ಚಿಕ್ಕಮಗಳೂರು: ಮಗು ಮೇಲೆ ಕುದಿಯೋ ಬಿಸಿ ನೀರು ಸುರಿದಿದ್ದ ಸಿಬ್ಬಂದಿ ಸಸ್ಪೆಂಡ್
ಚಿಕ್ಕಮಗಳೂರಿನ ದತ್ತು ಸಂಸ್ಥೆಯಲ್ಲಿ ಒಂದು ವರ್ಷ ಮೂರು ತಿಂಗಳ ಹೆಣ್ಣು ಮಗುವಿಗೆ ಸಿಬ್ಬಂದಿಯ ನಿರ್ಲಕ್ಷ್ಯದಿಂದಾಗಿ ನರಳಾಡುತ್ತಿದೆ. ಬಿಸಿ ನೀರು ಸುರಿದ ಪರಿಣಾಮ ಮಗುವಿನ ಸೊಂಟದ ಕೆಳ ಭಾಗ ತೀವ್ರವಾಗಿ ಸುಟ್ಟುಹೋಗಿದೆ. ಘಟನೆ ಮುಚ್ಚಿಹಾಕಲು ಯತ್ನಿಸಿದ ಸಿಬ್ಬಂದಿಯನ್ನು ವಜಾ ಮಾಡಿ, ಎಫ್ಐಆರ್ ದಾಖಲಿಸಲಾಗಿದೆ. ಮಗುವಿಗೆ ಶೀಘ್ರದಲ್ಲೇ ಪ್ಲಾಸ್ಟಿಕ್ ಸರ್ಜರಿ ನಡೆಯಲಿದೆ.

ಚಿಕ್ಕಮಗಳೂರು, ಜುಲೈ 21: ಕಾಫಿನಾಡು ಚಿಕ್ಕಮಗಳೂರು (chikkamagaluru) ಅಮಾನವೀಯ ಘಟನೆಯೊಂದಕ್ಕೆ ಸಾಕ್ಷಿಯಾಗಿದೆ. ದತ್ತು ಸಂಸ್ಥೆಯ ಸಿಬ್ಬಂದಿ ನಿರ್ಲಕ್ಷಕ್ಕೆ ಒಂದು ವರ್ಷದ ಮೂರು ತಿಂಗಳ ಹೆಣ್ಣು ಮಗು (baby) ನರಳಾಡುತ್ತಿದೆ. ಪ್ರಕರಣವನ್ನು ಮುಚ್ಚಿಟ್ಟಿದ್ದ ಸಿಬ್ಬಂದಿ ವಿರುದ್ಧ ಕೊನೆಗೂ ಕಠಿಣ ಕ್ರಮವಾಗಿದೆ. ಆಯಾ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಅಮಾನತು ಮಾಡಲಾಗಿದೆ. ಮಗುವಿಗೆ ಮೂರು ದಿನದಲ್ಲಿ ಪ್ಲಾಸ್ಟಿಕ್ ಸರ್ಜರಿ ನಡೆಯಲಿದೆ.
ಮಗು ಇಲ್ಲ ಎಂದು ಕೊರಗುತ್ತಿದ್ದ ದಂಪತಿ ಬಾಳಲ್ಲಿ ಆಶಾ ಕಿರಣ ಮೂಡಿತ್ತು. ಮನೆಯಲ್ಲಿ ಗೆಜ್ಜೆ ಸದ್ದು ಕೇಳಲು, ಕಿಲ ಕಿಲ ನಗು ಕೇಳಲು ಅವರು ಹಾತೊರೆಯುತ್ತಿದ್ದರು. ಆದರೆ ಅಷ್ಟರಲ್ಲೇ, ಬರಸಿಡಿಲು ಬಡಿದಿದೆ. ಮಗುವಿನ ಕಾಲುಗಳು ಸುಟ್ಟು ಹೋಗಿವೆ. ಸೊಂಟದ ಕೆಳ ಭಾಗ ಬೆಂದಿದೆ. ಒಂದೂವರೆ ವರ್ಷದ ಕಂದಮ್ಮನ ಈ ಘೋರ ಸ್ಥಿತಿಗೆ ಕಾರಣವೇ ದತ್ತು ಸಂಸ್ಥೆಯ ಶಿಶು ಆರೈಕಾ ಸಿಬ್ಬಂದಿಯ ನಿರ್ಲಕ್ಷ್ಯ.
