ಕೈಮಗ್ಗ ನಿಗಮಕ್ಕೆ ಗ್ರಹಣ, ಮೂರಾಬಟ್ಟೆ ಆಯ್ತು ನೇಕಾರರ ಬದುಕು

ಕೊಪ್ಪಳ: ಸರ್ಕಾರ ನೇಕಾರರ ಬಾಳು ಬೆಳಕಾಗಲಿ ಅನ್ನೋ ಉದ್ದೇಶಕ್ಕೆ ನೇಕಾರರ ಅಭಿವೃದ್ಧಿ ನಿಗಮ ಆರಂಭಿಸಿದೆ. ಆದ್ರೆ ಕೊಪ್ಪಳ ಜಿಲ್ಲೆಯಲ್ಲಿ ನೇಕಾರರಿಗೆ ಕೆಲಸ ಕೊಡೋ ಅಭಿವೃದ್ಧಿ ನಿಗಮಕ್ಕೆ ಗ್ರಹಣ ಹಿಡಿದಿದೆ. ನಿಗಮದ ಎಡವಟ್ಟಿಗೆ ನೂರಾರು ನೇಕಾರರ ಕುಟುಂಬಗಳು ಬೀದಿಗೆ ಬಿದ್ದಿವೆ. 3 ವರ್ಷಕ್ಕೆ 300ಕ್ಕೂ ಹೆಚ್ಚು ಕೈಮಗ್ಗಗಳು ಬಂದ್: ಕೊಪ್ಪಳದ ಭಾಗ್ಯನಗರದಲ್ಲಿರೋರಿಗೆಲ್ಲಾ ಕೈಮಗ್ಗಗಳೇ ಜೀವನಾಧಾರ. ಆದ್ರೆ ಕಳೆದ 3 ವರ್ಷಗಳಿಂದ ನೇಕಾರರ ಬದುಕು ಮೂರಾಬಟ್ಟೆಯಾಗಿದೆ. ಅಭಿವೃದ್ಧಿ ನಿಗಮದಿಂದ ನೇಯಲು ನೂಲಿಲ್ಲದೆ ಕಾರ್ಮಿಕರು ಕಂಗಾಲಾಗಿದ್ದಾರೆ. ಹೀಗಾಗಿ ಕೆಲ್ಸ ಇಲ್ಲದೆ ಕೈಮಗ್ಗಗಳು […]

ಕೈಮಗ್ಗ ನಿಗಮಕ್ಕೆ ಗ್ರಹಣ,  ಮೂರಾಬಟ್ಟೆ ಆಯ್ತು ನೇಕಾರರ ಬದುಕು
Follow us
ಸಾಧು ಶ್ರೀನಾಥ್​
|

Updated on:Dec 03, 2019 | 12:54 PM

ಕೊಪ್ಪಳ: ಸರ್ಕಾರ ನೇಕಾರರ ಬಾಳು ಬೆಳಕಾಗಲಿ ಅನ್ನೋ ಉದ್ದೇಶಕ್ಕೆ ನೇಕಾರರ ಅಭಿವೃದ್ಧಿ ನಿಗಮ ಆರಂಭಿಸಿದೆ. ಆದ್ರೆ ಕೊಪ್ಪಳ ಜಿಲ್ಲೆಯಲ್ಲಿ ನೇಕಾರರಿಗೆ ಕೆಲಸ ಕೊಡೋ ಅಭಿವೃದ್ಧಿ ನಿಗಮಕ್ಕೆ ಗ್ರಹಣ ಹಿಡಿದಿದೆ. ನಿಗಮದ ಎಡವಟ್ಟಿಗೆ ನೂರಾರು ನೇಕಾರರ ಕುಟುಂಬಗಳು ಬೀದಿಗೆ ಬಿದ್ದಿವೆ.

