ಬರೋಬ್ಬರಿ ಎಂಟು ಲಕ್ಷ ನೀಡಿ ಒಂಟಿ ಎತ್ತು ಖರೀದಿಸಿದ ಕಾಫಿ ನಾಡಿನ ರೈತ!

ಬರೋಬ್ಬರಿ ಎಂಟು ಲಕ್ಷ ನೀಡಿ ಒಂಟಿ ಎತ್ತು ಖರೀದಿಸಿದ ಕಾಫಿ ನಾಡಿನ ರೈತ!
8 ಲಕ್ಷ ಹಣ ನೀಡಿ ಗಗನ್ ಎಂಬ ಒಂಟಿ ಎತ್ತು ಖರೀದಿ

ಒಂದಲ್ಲ, ಎರಡಲ್ಲ ಬರೋಬ್ಬರಿ 8 ಲಕ್ಷ ಕೊಟ್ಟು ಗಗನ್ ಎಂಬ ಎತ್ತನ್ನು ತನ್ನದಾಗಿಸಿಕೊಂಡ ತೃಪ್ತಿ ಒಬ್ಬ ರೈತನದಾದ್ರೆ, 8 ಅಲ್ಲ 10 ಲಕ್ಷ ಡಿಮ್ಯಾಂಡ್ ಬರ್ತಿದೆ, ಆದ್ರೆ ಸೂರ್ಯನನ್ನ ನಾ ಕೊಡಲ್ಲ ಅನ್ನೋ ಎದೆಗಾರಿಕೆ ಮತ್ತೊಬ್ಬ ರೈತನದ್ದು.! ಹೌದು, ಚಿಕ್ಕಮಗಳೂರಿಗೂ ಜೋಡಿ ಎತ್ತಿನಗಾಡಿ ರೇಸ್ಗೂ ಒಂದು ರೀತಿಯ ಅವಿನಾಭವ ಸಂಬಂಧ.

TV9kannada Web Team

| Edited By: Ayesha Banu

Jan 25, 2022 | 2:26 PM

ಚಿಕ್ಕಮಗಳೂರು: ಓಡೋ ಕುದುರೆಗೆ ಬಾಜಿ ಕಟ್ಟೋದನ್ನ ಕೇಳಿದ್ದೀವಿ, ಆದ್ರೆ ಕುದುರೆಯನ್ನ ಜಿದ್ದಿಗೆ ಬಿದ್ದು ಕೊಂಡುಕೊಳ್ಳುವವರು ತೀರಾ ಕಡಿಮೆ. ಹಾಗೆಯೇ ಜೋಡೆತ್ತಿನ ರೇಸಲ್ಲೂ ಎತ್ತುಗಳ ತಾಕತ್ತನ್ನ ನೋಡಿ ಬಾಜಿ ಕಟ್ಟುವವರೂ ಇದ್ದಾರೆ. ಆದ್ರೆ ಕಾಫಿನಾಡಿನ ಒಬ್ಬ ರೈತ ಬರೋಬ್ಬರಿ 8 ಲಕ್ಷ ಹಣ ನೀಡಿ ಗಗನ್ ಎಂಬ ಒಂಟಿ ಎತ್ತನ್ನ ಖರೀದಿ ಮಾಡಿದ್ದಾನೆ. ಇನ್ನೊಂದ್ಕಡೆ ಅದೇ ಕಾಫಿನಾಡಿನ ಮತ್ತೊಬ್ಬ ರೈತನಿಗೆ 10 ಲಕ್ಷ ಡಿಮ್ಯಾಂಡ್ ಬಂದ್ರೂ ನಾ ಸೂರ್ಯನನ್ನ ಕೊಡಲು ಒಲ್ಲೆ ಅಂತಿದ್ದಾನೆ. ಏನಿದು.. ಸೂರ್ಯ-ಗಗನರ ಸ್ಟೋರಿ ಇಲ್ಲಿ ಓದಿ.

