AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶೈಕ್ಷಣಿಕವಾಗಿ ಹಿಂದುಳಿದ ಜಿಲ್ಲೆ ಯಾದಗಿರಿ ಮಕ್ಕಳಿಗೆ ಇದೆಂತಹ ಸ್ಥಿತಿ!

ಯಾದಗಿರಿ ಜಿಲ್ಲೆಯ ರಸ್ತಾಪುರದ ಸರ್ಕಾರಿ ಶಾಲೆಯ ಶಿಥಿಲಾವಸ್ಥೆ ಮತ್ತು ಶಿಕ್ಷಕರ ಕೊರತೆಯಿಂದಾಗಿ ಶೈಕ್ಷಣಿಕ ಪ್ರಗತಿಗೆ ತೀವ್ರ ಅಡ್ಡಿಯಾಗಿದೆ. ಕುಸಿಯುತ್ತಿರುವ ಕಟ್ಟಡಗಳು ಮತ್ತು ಸಾಕಷ್ಟು ಕೋಣೆಗಳ ಕೊರತೆಯಿಂದ ಮಕ್ಕಳು ಪಾಠ ಕೇಳಲು ಹೆದರುತ್ತಿದ್ದಾರೆ. ಇದು ಜಿಲ್ಲೆಯ ಶೈಕ್ಷಣಿಕ ಹಿಂದುಳಿಯುವಿಕೆಗೆ ಕಾರಣವಾಗಿದೆ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯ ಇದಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ.

ಶೈಕ್ಷಣಿಕವಾಗಿ ಹಿಂದುಳಿದ ಜಿಲ್ಲೆ ಯಾದಗಿರಿ ಮಕ್ಕಳಿಗೆ ಇದೆಂತಹ ಸ್ಥಿತಿ!
ಶೈಕ್ಷಣಿಕವಾಗಿ ಹಿಂದುಳಿದ ಜಿಲ್ಲೆ ಯಾದಗಿರಿ ಮಕ್ಕಳಿಗೆ ಇದೆಂತಹ ಸ್ಥಿತಿ!
ಅಮೀನ್​ ಸಾಬ್​
| Edited By: |

Updated on: Nov 21, 2024 | 5:48 PM

Share

ಯಾದಗಿರಿ, ನವೆಂಬರ್​ 21: ಯಾದಗಿರಿ ಜಿಲ್ಲೆ (Yadgir) ಅಂದರೆ ಸಾಕು ಶೈಕ್ಷಣಿಕವಾಗಿ ತೀರ ಹಿಂದುಳಿದ ಜಿಲ್ಲೆ ಎನ್ನುವ ಹಣೆ ಪಟ್ಟಿಯನ್ನ ಕಟ್ಟಿಕೊಂಡಿದೆ. ಮಕ್ಕಳಿಗೆ ಕುಳಿತುಕೊಂಡು ಪಾಠ ಕೇಳಲು ಸರಿಯಾದ ಕೋಣೆಗಳ ವ್ಯವಸ್ಥೆ ಇಲ್ಲ ಜೊತೆಗೆ ಸರಿಯಾದ ಶಿಕ್ಷಕರ ವ್ಯವಸ್ಥೆಯಿಲ್ಲ. ಇದೆ ಕಾರಣಕ್ಕೆ ಜಿಲ್ಲೆ ಶೈಕ್ಷಣಿಕವಾಗಿ ಹಿಂದುಳಿದಿದೆ. ಅದಕ್ಕೆ ತಾಜಾ ಉದಾಹರಣೆ ಅಂದರೆ ರಸ್ತಾಪುರ ಗ್ರಾಮದ ಶಾಲೆ. ಈ ಶಾಲೆಯ ಮಕ್ಕಳು ಶಾಲೆಯ ಕೋಣೆಯಲ್ಲಿ ಕುಳಿತುಕೊಂಡು ಪಾಠ ಕೇಳಲು ಹೆದರುವಂತಾಗಿದೆ.

ಶಿಥಿಲಾವಸ್ಥೆಗೆ ತಲುಪಿದ ಸರ್ಕಾರಿ ಶಾಲೆ: ಕೋಣೆಗಳ ಮೇಲ್ಚಾವಣಿ ಕುಸಿತ

ಜಿಲ್ಲೆಯ ಶಹಾಪುರ ತಾಲೂಕಿನ ರಸ್ತಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸದ್ಯ ಸಂಪೂರ್ಣವಾಗಿ ಶಿಥಿಲಾವಸ್ಥೆಗೆ ಬಂದಿದೆ. ಕಳೆದ ನಾಲ್ಕೈದು ವರ್ಷಗಳಿಂದ ಶಾಲೆಯ ಕೋಣೆಗಳ ಮೇಲ್ಚಾವಣಿ ಕುಸಿದು ಬಿಳ್ಳುತ್ತಿದೆ. ಕೆಲ ಸಲ ಮಕ್ಕಳ ಮೇಲೆ ಕೋಣೆಗಳ ಮೇಲ್ಚಾವಣಿ ಕುಸಿದು ಬಿದ್ದಿರುವ ಘಟನೆಗಳ ಸಹ ನಡೆದಿವೆ. ಹೀಗಾಗಿ ಮಕ್ಕಳು ಅಂಗೈಯಲ್ಲಿ ಜೀವ ಹಿಡಿದುಕೊಂಡು ಶಿಕ್ಷಕರ ಪಾಠ ಕೇಳುವಂತಾಗಿದೆ.

ಶಾಲೆಯಲ್ಲಿ ಸುಮಾರು ಐದು ಕೋಣೆಗಳಿವೆ. ಐದು ಕೋಣೆಗಳು ಸಹ ಬಿಳುವ ಹಂತಕ್ಕೆ ಬಂದಿವೆ. ಮಳೆಗಾಲ ಆರಂಭವಾದರೆ, ಮಕ್ಕಳು ಶಾಲೆಗೆ ಬರೋದಿಲ್ಲ. ಯಾಕೆಂದರೆ ಶಾಲೆಯ ಕೋಣೆಗಳು ಮಳೆ ನೀರಿನಿಂದ ಸಂಪೂರ್ಣವಾಗಿ ಸೋರುತ್ತವೆ. ಇದು ಮಳೆಗಾಲದ ಕಥೆಯಾದರೆ ಇನ್ನು ಬೇರೆ ಕಾಲದಲ್ಲಿ ಮೇಲ್ಚಾವಣಿ ಕುಸಿದು ಬಿಳುತ್ತೆ. ಹೀಗಾಗಿ ಮಕ್ಕಳು ಶಾಲೆಯ ಕುಳಿತುಕೊಂಡು ಪಾಠ ಕೇಳಲು ಹೆದರುತ್ತಿದ್ದಾರೆ. ಇದು ನಿನ್ನೆ ಮೊನ್ನೆಯ ಸಮಸ್ಯೆ ಅಲ್ಲ, ಬದಲಿಗೆ ನಾಲ್ಕೈದು ವರ್ಷಗಳಿಂದ ಇದೆ ಸ್ಥಿತಿಯನ್ನ ಮಕ್ಕಳು ಅನುಭವಿಸುತ್ತಿದ್ದಾರೆ.

ಮರ ಕೆಳಗೆ ಕುರಿಸಿ ಪಾಠ

1 ರಿಂದ 8ನೇ ತರಗತಿ ವರೆಗೆ ಇರುವ ಶಾಲೆಯಲ್ಲಿ ಸುಮಾರು 600 ಮಕ್ಕಳು ವಿದ್ಯಾಭಾಸ ಮಾಡುತ್ತಿದ್ದಾರೆ. ಈ ಸರ್ಕಾರಿ ಶಾಲೆಯಲ್ಲಿ ಕಳೆದ ಐದು ವರ್ಷಗಳ ಹಿಂದೆ ಇಂಗ್ಲಿಷ್ ಮಾಧ್ಯಮ ಶಾಲೆ ಕೂಡ ಆರಂಭಿಸಲಾಗಿದೆ. ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮ ಮಕ್ಕಳು ಸೇರಿ ಸುಮಾರು 600 ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ. ಕೋಣೆಗಳ ಕೊರತೆಯಿದ್ದ ಕಾರಣಕ್ಕೆ ಶಿಕ್ಷಕರು ಮಕ್ಕಳನ್ನ ಇರುವಂತ ಚಿಕ್ಕ ಮೈದಾನದಲ್ಲಿ ಮರ ಕೆಳಗೆ ಕುರಿಸಿ ಪಾಠ ಮಾಡುತ್ತಿದ್ದಾರೆ.

ನಾಲ್ಕೈದು ಕ್ಲಾಸ್​ನ ಮಕ್ಕಳನ್ನ ಹೊರಗಡೆ ಕುರಿಸಿಕೊಂಡು ಶಿಕ್ಷಕರು ಪಾಠ ಮಾಡುವಂತಾಗಿದೆ. ಇನ್ನು ಕೆಲ ಕ್ಲಾಸ್​ನ ಮಕ್ಕಳಿಗೆ ಬಿಳುವ ಹಂತಕ್ಕೆ ಬಂದಿರುವ ಕೋಣೆಗಳಲ್ಲೇ ಕುರಿಸಿ ಪಾಠ ಮಾಡುತ್ತಿದ್ದಾರೆ. ಅದು ಕೂಡ ಮೂರು ಮೂರು ಕ್ಲಾಸ್​ನ ಮಕ್ಕಳನ್ನ ಒಂದೇ ಕೋಣೆಯಲ್ಲಿ ಕುರಿಸಿಕೊಂಡು ಪಾಠ ಮಾಡುವಂತಾಗಿದೆ. ಇನ್ನು ಇದೆ ಶಾಲೆಯ 7 ಮತ್ತು 8ನೇ ತರಗತಿ ಮಕ್ಕಳನ್ನ ಗ್ರಾಮದ ಹೊರ ಭಾಗದಲ್ಲಿರುವ ಸರ್ಕಾರಿ ಪ್ರೌಢ ಶಾಲೆಯಲ್ಲಿ ಪಾಠ ಮಾಡಲಾಗುತ್ತಿದೆ.

