ಲಸಿಕೆ ಅಭಿಯಾನ ಯಶಸ್ವಿಯಾಗಲಿ ಎಂದು ಶುಭ ನುಡಿದ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ
ಕೊವಿಡ್ ವಿರುದ್ಧ ಆರಂಭವಾಗಿರುವ ಲಸಿಕೆ ವಿತರಣಾ ಅಭಿಯಾನಕ್ಕೆ ಸಿದ್ದರಾಮಯ್ಯ ಶುಭಕೋರಿದ್ದಾರೆ. ಲಸಿಕೆ ಅಭಿಯಾನವು ಯಶಸ್ವಿಯಾಗಲಿ. ಜನರ ಜೀವಗಳನ್ನು ಉಳಿಸಲಿ ಎಂದಿದ್ದಾರೆ.
ಬೆಂಗಳೂರು: ದೇಶಾದ್ಯಂತ ಲಸಿಕೆ ವಿತರಣೆ ಕಾರ್ಯಕ್ರಮಕ್ಕೆ ಇಂದು ಪ್ರಧಾನಿ ನರೇಂದ್ರ ಮೋದಿಯಿಂದ ಚಾಲನೆ ದೊರೆತಿದೆ. ರಾಜ್ಯದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಲಸಿಕೆ ಅಭಿಯಾನಕ್ಕೆ, ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಾಲನೆ ನೀಡಿದ್ದಾರೆ. ಮೊದಲ ಹಂತದಲ್ಲಿ ದೇಶಾದ್ಯಂತ 3 ಕೋಟಿ ಜನರಿಗೆ ಲಸಿಕೆ ವಿತರಿಸಲಾಗುತ್ತದೆ. ಕೊವಿಶೀಲ್ಡ್ ಹಾಗೂ ಕೊವ್ಯಾಕ್ಸಿನ್ ಲಸಿಕೆಯನ್ನು ನೀಡಲಾಗುತ್ತದೆ.
ಈ ಬಗ್ಗೆ ಕಾಂಗ್ರೆಸ್ ಧುರೀಣ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. ಕೊವಿಡ್-19 ವಿರುದ್ಧ ಆರಂಭವಾಗಿರುವ ಲಸಿಕೆ ವಿತರಣಾ ಅಭಿಯಾನಕ್ಕೆ ಸಿದ್ದರಾಮಯ್ಯ ಶುಭಾಶಯ ಕೋರಿದ್ದಾರೆ. ಲಸಿಕೆ ಅಭಿಯಾನವು ಯಶಸ್ವಿಯಾಗಲಿ. ಜನರ ಜೀವಗಳನ್ನು ಉಳಿಸಲಿ. ಆ ಮೂಲಕ, ಭಾರತೀಯರಿಗೆ ಹೊಸ ಬದುಕು ಆರಂಭವಾಗಲಿ ಎಂದು ಶುಭ ಹಾರೈಸಿದ್ದಾರೆ.
Congratulations to everyone for the beginning of nationwide vaccination drive against #Covid19.
Hope this becomes a success, save lives & renew the livelihoods of all Indians.
— Siddaramaiah (@siddaramaiah) January 16, 2021
Published On - 1:40 pm, Sat, 16 January 21