KPL ಕ್ರಿಕೆಟ್ ಬೆಟ್ಟಿಂಗ್, ಅಲಿ ಅಶ್ಫಾಕ್ ನಿರೀಕ್ಷಣಾ ಜಾಮೀನು ವಜಾ
ಬೆಂಗಳೂರು: ಕೆಪಿಎಲ್ ಬೆಟ್ಟಿಂಗ್, ಮ್ಯಾಚ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ಪ್ಯಾಂಥರ್ಸ್ ಮಾಲೀಕ ಅಲಿ ಅಶ್ಫಾಕ್ ನಿರೀಕ್ಷಣಾ ಜಾಮೀನು ಅರ್ಜಿ ವಜಾ ಆಗಿದೆ. ಹೈಕೋರ್ಟ್ ಏಕಸದಸ್ಯ ಪೀಠ ಅರ್ಜಿ ವಜಾಗೊಳಿಸಿದೆ. ದುಬೈ ಮೂಲದ ಬುಕ್ಕಿ ಜೊತೆ ಸೇರಿ ಬೆಟ್ಟಿಂಗ್ ನಡೆಸುತ್ತಿದ್ದ ಆರೋಪದಲ್ಲಿ ಸಿಸಿಬಿ ಪೊಲೀಸರು ಅಲಿ ಅಶ್ಫಾಕ್ನನ್ನು ಬಂಧಿಸಿ 120 ಬಿ, 420 ಅಡಿ ಎಫ್ಐಆರ್ ದಾಖಲಿಸಿದ್ದರು. ಬಂಧನದ ಭೀತಿಯಿಂದ ಅಲಿ ಅಶ್ಫಾಕ್ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಅರ್ಜಿ ವಜಾಗೊಳಿಸಿ ಹೈಕೋರ್ಟ್ ಆದೇಶ ನೀಡಿದೆ. […]
ಬೆಂಗಳೂರು: ಕೆಪಿಎಲ್ ಬೆಟ್ಟಿಂಗ್, ಮ್ಯಾಚ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ಪ್ಯಾಂಥರ್ಸ್ ಮಾಲೀಕ ಅಲಿ ಅಶ್ಫಾಕ್ ನಿರೀಕ್ಷಣಾ ಜಾಮೀನು ಅರ್ಜಿ ವಜಾ ಆಗಿದೆ. ಹೈಕೋರ್ಟ್ ಏಕಸದಸ್ಯ ಪೀಠ ಅರ್ಜಿ ವಜಾಗೊಳಿಸಿದೆ.
ದುಬೈ ಮೂಲದ ಬುಕ್ಕಿ ಜೊತೆ ಸೇರಿ ಬೆಟ್ಟಿಂಗ್ ನಡೆಸುತ್ತಿದ್ದ ಆರೋಪದಲ್ಲಿ ಸಿಸಿಬಿ ಪೊಲೀಸರು ಅಲಿ ಅಶ್ಫಾಕ್ನನ್ನು ಬಂಧಿಸಿ 120 ಬಿ, 420 ಅಡಿ ಎಫ್ಐಆರ್ ದಾಖಲಿಸಿದ್ದರು. ಬಂಧನದ ಭೀತಿಯಿಂದ ಅಲಿ ಅಶ್ಫಾಕ್ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಅರ್ಜಿ ವಜಾಗೊಳಿಸಿ ಹೈಕೋರ್ಟ್ ಆದೇಶ ನೀಡಿದೆ.
ಸಿಸಿಬಿಯಿಂದ ಬಿಜಾಪುರ ಬುಲ್ಸ್ ತಂಡದ ಮಾಲಿಕನ ವಿಚಾರಣೆ: ಬಿಜಾಪುರ ಬುಲ್ಸ್ ತಂಡದ ಮಾಲಿಕ ಕಿರಣ್ ಕಟ್ಟೀಮನಿಯನ್ನು ಸಿಸಿಬಿ ಪೊಲೀಸರು ಮೂರು ಗಂಟೆಗಳ ಕಾಲ ವಿಚಾರಣೆ ನಡೆಸಿದ್ದಾರೆ. ಮತ್ತೆ ನಾಳೆಯೂ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ.
Published On - 6:16 pm, Tue, 26 November 19