ಮೂಲಭೂತ ಸೌಕರ್ಯ ಜೊತೆಗೆ ಶಿಕ್ಷಕರ ಕೊರತೆ 

ಕೋಣೆಗಳ ಕೊರತೆಯಿದ್ದ ಕಾರಣಕ್ಕೆ ಹೈಸ್ಕೂಲ್ ಪಾಠ ಮಾಡುವಂತ ಸ್ಥಿತಿ ಶಿಕ್ಷಕರಿಗೆ ಬಂದಿದೆ. ಇನ್ನು ಜಿಲ್ಲೆಯ ಪ್ರತಿ ಬಾರಿ ಎಸ್​ಎಸ್​ಎಲ್​ಸಿ ಹಾಗೂ ಪಿಯುಸಿ ಫಲಿತಾಂಶದಲ್ಲಿ ಕೊನೆ ಸ್ಥಾನಕ್ಕೆ ಬರುವುದು ಇದೇ ಕಾರಣಗಳಾಗಿವೆ. ಯಾಕೆಂದ್ರೆ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಮೂಲಭೂತ ಸೌಕರ್ಯ ಹಾಗೂ ಉತ್ತಮ ಶಿಕ್ಷಕರು ಬೇಕಾಗುತ್ತೆ. ಆದರೆ ಈ ಶಾಲೆಯಲ್ಲಿ ಮೂಲಭೂತ ಸೌಕರ್ಯ ಅಂದ್ರೆ ಕಟ್ಟಡದ ಕೊರತೆಯೊಂದಿಗೆ ಜೊತೆಗೆ ಶಿಕ್ಷಕರ ಕೊರತೆ ಕೂಡ ಕಾಡುತ್ತಿದೆ. ಇನ್ನು ಶಾಲೆಗೆ ಹೊಸದಾಗಿ ಎರಡು ಕೋಣೆಗಳನ್ನ ನಿರ್ಮಾಣ ಮಾಡುವ ಕಾರ್ಯ ಆಮೆ ಗತಿಯಲ್ಲಿ ನಡೆಯುತ್ತಿದೆ. ಇದೆ ಕಾರಣಕ್ಕೆ ಪೋಷಕರು ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ.

ಇದನ್ನೂ ಓದಿ: ಮಹಾರಾಣಿ ಕಾಲೇಜಿನಲ್ಲಿ ಅವ್ಯವಸ್ಥೆ ಆಗರ: 20 ಕೋಟಿ ರೂ ಅನುದಾನದ ಬಗ್ಗೆ ಪ್ರಶ್ನಿಸಿದ ಮಹಿಳಾ ಆಯೋಗದ ಅಧ್ಯಕ್ಷೆ

ಶೈಕ್ಷಣಿಕವಾಗಿ ಜಿಲ್ಲೆ ಹಿಂದುಳಿಯುವುದಕ್ಕೆ ಪ್ರಮುಖವಾಗಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳೇ ಕಾರಣಿಕರ್ತರಾಗಿದ್ದಾರೆ. ಯಾಕೆಂದರೆ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿಯಲ್ಲಿ ಶಿಕ್ಷಣಕ್ಕಾಗಿ ಸಾಕಷ್ಟು ಅನುದಾನವಿದ್ದರು ಬಳಕೆ ಮಾಡಿಕೊಂಡು ಕೋಣೆಗಳ ನಿರ್ಮಾಣ ಮಾಡುವ ಕೆಲಸವಾಗುತ್ತಿಲ್ಲ. ಇದು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಬೇಜವಾಬ್ದಾರಿತನವೇ ಕಾರಣವೆನ್ನಲಾಗುತ್ತಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

