ಮಳೆಗೆ ನಾಯಿಕೊಡೆಗಳು ಹುಟ್ಟಿಕೊಳ್ಳುವಂತೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಿಲೋ ಮೀಟರ್ ಗಟ್ಟಲೆ ಕಾಂಡೋಮ್ ಪತ್ತೆ!
Condom: ತುಮಕೂರು ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಿಲೋಮೀಟರ್ ಗಟ್ಟಲೆ ಕಾಂಡೋಮ್ ಗಳು ಪತ್ತೆಯಾಗಿವೆ. ಕಿಲೋಮಿಟರ್ ಗಟ್ಟಲೆ ಕಾಂಡೋಮ್ ಗಳು ಬಿದ್ದಿರುವುದನ್ನು ಕಂಡು ವಾಹನ ಸವಾರರು ಬೆಚ್ಚಿಬಿದ್ದಿದ್ದಾರೆ. ಎಲ್ಲಿಂದ ಬಂತು ಇಷ್ಟೊಂದು? ಇವೇನು ಬಳಸಿ ಬಿಸಾಡಿರುವುದಾ ಎಂದು ಸ್ಥಳೀಯರು ಚಿಂತಿತರಾಗಿದ್ದಾರೆ.

ತುಮಕೂರು: ದಿನಬೆಳಗಾಗುವುದರೊಳಗಾಗಿ ನಿರ್ಜನ ಹೆದ್ದಾರಿ ರಸ್ತೆಗಳಲ್ಲಿ ಅನೇಕ ಅವಘಡಗಳು ನಡೆಯುತ್ತಿರುತ್ತವೆ. ಅನೇಕ ಚಿತ್ರ ವಿಚಿತ್ರ ಪ್ರಕರಣಗಳೂ ಆಗಾಗ ನಡೆಯುತ್ತಿರುತ್ತವೆ. ಬರೀ ಅಪಘಾತಗಳೇ ಅಲ್ಲ, ಆಕ್ಸಿಡೆಂಟಲ್ ಆಗಿ ನಿಗೂಢವಾದ ವಸ್ತುಗಳೂ ಸಿಗತೊಡಗುತ್ತವೆ. ತಾಜಾ ಪ್ರಕರಣದಲ್ಲಿಯೂ ನಿನ್ನೆ ರಾತ್ರಿ ಇಂತಹುದೇ ಕಂಡುಬಂದಿದೆ.
ಏನಪಾ ಅಂದರೆ ತುಮಕೂರು ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಿಲೋಮೀಟರ್ ಗಟ್ಟಲೆ ಕಾಂಡೋಮ್ ಗಳು ಪತ್ತೆಯಾಗಿವೆ. ಕಿಲೋಮಿಟರ್ ಗಟ್ಟಲೆ ಕಾಂಡೋಮ್ ಗಳು ಬಿದ್ದಿರುವುದನ್ನು ಕಂಡು ವಾಹನ ಸವಾರರು ಬೆಚ್ಚಿಬಿದ್ದಿದ್ದಾರೆ. ಎಲ್ಲಿಂದ ಬಂತು ಇಷ್ಟೊಂದು? ಇವೇನು ಬಳಸಿ ಬಿಸಾಡಿರುವುದಾ? ಅಥವಾ ಕಂಪನಿಗಳ ವತಿಯಿಂದ ಸಾಗಣೆ ಮಾಡುವಾಗ ವಾಹನಗಳಿಂದ ಅಚಾನಕ್ಕಾಗಿ ಬಿದ್ದುಹೋಗಿವೆಯೋ? ಎಂದು ಸ್ಥಳೀಯರು ಚಿಂತಿತರಾಗಿದ್ದಾರೆ.
ತುಮಕೂರಿನ ರಾಷ್ಟ್ರೀಯ ಹೆದ್ದಾರಿ 48ರ ಕ್ಯಾತ್ಸಂದ್ರ-ಬಟವಾಡಿ ಮಾರ್ಗ ಮಧ್ಯೆ ರಸ್ತೆ ಬದಿಯಲ್ಲಿ ಕಾಂಡೋಮ್ ಗಳು ಬಿದ್ದಿವೆ. ಸದ್ಯಕ್ಕೆ, ಬೇರೆಡೆಯಿಂದ ತಂದು ರಸ್ತೆಯಲ್ಲಿ ಸುರಿದು ಹೋಗಿರುವ ಶಂಕೆ ವ್ಯಕ್ತವಾಗಿದೆ.

ತುಮಕೂರಿನ ರಾಷ್ಟ್ರೀಯ ಹೆದ್ದಾರಿ 48ರ ಕ್ಯಾತ್ಸಂದ್ರ-ಬಟವಾಡಿ ಮಾರ್ಗ ಮಧ್ಯೆ ರಸ್ತೆ ಬದಿಯಲ್ಲಿ ಕಾಂಡೋಮ್ ಗಳು ಬಿದ್ದಿವೆ.
Also Read: ದೇವಸ್ಥಾನದ ಕಾಣಿಕೆ ಹುಂಡಿಗೆ ಕಾಂಡೋಮ್ ಹಾಕಿ ಅಪಚಾರ; ಕೃತ್ಯ ಎಸಗಿದವರಿಗೆ ಎದುರಾಯಿತು ಸಂಕಷ್ಟ
(condoms found on national highway at kyathsandra tumkur )
Published On - 12:19 pm, Wed, 8 September 21