ಒಂದಲ್ಲ, ಎರಡಲ್ಲ ಬರೋಬ್ಬರಿ 8 ಲಕ್ಷ ಕೊಟ್ಟು ಗಗನ್ ಎಂಬ ಎತ್ತನ್ನು ತನ್ನದಾಗಿಸಿಕೊಂಡ ತೃಪ್ತಿ ಒಬ್ಬ ರೈತನದಾದ್ರೆ, 8 ಅಲ್ಲ 10 ಲಕ್ಷ ಡಿಮ್ಯಾಂಡ್ ಬರ್ತಿದೆ, ಆದ್ರೆ ಸೂರ್ಯನನ್ನ ನಾ ಕೊಡಲ್ಲ ಅನ್ನೋ ಎದೆಗಾರಿಕೆ ಮತ್ತೊಬ್ಬ ರೈತನದ್ದು.! ಹೌದು, ಚಿಕ್ಕಮಗಳೂರಿಗೂ ಜೋಡಿ ಎತ್ತಿನಗಾಡಿ ರೇಸ್ಗೂ ಒಂದು ರೀತಿಯ ಅವಿನಾಭವ ಸಂಬಂಧ. ಈ ಜಿಲ್ಲೆಯ ರೈತರು, ರೈತನ ಮಿತ್ರ ಅಂತಾನೇ ಕರೆಯಿಸಿಕೊಳ್ಳುವ ಎತ್ತುಗಳನ್ನ ತಮ್ಮ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸ್ತಾರೆ. ಆ ಎತ್ತುಗಳನ್ನ ತಮ್ಮ ಮಕ್ಕಳಂತೆ ಸಾಕಿ, ಸಲಹುತ್ತಾರೆ. ಜಿಲ್ಲೆ-ಹೊರಜಿಲ್ಲೆಗಳಲ್ಲಿ ಜೋಡಿ ಎತ್ತಿನಗಾಡಿ ರೇಸ್ ನಡೆಯುವಾಗ ಅಲ್ಲಿ ನಮ್ಮ ಎತ್ತುಗಳು ಇರಬೇಕು ಅಂತಾ ಇಚ್ಚಿಸುತ್ತಾರೆ.

ಆ ಎತ್ತುಗಳಿಗಾಗಿ ಎಷ್ಟು ಖರ್ಚು ಮಾಡೋದಿಕ್ಕೂ ಹಿಂದೆ ಮುಂದೆ ನೋಡೋದಿಲ್ಲ. ಇದಕ್ಕೆ ತಾಜಾ ಉದಾಹರಣೆ ಅಂದ್ರೆ ಚಿಕ್ಕಮಗಳೂರು ತಾಲೂಕಿನ ತೇಗೂರಿನ ರೈತ ಮಂಜು ಎಂಬುವವರು ಬರೋಬ್ಬರಿ 8 ಲಕ್ಷ ಹಣ ನೀಡಿ ಮೈಸೂರಿನಿಂದ ಗಗನ್ ಎಂಬ ಎತ್ತನ್ನ ಕೊಂಡು ಬಂದಿದ್ದಾರೆ. ಎತ್ತುಗಳ ಬಗ್ಗೆ ವಿಶೇಷ ಒಲವನ್ನ ಹೊಂದಿರುವ ಮಂಜು ಅವರು, ಕಳೆದ ವರ್ಷವೇ ಗಗನ್ ನನ್ನ ಕೊಳ್ಳಲು ಮುಂದಾಗಿದ್ರು. ಆದ್ರೆ ಅದ್ಯಾವ್ದೋ ಕಾರಣದಿಂದ ಗಗನ್, ಮಂಜುರವವ ಕೈ ತಪ್ಪಿ ಹೋಗಿದೆ. ಆದ್ರೆ ಈ ಬಾರಿ ಅದಕ್ಕೆ ಅವಕಾಶ ಕೊಡದ ರೈತ ಮಂಜು, ದಾಖಲೆಯ ಬರೋಬ್ಬರಿ 8 ಲಕ್ಷ ಹಣ ನೀಡಿ ಗಗನ್ ನನ್ನ ತಮ್ಮದಾಗಿಸಿಕೊಂಡಿದ್ದಾರೆ. ಊರಿಗೆ ಬಂದ ಗಗನ್ ನನ್ನ ಮಹಿಳೆಯರು ಆರತಿ ಮಾಡಿ ಆತ್ಮೀಯವಾಗಿ ಬರಮಾಡಿಕೊಂಡ್ರು.. ಊರಿನ ಜನ್ರು ತಮ್ಮೂರಿಗೆ ಬಲಾಢ್ಯನೊಬ್ಬ ಬಂದಿದ್ದಾನೆ ಅಂತಾ ಹಿರಿಹಿರಿ ಹಿಗ್ಗಿದ್ರು.

