AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶರಣರನ್ನು ಪೀಠಾಧ್ಯಕ್ಷದಿಂದ ವಜಾಗೊಳಿಸುವಂತೆ ಹೆಚ್ಚಿದ ಒತ್ತಡ: ಬಿಎಸ್​ವೈ, ಬೊಮ್ಮಾಯಿ ಅಂಗಳಕ್ಕೆ ಚೆಂಡು

ಚಿತ್ರದುರ್ಗದ ಮುರುಘಾ ಮಠದ ಮುರುಘಾ ಶಿವಮೂರ್ತಿ ಶರಣರು ಪೋಕ್ಸೋ ಪ್ರಕರಣದಲ್ಲಿ ಜೈಲು ಪಾಲಾಗಿದ್ದು, ಮಠದ ಪೀಠಕ್ಕೆ ಬೇರೆ ಅಧ್ಯಕ್ಷರನ್ನು ನೇಮಿಸಿ ಎಂಬ ಒತ್ತಡ ಹೆಚ್ಚಾಗುತ್ತಿದೆ.

ಶರಣರನ್ನು ಪೀಠಾಧ್ಯಕ್ಷದಿಂದ ವಜಾಗೊಳಿಸುವಂತೆ ಹೆಚ್ಚಿದ ಒತ್ತಡ: ಬಿಎಸ್​ವೈ, ಬೊಮ್ಮಾಯಿ ಅಂಗಳಕ್ಕೆ ಚೆಂಡು
ಚಿತ್ರದುರ್ಗದ ಡಾ ಶಿವಮೂರ್ತಿ ಮುರುಘಾ ಶರಣರು
TV9 Web
| Edited By: |

Updated on:Oct 14, 2022 | 5:44 PM

Share

ಬೆಂಗಳೂರು/ಚಿತ್ರದುರ್ಗ: ವೀರಶೈವ ಲಿಂಗಾಯತ ಸಮಾಜದ ಮಠಗಳಲ್ಲೊಂದಾದ ಚಿತ್ರದುರ್ಗದ ಮುರುಘಾ ಮಠಕ್ಕೆ (Muruga Mutt) ತನ್ನದೆಯಾದ ಪರಂಪರೆ, ಇತಿಹಾಸ ಇದೆ. ಹಲವು ವರ್ಷಗಳಿಂದ ಮಠ ಸಂಸ್ಕೃತಿ ಉಳಿಸಿ, ಬೆಳಸಿಕೊಂಡು ಹೆಸರು ಮಾಡಿದೆ. ಆದ್ರೆ, ಇದೀಗ ಪೀಠಾಧ್ಯಕ್ಷ ಶಿವಮೂರ್ತಿ ಮುರುಘಾ ಶರಣ ಮೇಲೆ ಬಂದಿರುವ ಆರೋಪ ಮಠಕ್ಕೆ ಕಪ್ಪು ಚುಕ್ಕೆಯಾಗಿದೆ. ಈ ಹಿನ್ನೆಲೆಯಲ್ಲಿ ಪೀಠಾಧ್ಯಕ್ಷ ಸ್ಥಾನದಿಂದ ಶಿವಮೂರ್ತಿ ಶರಣರನ್ನು ವಜಾಗೊಳಿಸಬೇಕೆಂಬ ಕೂಗು ಜೋರಾಗುತ್ತಿದೆ.

ಹೌದು.. ಪೋಕ್ಸೋ ಕೇಸ್​​ನಲ್ಲಿ ಜೈಲುಪಾಲಾಗಿರುವ ಚಿತ್ರದುರ್ಗದ ಮುರುಘಾ ಶ್ರೀಗಳಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ವಿದ್ಯಾರ್ಥಿಗಳ ಮೇಲೆ ಲೈಂಗಿಕ ದೌರ್ಜನ್ಯ ಆರೋಪದ ಬೆನ್ನಲ್ಲೇ ಇದೀಗ ಮಠದ ಮಹಿಳಾ ಸಿಬ್ಬಂದಿಗೂ ಲೈಂಗಿಕ ಕಿರುಕುಳ ನೀಡಿದ್ದಾರೆಂಬ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಮತ್ತೊಂದು ದೂರು ದಾಖಲಾಗಿದೆ. ಇದರ ಜೊತೆಗೆ ಇದೀಗ ಪೀಠಾಧ್ಯಕ್ಷ ಸ್ಥಾನದಿಂದ ಮುರುಘಾಶ್ರೀ ವಜಾಗೊಳಿಸುವಂತೆ ಕೂಗು ಕೇಳಿಬರುತ್ತಿವೆ.

