ಚಿಕ್ಕಮಗಳೂರು: ದಸರಾ ಸಂಭ್ರಮದ ನಡುವೆ ETF​ ಸಿಬ್ಬಂದಿಗೆ ಸಂಬಳ ನೀಡದ ಸರ್ಕಾರ

ಕಾಡಾನೆಗಳು ನಾಡಿಗೆ ಬಾರದಂತೆ ತಡೆಯುತ್ತಿರುವ ಇಟಿಎಫ್​ ಸಿಬ್ಬಂದಿಗೆ ಸಂಬಳ‌, ಊಟದ ಹಣಕ್ಕೆ ರಾಜ್ಯ ಸರ್ಕಾರ ಅನುದಾನ ನೀಡಿಲ್ಲ. ಕಾಡಾನೆಗಳ ಉಪಟಳ ಹೆಚ್ಚುತ್ತಿದ್ದಂತೆ ಸರ್ಕಾರ ETF ಪಡೆ ರಚಿಸಿತ್ತು. ETF ಸಿಬ್ಬಂದಿಗೆ ಸಂಬಳ, ಊಟದ ಭತ್ಯೆ ನೀಡಲು ಇಲಾಖೆಯೇ ಪರದಾಡುವ ಪರಿಸ್ಥಿತಿ ಇದೆ.

ಚಿಕ್ಕಮಗಳೂರು: ದಸರಾ ಸಂಭ್ರಮದ ನಡುವೆ ETF​ ಸಿಬ್ಬಂದಿಗೆ ಸಂಬಳ ನೀಡದ ಸರ್ಕಾರ
ದಸರಾ ಸಂಭ್ರಮದ ನಡುವೆ ETF​ ಸಿಬ್ಬಂದಿಗೆ ಸಂಬಳ ನೀಡದ ಸರ್ಕಾರ
Follow us
ಅಶ್ವಿತ್ ಮಾವಿನಗುಣಿ, ಚಿಕ್ಕಮಗಳೂರು
| Updated By: ಆಯೇಷಾ ಬಾನು

Updated on:Oct 10, 2024 | 10:54 AM

ಚಿಕ್ಕಮಗಳೂರು, ಅ.10: ದಸರಾ (Dasara) ಸಂಭ್ರಮದ ನಡುವೆ ರಾಜ್ಯ ಸರ್ಕಾರ (Karnataka Government) ಚಿಕ್ಕಮಗಳೂರಿನಲ್ಲಿ ETF​ ಸಿಬ್ಬಂದಿಗೆ ಸಂಬಳ ನೀಡುವುದನ್ನೇ ಮರೆತು ಹೋಗಿದೆ. ಸಂಬಳ‌, ಊಟವೂ ಇಲ್ಲದೆ ETF​ ಸಿಬ್ಬಂದಿ ಕಾಡಾನೆಗಳನ್ನು ಕಾಯುತ್ತಿದ್ದಾರೆ. ಕಾಡಾನೆಗಳು ನಾಡಿಗೆ ಬಾರದಂತೆ ತಡೆಯುತ್ತಿರುವ ಇಟಿಎಫ್​ ಸಿಬ್ಬಂದಿಗೆ ಸಂಬಳ‌, ಊಟದ ಹಣಕ್ಕೆ ರಾಜ್ಯ ಸರ್ಕಾರ ಅನುದಾನ ನೀಡಿಲ್ಲ.

