AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಫಿನಾಡು ಪೊಲೀಸರಿಗೆ ತಲೆನೋವಾದ ಟೂರಿಸ್ಟ್, ಮಾಡ್ಬೇಡಿ ಅಂದಿದ್ದನ್ನೇ ಮಾಡುತ್ತಿರುವ ಪ್ರವಾಸಿಗರು

ಕರ್ನಾಟಕದ ಹಲವೆಡೆ ಭಾರೀ ಮಳೆಯಾಗುತ್ತಿದೆ. ಹಲವು ಜಿಲ್ಲೆಗಳಲ್ಲಿ ಹಲವು ಅನಾಹುತಗಳನ್ನು ಸೃಷ್ಟಿಸಿದೆ. ಇದರ ಮಧ್ಯೆ ಕಾಫಿನಾಡು ಚಿಕ್ಕಮಗಳೂರಿನಲ್ಲಿ ಪ್ರವಾಸಿಗರ ಹುಚ್ಚಾಟ ಪೊಲೀಸರಿಗೆ ದೊಡ್ಡ ತಲೆನೋವಾಗಿದೆ.

ಕಾಫಿನಾಡು ಪೊಲೀಸರಿಗೆ ತಲೆನೋವಾದ ಟೂರಿಸ್ಟ್, ಮಾಡ್ಬೇಡಿ ಅಂದಿದ್ದನ್ನೇ ಮಾಡುತ್ತಿರುವ ಪ್ರವಾಸಿಗರು
ಅಪಾಯಕಾರಿ ಬಂಡೆಗಳ ಮೇಲೆ ಪ್ರವಾಸಿಗರು ಫೋಟೋ ಕ್ಕಿಕ್ಕಿಸಿಕೊಳ್ಳುತ್ತಿರುವುದು
ಅಶ್ವಿತ್ ಮಾವಿನಗುಣಿ, ಚಿಕ್ಕಮಗಳೂರು
| Edited By: |

Updated on:Jul 26, 2023 | 8:31 AM

Share

ಚಿಕ್ಕಮಗಳೂರು, (ಜುಲೈ, 26): ವರುಣ(Rain) ಅಬ್ಬರಿಸಿ ಆರ್ಭಟಿಸುತ್ತಿದ್ದಾನೆ. ಜೀವನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಹೊಲ, ಗದ್ದೆ, ತೋಟಗಳೆಲ್ಲಾ ಜಲಾಪೋಶನವಾಗಿವೆ. ಅಮಾಯಕ ಜೀವಗಳು ಬಲಿಯಾಗುತ್ತಿವೆ. ಅನೇಕರ ಬದುಕು ಬೀದಿಗೆ ಬಿದ್ದಿದೆ. ಇದೆಲ್ಲ ಕರ್ನಾಟಕದ (karnataka) ಹಲವು ಜಿಲ್ಲೆಗಳಲ್ಲಿ ಮಳೆ ತಂದಿಟ್ಟಿ ಅನಾಹುತಗಳು. ಆದರೂ ಕೆಲವರು ನೀರಿನ ಜೊತೆ ಸೆಲ್ಫಿ, ರೀಲ್ಸ್ (Reels)​ ಅಂತ ಹುಚ್ಚಾಟ ಮಢುತ್ತಿರುವುದು ಕಂಡುಬರುತ್ತಿದೆ, ಅದರಲ್ಲೂ ಚಾರ್ಮಾಡಿ ಘಾಟ್​ನಲ್ಲಿ ಪ್ರವಾಸಿಗರು ಅಪಾಯಕಾರಿ ಬಂಡೆ ಮೇಲೇರಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದು, ಇದು ಕಾಫಿನಾಡು ಚಿಕ್ಕಮಗಳೂರಿನ (Chikkamagaluru) ಪೊಲೀಸರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಇದನ್ನೂ ಓದಿ: Chikmagalur Rain: ಚಿಕ್ಕಮಗಳೂರಿನ ಮುಳ್ಳಯ್ಯನಗಿರಿ ಮಾರ್ಗದಲ್ಲಿ ವಾಹನ ಸಂಚಾರ ಬಂದ್, ಪ್ರವಾಸಿಗರಿಗೆ ನಿರ್ಬಂಧ

ಮೂಡಿಗೆರೆ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್​ನಲ್ಲಿ ಸ್ವಲ್ಪ ಯಾಮಾರಿದರೂ ದೊಡ್ಡ ಮಟ್ಟದ ಅಪಾಯ ಸಂಭವಿಸುವುದ ಗ್ಯಾರಂಟಿ. ಈಗಾಗಲೇ ಬಿದ್ದು ಕೈ-ಕಾಲು ಮುರಿದುಕೊಂಡು, ಪ್ರಾಣ ಕಳೆದುಕೊಂಡಿರುವ ಪ್ರಕರಣಗಳು ನಡೆದಿವೆ. ಆದರೂ ಪ್ರವಾಸಿಗರು ಅದೇ ಸ್ಥಳದಲ್ಲಿ ಮೋಜು ಮಸ್ತಿ ಮಾಡುತ್ತಿದ್ದಾರೆ.

ಹೌದು… ನೀರು ಹರಿಯುತ್ತಿದೆ ಎಂದು ಸುಂದರ ಹಾಗೂ ಅಪಾಯದ ಸ್ಥಳದಲ್ಲಿ ಹುಚ್ಚಾಟ ಮೆರೆಯಬೇಡಿ ಎಂದು ಜಿಲ್ಲಾಡಳಿತ, ಪೊಲೀಸ್ ಪ್ರವಾಸಿಗರಿಗೆ ಮನವಿ ಮಾಡಿಕೊಂಡಿದೆ.ಆದ್ರೆ, ಪ್ರವಾಸಿಗರು ಮಾತ್ರ ಅದ್ಯಾವುದನ್ನೂ ಲೆಕ್ಕಿಸದೇ ಕಲ್ಲು ಬಂಡೆಗಳ ಮೇಲೆ ನಿಂತು ಫೋಟೋ, ರೀಲ್ಸ್​ ಮಾಡುತ್ತಿದ್ದಾರೆ.

ಧರೆ ಕುಸಿತ

ಕಾಫಿನಾಡಿನಲ್ಲಿ ಮಳೆ ಅವಾಂತರ ಮುಂದುವರಿದಿದ್ದರಿಂದ ಮೂಡಿಗೆರೆ ತಾಲೂಕಿನ ಗಬ್ಗಲ್ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಿಂಭಾಗ ಧರೆ ಕುಸಿದಿದೆ. ಧಾರಾಕಾರವಾಗಿ ಮಳೆ ಸುರಿಯುತ್ತಿರುವುದರಿಂದಾಗಿ ಭಾರಿ ಪ್ರಮಾಣದಲ್ಲಿ ಧರೆ ಕುಸಿದು ಬಿಳುತ್ತಿದ್ದು, ಇದೀಗ ಶಾಲೆಯ ಮೇಲೆ‌ ಧರೆ ಕುಸಿಯುವ ಆತಂಕ ಶರುವಾಗಿದೆ.

ಮುಳ್ಳಯ್ಯನಗಿರಿ ರಸ್ತೆಯಲ್ಲಿ ಗುಡ್ಡ ಕುಸಿತ

ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಭಾರಿ ಮಳೆ ಹಿನ್ನೆಲೆಯಲ್ಲಿ ಮುಳ್ಳಯ್ಯನಗಿರಿ ಮಾರ್ಗದ ರಸ್ತೆಗೆ ಮತ್ತೆ ಗುಡ್ಡ ಕುಸಿದುಬಿದ್ದಿದೆ. ಇದರಿಂದ ಮುಳ್ಳಯ್ಯನಗಿರಿ ರಸ್ತೆಯಲ್ಲಿ ವಾಹನ ಸಂಚಾರ ಬಂದ್ ಆಗಿದ್ದು, ಪ್ರವಾಸಿಗರಿಗೆ ನಿರ್ಬಂಧಿಸಲಾಗಿದೆ. ಕುಸಿತವಾದ ಸ್ಥಳದಲ್ಲೇ ಧಾರಾಕಾರ ಮಳೆಗೆ ಗುಡ್ಡ ಮತ್ತೆ ಕುಸಿದಿದೆ. ಹೀಗಾಗಿ ಪೊಲೀಸರು ಬ್ಯಾರಿಕೇಡ್ ಹಾಕಿ ರಸ್ತೆ ಬಂದ್ ಮಾಡಿದ್ದಾರೆ. ಸ್ಥಳದಲ್ಲಿ ಚಿಕ್ಕಮಗಳೂರು ಗ್ರಾಮಾಂತರ ಠಾಣೆಯ ಪೊಲೀಸರು, ಪ್ರವಾಸಿ ಮಿತ್ರ ಪಡೆ ನಿಯೋಜನೆ ಮಾಡಲಾಗಿದ್ದು,. ಪ್ರವಾಸಿಗರನ್ನ ತಡೆದು ವಾಪಸ್ ಕಳಿಸುತ್ತಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:23 am, Wed, 26 July 23