AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಾಯಾಳು ಆಸ್ಪತ್ರೆಗೆ ಸೇರಿಸಿದ್ದು ನಾನು, ಚಂದ್ರಪ್ರಭ ಅಲ್ಲ; ಹಾಸ್ಯಕಲಾವಿದನ ವಿರುದ್ಧ ಆಟೋ ಚಾಲಕ ಆಕ್ರೋಶ

ಹಾಸ್ಯ ಕಲಾವಿದ ಜಿ.ಚಂದ್ರಪ್ರಭ ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಿಸಿ ಗಾಯಗೊಂಡ ಮಾಲ್ತೇಶ್​ರನ್ನು ಆಸ್ಪತ್ರೆಗೆ ದಾಖಲಿಸಿದ್ದು ನಾನೇ. ಚಂದ್ರಪ್ರಭ ಅಲ್ಲ. ಅವರು ಸುಳ್ಳು ಹೇಳುತ್ತಿದ್ದಾರೆ ಎಂದು ಚಿಕ್ಕಮಗಳೂರಿನಲ್ಲಿ ಆಟೋ ಚಾಲಕ ರಂಗನಾಥ್ ಅವರು ಚಂದ್ರಪ್ರಭ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಚಂದ್ರಪ್ರಭ ಮಾಧ್ಯಮದ ಮುಂದೆ ಹೇಳುತ್ತಿರುವುದೆಲ್ಲವೂ ಸುಳ್ಳು. ಮಾನವೀಯತೆಯಿಂದ ಆದ್ರೂ ಆಸ್ಪತ್ರೆಗೆ ಸೇರಿಸಬಹುದಿತ್ತು. ಆದರೆ ಗಾಯಾಳುವಿಗೆ​​ ಚಿಕಿತ್ಸೆ ಕೊಡಿಸಿದ್ದು ನಾನು, ಜಿ.ಚಂದ್ರಪ್ರಭಾ ಅಲ್ಲ ಎಂದಿದ್ದಾರೆ.

ಗಾಯಾಳು ಆಸ್ಪತ್ರೆಗೆ ಸೇರಿಸಿದ್ದು ನಾನು, ಚಂದ್ರಪ್ರಭ ಅಲ್ಲ; ಹಾಸ್ಯಕಲಾವಿದನ ವಿರುದ್ಧ ಆಟೋ ಚಾಲಕ ಆಕ್ರೋಶ
ಹಾಸ್ಯಕಲಾವಿದ ಚಂದ್ರಪ್ರಭ, ಆಟೋ ಚಾಲಕ ರಂಗನಾಥ್
ಅಶ್ವಿತ್ ಮಾವಿನಗುಣಿ, ಚಿಕ್ಕಮಗಳೂರು
| Updated By: ಆಯೇಷಾ ಬಾನು|

Updated on: Sep 07, 2023 | 11:16 AM

Share

ಚಿಕ್ಕಮಗಳೂರು, ಸೆ.07: ಗಿಚ್ಚಿ ಗಿಲಿಗಿಲಿ(Gichchi Giligili) ಶೋ ಮೂಲಕ ಕೋಟ್ಯಾಂತರ ಜನರ ಮನಸ್ಸು ಗೆದ್ದಿದ್ದ ಕಾಮಿಡಿ ನಟ ಚಂದ್ರಪ್ರಭ(Comedy Actor Chandraprabha) ಅವರು ಚಿಕ್ಕಮಗಳೂರು ಬಸ್ ನಿಲ್ದಾಣದ ಬಳಿ ಅಪಘಾತ(Accident) ಮಾಡಿ ಕಾರು ನಿಲ್ಲಿಸದೆ ಮಾನವೀಯತೆಯನ್ನೂ ತೋರದೆ ತಿರುಗಿಯೂ ನೋಡದೆ ಹೋಗಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ನಟ ಚಂದ್ರಪ್ರಭ ಅವರು ಆಟೋ ಮಾಡಿ ಗಾಯಾಳನ್ನು ನಾನೇ ಆಸ್ಪತ್ರೆಗೆ ಸೇರಿಸಿದೆ ಎಂದಿದ್ದರು. ಆದರೆ ಈಗ ಕಾಮಿಡಿ ಸ್ಟಾರ್ ಚಂದ್ರಪ್ರಭ ವಿರುದ್ಧ ಆಟೋ ಚಾಲಕ ರಂಗನಾಥ್ ಆಕ್ರೋಶ ಹೊರ ಹಾಕಿದ್ದಾರೆ. ಗಾಯಾಳನ್ನು ಆಸ್ಪತ್ರೆಗೆ ಸೇರಿಸಿದ್ದು ನಾನು ಚಂದ್ರಪ್ರಭ ಅಲ್ಲ ಎಂದು ಕಿಡಿಕಾರಿದ್ದಾರೆ.

