ಚಿಕ್ಕಮಗಳೂರು: ಎಲ್ಲಾ ಶಾಲೆಗಳಲ್ಲಿ ಮಕ್ಕಳಿಗೆ ಆಟಗಳನ್ನ ಆಡಿಸ್ತಾರೆ. ಮಕ್ಕಳ ಟ್ಯಾಲೆಂಟ್ ನೋಡಿ ಪೇರೆಂಟ್ಸ್ ಖುಷಿ ಪಡ್ತಾರೆ. ಬಟ್ ಇಲ್ಲಿ ಹಂಗಲ್ಲ. ಹೆತ್ತವ್ರು ಆಟ ಆಡ್ತಾರೆ. ಮಕ್ಕಳು ನಿಂತು ನೋಡ್ತಾರೆ.
ಗೋಣಿಚೀಲದಲ್ಲಿ ಕಾಲಿಟ್ಕೊಂಡು ಜಂಪಿಂಗ್. ಕಾಲಿಗೆ ಕಾಲು ಕಟ್ಕೊಂಡು ರನ್ನಿಂಗ್. ಮ್ಯೂಸಿಕಲ್ ಚೇರ್ನಲ್ಲಿ ಹೆಣ್ಣೈಕ್ಳ ಚಮಕ್. ಬಿಂದಾಸ್ ಆಗಿ ಕುಣ್ಯೋದೇನು. ಭರ್ಜರಿ ಬ್ಯಾಟಿಂಗ್ ಮಾಡೋದೇನು.
ಅದ್ರಲ್ಲೂ ಪೇರೆಂಟ್ಸ್ಗೆಂದೇ ನಡೆದ ಈ ಪ್ರೋಗ್ರಾಂನಲ್ಲಿ ಸಖತ್ ಎಂಟರ್ಟೈನ್ಮೆಂಟ್ ಇತ್ತು. ಗೋಣಿ ಚೀಲದೊಳಗೆ ಕಾಲು ಇಟ್ಕೊಂಡು ಜಂಪ್ ಮಾಡ್ಕೊಂಡು ಹೋಗ್ತಿದ್ರೆ ಮಕ್ಕಳು ಹುರಿದುಂಬಿಸಿದ್ರು. ಇನ್ನೂ ಕೆಲವರು ನೆಗೆಯೋ ಬಿರುಸಲ್ಲಿ ಕೆಳಗೆ ಬೀಳ್ತಿದ್ರು. ಆದ್ರೂ ಸ್ಪರ್ಧೆ ಜೋಶ್ ಮಾತ್ರ ಕಮ್ಮಿಯಾಗಲಿಲ್ಲ.
ಇನ್ನೊಂದು ವಿಶೇಷ ಅಂದ್ರೆ ಆಟ, ಓಟ ಎಲ್ಲಾ ಮುಗಿದ್ಮೇಲೆ ವಿದ್ಯಾರ್ಥಿಗಳು ಮನೆಗಳಲ್ಲೇ ರೆಡಿ ಮಾಡಿ ತಂದ ತಿಂಡಿಗಳನ್ನ ಮಾರಾಟ ಮಾಡ್ತಾರೆ. ಆಟ ಆಡಿ ಮೊದ್ಲೇ ಹಸಿವಲ್ಲಿರೋ ಎಲ್ರೂ ಹೊಸ ಹೊಸ ಟೇಸ್ಟ್ ನೋಡ್ತಾರೆ.
Published On - 1:57 pm, Tue, 28 January 20