ಚಿಕ್ಕಮಗಳೂರು : ಕಾಪರ್ ವೈರ್ಗಳನ್ನು ಅಕ್ರಮವಾಗಿ ಮನೆಯಲ್ಲಿ ಸಂಗ್ರಹಿಸಿ ಇಟ್ಟುಕೊಂಡಿದ್ದ ಸಹಾಯಕ ಇಂಜಿನಿಯರ್ ಹಾಗೂ ಮೇಲ್ವಿಚಾರಕನನ್ನ ಅಮಾನತು ಮಾಡಿ ಆದೇಶ ಮಾಡಲಾಗಿದೆ. ಆಲ್ದೂರು ಶಾಖೆಯ ಸಹಾಯಕ ಇಂಜಿನಿಯರ್ ಶಾಂತಪ್ಪ ಹಾಗೂ ಮೇಲ್ವಿಚಾರಕ ಗಂಗಾಧರ್ ರನ್ನ ಅಮಾನತು ಮಾಡಿ ಚಿಕ್ಕಮಗಳೂರು ವೃತ್ತದ ಮೆಸ್ಕಾಂ ಶಿಸ್ತುಪಾಲನಾ ಪ್ರಾಧಿಕಾರದ ಅಧೀಕ್ಷಕ ಎಂಜಿನಿಯರ್ ಆದೇಶ ಹೊರಡಿಸಿದ್ದಾರೆ.
ಚಿಕ್ಕಮಗಳೂರು ನಗರದಲ್ಲಿ ವಾಸವಾಗಿರುವ ಗಂಗಾಧರ್ ಮನೆಗೆ ಜನವರಿ 11ರಂದು ಮೆಸ್ಕಾಂ ಜಾಗೃತ ದಳ ದಾಳಿ ಮಾಡಿತ್ತು. ಈ ವೇಳೆ 57 ಕೆಜಿಯಷ್ಟು ಕಾಪರ್ ಕಂಡಕ್ಟರ್ಗಳು ಪತ್ತೆಯಾಗಿದ್ದವು. ಮನೆಯ ಹಿಂಬದಿಯಲ್ಲಿ ಕೂಡ ವಿವಿಧ ರೀತಿಯ ವೈರ್ಗಳನ್ನ ಸಂಗ್ರಹಿಸಿರೋದು ದಾಳಿ ವೇಳೆ ಕಂಡುಬಂದಿತ್ತು. ಗಂಗಾಧರ್ ಮನೆಯಲ್ಲಿ ಅಕ್ರಮವಾಗಿ ಕಾಪರ್ ವೈರ್ಗಳನ್ನ ಸಂಗ್ರಹಿಸಿಡಲು ಸಹಾಯಕ ಇಂಜಿನಿಯರ್ ಶಾಂತಪ್ಪ ಸಹಕಾರ ನೀಡಿರೋದು ತನಿಖೆಯಲ್ಲಿ ಸಾಬೀತಾಗಿದೆ. ಹೀಗಾಗಿ ನಿಯಮಗಳ ಅರಿವಿದ್ದರೂ ವಿವಿಧ ಗಾತ್ರದ ಕಾಪರ್ ವೈರ್ಗಳನ್ನ ಮನೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿ, ಸಿಕ್ಕಿಬಿದ್ದಿದ್ದರಿಂದ ಸಹಾಯಕ ಇಂಜಿನಿಯರ್ ಶಾಂತಪ್ಪ, ಮೇಲ್ವಿಚಾರಕ ಗಂಗಾಧರ್ ಅಮಾನತ್ತಾಗಿದ್ದಾರೆ.
Also Read: ಈತ ಅಮೆರಿಕದ ಕ್ರಿಕೆಟರ್: ಬೌಲಿಂಗ್ಗೂ ಸೈ- ಬ್ಯಾಟಿಂಗ್ಗೂ ಜೈ ಅನ್ನೋ ಜಾಯಮಾನ! ಈತನ ಜೊತೆಗಿದೆ ಕಾಫಿನಾಡಿನ ನಂಟು!
Also Read: Belagavi: ರಾಜಕೀಯವಾಗಿ ಸೂಕ್ಷ್ಮವಾಗಿರುವ ಬೆಳಗಾವಿ ಪಾಲಿಕೆಗೆ ಇನ್ನೂ ಇಲ್ಲ ಮೇಯರ್ ಭಾಗ್ಯ! ಕಮಲ ಶಾಸಕರ ಕರಾಮತ್ತು?