AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾ ನಿಯಂತ್ರಣಕ್ಕೆ ಬರದಿದ್ದರೆ ಶಾಲೆ ಓಪನ್​ ಬೇಡ: ಸಿದ್ದರಾಮಯ್ಯ ಅಭಿಪ್ರಾಯ

Siddaramaiah: ಗುಂಪು ಸೇರುವ ಕಾರ್ಯಕ್ರಮಗಳಿಗೆ ಅನುಮತಿ ಕೊಡಬೇಡಿ. ಹಬ್ಬ, ಜಾತ್ರೆ ಒಂದು ವರ್ಷ ಮಾಡದಿದ್ರೆ ಏನು ಸಮಸ್ಯೆ ಆಗಲ್ಲ. ಈ ಬಾರಿ ಮನೆಯಲ್ಲಿ ಗಣಪತಿ ಕೂರಿಸಿ, ಮನೆಯಲ್ಲೇ ಆಚರಿಸಿ ಎಂದು ಕಾಂಗ್ರೆಸ್ ಹಿರಿಯ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಕೊರೊನಾ ನಿಯಂತ್ರಣಕ್ಕೆ ಬರದಿದ್ದರೆ ಶಾಲೆ ಓಪನ್​ ಬೇಡ: ಸಿದ್ದರಾಮಯ್ಯ ಅಭಿಪ್ರಾಯ
ಸಿದ್ದರಾಮಯ್ಯ
TV9 Web
| Updated By: ganapathi bhat|

Updated on: Aug 14, 2021 | 3:17 PM

Share

ಬೆಂಗಳೂರು: ಕೊರೊನಾ ನಿಯಂತ್ರಣಕ್ಕೆ ಬರದಿದ್ದರೆ ಶಾಲೆ ಓಪನ್​ ಬೇಡ. ಕೊರೊನಾ ಕಡಿಮೆ ಆದರೆ ಮಾತ್ರ ಶಾಲೆ ಓಪನ್ ಮಾಡಿ. ಕೊಡಗು, ದಕ್ಷಿಣ ಕನ್ನಡ, ಮೈಸೂರು ಜಿಲ್ಲೆ ಸೇರಿದಂತೆ ಗಡಿ ಭಾಗದ ಜಿಲ್ಲೆಗಳಲ್ಲಿ ಕಠಿಣ ಕ್ರಮಗಳನ್ನ ಕೈಗೊಳ್ಳಬೇಕು. 3 ನೇ ಅಲೆ ಬಾರದಂತೆ ನಿಯಂತ್ರಣ ಸರ್ಕಾರದ ಜವಾಬ್ದಾರಿ ಆಗಿದೆ ಎಂದು ಬೆಂಗಳೂರಿನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಇಂದು (ಆಗಸ್ಟ್ 14) ಹೇಳಿಕೆ ನೀಡಿದ್ದಾರೆ.

