ಪೋರ್ನೋಗ್ರಫಿಗಾಗಿ ಮಕ್ಕಳ ದುರ್ಬಳಕೆ ಅತಿಹೆಚ್ಚು, ಆದ್ರೆ ಒಂದೂ FIR ಇಲ್ಲ!
ಬೆಂಗಳೂರು: ರಾಜ್ಯದಲ್ಲಿ ನೀಲಿಚಿತ್ರಕ್ಕೆ ಮಕ್ಕಳ ದುರ್ಬಳಕೆ ಯಥೇಚ್ಛವಾಗಿ ನಡೆಯುತ್ತಿದೆ. ಆದ್ರೆ ಅದಕ್ಕೆ ಕಡಿವಾಣ ಹಾಕುವವರೇ ಇಲ್ಲವಾಗಿದೆ ಎಂಬ ವಿಷಾದ ಇಂದು ಹೈಕೋರ್ಟ್ನಲ್ಲಿ ವ್ಯಕ್ತವಾಗಿದೆ. ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ಈ ಕುರಿತು ಪಿಐಎಲ್ ವಿಚಾರಣೆ ನಡೆಯಿತು. 2018ರ ಕೇಂದ್ರ ಸರಕಾರದ ವರದಿಯಂತೆ 113 ಪ್ರಕರಣವಾಗಿದೆ. ಇದರಿಂದ ಕರ್ನಾಟಕದಲ್ಲಿ ಅತಿ ಹೆಚ್ಚು ಮಕ್ಕಳ ದುರ್ಬಳಕೆಯಾಗುತ್ತಿದೆ ಎಂಬುದು ಗೊತ್ತಾಗುತ್ತದೆ. 113 ಮಕ್ಕಳನ್ನು ಪೋರ್ನೋಗ್ರಫಿಗೆ ಬಳಸಿಕೊಳ್ಳಲಾಗಿದೆ. ಆದರೆ ಈವರೆಗೂ ಒಂದೇ ಒಂದು ಎಫ್ ಐ ಆರ್ ದಾಖಲಿಸಿಲ್ಲ ಎಂದು ‘ಬಚ್ಪನ್ ಬಚಾವೋ’ ಆಂದೋಲನ […]
ಬೆಂಗಳೂರು: ರಾಜ್ಯದಲ್ಲಿ ನೀಲಿಚಿತ್ರಕ್ಕೆ ಮಕ್ಕಳ ದುರ್ಬಳಕೆ ಯಥೇಚ್ಛವಾಗಿ ನಡೆಯುತ್ತಿದೆ. ಆದ್ರೆ ಅದಕ್ಕೆ ಕಡಿವಾಣ ಹಾಕುವವರೇ ಇಲ್ಲವಾಗಿದೆ ಎಂಬ ವಿಷಾದ ಇಂದು ಹೈಕೋರ್ಟ್ನಲ್ಲಿ ವ್ಯಕ್ತವಾಗಿದೆ.
ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ಈ ಕುರಿತು ಪಿಐಎಲ್ ವಿಚಾರಣೆ ನಡೆಯಿತು. 2018ರ ಕೇಂದ್ರ ಸರಕಾರದ ವರದಿಯಂತೆ 113 ಪ್ರಕರಣವಾಗಿದೆ. ಇದರಿಂದ ಕರ್ನಾಟಕದಲ್ಲಿ ಅತಿ ಹೆಚ್ಚು ಮಕ್ಕಳ ದುರ್ಬಳಕೆಯಾಗುತ್ತಿದೆ ಎಂಬುದು ಗೊತ್ತಾಗುತ್ತದೆ. 113 ಮಕ್ಕಳನ್ನು ಪೋರ್ನೋಗ್ರಫಿಗೆ ಬಳಸಿಕೊಳ್ಳಲಾಗಿದೆ. ಆದರೆ ಈವರೆಗೂ ಒಂದೇ ಒಂದು ಎಫ್ ಐ ಆರ್ ದಾಖಲಿಸಿಲ್ಲ ಎಂದು ‘ಬಚ್ಪನ್ ಬಚಾವೋ’ ಆಂದೋಲನ ಸಂಸ್ಥೆಯ ವಕೀಲರು ತಮ್ಮ ವಾದ ಮಂಡಿಸಿದ್ದಾರೆ. ತನಿಖೆ ನಡೆಸಿ ಕ್ರಮಕೈಗೊಳ್ಳಲು ನಿರ್ದೇಶನ ನೀಡಬೇಕು ಎಂದು ಅವರು ಕೋರ್ಟ್ಗೆ ಮನವಿ ಮಾಡಿದರು.
ಅದರಂತೆ, ಎಫ್ಐ ಆರ್ ದಾಖಲಿಸಿ ತನಿಖೆ ನಡೆಸುವ ಬಗ್ಗೆ ನಿಲುವು ತಿಳಿಸಿ. ಜೊತೆಗೆ ವಿಶೇಷ ತಂಡ ರಚನೆ ಬಗ್ಗೆ ತನ್ನ ನಿಲುವು ತಿಳಿಸಲು ಸರಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿತು.
Published On - 5:44 pm, Tue, 26 November 19