‘ನಗ್ತಾ ಇರಿ, ಖುಷಿಯಾಗಿರಿ’; ಮಾತಿನ ಮೂಲಕ ವಿಶ್ ಮಾಡಿದ ಸುದೀಪ್
‘ನಗ್ತಾ ಇರಿ, ಖುಷಿಯಾಗಿರಿ’; ಮಾತಿನ ಮೂಲಕ ವಿಶ್ ಮಾಡಿದ ಸುದೀಪ್
ಹೊಸ ವರ್ಷಾಚರಣೆ ವೇಳೆ ಸ್ವಿಟ್ಜರ್​ಲ್ಯಾಂಡ್​ನ ಬಾರ್‌ನಲ್ಲಿ ಬಾಂಬ್ ಸ್ಫೋಟ
ಹೊಸ ವರ್ಷಾಚರಣೆ ವೇಳೆ ಸ್ವಿಟ್ಜರ್​ಲ್ಯಾಂಡ್​ನ ಬಾರ್‌ನಲ್ಲಿ ಬಾಂಬ್ ಸ್ಫೋಟ
ಹೊಸ ವರ್ಷದ ದಿನ ನಮ್ಮ ಮೆಟ್ರೋಗೆ ಬಂಪರ್​ ಆದಾಯ: ಕಲೆಕ್ಷನ್​ ಎಷ್ಟು?
ಹೊಸ ವರ್ಷದ ದಿನ ನಮ್ಮ ಮೆಟ್ರೋಗೆ ಬಂಪರ್​ ಆದಾಯ: ಕಲೆಕ್ಷನ್​ ಎಷ್ಟು?
ಪರೋಕ್ಷವಾಗಿ ಸಿಎಂ ಆಗುವ ಆಸೆ ವ್ಯಕ್ತಪಡಿಸಿದ ಡಾ. ಜಿ. ಪರಮೇಶ್ವರ್
ಪರೋಕ್ಷವಾಗಿ ಸಿಎಂ ಆಗುವ ಆಸೆ ವ್ಯಕ್ತಪಡಿಸಿದ ಡಾ. ಜಿ. ಪರಮೇಶ್ವರ್
ಹೂ, ಎಲೆಗಳ ಸಿಂಗಾರ; ವಿಶೇಷ ಅಲಂಕಾರದಲ್ಲಿ ಕಂಗೊಳಿಸಿದ ನಾಡ ದೇವತೆ
ಹೂ, ಎಲೆಗಳ ಸಿಂಗಾರ; ವಿಶೇಷ ಅಲಂಕಾರದಲ್ಲಿ ಕಂಗೊಳಿಸಿದ ನಾಡ ದೇವತೆ
ಮಂತ್ರಾಲಯದಲ್ಲಿ ಹೊಸ ವರ್ಷದ ಸಂಭ್ರಮ: ಸಾಗರೋಪಾದಿಯಲ್ಲಿ ಹರಿದುಬಂದ ಭಕ್ತರು
ಮಂತ್ರಾಲಯದಲ್ಲಿ ಹೊಸ ವರ್ಷದ ಸಂಭ್ರಮ: ಸಾಗರೋಪಾದಿಯಲ್ಲಿ ಹರಿದುಬಂದ ಭಕ್ತರು
ಪಕ್ಕದಮನೆಯವರ ಬಗ್ಗೆ ಮಾತನಾಡಲ್ಲ; ವಿಜಯಲಕ್ಷ್ಮೀ ಬಗ್ಗೆ ಸುದೀಪ್ ಮಾತು
ಪಕ್ಕದಮನೆಯವರ ಬಗ್ಗೆ ಮಾತನಾಡಲ್ಲ; ವಿಜಯಲಕ್ಷ್ಮೀ ಬಗ್ಗೆ ಸುದೀಪ್ ಮಾತು
ಮಂಗಳೂರಿನ ಕದ್ರಿ ಮಂಜುನಾಥ ದೇವಸ್ಥಾನದಲ್ಲಿ ಭಕ್ತರ ದಂಡು
ಮಂಗಳೂರಿನ ಕದ್ರಿ ಮಂಜುನಾಥ ದೇವಸ್ಥಾನದಲ್ಲಿ ಭಕ್ತರ ದಂಡು
ಪುಟಿನ್ ರಹಸ್ಯ ನಿವಾಸದ ಮೇಲೆ ಉಕ್ರೇನ್ ಡ್ರೋನ್ ದಾಳಿ
ಪುಟಿನ್ ರಹಸ್ಯ ನಿವಾಸದ ಮೇಲೆ ಉಕ್ರೇನ್ ಡ್ರೋನ್ ದಾಳಿ
ಕಾರ್ಮಿಕರ ಮೇಲೆ ಹಲ್ಲೆ ಮಾಡಿ ಚಹಾ ಅಂಗಡಿ ಧ್ವಂಸಗೊಳಿಸಿದ ಪೊಲೀಸಪ್ಪ!
ಕಾರ್ಮಿಕರ ಮೇಲೆ ಹಲ್ಲೆ ಮಾಡಿ ಚಹಾ ಅಂಗಡಿ ಧ್ವಂಸಗೊಳಿಸಿದ ಪೊಲೀಸಪ್ಪ!