AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

HSR Layout: ಪೊಲೀಸ್​ ಠಾಣೆಯಲ್ಲಿ ಪ್ರಾರಂಭವಾಗಿದ್ದ ಮಕ್ಕಳ ಆಟದ ಮನೆ ಕ್ಲೋಸ್​; IPS ಇಶಾ ಪಂತ್​ ರೂಪಿಸಿದ್ದ ಯೋಜನೆಯ ಉದ್ದೇಶ ಏನಾಗಿತ್ತು?

HSR Layout ಠಾಣೆ ಬಿಟ್ಟರೆ, ಕೋರಮಂಗಲ ಮತ್ತು ಮಡಿವಾಳ ಠಾಣೆಗಳಲ್ಲೂ ಮಕ್ಕಳ ಆಟದ ಮನೆ ಇದೆ. ಆಗ್ನೇಯ ವಿಭಾಗದ ಒಟ್ಟು 13 ಪೊಲೀಸ್​ ಠಾಣೆಗಳಲ್ಲಿ ಪ್ಲೇ ಹೋಂ ಪ್ರಾರಂಭ ಮಾಡುವ ಯೋಜನೆ ಇದ್ದರೂ, ಜಾಗದ ಕೊರತೆಯಿಂದ ಎಲ್ಲ ಕಡೆಯಲ್ಲೂ ಆಗಿರಲಿಲ್ಲ.

HSR Layout: ಪೊಲೀಸ್​ ಠಾಣೆಯಲ್ಲಿ ಪ್ರಾರಂಭವಾಗಿದ್ದ ಮಕ್ಕಳ ಆಟದ ಮನೆ ಕ್ಲೋಸ್​; IPS ಇಶಾ ಪಂತ್​ ರೂಪಿಸಿದ್ದ ಯೋಜನೆಯ ಉದ್ದೇಶ ಏನಾಗಿತ್ತು?
ಎಚ್.ಎಸ್​.ಆರ್​. ಲೇಔಟ್ ಠಾಣೆ ಮತ್ತು ಇಶಾ ಪಂತ್​
Lakshmi Hegde
|

Updated on:Feb 09, 2021 | 5:50 PM

Share

2019 ರ ಸೆಪ್ಟೆಂಬರ್​ನಲ್ಲಿ ಐಪಿಎಸ್​ ಅಧಿಕಾರಿ ಇಶಾ ಪಂತ್​ ರಾಜಧಾನಿ ಬೆಂಗಳೂರಿನಲ್ಲಿ ವಿನೂತನವಾದ ಮಕ್ಕಳ ಸ್ನೇಹಿ ಯೋಜನೆಯೊಂದನ್ನು ಜಾರಿಗೊಳಿಸಿದ್ದರು. ಸಾಮಾನ್ಯವಾಗಿ ಮಕ್ಕಳಿಗೆ ಪೊಲೀಸರೆಂದರೆ ಒಂದು ಭಯ ಇರುತ್ತದೆ. ಭಯ ಇರುತ್ತದೆ ಎಂಬುದಕ್ಕಿಂತ ಪಾಲಕರೇ ಪೊಲೀಸರ ಹೆಸರು ಹೇಳಿ ಹೆದರಿಸುತ್ತಾರೆ. ಮಕ್ಕಳು ತುಂಬ ಹಠ ಮಾಡಿದಾಗಲೋ, ಹೇಳಿದ ಮಾತನ್ನು ಕೇಳದೆ ಇದ್ದಾಗಲೋ ‘ನೋಡು ಪೊಲೀಸರನ್ನು ಕರೆಯುತ್ತೇವೆ.. ಅವರು ಹಿಡಿದುಕೊಂಡು ಹೋಗಿ ಜೈಲಿಗೆ ಹಾಕುತ್ತಾರೆ..’ ಎಂದು ಹೇಳುವುದು ತೀರ ಸಾಮಾನ್ಯ. ಹಾಗಾಗಿ ಬಹುತೇಕ ಮಕ್ಕಳಿಗೆ ಪೊಲೀಸರ ಬಗ್ಗೆ ಒಂದು ಆತಂಕ ಇದ್ದೇ ಇರುತ್ತದೆ. ಇಂಥ ಆತಂಕವನ್ನು ದೂರ ಮಾಡಲು, ಮಕ್ಕಳಿಗೆ ಪೊಲೀಸರ ಬಗ್ಗೆ ಇರುವ ಭಯ, ಅಭದ್ರತೆ ಭಾವವನ್ನು ಹೋಗಲಾಡಿಸುವ ಸಲುವಾಗಿ ಇಶಾ ಪಂತ್​ (IPS Officer Isha Pant)​ ಮಕ್ಕಳ ಸ್ನೇಹಿ ಪೊಲೀಸ್ ಠಾಣೆ ಪರಿಕಲ್ಪನೆಗೆ ನಾಂದಿ ಹಾಡಿದ್ದರು.

