KSP PSI Recruitment 2021: ಬೆಂಗಳೂರಿಗೆ ಬೇಕಾಗಿದ್ದಾರೆ 545 ಪೊಲೀಸ್​ ಸಬ್​ ಇನ್​​ಸ್ಪೆಕ್ಟರ್​ಗಳು; ತಕ್ಷಣ ಅರ್ಜಿ ಹಾಕಿ

psicivilnhk20.ksp-online.in ವೆಬ್​ಸೈಟ್​ಗೆ ಭೇಟಿ ನೀಡಿ ನೀವು ಅರ್ಜಿ ಸಲ್ಲಿಕೆ ಮಾಡಬಹುದು. ಅರ್ಹ ಅಭ್ಯರ್ಥಿಗಳು ಇದರಲ್ಲಿ ಆನ್​ಲೈನ್​ ಮೂಲಕ ಮಾತ್ರ ಅರ್ಜಿ ಸಲ್ಲಿಕೆ ಮಾಡಬಹುದು..

KSP PSI Recruitment 2021: ಬೆಂಗಳೂರಿಗೆ ಬೇಕಾಗಿದ್ದಾರೆ 545 ಪೊಲೀಸ್​ ಸಬ್​ ಇನ್​​ಸ್ಪೆಕ್ಟರ್​ಗಳು; ತಕ್ಷಣ ಅರ್ಜಿ ಹಾಕಿ
ಸಾಂದರ್ಭಿಕ ಚಿತ್ರ
Rajesh Duggumane

| Edited By: sadhu srinath

Feb 06, 2021 | 6:05 PM

ಕರ್ನಾಟಕ ರಾಜ್ಯ ಪೊಲೀಸ್​ ಇಲಾಖೆ ಅಡಿಯಲ್ಲಿ ಖಾಲಿ ಇರುವ 545 ಪೊಲೀಸ್​ ಸಬ್​ ಇನ್​ಸ್ಪೆಕ್ಟರ್​ ಸಿವಿಲ್​ ಹುದ್ದೆಗೆ ಕರ್ನಾಟಕ ರಾಜ್ಯ ಪೊಲೀಸ್​ (KSP) ಅರ್ಜಿ ಆಹ್ವಾನ ಮಾಡಿದೆ. ಈಗಾಗಲೇ ಅರ್ಜಿ ಆಹ್ವಾನ ಪ್ರಕ್ರಿಯೆ ಆರಂಭವಾಗಿದ್ದು, ಫೆಬ್ರವರಿ 24 ಕೊನೆಯ ದಿನಾಂಕವಾಗಿದೆ.

ಸರ್ಕಾರ ಸೂಚಿಸಿದ ನಿಯಮದಂತೆ ಖಾಲಿ ಇರುವ 545 ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಲಾಗುತ್ತಿದೆ. psicivilnhk20.ksp-online.in ವೆಬ್​ಸೈಟ್​ಗೆ ಭೇಟಿ ನೀಡಿ ನೀವು ಅರ್ಜಿ ಸಲ್ಲಿಕೆ ಮಾಡಬಹುದು. ಅರ್ಹ ಅಭ್ಯರ್ಥಿಗಳು ಇದರಲ್ಲಿ ಆನ್​ಲೈನ್​ ಮೂಲಕ ಮಾತ್ರ ಅರ್ಜಿ ಸಲ್ಲಿಕೆ ಮಾಡಬಹುದು..

ಅರ್ಜಿ ಸಲ್ಲಿಸುವ ಬಗ್ಗೆ ಇಲ್ಲಿದೆ ವಿವರ… ನೋಟಿಫಿಕೇಷನ್​ ದಿನಾಂಕ: ಜನವರಿ 23, 2021 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಫೆಬ್ರವರಿ 22, 2021 ನಗರ: ಬೆಂಗಳೂರು ಆರ್ಗನೈಸೇಷನ್​: ಕರ್ನಾಟಕ ಪೊಲೀಸ್ ಶಿಕ್ಷಣ ಅರ್ಹತೆ: ಪದವೀಧರರಾಗಿರಬೇಕು ಪಿಎಸ್​ಐ (ಸಿವಿಲ್)​ (ಉಳಿದ ಪ್ರದೇಶ): 438 ಹುದ್ದೆ ಪಿಎಸ್​ಐ (ಸಿವಿಲ್): (ಕಲ್ಯಾಣ ಕರ್ನಾಟಕ ಪ್ರದೇಶ) 107 ಹುದ್ದೆ ವಯಸ್ಸಿನ ಮಿತಿ: GM: 21-30 Years SC, ST, CAT-01, 2A, 2B, 3A & 3B: 21-32 Years ಸೇವೆಯಲ್ಲಿರುವ ಅಭ್ಯರ್ಥಿಗೆ 35 ವರ್ಷ

ಅರ್ಜಿ ಶುಲ್ಕ:

GM ಮತ್ತು OBC: 500 ರೂಪಾಯಿ, ಇತರರಿಗೆ 250 ರೂಪಾಯಿ.

ಮೈಸೂರಲ್ಲೊಬ್ಬ ಮಾದರಿ ರೈತ.. ಸರ್ಕಾರಿ ಉದ್ಯೋಗ ಬಿಟ್ಟು ಕೃಷಿಯಲ್ಲೇ ಸಾಧನೆಗೈದ ಅನ್ನದಾತ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada