ಮಹಾರಾಷ್ಟ್ರ ಸಿಎಂ ಏಕನಾಥ್​ ಶಿಂಧೆ ಭ್ರಮೆಯಲ್ಲಿದ್ದಾರೆ: ಸರ್ಕಾರ ಪತನ ಹೇಳಿಕೆಗೆ ಸಿದ್ದರಾಮಯ್ಯ ತಿರುಗೇಟು

| Updated By: Ganapathi Sharma

Updated on: May 13, 2024 | 2:36 PM

ಕರ್ನಾಟಕ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ಎಂಬ ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಹೇಳಿಕೆ ರಾಜ್ಯ ಕಾಂಗ್ರೆಸ್ ನಾಯಕರನ್ನು ಕೆರಳಿಸಿದೆ. ಈ ವಿಚಾರವಾಗಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಸತೀಶ್​ ಜಾರಕಿಹೊಳಿ ಪ್ರತಿಕ್ರಿಯಿಸಿದ್ದು, ಶಿಂಧೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಯಾರು ಏನಂದರು ಎಂಬುದು ಇಲ್ಲಿದೆ.

ಮಹಾರಾಷ್ಟ್ರ ಸಿಎಂ ಏಕನಾಥ್​ ಶಿಂಧೆ ಭ್ರಮೆಯಲ್ಲಿದ್ದಾರೆ: ಸರ್ಕಾರ ಪತನ ಹೇಳಿಕೆಗೆ ಸಿದ್ದರಾಮಯ್ಯ ತಿರುಗೇಟು
ಸಿದ್ದರಾಮಯ್ಯ & ಡಿಕೆ ಶಿವಕುಮಾರ್
Follow us on

ಬೆಂಗಳೂರು, ಮೇ 13: ಲೋಕಸಭೆ ಚುನಾವಣೆ (Lok Sabha Elections) ಬಳಿಕ ಕರ್ನಾಟಕ ಸರ್ಕಾರ (Karnataka Government) ಪತನ ಬಗ್ಗೆ ಏಕನಾಥ್​ ಶಿಂಧೆ ಹೇಳಿಕೆ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಏಕನಾಥ್​ ಶಿಂಧೆ ಭ್ರಮೆಯಲ್ಲಿದ್ದಾರೆ. ಯಾವ ಕಾರಣಕ್ಕೂ ಅಪರೇಷನ್ ಕಮಲ ಮಾಡಲು ಆಗುವುದಿಲ್ಲ. ಚುನಾವಣೆ ಸಂದರ್ಭದಲ್ಲಿ ಪ್ರಯತ್ನ ಮಾಡಿ ವಿಫಲರಾಗಿದ್ದಾರೆ. ಮಹಾರಾಷ್ಟ್ರದಲ್ಲಿ ಆದಂತೆ ಕರ್ನಾಟಕದಲ್ಲಿ ಆಗುವುದಿಲ್ಲ. ಲೋಕಸಭೆ ಚುನಾವಣೆಯಲ್ಲಿಯೂ ‘ಇಂಡಿಯಾ’ ಮೈತ್ರಿಕೂಟ ಗೆಲ್ಲುತ್ತದೆ ಎಂದು ಹೇಳಿದರು.

ಡಿಸಿಎಂ ಡಿಕೆ ಶಿವಕುಮಾರ್ ಮಾತನಾಡಿ, ಲೋಕಸಭೆ ಚುನಾವಣೆ ಬಳಿಕ ಶಿಂಧೆ ಸರ್ಕಾರ ಇರುವುದೇ ಅನುಮಾನವಿದೆ. ಉದ್ಧವ್ ಠಾಕ್ರೆ ಬಗ್ಗೆ ಪ್ರಧಾನಮಂತ್ರಿ ಮೋದಿ ಯಾಕೆ ಮಾತನಾಡಿದರು? ಎಲ್ಲರೂ ಕೂಡ ಅವರವರ ಪಕ್ಷಕ್ಕೆ ಹೋಗುತ್ತಾರೆ. ಮಹಾ ಸರ್ಕಾರದ ಒರಿಜಿನಲ್‌ ಶಿವಸೇನಾ ನಾಯಕರು ಮರಳಿ ಬರುತ್ತಾರೆ ಎಂದು ಹೇಳಿದರು.

