ಜಗದೀಶ್ ಶೆಟ್ಟರ್ ಪಕ್ಷಾಂತರ ಎಫೆಕ್ಟ್ ಪಂಚರಾಜ್ಯಗಳ ಮೇಲೆ ಆಗುತ್ತೆ ಅಂದಿದ್ದರು, ನಿಜವಾಗಿದೆ ಎಂದ ಮಹೇಶ್ ಟೆಂಗಿನಕಾಯಿ

ಪಂಚ ರಾಜ್ಯ ಚುನಾವಣೆಗಳ ಪೈಕಿ ಛತ್ತೀಸ್​ಗಢ, ರಾಜಸ್ಥಾನ ಹಾಗೂ ಮಧ್ಯಪ್ರದೇಶಗಳಲ್ಲಿ ಬಿಜೆಪಿ ಪ್ರಚಂಡ ಗೆಲುವು ಸಾಧಿಸಿದೆ. ಈ ಎಲ್ಲಾ ರಾಜ್ಯಗಳಲ್ಲಿ ಗೆಲವಿನ ಕನಸು ಕಾಣುತ್ತಿದ್ದ ಕಾಂಗ್ರೆಸ್, ತೆಲಂಗಾಣ ರಾಜ್ಯವನ್ನಷ್ಟೇ ಗೆದ್ದುಕೊಂಡಿದೆ. ಇದನ್ನೇ ಮುಂದಿಟ್ಟುಕೊಂಡ ಬಿಜೆಪಿ ಶಾಸಕ ಮಹೇಶ್ ಟೆಂಗಿನಕಾಯಿ ಅವರು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರನ್ನು ವ್ಯಂಗ್ಯವಾಡಿದ್ದಾರೆ.

ಜಗದೀಶ್ ಶೆಟ್ಟರ್ ಪಕ್ಷಾಂತರ ಎಫೆಕ್ಟ್ ಪಂಚರಾಜ್ಯಗಳ ಮೇಲೆ ಆಗುತ್ತೆ ಅಂದಿದ್ದರು, ನಿಜವಾಗಿದೆ ಎಂದ ಮಹೇಶ್ ಟೆಂಗಿನಕಾಯಿ
ಮಹೇಶ್ ಟೆಂಗಿನಕಾಯಿ ಮತ್ತು ಜಗದೀಶ್ ಶೆಟ್ಟರ್
Follow us
ಶಿವಕುಮಾರ್ ಪತ್ತಾರ್. ಹುಬ್ಬಳ್ಳಿ
| Updated By: Rakesh Nayak Manchi

Updated on: Dec 03, 2023 | 6:35 PM

ಹುಬ್ಬಳ್ಳಿ, ಡಿ.3: ಪಕ್ಷಾಂತರ ಎಫೆಕ್ಟ್ ಪಂಚರಾಜ್ಯಗಳ ಮೇಲೆ ಆಗುತ್ತದೆ ಅಂತಾ ಜಗದೀಶ್ ಶೆಟ್ಟರ್ (Jagadish Shettar) ಹೇಳಿದ್ದರು. ಈಗ ಅವರು ಹೇಳಿದ್ದು ನಿಜವಾಗಿದೆ. ಮೂರು ರಾಜ್ಯಗಳಲ್ಲಿ ಕಾಂಗ್ರೆಸ್‌ಗೆ ಹೀನಾಯ ಸೋಲಾಗಿದೆ ಎಂದು ಬಿಜೆಪಿ ಶಾಸಕ ಮಹೇಶ್ ಟೆಂಗಿನಕಾಯಿ (Mahesh Tenginakai) ವ್ಯಂಗ್ಯವಾಡಿದ್ದಾರೆ.

ರಾಜಸ್ಥಾನ, ಛತ್ತೀಸಗಢದಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋತಿದೆ. ಸೋಲಿನ ಬಗ್ಗೆ ಜಗದೀಶ್ ಶೆಟ್ಟರ್ ಮೊದಲೆ ಮಾತಾಡಿದ್ದರು. ಹುಬ್ಬಳ್ಳಿ- ಧಾರವಾಡ ಕೇಂದ್ರ ಕ್ಷೇತ್ರದಲ್ಲಿ ಶೆಟ್ಟರ್ ಹೀನಾಯವಾಗಿ ಸೋತಿದ್ದರು. ತಮ್ಮ ಭೂತ್​ನಲ್ಲಿಯೇ ಕಡಿಮೆ ಮತಗಳನ್ನು ಪಡೆದಿದ್ದರು ಎಂದು ಟಾಂಗ್ ಕೊಟ್ಟರು.

