ಚಿತ್ರದುರ್ಗದಲ್ಲಿ ಶಾಸಕರು, ಸ್ವಾಮೀಜಿ ಕೊಲೆಗೆ ಸಂಚು; ಪೊಲೀಸ್ ವರಿಷ್ಠಾಧಿಕಾರಿ ಮಾಹಿತಿ
ಅಪರಿಚಿತರು ಕೆಎಸ್ಪಿ ಆ್ಯಪ್ ಮೂಲಕ ಜಿಲ್ಲಾ ಪೊಲೀಸ್ ಕಚೇರಿಗೆ ಬೆದರಿಕೆ ಸಂದೇಶ ಕಳುಹಿಸಿದ್ದಾರೆ. ತನಿಖೆ ನಡೆಸಿ ಆರೋಪಿಗಳನ್ನ ಪತ್ತೆ ಮಾಡಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ.

ಚಿತ್ರದುರ್ಗ: ಹೊಳಲ್ಕೆರೆ ಬಿಜೆಪಿ ಶಾಸಕ ಎಂ.ಚಂದ್ರಪ್ಪ (M Chandrappa) ಹಾಗೂ ಬೋವಿಮಠದ ಇಮ್ಮಡಿ ಸಿದ್ಧರಾಮೇಶ್ವರ ಶ್ರೀಗಳ (Siddharameshwar Shri) ಕೊಲೆಗೆ ಸಂಚು ರೂಪಿಸಿರುವ ಬಗ್ಗೆ ಬೆದರಿಕೆ ಸಂದೇಶ ಬಂದಿದೆ ಎಂದು ಚಿತ್ರದುರ್ಗ ಪೊಲೀಸ್ ವರಿಷ್ಠಾಧಿಕಾರಿ ಪರಶುರಾಮ್ ಮಾಹಿತಿ ನೀಡಿದ್ದಾರೆ. ಅಪರಿಚಿತರು ಕೆಎಸ್ಪಿ ಆ್ಯಪ್ ಮೂಲಕ ಜಿಲ್ಲಾ ಪೊಲೀಸ್ ಕಚೇರಿಗೆ ಬೆದರಿಕೆ ಸಂದೇಶ ಕಳುಹಿಸಿದ್ದಾರೆ. ತನಿಖೆ ನಡೆಸಿ ಆರೋಪಿಗಳನ್ನ ಪತ್ತೆ ಮಾಡಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ. ಸದ್ಯ ಈ ಕುರಿತು ಹೊಳಲ್ಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆದರಿಕೆ ಸಂದೇಶದ ಬಗ್ಗೆ ಟಿವಿ9 ಜೊತೆ ಮಾತನಾಡಿದ ಬಿಜೆಪಿ ಶಾಸಕ ಹೊಳಲ್ಕೆರೆ ಎಂ.ಚಂದ್ರಪ್ಪ, ‘ಬಾರದು ಬಪ್ಪದು ತಪ್ಪದು. ಸದಾ ಸಾರ್ವಜನಿಕರ ಮದ್ಯೆಯಿದ್ದು ಜನಪರ ಕಾರ್ಯಗಳಲ್ಲಿ ತೊಡಗಿರುತ್ತೇನೆ. ಉತ್ತಮ ಕೆಲಸ ಮಾಡುವುದೇ ತಪ್ಪು ಎಂಬಂತೆ ಬೆದರಿಕೆ ಒಡ್ಡುವವರ ಬಗ್ಗೆ ನಾನೇನು ಹೇಳಲ್ಲ. ನಮ್ಮ ಕಾರ್ಯಕರ್ತರು ಹೊಳಲ್ಕೆರೆ ಠಾಣೆಗೆ ದೂರು ನೀಡಿದ್ದಾರೆಂದು ಕೇಳಿದ್ದೇನೆ. ಬೆದರಿಕೆ ಸಂದೇಶ ಪರಿಶೀಲಿಸಿ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ’ ಎಂದರು.
ಇದನ್ನೂ ಓದಿ: Viral Video: 2000 ಬಿಯರ್ ಬಾಟಲ್ ರಸ್ತೆಗೆ ಬಿದ್ದು ಪುಡಿಪುಡಿ; ಕ್ಲೀನ್ ಮಾಡಿದ ‘ಹೀರೋಗಳಿಗೆ’ ಧನ್ಯವಾದ ಹೇಳಿದ ಕಂಪನಿ
ಚಲನಶೀಲತೆವುಳ್ಳವರು, ಸಮಾಜಮುಖಿ ಕಾರ್ಯಗಳಲ್ಲಿ ಧಾರ್ಮಿಕ ಮುಖಂಡರು, ಜನಪ್ರತಿನಿಧಿಗಳಿಗೆ ಈ ರೀತಿ ಸುದ್ದಿಗಳು ಬರುತ್ತಿರುತ್ತವೆ. ಅಂಜಿಕೆ, ಆತಂಕ ಪಡುವ ವಿಚಾರ ಅಲ್ಲ. ನಾವು ಸಮಾಜಮುಖಿಯಾಗಿ ಸಮಾಜದ ಜತೆಗೆ ಇರುವುದರಿಂದ ಈ ಬೆದರಿಕೆ ಸಂದೇಶವನ್ನು ಗಂಭೀರವಾಗಿ ತೆಗೆದುಕೊಳ್ಳುವ ಅಗತ್ಯವಿಲ್ಲ. ಪೊಲೀಸ್ ಇಲಾಖೆಗೇ ಸಂದೇಶ ಹೋಗಿರುವುದರಿಂದ ಪೊಲೀಸರು ಗಂಭೀರವಾಗಿ ತೆಗೆದುಕೊಂಡು ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಬೋವಿ ಗುರುಪೀಠದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ತಿಳಿಸಿದರು.
ಇದನ್ನೂ ಓದಿ: Russian Missile Attack: ಉಕ್ರೇನ್ನ ಡ್ನಿಪ್ರೊ ಮೇಲೆ ರಷ್ಯನ್ ಕ್ಷಿಪಣಿ ದಾಳಿ; ಮೂವರು ಸಾವು, 15 ಮಂದಿಗೆ ಗಾಯ
Published On - 9:45 am, Sat, 16 July 22