ಇದು ಗಗನ್ ಕಥೆಯಾದ್ರೆ, ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರ ತಾಲೂಕಿನ ಚನ್ನಾಪುರ ಗ್ರಾಮದ ನಾಗಭೂಷಣ್ ಎಂಬುವವರು ಸೂರ್ಯ ಎಂಬ ಎತ್ತು ಸಾಕಿದ್ದಾರೆ. ಜಸ್ಟ್ ನಾಲ್ಕು ವರ್ಷದ ಈತನಿಗೆ ಜೋಡೆತ್ತಿನ ಎತ್ತಿನ ಗಾಡಿ ಸ್ಪರ್ಧೆ ಅಂದ್ರೆ ಅದೇನೋ ಖುಷಿ, ಇನ್ನಿಲ್ಲದ ಸಂಭ್ರಮ. ಹಾಗಾಗಿಯೇ ಜಿಲ್ಲೆಯಲ್ಲಿ ಎಲ್ಲೇ ಸ್ಪರ್ಧೆ ನಡೆದ್ರೂ ಈತನ ಎಂಟ್ರಿ ಪಕ್ಕಾ ಇರುತ್ತೆ. ಕೇವಲ ಜಿಲ್ಲೆಯಲ್ಲಿ ಮಾತ್ರವಲ್ಲದೇ ಹೊರ ಜಿಲ್ಲೆಗೂ ಹೋಗುವ ಈತ ಪ್ರಶಸ್ತಿಗೆ ಮುತ್ತಿಡದೇ ಮನೆಗೆ ವಾಪಸ್ ಬರೋದೇ ಇಲ್ಲ. ಅಷ್ಟು ನಿಖರ, ಅಷ್ಟು ಪ್ರಖರವಾಗಿ ಹೆಜ್ಜೆ ಹಾಕುವ ಸೂರ್ಯನ ಛಲಕ್ಕೆ ಕೇವಲ ಆತನ ಮಾಲೀಕ ಮಾತ್ರವಲ್ಲದೇ ದೊಡ್ಡ ಅಭಿಮಾನಿ ಬಳಗವೇ ಸಂಭ್ರಮ ಪಡುತ್ತೆ. ಸೂರ್ಯನ ತಾಕತ್ತು, ಕರಾಮತ್ತು ನೋಡಿ 10 ಲಕ್ಷ ಕೊಡ್ತೀವಿ, 12 ಲಕ್ಷ ಕೊಡ್ತೀವಿ ಕೊಡಿ ಅನ್ನೋ ಡಿಮ್ಯಾಂಡ್ ಬರ್ತಾನೆ ಇವೆ. ಜಿಲ್ಲೆ-ಹೊರಜಿಲ್ಲೆಗಳಿಂದ ಬಂದು ಎಷ್ಟೇ ಆಫರ್ ಕೊಟ್ರೂ ಸೂರ್ಯನ ಪಾಲಕರು ಮಾತ್ರ ಬಿಲ್ ಕುಲ್ ಒಪ್ತಿಲ್ಲ.

ಸದ್ಯ ಕಾಫಿನಾಡಿನ ಜೋಡೆತ್ತು ಎತ್ತಿನಗಾಡಿ ಪ್ರಿಯರಲ್ಲೀಗ ಗಗನ್ ಸೂರ್ಯನದ್ದೇ ಮಾತುಕತೆ ಜೋರಾಗಿದೆ. ತೇಗೂರಿನ ರೈತ ಹಠಕ್ಕೆ ಬಿದ್ದು 8 ಲಕ್ಷ ಹಣ ನೀಡಿ ಗಗನ್ ನನ್ನ ಬರಮಾಡಿಕೊಂಡಿದ್ರೆ, ಇನ್ನೊಂದೆಡೆ ಅಜ್ಜಂಪುರದ ಚನ್ನಾಪುರದ ರೈತ ನಾಗಭೂಷಣ್ 10 ಲಕ್ಷ ಆಫರ್ ಬಂದ್ರೂ ನಾ ಸೂರ್ಯನನ್ನ ಕೊಡಲ್ಲ ಅಂತಾ ಸೈಲೆಂಟಾಗಿದ್ದಾರೆ. ಒಟ್ಟಿನಲ್ಲಿ ಕಾಫಿನಾಡಿನ ರಣಧೀರರಾಗಿರೋ ಈ ಸೂರ್ಯ-ಗಗನ್ ಒಟ್ಟಿಗೆ ಸೇರಿ ರೇಸ್ಗೆ ಧುಮುಕಿದ್ರೆ ಧೂಳೆಬ್ಬಿಸೋದಂತೂ ಗ್ಯಾರಂಟಿ.

ವರದಿ: ಪ್ರಶಾಂತ್, ಟಿವಿ9 ಚಿಕ್ಕಮಗಳೂರು

purchased single bull for rs 8 lacks 1

ಸೂರ್ಯ ಹೆಸರಿನ ಎತ್ತು

ಇದನ್ನೂ ಓದಿ: Karnataka Police: ಕರ್ನಾಟಕದ 19 ಪೊಲೀಸ್ ಅಧಿಕಾರಿಗಳಿಗೆ ರಾಷ್ಟ್ರಪತಿ ಪದಕ ಘೋಷಣೆ; ವಿವರ ಇಲ್ಲಿದೆ

Follow us on

Related Stories

Most Read Stories

Click on your DTH Provider to Add TV9 Kannada