ಏನಾಗಿತ್ತು ಈ ಹೊಸ ಯೋಜನೆ? ಬೆಂಗಳೂರಿನ 13 ಪೊಲೀಸ್​ ಠಾಣೆಗಳಲ್ಲಿ ಮಕ್ಕಳ ಆಟದ ಮನೆ (Children play home) ರೂಪಿಸುವ ಯೋಜನೆ ಇದಾಗಿತ್ತು. ಹಾಗೇ, ಎಚ್​ಎಸ್​ಆರ್​ ಠಾಣೆಯಲ್ಲಿ ಮೊದಲ ಮಕ್ಕಳ ಆಟದ ಮನೆಯನ್ನೂ ಉದ್ಘಾಟಿಸಿದ್ದರು. ದಿನದಲ್ಲಿ ಹಲವರು, ಅದರಲ್ಲೂ ಕೌಟುಂಬಿಕ ಕಲಹದ ಬಗ್ಗೆ ದೂರು ಕೊಡಲು ಮಹಿಳೆಯರು ತಮ್ಮ ಮಕ್ಕಳೊಂದಿಗೇ ಬರುತ್ತಾರೆ. ಅಷ್ಟೇ ಅಲ್ಲ, ದಂಪತಿ ಕೂಡ ಕೆಲವು ವ್ಯಾಜ್ಯ ಪರಿಹರಿಸಿಕೊಳ್ಳಲು ಮಕ್ಕಳ ಸಮೇತ ಬರುತ್ತಾರೆ. ಅಂಥವರನ್ನು ವಿಚಾರಣೆ ಮಾಡುವ ಸಂದರ್ಭದಲ್ಲಿ ಕೆಲವೊಮ್ಮೆ ಕಟು ಧ್ವನಿಯಲ್ಲಿ, ದೊಡ್ಡದಾಗಿ ಮಾತನಾಡುವುದು ಅನಿವಾರ್ಯ.

ಆದರೆ ನಾವು ಹೀಗೆ ಮಾಡಿದಾಗ ಜತೆಗಿರುವ ಮಕ್ಕಳು ಹೆದರುತ್ತಾರೆ. ಇನ್ನೂ ಭಯ ಬೀಳುತ್ತಾರೆ. ಅದನ್ನು ತಪ್ಪಿಸಲು ಠಾಣೆ ಕಟ್ಟಡದಲ್ಲೇ ಒಂದು ಬದಿಯಲ್ಲಿ ಮಕ್ಕಳ ಪ್ಲೇ ಹೋಂ ರೂಪಿಸುವ ಯೋಜನೆ ಜಾರಿಗೆ ತರಲಾಗಿದೆ ಎಂದು ಅಂದು ಇಶಾ ಪಂತ್​ ತಿಳಿಸಿದ್ದರು. ಹಾಗೇ, ಮಕ್ಕಳ ಆಟದ ಮನೆಯಲ್ಲಿ ಆಟದ ಗೊಂಬೆಗಳು, ಪ್ರಾಣಿ, ಪಕ್ಷಿ, ಗಿಡಮರಗಳ ಚಿತ್ರಗಳೂ ಇರುತ್ತವೆ. ಖಾಸಗಿ ಪ್ಲೇ ಹೋಂಗಳಲ್ಲಿ ಏನೇನು ಇರುತ್ತವೋ, ಅವನ್ನೆಲ್ಲ ಇಡಲಾಗುವುದೂ ಎಂದೂ ತಿಳಿಸಿದ್ದರು.

ಮೊದಲು ಪ್ರಾರಂಭವಾದ ಪ್ಲೇ ಹೋಂ, ಮೊದಲು ಮುಚ್ಚಿತು ಇನ್ನು ಮೊದಲ ಬಾರಿಗೆ ಮಕ್ಕಳ ಆಟದ ಮನೆ ಶುರುವಾಗಿದ್ದು HSR Layout   ಪೊಲೀಸ್​ ಠಾಣೆಯಲ್ಲಿ. ಆದರೆ ಮೊದಲು ಬಂದ್ ಆಗಿದ್ದೂ ಅದೇ ಮಕ್ಕಳ ಆಟದ ಮನೆ. ಸದ್ಯ HSR Layout ಚೈಲ್ಡ್​ ಪ್ಲೇ ಹೋಂ ಕಾರ್ಯನಿರ್ವಹಿಸುತ್ತಿಲ್ಲ. ಇಲ್ಲಿಗೆ ಪಾಲಕರೊಂದಿಗೆ ಬರುವ ಮಕ್ಕಳಿಗೆ ಜ್ವರ ಇರುತ್ತಿತ್ತು. ಆ ಮಕ್ಕಳನ್ನು ಆಟದ ಮನೆಯಲ್ಲಿ ಬಿಟ್ಟು, ಆರೋಗ್ಯವಂತ ಮಕ್ಕಳನ್ನೂ ಅಲ್ಲಿ ಆಟಕ್ಕೆ ಬಿಡಲು ಕೊವಿಡ್​-19 ಭಯ ಇದ್ದೇಇದೆ. ಹಾಗಾಗಿ ಮಕ್ಕಳ ಆಟದ ಮನೆಯನ್ನು ಮುಚ್ಚಲಾಗಿದ್ದು, ಆ ಪ್ರದೇಶವನ್ನು ಇತರ ಪೊಲೀಸ್ ಕೆಲಸಕ್ಕೆ ಬಳಸಿಕೊಳ್ಳಲಾಗುತ್ತಿದೆ ಎಂದು HSR Layout ಪೊಲೀಸರು ತಿಳಿಸಿದ್ದಾರೆ.