ಮತ್ತಿಬ್ಬರು ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ‌ ಕಿರುಕುಳ‌ ನೀಡಿದ ಆರೋಪ; ಮುರುಘಾ ಶ್ರೀಗಳ ವಿರುದ್ಧ ಎಫ್​ಐಆರ್ ದಾಖಲು

ಹೌದು…..ಲೈಂಗಿಕ ದೌರ್ಜುನ್ಯದಲ್ಲಿ ಆರೋಪಿತರಾಗಿರುವ ಮುರುಘಾ ಶರಣರನ್ನು ಪೀಠಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿ ಬೇರೆಯವರನ್ನು ನೇಮಿಸುವಂತೆ ಆಗ್ರಹಗಳ ಹೆಚ್ಚುತ್ತಲೇ ಇವೆ. ಈ ಬಗ್ಗೆ ಚರ್ಚಿಸಲು ಮಾಜಿ ಸಚಿವ‌ ಏಕಾಂತಯ್ಯ ಅವರ ನೇತೃತ್ವದಲ್ಲಿ ವೀರಶೈವ ಲಿಂಗಾಯತ ಮುಖಂಡರು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ಭೇಟಿಯಾಗಿದೆ.

ಅಲ್ಲದೇ ಏಕಾಂತಯ್ಯ‌ ನೇತೃತ್ವದಲ್ಲಿ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನೂ ಸಹ ಭೇಟಿಯಾಗಿ ಪೀಠಾಧ್ಯಕ್ಷ ಬದಲಾವಣೆ ಮಾಡುವ ಬಗ್ಗೆ ಮನವಿ ಸಲ್ಲಿಸಿದೆ.

ಮಠದ ಆಡಳಿತ ಮಂಡಳಿ ಸದಸ್ಯ ಹಾಗೂ ಬಿಎಸ್​ವೈ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಎಸ್.ಲಿಂಗಮೂರ್ತಿ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಮುರುಘಾ ಶರಣರ ವಿರುದ್ಧ ಗಂಭೀರ ಸ್ವರೂಪದ ಆರೋಪವಿದೆ. ಇದರಿಂದ ಮುರುಘಾ ಮಠದ ಭಕ್ತರು, ಸಾರ್ವಜನಿಕರ ಮನಸಿಗೆ ಘಾಸಿ ಆಗಿದೆ, ಜನರ ಭಾವನೆ ಅರಿತು ಪೀಠಕ್ಕೆ ಗೌರವ ತರುವ ನಿರ್ಧಾರ ಆಗಬೇಕು. ಡಾ.ಶಿವಮೂರ್ತಿ ಶರಣರು ಹೊಸ ಪೀಠಾಧ್ಯಕ್ಷರನ್ನು ನೇಮಿಸಬೇಕು ಎಂದು ಅಭಿಪ್ರಾಯಪಟ್ಟರು.

ಮುರುಘಾ ಶರಣರ ವಿರುದ್ಧ ಮಕ್ಕಳ ಕಲ್ಯಾಣ ಸಮಿತಿ, ಡಿಸಿ, ಎಸ್​ಪಿಗೆ ದೂರು: ಪ್ರಕರಣ ಮತ್ತಷ್ಟು ಗಂಭೀರ

ಮಾಜಿ, ಹಾಲಿ ಸಿಎಂ ಅಂಗಳದಲ್ಲಿ ಚೆಂಡು

ವೀರಶೈವ ಲಿಂಗಾಯತ ಸಮಾಜದ ಪ್ರಮುಖರು ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ್ದು, ಮುರುಘಾ ಮಠಕ್ಕೆ ಹೊಸ ಪೀಠಾಧ್ಯಕ್ಷರನ್ನು ನೇಮಿಸುವಂತೆ ಮನವಿ ಮಾಡಿದ್ದಾರೆ. ಆದ್ರೆ, ಇದುವರೆಗೂ ಪೀಠಾಧ್ಯಕ್ಷ ಬದಲಾವಣೆ ಬಗ್ಗೆ ಯಾವುದೇ ಮಾತುಗಳನ್ನಾಡಿಲ್ಲ. ಇದೀಗ ಸಮಾಜದ ನಾಯಕರೇ ಬಂದು ಭೇಟಿ ಮಾಡಿದ್ದರಿಂದ ಯಡಿಯೂರಪ್ಪ ಹಾಗೂ ಬೊಮ್ಮಾಯಿ ಯಾವ ತೀರ್ಮಾನ ಕೈಗೊಳ್ಳಲಿದ್ದಾರೆ ಎನ್ಜುವುದು ಕಾದುನೋಡಬೇಕಿದೆ.

ಒಟ್ಟಿನಲ್ಲಿ ಚಿತ್ರದುರ್ಗಾ ಮುರುಘಾ ಮಠದ ಪೀಠಾಧ್ಯಕ್ಷರ ಬದಲಾವಣೆಯ ಚೆಂಡು ಯಡಿಯೂರಪ್ಪ ಹಾಗೂ ಬೊಮ್ಮಾಯಿ ಅಂಗಳದಲ್ಲಿದ್ದು, ಅವರು ಯಾವ ತೀರ್ಮಾನ ಕೈಗೊಳ್ಳಲಿದ್ದಾರೆ ಎನ್ನುವುದನ್ನು ಕುತೂಹಲ ಮೂಡಿಸಿದೆ.