ಬಟ್ಟೆ ಅಂಗಡಿಯಲ್ಲಿ 6-7 ಸಾವಿರಕ್ಕೆ ಕೆಲಸ ಮಾಡುವ ಬಡ ಯುವಕ ಮಾಲ್ತೇಶ್​ನಿಗೆ ಚಂದ್ರಪ್ರಭ ಕಾರು ಡಿಕ್ಕಿ ಹೊಡೆದಿತ್ತು. ಈ ವೇಳೆ ಗಾಯಾಳನ್ನು ಆಸ್ಪತ್ರೆಗೆ ಸೇರಿಸದೆ ಚಂದ್ರಪ್ರಭ ಅವರು ತೆರಳಿದ್ದಾರೆ ಎಂದು ಹೇಳಲಾಗುತ್ತಿತ್ತು. ಆದರೆ ಈ ಬಗ್ಗೆ ಟಿವಿ9 ಜೊತೆ ಮಾತನಾಡಿದ ಚಂದ್ರಪ್ರಭ ಅವರು, ಆತ ಕುಡಿದಿದ್ದ, ಕುಡಿದು ನನ್ನ ಗಾಡಿಗೆ ಅಡ್ಡ ಬಂದಿದ್ದ. ಆಟೋ ಮಾಡಿ ಆತನನ್ನ ನಾನೇ ಆಸ್ಪತ್ರೆಗೆ ಸೇರಿಸಿದೆ ಎಂದು ಸಮಾಜಾಹಿಷಿ ನೀಡಿದ್ದರು. ಆದರೆ ಅಸಲಿಗೆ, ಗಾಯಾಳು ಯುವಕ ಮಾಲ್ತೇಶ್​ನನ್ನ ಆಸ್ಪತ್ರೆಗೆ ಸೇರಿಸಿದ್ದು ನಟ ಚಂದ್ರಪ್ರಭ ಅಲ್ಲವಂತೆ. ಗಾಯಾಳನ್ನು ಆಸ್ಪತ್ರೆಗೆ ಸೇರಿಸಿದ್ದು ನಾನು. ಚಂದ್ರಪ್ರಭ ಅವರಿಗೆ ಕಲಾವಿದನಾಗಿ ಸ್ವಲ್ಪವೂ ಮಾನವೀಯತೆ ಇಲ್ಲ ಎಂದು ಆಟೋ ಚಾಲಕ ರಂಗನಾಥ್ ಆಕ್ರೋಶ ಹೊರ ಹಾಕಿದ್ದಾರೆ.

ಇದನ್ನೂ ಓದಿ: ರಸ್ತೆ ಅಪಘಾತ: ಸಾವು ಬದುಕಿನೊಂದಿಗೆ ಹೋರಾಡುತ್ತಿರುವ ಮಾಲ್ತೇಶ್​ನ ಅಮ್ಮ ಕಮೇಡಿಯನ್ ಚಂದ್ರಪ್ರಭಾನನ್ನು ಶಪಿಸಿದರು!