ಹಾಗೇ, ಪೊಲೀಸ್​ ಠಾಣೆಯಲ್ಲೂ ಜಾಗದ ಕೊರತೆ ಇದೆ. ಇನ್ನು ಕೊವಿಡ್​-19 ಕಾರಣದಿಂದ ಮಕ್ಕಳು ಬರುವುದೂ ಕಡಿಮೆ ಆಯಿತು. ಎಲ್ಲ ಅಂಶಗಳನ್ನೂ ಗಮನದಲ್ಲಿ ಇಟ್ಟುಕೊಂಡು ಪ್ಲೇ ಹೋಂನ್ನು ಬಂದ್​ ಮಾಡಲಾಗಿದೆ ಎಂದು ಸ್ಥಳೀಯ ಮಾಧ್ಯಮವೊಂದಕ್ಕೆ ಇಶಾ ಪಂತ್​ ಅವರೇ ತಿಳಿಸಿದ್ದಾರೆ.

ಇನ್ನು ಎಚ್​​ಎಸ್​ಆರ್​ ಲೇಔಟ್​ ಠಾಣೆ ಬಿಟ್ಟರೆ, ಕೋರಮಂಗಲ ಮತ್ತು ಮಡಿವಾಳ ಠಾಣೆಗಳಲ್ಲೂ ಮಕ್ಕಳ ಆಟದ ಮನೆ ಇದೆ. ಆಗ್ನೇಯ ವಿಭಾಗದ ಒಟ್ಟು 13 ಪೊಲೀಸ್​ ಠಾಣೆಗಳಲ್ಲಿ ಪ್ಲೇ ಹೋಂ ಪ್ರಾರಂಭ ಮಾಡುವ ಯೋಜನೆ ಇದ್ದರೂ, ಜಾಗದ ಕೊರತೆಯಿಂದ ಎಲ್ಲ ಕಡೆಯಲ್ಲೂ ಆಗಿರಲಿಲ್ಲ. ಆದರೆ ಮೊದಲು ಶುರುವಾದ ಮಕ್ಕಳ ಮನೆಯೇ ಮುಚ್ಚಿಹೋಗಿದೆ. ಇನ್ನು ಠಾಣೆಗಳಲ್ಲಿ ಮಕ್ಕಳ ಆಟದ ಮನೆ ನಿರ್ಮಿಸಿದ್ದು ಬೆಂಗಳೂರಲ್ಲೇ ಮೊದಲಲ್ಲ. ಗುಜರಾತ್, ಚಂಡೀಗಢ​, ಆಂಧ್ರ ಪ್ರದೇಶಗಳಲ್ಲೂ ಕೆಲವು ಠಾಣೆಗಳಲ್ಲಿ ಮಕ್ಕಳ ಆಟದ ಮನೆ ಇದೆ.