ಶೆಟ್ಟರ್ ಮೊದಲು ಕಾಂಗ್ರೆಸ್ ಮುಳಗೋ ಹಡಗು ಅಂದಿದ್ದರು. ಈ ಅವರೇ ಮುಳುಗುವ ಹಡಗು ಹತ್ತಿದ್ದಾರೆ. ಅವರ ಜೊತೆ ಕಾಂಗ್ರೆಸ್ ಕೂಡ ಮುಳುಗಿಸುತ್ತಿದ್ದಾರೆ. ಲೀಡರ್‌ ಲೆಸ್‌ ಪಾರ್ಟಿ ಅಂದವರು ಈಗ ಏನಂತಾರೆ? ಲೀಡರ್ ಲೆಸ್ ಪಾರ್ಟಿ ಅನ್ನೋದು ಯಾವದೂ ಗೊತ್ತಾಯ್ತಾ? ಲಿಂಗಾಯತರ ಹೆಸರಲ್ಲಿ ರಾಜಕೀಯ ಮಾಡಲು ಹೋಗಿ ಸೋತಿದ್ದಾರೆ ಎಂದರು.

ಇದನ್ನೂ ಓದಿ: ವಿಧಾನಸಭೆ ಚುನಾವಣೆ ಫಲಿತಾಂಶ: ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್​ಗಢ ಬಿಜೆಪಿ ತೆಕ್ಕೆಗೆ, ತೆಲಂಗಾಣಕ್ಕೆ ಕಾಂಗ್ರೆಸ್ ‘ಗ್ಯಾರಂಟಿ’

ಜಗದೀಶ್ ಶೆಟ್ಟರ್ ಹೆಸರು ಈಗ ಎಲ್ಲಿಯೂ ನಡೆಯಲ್ಲ. ಶೆಟ್ಟರ್ ಮಾಜಿ ಶಾಸಕ ಚಿಕ್ಕನಗೌಡರರನ್ನ ಸಿಎಮ್ ಮನೆಗೆ ಕರೆದುಕೊಂಡು ಹೋಗಿದ್ದರು. ಅಲ್ಲಿ ಎಷ್ಟು ಗಂಟೆ ಕಾದರು ಗೊತ್ತಾ? ಅದನ್ನು ನೋಡಿಯೇ ಚಿಕ್ಕನಗೌಡರ ವಾಪಸ್ ಬಿಜೆಪಿಗೆ ಬಂದಿದ್ದಾರೆ ಎಂದರು. ಶೆಟ್ಟರ್ ವಾಪಸ್ ಬಿಜೆಪಿಗೆ ಬರುವ ವಿಚಾರವಾಗಿ ಮಾತನಾಡಿದ ಟೆಂಗಿನಕಾಯಿ, ನಮ್ಮ ತತ್ವ ಸಿದ್ದಾಂತ ಒಪ್ಪಿ ಬರೋರಿಗೆ ಸ್ವಾಗತ ಎಂದರು.

ಈ ಮೊದಲು ಕಾಂಗ್ರೆಸ್​ನಲ್ಲಿ ಮನೆಯೊಂದು ಮೂರು ಬಾಗಿಲಿತ್ತು. ಪಂಚ ರಾಜ್ಯಗಳ ಚುನಾವಣೆ ಫಲಿತಾಂಶದಿಂದ ಕಾಂಗ್ರೆಸ್​ನಲ್ಲಿ ಎಷ್ಟು ಬಾಗಿಲು ಆಗತ್ತೆ ಕಾದು ನೋಡಬೇಕು. ಫಲಿತಾಂಶದ ಎಫೆಕ್ಟ್ ಕರ್ನಾಟಕದ ಮೇಲೆ ತಟ್ಟತ್ತದೆ. ಎಪ್ರೀಲ್ ಮೇ ವೇಳೆಗೆ ರಾಜಕೀಯದಲ್ಲಿ‌ ಬದಲಾವಣೆಯಾಗಲಿದೆ ಎಂದರು.

ಮೂರು ರಾಜ್ಯಗಳಲ್ಲಿ ಬಿಜೆಪಿ ಅದ್ಭುತವಾದ ಜಯ ಸಾಧಿಸಿದೆ. ಪ್ರಲ್ಹಾದ್ ಜೋಶಿಯವರು ರಾಜಸ್ತಾನದಲ್ಲಿ ಚುನಾವಣಾ ಉಸ್ತುವಾರಿ ವಹಿಸಿದ್ದರು. ಪ್ರಧಾನಿಗಳ ನೇತ್ರತ್ವದಲ್ಲಿ ಅಭೂತಪೂರ್ವ ಜಯ ಸಿಕ್ಕಿದೆ. ಕಾಂಗ್ರೆಸ್ ಗ್ಯಾರಂಟಿ ನಡಿಲಿಲ್ಲ. ಓನ್ಲಿ ಗ್ಯಾರಂಟಿ ಅಂದರೆ ಅದು ಮೋದಿಯವರು ಮತ್ತು ಬಿಜೆಪಿ ಎಂದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