Published On - 5:39 pm, Fri, 14 October 22

ವಿಡಿಯೋ: ಡಿಕೆಶಿ ತಿನಿಸಿದ ಸ್ವೀಟನ್ನು ಬಾಯಿಂದ ತೆಗೆದು ಎಸೆದ ಸಿದ್ದರಾಮಯ್ಯ!
ವಿಡಿಯೋ: ಡಿಕೆಶಿ ತಿನಿಸಿದ ಸ್ವೀಟನ್ನು ಬಾಯಿಂದ ತೆಗೆದು ಎಸೆದ ಸಿದ್ದರಾಮಯ್ಯ!
ಡಿ ಕ್ಲರ್ಕ್ ಆಟಕ್ಕೆ ಸಲಾಂ ಹೊಡೆದ ಕ್ರಿಕೆಟ್ ಜಗತ್ತು; ವಿಡಿಯೋ
ಡಿ ಕ್ಲರ್ಕ್ ಆಟಕ್ಕೆ ಸಲಾಂ ಹೊಡೆದ ಕ್ರಿಕೆಟ್ ಜಗತ್ತು; ವಿಡಿಯೋ
ಚಳಿಯೆಂದು ಹುತಾತ್ಮನಾದ ಸೈನಿಕನ ಪ್ರತಿಮೆಗೆ ಕಂಬಳಿ ಹೊದಿಸಿದ ಅಮ್ಮ
ಚಳಿಯೆಂದು ಹುತಾತ್ಮನಾದ ಸೈನಿಕನ ಪ್ರತಿಮೆಗೆ ಕಂಬಳಿ ಹೊದಿಸಿದ ಅಮ್ಮ
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ಭುಗಿಲೆದ್ದ ಆಕ್ರೋಶ
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ಭುಗಿಲೆದ್ದ ಆಕ್ರೋಶ
ಹೊರಗೆ ಬಂದಮೇಲೆ ಬಿಗ್ ಬಾಸ್ ಬಗ್ಗೆ ವಿಡಿಯೋ ಮಾಡಲು ನಿರ್ಧರಿಸಿದ ರಘು
ಹೊರಗೆ ಬಂದಮೇಲೆ ಬಿಗ್ ಬಾಸ್ ಬಗ್ಗೆ ವಿಡಿಯೋ ಮಾಡಲು ನಿರ್ಧರಿಸಿದ ರಘು
ಆರ್​ಸಿಬಿ ಪರ ಚೊಚ್ಚಲ ವಿಕೆಟ್ ಉರುಳಿಸಿದ ಲಾರೆನ್ ಬೆಲ್
ಆರ್​ಸಿಬಿ ಪರ ಚೊಚ್ಚಲ ವಿಕೆಟ್ ಉರುಳಿಸಿದ ಲಾರೆನ್ ಬೆಲ್
ಹಿಮಾಚಲ ಪ್ರದೇಶದಲ್ಲಿ ಭಾರೀ ಬಸ್ ಅಪಘಾತ; 9 ಜನ ಸಾವು, 40 ಮಂದಿಗೆ ಗಾಯ
ಹಿಮಾಚಲ ಪ್ರದೇಶದಲ್ಲಿ ಭಾರೀ ಬಸ್ ಅಪಘಾತ; 9 ಜನ ಸಾವು, 40 ಮಂದಿಗೆ ಗಾಯ
ಕಾಡು ಹಂದಿಗೆ ಹಾಕಿದ್ದ ಉರುಳಿಗೆ ಚಿರತೆ ಬಲಿ
ಕಾಡು ಹಂದಿಗೆ ಹಾಕಿದ್ದ ಉರುಳಿಗೆ ಚಿರತೆ ಬಲಿ
ಅಶ್ವಿನಿ ಗೌಡ ಎದುರಲ್ಲೇ ಧ್ರುವಂತ್ ಓವರ್ ಆ್ಯಕ್ಟಿಂಗ್; ವಿಡಿಯೋ ನೋಡಿ
ಅಶ್ವಿನಿ ಗೌಡ ಎದುರಲ್ಲೇ ಧ್ರುವಂತ್ ಓವರ್ ಆ್ಯಕ್ಟಿಂಗ್; ವಿಡಿಯೋ ನೋಡಿ
ಮಹಿಳೆಯರಿಗೆ ಬೆಂಗಳೂರು ಫುಲ್ ಸೇಫ್: ಸಿಲಿಕಾನ್ ಸಿಟಿಯನ್ನ ಕೊಂಡಾಡಿದ ಯುವತಿ
ಮಹಿಳೆಯರಿಗೆ ಬೆಂಗಳೂರು ಫುಲ್ ಸೇಫ್: ಸಿಲಿಕಾನ್ ಸಿಟಿಯನ್ನ ಕೊಂಡಾಡಿದ ಯುವತಿ