ಶಾಸಕರಲ್ಲಿ ಅಸಮಾಧಾನ ಇದೆ, ಆದರೆ ಸರ್ಕಾರ ಬೀಳಲ್ಲ: ಸತೀಶ್ ಜಾರಕಿಹೊಳಿ

ಇನ್ನೂ 4 ವರ್ಷ ಕಾಂಗ್ರೆಸ್ ಸರ್ಕಾರ ಇರಲಿದೆ. ಸರ್ಕಾರ ಉರುಳುವ ಪ್ರಶ್ನೆಯೇ ಉದ್ಭವಿಸಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸಿಎಂ ಹುದ್ದೆ ವಿಚಾರವಾಗಿ ನಮ್ಮಲ್ಲಿ ಜಗಳ ಇರುವುದು ನಿಜ. ಅದರೆ ಅದು ಪಕ್ಷದ ಆಂತರಿಕ ವಿಚಾರ. ಈ ವಿಚಾರವಾಗಿ ಮಹಾರಾಷ್ಟ್ರಕ್ಕೆ ಕರ್ನಾಟಕವನ್ನು ಹೋಲಿಕೆ ಮಾಡುವುದು ಬೇಡ ಎಂದಿದ್ದಾರೆ.

ಏಕನಾಥ್​ ಶಿಂಧೆಗೆ ಮಾತನಾಡಲು ಸ್ವಾತಂತ್ರ್ಯ ಇದೆ, ಅವರು ಮಾತನಾಡುತ್ತಾರೆ. ಭಿನ್ನಮತ ಇದೆ ಎಂದು ಸರ್ಕಾರ ಬೀಳಿಸಲು ಆಗುತ್ತದೆಯೇ ಎಂದು ಸತೀಶ್​ ಜಾರಕಿಹೊಳಿ ಪ್ರಶ್ನಿಸಿದ್ದಾರೆ.

ಶಾಸಕರ ಅಸಮಾಧಾನ ಇದೆ, ಅದಕ್ಕಾಗಿ ಸರ್ಕಾರ ಬೀಳುವುದಿಲ್ಲ. ಅಭಿವೃದ್ಧಿ, ವರ್ಗಾವಣೆ ವಿಚಾರದಲ್ಲಿ ಸಮಸ್ಯೆಗಳು ಇರುತ್ತವೆ. ಇದಕ್ಕೆಲ್ಲ ಸರ್ಕಾರ ಬೀಳಲ್ಲ ಎಂದು ಸತೀಶ್ ಜಾರಕಿಹೊಳಿ ಹೇಳಿದರು.

ಇದನ್ನೂ ಓದಿ: ಕರ್ನಾಟಕದಲ್ಲಿ ಮಹಾರಾಷ್ಟ್ರ ಮಾದರಿ ಆಪರೇಷನ್: ಮಹಾ ಸಿಎಂ ಏಕನಾಥ್ ಶಿಂಧೆ ಶಾಕಿಂಗ್ ಹೇಳಿಕೆ

ಏನು ಹೇಳಿದ್ದರು ಶಿಂಧೆ?

ಚುನಾವಣಾ ಪ್ರಚಾರದ ನಿಮಿತ್ತ ಬೆಳಗಾವಿಗೆ ಹೋಗಿದ್ದಾಗ ಅಲ್ಲಿನ ಬಿಜೆಪಿ ಪದಾಧಿಕಾರಿಗಳು ಮಹಾರಾಷ್ಟ್ರದ ಮುಖ್ಯಮಂತ್ರಿಯಾದ ನನ್ನನ್ನು ಭೇಟಿಯಾಗಲು ಉತ್ಸುಕತೆಯಿಂದ ಬಂದಿದ್ದರು. ಈ ‘ನಾಥ’ ಯಾರೆಂದು ನೋಡಲು ಬಯಸಿದ್ದರು. ಆಗ, ಲೋಕಸಭೆ ಚುನಾವಣೆ ನಂತರ ಮಹಾರಾಷ್ಟ್ರದಂತೆ ಕರ್ನಾಟಕದಲ್ಲೂ ‘ನಾಥ್’ ಮಾದರಿ ಆಪರೇಷನ್​ಗೆ ಮನವಿ ಮಾಡಿದ್ದರು ಎಂದು ಶಿಂಧೆ ಹೇಳಿದ್ದರು. ಅಲ್ಲದೆ, ಲೋಕಸಭೆ ಚುನಾವಣೆ ಫಲಿತಾಂಶದ ನಂತರ ಕರ್ನಾಟಕ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ಎಂದಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