ಹಾಸ್ಯ ಕಲಾವಿದನ ವಿರುದ್ಧ ಆಟೋ ಚಾಲಕ ಆಕ್ರೋಶ

ಗಾಯಗೊಂಡ ಮಾಲ್ತೇಶ್ ಅವರನ್ನ ನಾನೇ ಆಸ್ಪತ್ರೆಗೆ ಸೇರಿಸಿದ್ದು. ನನ್ನ ಆಟೋದಲ್ಲೇ ಆಸ್ಪತ್ರೆಗೆ ಗಾಯಾಳುವನ್ನು ಕರೆದೊಯ್ದಿದ್ದು ಚಂದ್ರಪ್ರಭ ಆಸ್ಪತ್ರೆಗೆ ಇರಲಿ, ಕಾರಿನಿಂದ ಇಳಿಯಲೇ ಇಲ್ಲ. ಚಂದ್ರಪ್ರಭ ಕಡೆಯ ಹುಡುಗನೊಬ್ಬ ಆಟೋದಲ್ಲಿ ಆಸ್ಪತ್ರೆಯವರೆಗೂ ಬಂದಿದ್ದ. ಆಸ್ಪತ್ರೆ ಬಳಿಯಿಂದ ಆ ಹುಡುಗ ಎಸ್ಕೇಪ್ ಆದ. ಚಿಕಿತ್ಸೆ ಕೊಡಿಸುವುದನ್ನು ಬಿಟ್ಟು ಎಸ್ಕೇಪ್ ಆದ್ರೂ. ಗಾಯಾಳುವಿಗೆ ಚಿಕಿತ್ಸೆ ಕುಡಿಸಿದ್ದು ನಾನು. ಚಂದ್ರಪ್ರಭಾ ಅಲ್ಲ ಎಂದು ಆಟೋ ಚಾಲಕ ರಂಗನಾಥ್ ಆಕ್ರೋಶ ಹೊರ ಹಾಕಿದ್ದಾರೆ.

ಚಂದ್ರಪ್ರಭ ಮಾಧ್ಯಮದ ಮುಂದೆ ಹೇಳುತ್ತಿರುವುದೆಲ್ಲಾ ಸುಳ್ಳು. ನನ್ನ ಆಟೋ ಬಾಡಿಗೆಯನ್ನೂ ಕೊಟ್ಟಿಲ್ಲ, ಆಟೋ ಬಾಡಿಗೆ ಇರಲಿ ಟ್ರೀಟ್ಮೆಂಟ್ ಆದ್ರೂ ಕೊಡಿಸಬಹುದಿತ್ತು. ದುರಹಂಕಾರದಿಂದ ಡ್ರೈವಿಂಗ್ ಮಾಡಿಕೊಂಡು ಬಂದು ಇವಾಗ ಮಾಧ್ಯಮಕ್ಕೆ ಸುಳ್ಳು ಹೇಳುತ್ತಿದ್ದಾರೆ. ಚಂದ್ರಪ್ರಭ ತಪ್ಪು ಮಾಡಿಲ್ಲ ಅನ್ನೋದಿದ್ರೆ ಅವರು ಗಾಯಾಳು ಜೊತೆ ಇರುತ್ತಿದ್ರು, ಆದರೆ ಯಾಕೆ ಓಡಿ ಹೋದ್ರು. ಮಾನವೀಯತೆಯಿಂದ ಆಸ್ಪತ್ರೆಗೆ ಸೇರಿಸಿ ಕುಟುಂಬದವರು ಬರುವವರೆಗೂ ಇರಬಹುದಿತ್ತು ಎಂದು TV9ಗೆ ಆಟೋ ಚಾಲಕ ರಂಗನಾಥ್ ತಿಳಿಸಿದರು.

ಚಿಕ್ಕಮಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