Defamation case ಮಾಜಿ ಸಚಿವೆ ಮನೇಕಾ ಗಾಂಧಿಗೆ ಮೈಸೂರು ಕೋರ್ಟ್​ನಿಂದ ನೋಟಿಸ್

Published On - 5:37 pm, Tue, 9 February 21

ಡಿಕೆ ಶಿವಕುಮಾರ್ ಸಿಎಂ ಆಗುವುದು ಗ್ಯಾರಂಟಿನಾ?ವಿಶ್ವಾಸದಲ್ಲಿ ಡಿಕೆಶಿ ಆಪ್ತರು
ಡಿಕೆ ಶಿವಕುಮಾರ್ ಸಿಎಂ ಆಗುವುದು ಗ್ಯಾರಂಟಿನಾ?ವಿಶ್ವಾಸದಲ್ಲಿ ಡಿಕೆಶಿ ಆಪ್ತರು
ಬಿಗ್ ಬಾಸ್ ನಾಮಿನೇಷನ್ ಪ್ರಕ್ರಿಯೆ: ಕ್ಯಾಪ್ಟನ್ ಗಿಲ್ಲಿ ನಟ ಯಾರ ಪರ?
ಬಿಗ್ ಬಾಸ್ ನಾಮಿನೇಷನ್ ಪ್ರಕ್ರಿಯೆ: ಕ್ಯಾಪ್ಟನ್ ಗಿಲ್ಲಿ ನಟ ಯಾರ ಪರ?
ಕಾರಿಗೆ ಗುದ್ದಿ ಪಾದಚಾರಿ ಮೇಲೆ ಕ್ಯಾಂಟರ್ ಪಲ್ಟಿ​​: ಎದೆ ಝಲ್ ಎನಿಸೋ ದೃಶ್ಯ!
ಕಾರಿಗೆ ಗುದ್ದಿ ಪಾದಚಾರಿ ಮೇಲೆ ಕ್ಯಾಂಟರ್ ಪಲ್ಟಿ​​: ಎದೆ ಝಲ್ ಎನಿಸೋ ದೃಶ್ಯ!
ಬಾರ್​ಗೆ ನುಗ್ಗಿದ ಕೊಬ್ಬರಿ ಹೋರಿ, ಮದ್ಯಪ್ರಿಯರು ಕಕ್ಕಾಬಿಕ್ಕಿ!
ಬಾರ್​ಗೆ ನುಗ್ಗಿದ ಕೊಬ್ಬರಿ ಹೋರಿ, ಮದ್ಯಪ್ರಿಯರು ಕಕ್ಕಾಬಿಕ್ಕಿ!
ರಾಯಚೂರಲ್ಲೂ ಘರ್ಜಿಸಿದ ಜೆಸಿಬಿಗಳು: 20ಕ್ಕೂ ಅಧಿಕ ಮನೆಗಳ ತೆರವು
ರಾಯಚೂರಲ್ಲೂ ಘರ್ಜಿಸಿದ ಜೆಸಿಬಿಗಳು: 20ಕ್ಕೂ ಅಧಿಕ ಮನೆಗಳ ತೆರವು
ಅಪಾರ್ಟ್ಮೆಂಟ್​​ನಲ್ಲಿ ಸಿಲುಕಿಕೊಂಡ ಬೆಕ್ಕನ್ನು ಕಾಪಾಡಿದ ಅಗ್ನಿಶಾಮಕ ದಳ
ಅಪಾರ್ಟ್ಮೆಂಟ್​​ನಲ್ಲಿ ಸಿಲುಕಿಕೊಂಡ ಬೆಕ್ಕನ್ನು ಕಾಪಾಡಿದ ಅಗ್ನಿಶಾಮಕ ದಳ
ಬಿಗ್ ಬಾಸ್​​ನಿಂದ ಹೊರ ಬರಲು ಅದುವೇ ಕಾರಣವಾಯ್ತು; ಸೂರಜ್ ಬೇಸರ
ಬಿಗ್ ಬಾಸ್​​ನಿಂದ ಹೊರ ಬರಲು ಅದುವೇ ಕಾರಣವಾಯ್ತು; ಸೂರಜ್ ಬೇಸರ
ಹುಟ್ಟೂರಿನಲ್ಲಿ ಮನೆ ದೇವರಿಗೆ ಪೂಜೆ ಸಲ್ಲಿಸಿದ ಹೆಚ್.ಡಿ.ದೇವೇಗೌಡ
ಹುಟ್ಟೂರಿನಲ್ಲಿ ಮನೆ ದೇವರಿಗೆ ಪೂಜೆ ಸಲ್ಲಿಸಿದ ಹೆಚ್.ಡಿ.ದೇವೇಗೌಡ
ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ನಿಲ್ಲದ ಹಿಂಸಾಚಾರ, ಹಿಂದೂಗಳ ಮನೆಗಳಿಗೆ ಬೆಂಕಿ
ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ನಿಲ್ಲದ ಹಿಂಸಾಚಾರ, ಹಿಂದೂಗಳ ಮನೆಗಳಿಗೆ ಬೆಂಕಿ
ಬಾರ್​​​ನಲ್ಲಿ ಸಿಗರೇಟ್ ವಿಚಾರಕ್ಕೆ ಜಗಳ:ಚಾಕು ಇರಿದು ಯುವಕನಿಗೆ ಹಲ್ಲೆ
ಬಾರ್​​​ನಲ್ಲಿ ಸಿಗರೇಟ್ ವಿಚಾರಕ್ಕೆ ಜಗಳ:ಚಾಕು ಇರಿದು ಯುವಕನಿಗೆ ಹಲ್ಲೆ