ಮೊಳಕಾಲ್ಮೂರು ಬಳಿ ಕಾರುಗಳ ಡಿಕ್ಕಿ: ಬಳ್ಳಾರಿ ಮಹಿಳಾ ಹೆಡ್ ​ಕಾನ್ಸ್​​ಟೇಬಲ್​, ಉಪನ್ಯಾಸಕ ಸಾವು​

ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲೂಕಿನ ಬಿ.ಜಿ.ಕೆರೆ ಗ್ರಾಮದ ಬಳಿ ಎರಡು ಕಾರುಗಳ ಮಧ್ಯೆ ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಸಾವನ್ನಪ್ಪಿದ್ದಾರೆ.

ಮೊಳಕಾಲ್ಮೂರು ಬಳಿ ಕಾರುಗಳ ಡಿಕ್ಕಿ: ಬಳ್ಳಾರಿ ಮಹಿಳಾ ಹೆಡ್ ​ಕಾನ್ಸ್​​ಟೇಬಲ್​, ಉಪನ್ಯಾಸಕ ಸಾವು​
ಮೊಳಕಾಲ್ಮೂರು: ಕಾರುಗಳ ಡಿಕ್ಕಿ, ಬಳ್ಳಾರಿ ಮಹಿಳಾ ಹೆಡ್ ​ಕಾನ್ಸ್​​ಟೇಬಲ್​, ಉಪನ್ಯಾಸಕ ಸಾವು​
Edited By: ಸಾಧು ಶ್ರೀನಾಥ್​

Updated on: Dec 16, 2021 | 8:44 AM

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲೂಕಿನ ಬಿ.ಜಿ.ಕೆರೆ ಗ್ರಾಮದ ಬಳಿ ಎರಡು ಕಾರುಗಳ ಮಧ್ಯೆ ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಸಾವನ್ನಪ್ಪಿದ್ದಾರೆ. ಓಮ್ನಿ ಕಾರಿನಲ್ಲಿದ್ದ ಬಳ್ಳಾರಿ ಮಹಿಳಾ ಠಾಣೆಯ ಹೆಡ್ ​ಕಾನ್ಸ್​​ಟೇಬಲ್ (WPC ) ಟಿಪ್ಪು ಸುಲ್ತಾನ್ (42) ಮತ್ತು ಮತ್ತೊಂದು ಕಾರಿನಲ್ಲಿದ್ದ ಬಳ್ಳಾರಿ ಮೂಲದ ಉಪನ್ಯಾಸಕ ಸುರೇಶ್ (58) ಸಾವಿಗೀಡಾಗಿದ್ದಾರೆ. ಸುರೇಶ್ ಪತ್ನಿ ಪಾರ್ವತಮ್ಮಗೆ ಗಾಯಗಳಾಗಿದ್ದು,‌ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮೊಳಕಾಲ್ಮೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಸ್​ಗೆ ಬೆಂಕಿ: 22 ಪ್ರಯಾಣಿಕರು ಪ್ರಾಣಾಪಾಯದಿಂದ ಪಾರು
ಉತ್ತರ ಕನ್ನಡ: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಜೊಡ ಕೆರೆ ಬಳಿ ಚಲಿಸುತ್ತಿದ್ದ ಖಾಸಗಿ ಬಸ್ ಒಂದಕ್ಕೆ ಬೆಂಕಿ ಹೊತ್ತಿಕೊಂಡು ಬಸ್ ಸಂಪೂರ್ಣ ಭಸ್ಮವಾಗಿದೆ. ಮುಂಬಯಿಯಿಂದ ಮಂಗಳೂರು ಕಡೆ ಬಸ್ ಸಂಚರಿಸುತ್ತಿತ್ತು. ಬಸ್ ನಲ್ಲಿ ಇದ್ದ ಸುಮಾರು 22 ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೆಳಗಿನ ಜಾವ 5 ಗಂಟೆ ಸುಮಾರಿಗೆ ಘಟನೆ ನಡೆದಿದೆ. ಕೆಲ ಗಂಟೆಗಳ ಕಾಲ ಬೆಂಕಿ ಹೊತ್ತಿ ಉರಿದಿದೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸ್ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಬೆಂಕಿ ಹೊತ್ತಿಕೊಂಡಿದ್ದರಿಂದ ಬಸ್ ಸಂಪೂರ್ಣ ಸುಟ್ಟು ಕರಕಲಾಗಿದೆ. ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊಪ್ಪಳ: ವೇಗವಾಗಿ ಚಲಿಸುತ್ತಿದ್ದ 2 ಲಾರಿಗಳು ಉಜ್ಜಿಕೊಂಡು ಬೆಂಕಿ ವೇಗವಾಗಿ ಚಲಿಸುತ್ತಿದ್ದ 2 ಲಾರಿಗಳು ಪರಸ್ಪರ ಉಜ್ಜಿಕೊಂಡು ಬೆಂಕಿಗೆ ಆಗುತಿಯಾಗಿವೆ. ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ವಿರುಪಾಪುರ ಬಳಿ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಲಾರಿಗಳು ಹೊತ್ತಿ ಉರಿದಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.

Published On - 8:04 am, Thu, 16 December 21

TV9 Web

TV9 Kannada

Read More
Loading...
Unable to load recommendations.
Follow Us