3 ವರ್ಷಕ್ಕೆ 300ಕ್ಕೂ ಹೆಚ್ಚು ಕೈಮಗ್ಗಗಳು ಬಂದ್: ಕೊಪ್ಪಳದ ಭಾಗ್ಯನಗರದಲ್ಲಿರೋರಿಗೆಲ್ಲಾ ಕೈಮಗ್ಗಗಳೇ ಜೀವನಾಧಾರ. ಆದ್ರೆ ಕಳೆದ 3 ವರ್ಷಗಳಿಂದ ನೇಕಾರರ ಬದುಕು ಮೂರಾಬಟ್ಟೆಯಾಗಿದೆ. ಅಭಿವೃದ್ಧಿ ನಿಗಮದಿಂದ ನೇಯಲು ನೂಲಿಲ್ಲದೆ ಕಾರ್ಮಿಕರು ಕಂಗಾಲಾಗಿದ್ದಾರೆ. ಹೀಗಾಗಿ ಕೆಲ್ಸ ಇಲ್ಲದೆ ಕೈಮಗ್ಗಗಳು ಧೂಳು ಹಿಡೀತಿವೆ. ಸುಮಾರು 300ಕ್ಕೂ ಹೆಚ್ಚು ಕೈಮಗ್ಗಗಳು ಬಂದ್ ಆಗಿದ್ರೆ, ಇನ್ನುಳಿದ ಮುನ್ನೂರು ಕೈಮಗ್ಗಗಳಲ್ಲಿ ಕೆಲ್ಸ ಶುರುವಾಗಿದ್ದು, ನೂರಾರು ಷರತ್ತು ವಿಧಿಸಲಾಗಿದೆ. ಇದ್ರಿಂದ ನೇಕಾರಿಕೆ ನಂಬಿದ್ದ ಕುಟುಂಬಗಳು ಬೀದಿಗೆ ಬಿದ್ದಿವೆ.

ಇನ್ನು ಇಡೀ ಕೊಪ್ಪಳ ಜಿಲ್ಲೆಯಲ್ಲಿ 2 ಸಾವಿರಕ್ಕೂ ಹೆಚ್ಚು ಕೈಮಗ್ಗಗಳು ಚಾಲ್ತಿಯಲ್ಲಿದ್ವು. ಈಗ ಬರೀ 600 ಮಗ್ಗಗಳು ಕೆಲಸ ಮಾಡ್ತಿವೆ. ಇದ್ಕೆ ಷರತ್ತು ವಿಧಿಸಿದ್ದು, ಕೇವಲ ವಿದ್ಯಾವಿಕಾಸ ಯೋಜನೆ ಅಡಿ ಬರೋ ಮಕ್ಕಳ ಬಟ್ಟೆ ನೇಯಬೇಕಾಗಿದೆ. ಉಳಿದ ಯಾವ ನೂಲು ಕೂಡಾ ನೇಕಾರರಿಗೆ ಸಿಗ್ತಿಲ್ಲ. ಹೀಗಾಗಿ 3 ವರ್ಷಗಳಿಂದ ಒಂದೊಂದೇ ಕೈಮಗ್ಗ ಅಸ್ತಿತ್ವ ಕಳೆದುಕೊಳ್ತಿವೆ.

ಇದ್ರ ಜೊತೆಗೆ ಕೈಮಗ್ಗ, ಪವರ್ ಲೂಮ್ ಮಶೀನ್​ನೊಂದಿಗೆ ಪೈಪೋಟಿ ನಡೀತಿದೆ. ಎಲ್ಲರೂ ಪವರ್ ಲೂಮ್ ಮಶೀನ್​ಗೆ ಮಣೆ ಹಾಕ್ತಿದ್ದಾರೆ. ಇದ್ರಿಂದ ಕೆಲ್ಸ ಇಲ್ಲದೆ ಕೈಮಗ್ಗಗಳು ಧೂಳು ಹಿಡೀತಿವೆ. ಅಧಿಕಾರಿಗಳೇ ನೂಲು ಬರ್ತಿಲ್ಲ ಅಂತಾ ಒಪ್ಪಿಕೊಳ್ತಿದ್ದಾರೆ. ಬೀದಿಗೆ ಬಿದ್ದಿರೋ ನೇಕಾರರ ಬದುಕು ರೂಪಿಸುವ ಬದಲು ಅಭಿವೃದ್ದಿ ನಿಗಮ ಸ್ಥಾಪಿಸಿದ್ದು, ಕೆಲ್ಸ ಕಿತ್ತುಕೊಂಡಿರೋದು ಮಾತ್ರ ವಿಪರ್ಯಾಸ.

Published On - 12:16 pm, Tue, 3 December 19

ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