ಇದನ್ನೂ ಓದಿ: ಚಿಕ್ಕಮಗಳೂರಿನಲ್ಲಿ ಅಮಾನವೀಯ ಘಟನೆ: ಹೆಣ್ಣು ಮಗುವಿನ ಮೇಲೆ ಬಿಸಿ ನೀರು ಸುರಿದ ಸಿಬ್ಬಂದಿ
ಹೌದು.. ಚಿಕ್ಕಮಗಳೂರಿನ ದತ್ತು ಸಂಸ್ಥೆಯಲ್ಲಿ ಹೆಣ್ಣು ಮಗುವನ್ನ ದತ್ತು ಪಡೆಯುವುದಕ್ಕೆ ದಂಪತಿ ಬಂದಿದ್ದರು. ಮಲ ವಿಸರ್ಜನೆ ಮಾಡಿದ್ದ ಮಗುವನ್ನ ಆರೈಕಾ ಸಿಬ್ಬಂದಿ ಶುಚಿ ಗೊಳಿಸುತ್ತಿದ್ದರು. ಈ ವೇಳೆ ಕುದಿಯೋ ಬಿಸಿ ನೀರನ್ನ ಸುರಿದಿದ್ದಾರೆ. ಇದ್ರಿಂದ ಹೆಣ್ಣು ಮಗುವಿನ ಸೊಂಟದ ಕೆಳಭಾಗ ಸುಟ್ಟು ಹೋಗಿದೆ. ಸಿಬ್ಬಂದಿ ಬೇಜವಾಬ್ದಾರಿಗೆ ಮಗು ನರಳಾಡುತ್ತಿದೆ.
ಸಿಬ್ಬಂದಿ ವಜಾ
ಸರ್ಕಾರಿ ವಿಶೇಷ ದತ್ತು ಸಂಸ್ಥೆ ಮಕ್ಕಳ ರಕ್ಷಣಾ ನಿರ್ದೇಶನಾಲಯದ ಅಡಿಯ ದತ್ತು ಸಂಸ್ಥೆಯಲ್ಲಿ ಅನಾಥ ಮಕ್ಕಳನ್ನು ರಕ್ಷಿಸಿ, ಆರೈಕೆ ಮಾಡಲಾಗುತ್ತೆ. ಜುಲೈ 9 ರಂದು ಘಟನೆ ನಡೆದಿದ್ದರೂ ಮೇಲಧಿಕಾರಿಗಳಿಗೆ ತಿಳಿಯದಂತೆ ಸಿಬ್ಬಂದಿ ಮುಚ್ಚಿಟ್ಟಿದ್ದರು. ಸದ್ಯ ಚಿಕ್ಕಮಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಆಯಾ ಲತಾಳನ್ನ ಕೆಲಸದಿಂದ ವಜಾ ಮಾಡಲಾಗಿದೆ. ಚಿಕ್ಕಮಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ FIR ದಾಖಲಿಸಲಾಗಿದೆ. ಇನ್ನು ದತ್ತು ಸಂಸ್ಥೆಯ ಸಿಬ್ಬಂದಿಗೆ ಜಿಲ್ಲಾ ಪಂಚಾಯ್ತಿ ಸಿ.ಇ.ಓ ಹೆಚ್.ಎಸ್. ಕೀರ್ತನಾ ನೋಟಿಸ್ ನೀಡಿದ್ದಾರೆ.
ಇದನ್ನೂ ಓದಿ: ಯಾದಗಿರಿಯಲ್ಲಿ 2 ವಾರದ ಅಂತರದಲ್ಲಿ 3 ನವಜಾತ ಶಿಶುಗಳ ಸಾವು, 130ಕ್ಕೆ ಏರಿಕೆ
ಗಂಭೀರವಾಗಿ ಗಾಯಗೊಂಡಿರುವ ಕಂದಮ್ಮಳಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ. ಮೂರು ದಿನದಲ್ಲಿ ಪ್ಲಾಸ್ಟಿಕ್ ಸರ್ಜರಿ ನಡೆಯಲಿದೆ. ದತ್ತು ಸಂಸ್ಥೆಯ ಸಿಬ್ಬಂದಿ ನಿರ್ಲಕ್ಷ್ಯಕ್ಕೆ ಶಿಶು ನರಳಾಡುತ್ತಿರುವುದು ಮಾತ್ರ ದುರಂತವೇ ಸರಿ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.