ವೀಕೆಂಡ್ ಲಾಕ್​​ಡೌನ್​​ ಘೋಷಣೆ ಮಾಡಿದರೆ ಸಾಲದು. ಇನ್ನೂ ಕಟ್ಟುನಿಟ್ಟಿನ ನಿಯಮ ಜಾರಿ ಮಾಡಿ ನಿರ್ಬಂಧ ಹೇರಿ. ವ್ಯಾಕ್ಸಿನ್ ಕೊಡಿಸುವ ಜವಾಬ್ದಾರಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ್ದು. ಗುಂಪು ಸೇರುವ ಕಾರ್ಯಕ್ರಮಗಳಿಗೆ ಅನುಮತಿ ಕೊಡಬೇಡಿ. ಹಬ್ಬ, ಜಾತ್ರೆ ಒಂದು ವರ್ಷ ಮಾಡದಿದ್ರೆ ಏನು ಸಮಸ್ಯೆ ಆಗಲ್ಲ. ಈ ಬಾರಿ ಮನೆಯಲ್ಲಿ ಗಣಪತಿ ಕೂರಿಸಿ, ಮನೆಯಲ್ಲೇ ಆಚರಿಸಿ ಎಂದು ಕಾಂಗ್ರೆಸ್ ಹಿರಿಯ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಅವಧಿ ಪೂರೈಸುವುದು ಅನುಮಾನ ಕರ್ನಾಟಕ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅವಧಿ ಪೂರೈಸುವುದು ಅನುಮಾನ. ಯಾವ ಟೈಮ್​ನಲ್ಲಿ ಬೇಕಿದ್ರೂ ರಾಜ್ಯ ಸರ್ಕಾರ ಬೀಳಬಹುದು. ಆಡಳಿತ ಪಕ್ಷದ ಶಾಸಕ ಅಸಮಾಧಾನ ಹೊರಹಾಕಿ ಪ್ರತಿಭಟನೆ ಮಾಡಿದ್ದಾರೆ. ಬಸನಗೌಡ ಪಾಟೀಲ ಯತ್ನಾಳ್, ಸಿ.ಪಿ. ಯೋಗೇಶ್ವರ್, ಅರವಿಂದ ಬೆಲ್ಲದ್ ದೆಹಲಿಗೆ ತೆರಳಿದ್ದಾರೆ. ಹೀಗಾಗಿ ಗೊಂದಲ ಇದೆ, ಈ ಸರ್ಕಾರ ಬಹಳ ದಿನ ಬಾಳಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.

ರಾಜ್ಯದಲ್ಲಿ ಜಾತಿ ಗಣತಿ ವರದಿ ಬಿಡುಗಡೆ ಮಾಡದ ವಿಚಾರವಾಗಿ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ಸಾಮಾಜಿಕ ನ್ಯಾಯದ ಪರ ಹೋರಾಡುವವರ ಜತೆಗಿರುವೆ. ನನ್ನ ಅವಧಿಯಲ್ಲಿ ಜಾತಿಗಣತಿ ವರದಿ ತಯಾರಾಗಿತ್ತಾ? ನನ್ನ ಅವಧಿಯಲ್ಲಿ ಕಾಂತಾರಾಜು ಕೊಡ್ತೇನೆಂದು ಹೇಳಿದ್ನಾ? ಕುಮಾರಸ್ವಾಮಿ ಕಾಲದಲ್ಲಿ ಜಾತಿಗಣತಿ ವರದಿ ರೆಡಿ ಆಗಿತ್ತು. ಆಗ ಹಿಂದುಳಿದ ಕಲ್ಯಾಣ ಸಚಿವರಾಗಿದ್ದ ಸಿ. ಪುಟ್ಟರಂಗಶೆಟ್ಟಿ ವರದಿ ಸ್ವೀಕಾರ ಮಾಡಲು ಸಿದ್ಧರಿದ್ದರು. ಆದರೆ ಸಿಎಂ ಆಗಿದ್ದ ಕುಮಾರಸ್ವಾಮಿ ವರದಿ ಸ್ವೀಕರಿಸಲಿಲ್ಲ ಎಂದು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: ಸಿದ್ದರಾಮಯ್ಯ ಪರ ಹರ್ಷೋದ್ಘಾರ; ಯುವ ಕಾಂಗ್ರೆಸ್ ಅಭಿಮಾನವನ್ನು ಹಸನ್ಮುಖಿಯಾಗಿ ಸಂಭ್ರಮಿಸಿದ ವಿಪಕ್ಷ ನಾಯಕ

ಕುರಿ ಕಾಯುತ್ತಿದ್ದ ಸಿದ್ದರಾಮಯ್ಯನವರ ರಾಜಕೀಯ ಹಾದಿಯೇ ಅಚ್ಚರಿ; ಇಲ್ಲಿದೆ ರೋಚಕ ಸ್ಟೋರಿ

(Congress Leader Siddaramaiah on Coronavirus School Reopen BJP Govt in Karnataka)