ಮದುವೆ ಮಂಟಪದಲ್ಲಿ ಅತಿಥಿಗಳ ಜೊತೆ ಕುರ್ಚಿ ಮೇಲೆ ಕುಳಿತು ಮಂಗ ಚೇಷ್ಟೆ!
ಬಾಗಲಕೋಟೆ: ಎಪಿಎಂಸಿ ಚರಂತಿಮಠ ಕಲ್ಯಾಣಮಂಟಪದಲ್ಲಿ ಮದುವೆ ಸಮಾರಂಭಗಳಿಗೆ ಮಂಗ ಅಡ್ಡಿಪಡಿಸುತ್ತಿರುವ ಅಪರೂಪದ ಘಟನೆ ನಡೆದಿದೆ. ಸುಮಾರು 15 ದಿನದಿಂದ ಕಲ್ಯಾಣ ಮಂಟಪದ ಮದುವೆಗಳಿಗೆ ಮಂಗ ಎಂಟ್ರಿ ಕೊಡುತ್ತಿದೆ. ನಿನ್ನೆ ನಡೆದ ಮದುವೆ ಸಂಭ್ರಮಕ್ಕೂ ಸಹ ಮಂಗ ಆಗಮಿಸಿದೆ. ನಿನ್ನೆ ದಿಶಾ ಹಾಗೂ ದೀನಾನಾಥ ಮತ್ತು ದೇಶಪಾಂಡೆ ಹಾಗೂ ಕುಲಕರ್ಣಿ ಬಂಧುಗಳ ಮದುವೆ ಇತ್ತು. ಮದುವೆ ಮಂಟಪ ಅತಿಥಿಗಳ ಜೊತೆ ಕುರ್ಚಿ ಮೇಲೆ ಕುಳಿತು ಚೇಷ್ಟೆ ನಡೆಸಿದೆ. ಮದುವೆಯ ಇಡೀ ದಿನ ಕಲ್ಯಾಣಮಂಟಪ ಬಿಟ್ಟು ತೆರಳಲಿಲ್ಲ. ಅತಿಥಿಗಳಂತೆ ಕಲ್ಯಾಣ […]
ಬಾಗಲಕೋಟೆ: ಎಪಿಎಂಸಿ ಚರಂತಿಮಠ ಕಲ್ಯಾಣಮಂಟಪದಲ್ಲಿ ಮದುವೆ ಸಮಾರಂಭಗಳಿಗೆ ಮಂಗ ಅಡ್ಡಿಪಡಿಸುತ್ತಿರುವ ಅಪರೂಪದ ಘಟನೆ ನಡೆದಿದೆ. ಸುಮಾರು 15 ದಿನದಿಂದ ಕಲ್ಯಾಣ ಮಂಟಪದ ಮದುವೆಗಳಿಗೆ ಮಂಗ ಎಂಟ್ರಿ ಕೊಡುತ್ತಿದೆ. ನಿನ್ನೆ ನಡೆದ ಮದುವೆ ಸಂಭ್ರಮಕ್ಕೂ ಸಹ ಮಂಗ ಆಗಮಿಸಿದೆ.
ನಿನ್ನೆ ದಿಶಾ ಹಾಗೂ ದೀನಾನಾಥ ಮತ್ತು ದೇಶಪಾಂಡೆ ಹಾಗೂ ಕುಲಕರ್ಣಿ ಬಂಧುಗಳ ಮದುವೆ ಇತ್ತು. ಮದುವೆ ಮಂಟಪ ಅತಿಥಿಗಳ ಜೊತೆ ಕುರ್ಚಿ ಮೇಲೆ ಕುಳಿತು ಚೇಷ್ಟೆ ನಡೆಸಿದೆ. ಮದುವೆಯ ಇಡೀ ದಿನ ಕಲ್ಯಾಣಮಂಟಪ ಬಿಟ್ಟು ತೆರಳಲಿಲ್ಲ. ಅತಿಥಿಗಳಂತೆ ಕಲ್ಯಾಣ ಮಂಟಪಕ್ಕೆ ಮಂಗ ಆಗಮಿಸಿದ ಹಿನ್ನೆಲೆಯಲ್ಲಿ ಕೆಲವರು ಗಾಬರಿಗೊಂಡಿದ್ದರೆ, ಮತ್ತೆ ಕೆಲವರಿಗೆ ಮಸ್ತಿಯಾಗಿದೆ.
ಬಾಗಿಲಾಕಿದ್ರೂ ಕಿಟಕಿ ಬಳಿ ಕೂತ ಮಂಗ: ಬಳಿಕ ಕಲ್ಯಾಣ ಮಂಟಪದ ಬಾಗಿಲು ಹಾಕಿಕೊಂಡು ಮದುವೆ ಕಾರ್ಯಕ್ರಮವನ್ನು ಮುಂದುವರಿಸಿದ್ದಾರೆ. ಬಾಗಿಲು ಹಾಕಿದ್ರೂ ಸಹ ಕಿಟಕಿ ಬಳಿ ಕುಳಿತು ಮದುವೆ ವೀಕ್ಷಿಸಿದೆ. ಕೆಲವರು ಮಂಗನ ಪ್ರವೇಶ ಶುಭಸಂಕೇತ ಮಾರುತಿ ದೇವರು ಮದುವೆಗೆ ಬಂದ ಹಾಗೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮಂಗನನ್ನು ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸ ಪಡುವಂತಾಗಿದೆ. ಈಗಾಗಲೇ ಬಲೆ ಬೋನು ಹಿಡಿದು ಮಂಗನನ್ನು ಹಿಡಿಯಲು ಯತ್ನಿಸಿದ್ದಾರೆ. ಆದ್ರೆ ಇಂದಿಗೂ ಮಂಗ ಸಿಗಲಿಲ್ಲ.
Published On - 11:53 am, Tue, 3 December 19