿಪಡಿಸಿದರು. ಈ ವೇಳೆ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು. ಕೊನೆಗೆ ಮೆರವಣಿಗೆ ನಡೆಸಿಯೇ ಸಿದ್ದ ಎಂದ ಪ್ರತಿಭಟನಾಕಾರ ರೈತರು ಮತ್ತು ಕುರಿಗಾಹಿಗಳು ಕಾಲ್ನಡಿಗೆ ಜಾಥಾ ನಡೆಸುವ ವೇಳೆ ಪಟ್ಟಣದ ಕದಂಬ ಸರ್ಕಲ್ ಬಳಿ ಪೊಲೀಸರು ತಡೆದರು. ಸಂಗೊಳ್ಳಿ ರಾಯಣ್ಣ ಪ್ರತಿಮೆಯ ಬಳಿಯಿಂದ ಆರಂಭಗೊಂಡ ಪ್ರತಿಭಟನೆ ಶಾಂತಿಯುತವಾಗಿ ನಡೆಯುತ್ತಿತ್ತು. ನೂರಾರು ಸಂಖ್ಯೆಯಲ್ಲಿ ಜನರು ಜಮಾವಣೆಗೊಳ್ಳುತ್ತಲೇ ಪೊಲೀಸರು ಪ್ರತಿಭಟನಾಕಾರರನ್ನು ತಡೆದಾಗ ತಳ್ಳಾಟ-ನೂಕಾಟ ಏರ್ಪಟಿತ್ತು. ಈ ಸಂದರ್ಭದಲ್ಲಿ ಆಕ್ರೋಶಗೊಂಡ ಪ್ರತಿಭಟನಾಕಾರರು ಭಾರೀ ಪೊಲೀಸರ ವಿರುದ್ಧ ಧಿಕ್ಕಾರ ಕೂಗಿದರು. ರಸ್ತೆಯನ್ನು ದಾಟದಂತೆ ಬ್ಯಾರಿಕೇಡ್​ಗಳನ್ನು ಅಳವಡಿಸಿ, ಹಗ್ಗ ಹಾಕಿ ಪ್ರತಿಭಟನಾಕಾರರು ಮುಂದೆ ಹೋಗದಂತೆ ಪೊಲೀಸರು ತಡೆದರು.

ಪ್ರತಿಭಟನೆಗೆ ಏನು ಕಾರಣ? ಕಡೂರು ತಾಲೂಕಿನ ಎಮ್ಮೆದೊಡ್ಡಿಯ ಸರ್ವೇ ನಂಬರ್ 70ರ ಕುರಿಕಾವಲು ಪ್ರದೇಶದಲ್ಲಿ ಸುಮಾರು 430 ಎಕರೆಯಷ್ಟು ಜಾಗದಲ್ಲಿ ಈ ಮೊದಲು ಕುರಿ ಮತ್ತು ದನಕರುಗಳನ್ನು ಮೇಯಿಸಲಾಗುತ್ತಿತ್ತು. ಇದೇ ಪ್ರದೇಶವನ್ನು ಕೆಲವರು ಒತ್ತುವರಿ ಮಾಡಿರುವ ಆರೋಪ ಕೂಡ ಕೇಳಿಬಂದಿತ್ತು. ಹೀಗಾಗಿ ಇದನ್ನು ಪ್ರಶ್ನೆ ಮಾಡಿದವರ ಮೇಲೆಯೇ ಸುಳ್ಳು ಕೇಸ್ ಹಾಕಲಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಅನೇಕ ದಶಕಗಳಿಂದ ಇದೇ ಗೋಮಾಳದಲ್ಲಿ ದನಕರುಗಳು, ಕುರಿಗಳನ್ನು ಮೇಯಿಸುತ್ತಿದ್ದ ಪ್ರದೇಶವನ್ನು ಸಾರ್ವಜನಿಕ ನಿರ್ಬಂಧಿತ ಪ್ರದೇಶವನ್ನಾಗಿ ಮಾಡಿರುವುದು ರೈತರ ಕೆಂಗಣ್ಣಿಗೆ ಗುರಿಯಾಗಿದೆ. ಈ ಬೃಹತ್ ಗೋಮಾಳಕ್ಕೆ ಸಾರ್ವಜನಿಕರು ಪ್ರವೇಶಿಸದಂತೆ ತಹಶೀಲ್ದಾರ್ ನೇತೃತ್ವದಲ್ಲಿ ದೊಡ್ಡ ದೊಡ್ಡ ಟ್ರಂಚ್​ಗಳನ್ನು ನಿರ್ಮಿಸಲಾಗಿದೆ.  ಸಾರ್ವಜನಿಕರು ಪ್ರವೇಶ ಮಾಡುವುದನ್ನು ಈ ಪ್ರದೇಶದಲ್ಲಿ ನಿರ್ಬಂಧಿಸಲಾಗಿದೆ. ಆದರೆ ಕುರಿಗಳನ್ನು ಮೇಯಿಸಲು ಯಾವುದೇ ನಿರ್ಬಂಧ ವಿಧಿಸಿಲ್ಲ ಎಂದು ಆಡಳಿತದ ವತಿಯಿಂದ ಸ್ಪಷ್ಟನೆ ದೊರೆತಿದೆ.

