ಸ್ವಾತಂತ್ರ್ಯ ಅಮೃತಮಹೋತ್ಸವ ಸಂದರ್ಭ ಮನೆ ಮುಂದೆ ಹಾಕಿದ್ದ ರಾಷ್ಟ್ರಧ್ವಜವನ್ನು ಸಿಗರೇಟ್‍ನಿಂದ ಸುಟ್ಟಿದ್ದ ದೇಶದ್ರೋಹಿ ಅರೆಸ್ಟ್
ಅಮೃತಮಹೋತ್ಸವ ಅಂಗವಾಗಿ ಮನೆ ಮುಂದೆ ಕಟ್ಟಿದ್ದ ರಾಷ್ಟ್ರಧ್ವಜಕ್ಕೆ ಸಿಗರೇಟ್ ಸೇದುವಾಗ ಸುಟ್ಟಿದ್ದ. ಸದ್ಯ ರಾಷ್ಟ್ರಧ್ವಜಕ್ಕೆ ಅಪಮಾನದ ಕಾಯ್ದೆಯಡಿ ಮೊಕದ್ದಮೆ ದಾಖಲಿಸಿ ಆರೋಪಿಯನ್ನು ಬಂಧಿಸಲಾಗಿದೆ.
ಚಿಕ್ಕಮಗಳೂರು: ರಾಷ್ಟ್ರಧ್ವಜವನ್ನು(National Flag) ಸಿಗರೇಟ್‍ನಿಂದ ಸುಟ್ಟಿದ್ದ ದೇಶದ್ರೋಹಿಯನ್ನು ಚಿಕ್ಕಮಗಳೂರು ನಗರ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಅಸ್ಗರ್(50) ಬಂಧಿತ ಆರೋಪಿ. ಚಿಕ್ಕಮಗಳೂರು ನಗರದ ಬಾರ್ ಲೈನ್ ರಸ್ತೆಯ ನಿವಾಸಿ ಅಸ್ಗರ್(50), ಅಮೃತಮಹೋತ್ಸವ ಅಂಗವಾಗಿ ಮನೆ ಮುಂದೆ ಕಟ್ಟಿದ್ದ ರಾಷ್ಟ್ರಧ್ವಜಕ್ಕೆ ಸಿಗರೇಟ್ ಸೇದುವಾಗ ಸುಟ್ಟಿದ್ದ. ಸದ್ಯ ರಾಷ್ಟ್ರಧ್ವಜಕ್ಕೆ ಅಪಮಾನದ ಕಾಯ್ದೆಯಡಿ ಮೊಕದ್ದಮೆ ದಾಖಲಿಸಿ ಆರೋಪಿಯನ್ನು ಬಂಧಿಸಲಾಗಿದೆ.
ಆಗಸ್ಟ್ 15ರಂದು ಸ್ವಾತಂತ್ರ್ಯ ಸಿಕ್ಕಿ 75 ವರ್ಷ ಆದ ಹಿನ್ನೆಲೆ ಅಮೃತ ಮಹೋತ್ಸವದ ಆಚರಣೆಗಾಗಿ ಹರ್ ಘರ್ ತಿರಂಗಾ ಅಭಿಯಾನ ಹಿನ್ನೆಲೆ ಪ್ರತಿಯೊಂದು ಮನೆ ಮೇಲೂ ಬಾವುಟವನ್ನ ಹಾರಿಸಲಾಗಿತ್ತು. ಆದರೆ, ನಗರದ ಬಾರ್‍ಲೈನ್ ರಸ್ತೆಯಲ್ಲಿ ಕಿಡಿಗೇಡಿಯೋರ್ವ ಭಾರತದ ಬಾವುಟವನ್ನ ಸಿಗರೇಟ್‍ನಿಂದ ಸುಟ್ಟಿದ್ದ. ಸಿಗರೇಟ್ ಸೇದುವ ವೇಳೆ ಅಲ್ಲೆ ಪಕ್ಕದಲ್ಲೇ ಇದ್ದ ಬಾವುಟವನ್ನ ತಾನು ಸೇದುತ್ತಿದ್ದ ಸಿಗರೇಟ್‍ನಿಂದ ಸುಟ್ಟಿದ್ದಾನೆ. ಬಾರ್ ಲೈನ್ ರಸ್ತೆ ನಿವಾಸಿಯಾಗಿರೋ ಅಸ್ಗರ್ ನನ್ನ ಚಿಕ್ಕಮಗಳೂರು ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ್ದಕ್ಕಾಗಿ ರಾಷ್ಟ್ರಧ್ವಜಕ್ಕೆ ಅಪಮಾನ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ರಾಷ್ಟ್ರಧ್ವಜವನ್ನ ಸುಡುವ ವಿಡಿಯೋ ವೈರಲ್ ಆಗುತ್ತಿದ್ದಂತೆ ಸ್ಥಳೀಯರು ಆತನ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಸ್ವಾತಂತ್ರ್ಯಯ ದಿನ ಮಹಿಳೆಯರನ್ನೇ ಗುರಿಯಾಗಿಸಿಕೊಂಡು ಒಂದೇ ದಿನದಲ್ಲಿ 6 ದರೋಡೆ ಮಾಡಿದ 16 ವರ್ಷದ ಬಾಲಕ! ಎಲ್ಲಿ?
ಆರೋಪಿಯು ಹದಿಹರೆಯದವನಾಗಿದ್ದು ಮಾದಕ ವ್ಯಸನಿಯಾಗಿದ್ದಾನೆ. 13 ದರೋಡೆ, ಕಳ್ಳತನ ಮತ್ತು ಸರಗಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. ಮುಖ್ಯವಾಗಿ ಮಹಿಳೆಯರನ್ನು ಗುರಿಯಾಗಿಸಿಕೊಂಡು ಕುಕೃತ್ಯಗಳನ್ನು ಎಸಗಿದ್ದಾನೆ ಎಂದು ದಕ್ಷಿಣ ದೆಹಲಿ ಪೊಲೀಸರು ತಿಳಿಸಿದ್ದಾರೆ.
24 ಗಂಟೆಗಿಂತ ಕಡಿಮೆ ಅವಧಿಯಲ್ಲಿ, 16 ವರ್ಷದ ಬಾಲಕನೊಬ್ಬ ಸ್ವಾತಂತ್ರ್ಯ ದಿನದಂದು ದಕ್ಷಿಣ ದೆಹಲಿಯ ವಸತಿ ಪ್ರದೇಶಗಳಲ್ಲಿ ಆರು ದರೋಡೆಗಳನ್ನು ನಡೆಸಿದ್ದಾನೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ. ವಿಶೇಷ ಪೊಲೀಸ್ ಸಿಬ್ಬಂದಿ ಕೊನೆಗೂ ಆರೋಪಿಯನ್ನು ಬಂಧಿಸಿದ್ದಾರೆ.
ಹದಿಹರೆಯದ ಯುವಕ ಮಾದಕ ವ್ಯಸನಿಯಾಗಿದ್ದು, 13 ದರೋಡೆ, ಕಳ್ಳತನ ಮತ್ತು ಸರಗಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಮುಖ್ಯವಾಗಿ ಸಂಜೆ ಅಥವಾ ತಡರಾತ್ರಿಯಲ್ಲಿ ಏಕಾಂಗಿಯಾಗಿ ರಸ್ತೆಯಲ್ಲಿ ಓಡಾಡುವ ಮಹಿಳೆಯರನ್ನು ಗುರಿಯಾಗಿಸಿಕೊಂಡು ಅವರ ಮೊಬೈಲ್ ಅಥವಾ ಚಿನ್ನಾಭರಣಗಳನ್ನು ಕಸಿಯುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
Published On - 11:06 pm, Thu, 18 August 22