ಜನರಿಗೊಂದು ರೂಲ್ಸು, ಸಚಿವರಿಗೊಂದು ರೂಲ್ಸು ? ತಾವೇ ಮಾಡಿದ ಸಂಡೇ ಲಾಕ್​ಡೌನ್​ಗೆ ಡೋಂಟ್​ಕೇರ್..

ಚಿಕ್ಕಮಗಳೂರು: ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇಂದು ಸಂಡೇ ಲಾಕ್‌ಡೌನ್ ಮಾಡಲಾಗಿದೆ. ಆದರೆ ಖುದ್ದು ಸಚಿವರೇ ಆದೇಶವನ್ನು ಉಲ್ಲಂಘನೆ ಮಾಡಿದ್ದಾರೆ. ಸಚಿವ ಸಿ.ಟಿ.ರವಿ ಸಂಡೇ ಲಾಕ್‌ಡೌನ್ ಉಲ್ಲಂಘಿಸಿ ಪ್ರವಾಸಿ ತಾಣಗಳಿಗೆ ಭೇಟಿ ನೀಡಿದ್ದಾರೆ. ಚಿಕ್ಕಮಗಳೂರಿನ ದೇವರಮನೆ, ಹೇಮಾವತಿ ನದಿ ಮೂಲ ಬಲ್ಲಾಳರಾಯನ ದುರ್ಗಕ್ಕೆ ಭೇಟಿ ನೀಡಿದ್ದಾರೆ. ಸಚಿವರ ಭೇಟಿ ವೇಳೆ ನೂರಾರು ಜನ ಕೊರೊನಾ ಮರೆತು ಜಮಾವಣೆಗೊಂಡಿದ್ದರು. ಪ್ರವಾಸೋದ್ಯಮ ಸಚಿವ ಸಿ.ಟಿ.ರವಿಗೆ ಶಾಸಕ ಕುಮಾರಸ್ವಾಮಿ, ಜನಪ್ರತಿನಿಧಿಗಳು, ಸಚಿವರ ನೂರಾರು ಬೆಂಬಲಿಗರು ಸಾಥ್ ನೀಡಿದ್ರು. ಭೇಟಿ ವೇಳೆ ದೈಹಿಕ […]

ಜನರಿಗೊಂದು ರೂಲ್ಸು, ಸಚಿವರಿಗೊಂದು ರೂಲ್ಸು ? ತಾವೇ ಮಾಡಿದ ಸಂಡೇ ಲಾಕ್​ಡೌನ್​ಗೆ ಡೋಂಟ್​ಕೇರ್..
ಆಯೇಷಾ ಬಾನು

Updated on: Jul 05, 2020 | 1:30 PM

ಚಿಕ್ಕಮಗಳೂರು: ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇಂದು ಸಂಡೇ ಲಾಕ್‌ಡೌನ್ ಮಾಡಲಾಗಿದೆ. ಆದರೆ ಖುದ್ದು ಸಚಿವರೇ ಆದೇಶವನ್ನು ಉಲ್ಲಂಘನೆ ಮಾಡಿದ್ದಾರೆ. ಸಚಿವ ಸಿ.ಟಿ.ರವಿ ಸಂಡೇ ಲಾಕ್‌ಡೌನ್ ಉಲ್ಲಂಘಿಸಿ ಪ್ರವಾಸಿ ತಾಣಗಳಿಗೆ ಭೇಟಿ ನೀಡಿದ್ದಾರೆ.

ಚಿಕ್ಕಮಗಳೂರಿನ ದೇವರಮನೆ, ಹೇಮಾವತಿ ನದಿ ಮೂಲ ಬಲ್ಲಾಳರಾಯನ ದುರ್ಗಕ್ಕೆ ಭೇಟಿ ನೀಡಿದ್ದಾರೆ. ಸಚಿವರ ಭೇಟಿ ವೇಳೆ ನೂರಾರು ಜನ ಕೊರೊನಾ ಮರೆತು ಜಮಾವಣೆಗೊಂಡಿದ್ದರು. ಪ್ರವಾಸೋದ್ಯಮ ಸಚಿವ ಸಿ.ಟಿ.ರವಿಗೆ ಶಾಸಕ ಕುಮಾರಸ್ವಾಮಿ, ಜನಪ್ರತಿನಿಧಿಗಳು, ಸಚಿವರ ನೂರಾರು ಬೆಂಬಲಿಗರು ಸಾಥ್ ನೀಡಿದ್ರು. ಭೇಟಿ ವೇಳೆ ದೈಹಿಕ ಅಂತರ ಕಾಯ್ದುಕೊಳ್ಳದೆ ಸಚಿವ ಸಿ.ಟಿ.ರವಿ ನಿರ್ಲಕ್ಷ್ಯವಹಿಸಿದ್ದಾರೆ.

ಆಯೇಷಾ ಬಾನು

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

Loading...
Unable to load recommendations.
Follow Us