ಅರಣ್ಯ ಇಲಾಖೆ ಆಗಸ್ಟ್​​ವರೆಗೂ ಸಿಬ್ಬಂದಿಗೆ ಊಟದ ಭತ್ಯೆ, ಸಂಬಳ ನೀಡಿದೆ. ಆದರೆ ಕಾಂಗ್ರೆಸ್ ಸರ್ಕಾರ 2 ತಿಂಗಳಿನಿಂದ ಸಂಬಳ, ಊಟ, ಭತ್ಯೆ ನೀಡಿಲ್ಲ. ಸರ್ಕಾರದಿಂದ ಹಣ ಬಾರದ ಹಿನ್ನೆಲೆ ಅರಣ್ಯ ಇಲಾಖೆ ಸಿಬ್ಬಂದಿಗೆ ಸಂಬಳ ನೀಡಿಲ್ಲ. ಕಾಡಾನೆಗಳ ಉಪಟಳ ಹೆಚ್ಚುತ್ತಿದ್ದಂತೆ ಸರ್ಕಾರ ETF ಪಡೆ ರಚಿಸಿತ್ತು. ಮಾನವ, ಕಾಡಾನೆಗಳ ಸಂಘರ್ಷ ತಡೆಯಲು ಸರ್ಕಾರ ಪಡೆ ರಚಿಸಿತ್ತು. ಕಾಡಾನೆಗಳು ನಾಡಿಗೆ ಬಾರದಂತೆ ಕೆಲಸ ಮಾಡುವ ಸಿಬ್ಬಂದಿ ಈಗ ಪರದಾಡುತ್ತಿದ್ದಾರೆ.

ಹಗಲುರಾತ್ರಿ ಕಾಡಾನೆಗಳನ್ನ ಕಾಯುವ ಪಡೆಯನ್ನೇ ಸರ್ಕಾರ ನಿರ್ಲಕ್ಷ್ಯ ಮಾಡಿದೆ. ETF ಸಿಬ್ಬಂದಿಗೆ ಸಂಬಳ, ಊಟದ ಭತ್ಯೆ ನೀಡಲು ಇಲಾಖೆಯೇ ಪರದಾಡುವ ಪರಿಸ್ಥಿತಿ ಇದೆ. ರಾಜ್ಯಾದ್ಯಂತ 7 ಜಿಲ್ಲೆಗಳಲ್ಲಿ ಇಟಿಎಫ್​ ಪಡೆ ರಚನೆ ಆಗಿದೆ. ರಾಜ್ಯ ಸರ್ಕಾರ ಸಿಬ್ಬಂದಿಗೆ 3-4 ತಿಂಗಳಿಗೊಮ್ಮೆ ಸಂಬಳ ನೀಡುತ್ತಿದೆ.

ಇದನ್ನೂ ಓದಿ: ಚಾರ್ಮಾಡಿ ಘಾಟ್​ನಲ್ಲಿ ಮಳೆ, ರಸ್ತೆಗುಂಟ ನದಿಯೋಪಾದಿಯಲ್ಲಿ ಹರಿದ ನೀರು

ದಸರಾ ಕಾರ್ಯಕ್ರಮದಲ್ಲಿ ಧಿಕ್ಕಾರದ ಘೋಷಣೆ

ದಸರಾ ಪ್ರಯುಕ್ತ ಶಿವಮೊಗ್ಗದ ಫ್ರೀಡಂ ಪಾರ್ಕ್ ನಲ್ಲಿ ನಡೆದ ಮ್ಯೂಸಿಕಲ್ ನೈಟ್ಸ್ ಕಾರ್ಯಕ್ರಮಕ್ಕೆ ಮಳೆ ಕಾಟ ಕೊಟ್ಟಿದೆ. ಮಳೆಯ ನಡುವೆಯೂ ಜನ ಕುರ್ಚೆಯನ್ನ ಕೊಡೆಯನ್ನಾಗಿ ಮಾಡಿಕೊಂಡು ಕಾರ್ಯಕ್ರಮ ವೀಕ್ಷಿಸಿದ್ರು. ಆದ್ರೆ ಅಧಿಕಾರಿಗಳಿಗೆ ಮತ್ತು ವಿಐಪಿಗಳಿಗೆ ಪೆಂಡಾಲ್ ಮಾಡಿದ್ದಕ್ಕೆ ಜನ ಕೆರಳಿದ್ರು. ಜನರಿಗೆ ಪೆಂಡಾಲ್ ವ್ಯವಸ್ಥೆ ಮಾಡಿಲ್ಲ ಅಂತಾ ಪಾಲಿಕೆ ಅಧಿಕಾರಿಗಳು ಮತ್ತು ಪೋಲಿಸರ ವಿರುದ್ಧ ದಿಕ್ಕಾರ ಕೂಗಿದ್ರು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 10:42 am, Thu, 10 October 24