Chikkamagaluru Farmers Protest

ಪ್ರತಿಭಟನೆಯ ದೃಶ್ಯ

ಏಕಾಏಕಿ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಿರುವುದು ಪ್ರತಿಭಟನೆ ನಡೆಸಲು ಕಾರಣವಾಗಿದೆ. ಈಕಾರಣಕ್ಕೆ ಇಂದು (ಸೆಪ್ಟೆಂಬರ್ 2) ಕಡೂರು ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು. ಈ ಸಂದರ್ಭದಲ್ಲಿ  ಸಾರ್ನಿವಜನಿಕರಿಗೆ ರ್ಬಂಧ ಹೇರಿರುವ ಕುರಿಗಾವಲು ಪ್ರದೇಶವನ್ನು ಮುಕ್ತಗೊಳಿಸಬೇಕು. ಅಲ್ಲದೇ ಸುಳ್ಳು ಕೇಸ್ ಹಾಕಿರುವುದನ್ನು ಕೂಡಲೇ ಹಿಂಪಡೆಯಬೇಕು ಎಂದು ಪ್ರತಿಭಟನಾಕಾರ ರೈತರು, ಕುರಿಗಾಹಿಗಳು ಒತ್ತಾಯಿಸಿದರು. ಒಂದು ವೇಳೆ ರೈತರ ಹೋರಾಟಕ್ಕೆ ಮಣಿಯದಿದ್ದರೆ ಮುಂದಿನ ದಿನಗಳಲ್ಲಿ ಮತ್ತಷ್ಟು ಉಗ್ರ ಹೋರಾಟ ನಡೆಸುವುದಾಗಿ ಕಾಂಗ್ರೆಸ್ ಮುಖಂಡ ಕೆ.ಎಸ್ ಆನಂದ್ ಟಿವಿ9ಗೆ ಪ್ರತಿಕ್ರಿಯೆ ನೀಡಿದ್ದಾರೆ.

ವರದಿ: ಪ್ರಶಾಂತ್ ಮೂಡಿಗೆರೆ, ಟಿವಿ9 ಕನ್ನಡ

ಇದನ್ನೂ ಓದಿ: 

ಕೂರ್ಗ್, ಚಿಕ್ಕಮಗಳೂರು ಕಾಫಿ, ಮೈಸೂರು ಸೋಪ್, ಸಿಲ್ಕ್, ಅಗರಬತ್ತಿ ಸೇರಿ ಕರ್ನಾಟಕದ 10 ವಿಶೇಷ ಅಂಚೆ ಲಕೋಟೆ ಬಿಡುಗಡೆ

ಖ್ಯಾತ ಪರಿಸರ ಹೋರಾಟಗಾರ ಡಿ.ವಿ.ಗಿರೀಶ್ ಮೇಲೆ ಚಿಕ್ಕಮಗಳೂರಿನಲ್ಲಿ ಹಲ್ಲೆ: ವ್ಯಾಪಕ ಖಂಡನೆ

(Chikkamagaluru Farmers and herdsmen held a huge protest at Kaduru to save their field)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada