ಸೋಂಕಿನಿಂದ ಮುಕ್ತಿಗಾಗಿ ಕೊರೊನಾ ಮಾರಮ್ಮ ಗುಡಿ ಸ್ಥಾಪನೆ; ವಿಷಯ ತಿಳಿದ ಅಧಿಕಾರಿಗಳಿಂದ ಖಡಕ್ ಎಚ್ಚರಿಕೆ!
ಜಿಲ್ಲಾ ಆಡಳಿತ ಅಧಿಕಾರಿಗಳ ಪ್ರಕಾರ, ಗುರುವಾರ ಮಧ್ಯರಾತ್ರಿ ಮಾಜಿ ಗ್ರಾಮ ಪಂಚಾಯತಿ ಸದಸ್ಯೆ ಯಶೋಧಮ್ಮ ಎಂಬವರು ಪೂಜಾರಿ ಹಾಗೂ ಸ್ಥಳೀಯ ಕೆಲ ಜನರೊಂದಿಗೆ ಸೇರಿ ಪ್ರಾರ್ಥನೆ ಮಾಡಿ ಈ ಕೊರೊನಾ ಮಾರಮ್ಮ ಗುಡಿ ಸ್ಥಾಪಿಸಿದ್ದಾರೆ.
ಚಾಮರಾಜನಗರ: ಕೊರೊನಾ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ನಡುವೆ ಕೊವಿಡ್-19 ಸೋಂಕಿನಿಂದ ಮುಕ್ತಿ ಸಿಗಲು ಜನರು ವಿವಿಧ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಸಾಂಕ್ರಾಮಿಕ ರೋಗದಿಂದ ಪಾರಾಗಲು ಪ್ರಯತ್ನಿಸುತ್ತಲೇ ಇದ್ದಾರೆ. ಈ ನಡುವೆ ನಮ್ಮ ನಂಬಿಕೆ, ಮೂಢನಂಬಿಕೆಗಳಿಂದ ಕೆಲವೆಡೆ ಸಮಸ್ಯೆ ಉಂಟಾದದ್ದೂ ಇದೆ. ಅಂತಹ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಮಧುವನಹಳ್ಳಿ ಎಂಬಲ್ಲಿ ನಡೆದಿದೆ. ಹಳ್ಳಿಯಲ್ಲಿ ಕೊರೊನಾ ಮಾರಮ್ಮ ಗುಡಿ ಸ್ಥಾಪಿಸಲಾಗಿದೆ. ಕೊರೊನಾ ತೊಲಗುವಂತೆ ಮಾಡಲು ಅಕ್ರಮವಾಗಿ ಈ ಗುಡಿ ಕಟ್ಟಿರುವುದು ಸಮಸ್ಯೆಗೆ ಕಾರಣವಾಗಿದೆ.
ಜಿಲ್ಲಾ ಆಡಳಿತ ಅಧಿಕಾರಿಗಳ ಪ್ರಕಾರ, ಗುರುವಾರ ಮಧ್ಯರಾತ್ರಿ ಮಾಜಿ ಗ್ರಾಮ ಪಂಚಾಯತಿ ಸದಸ್ಯೆ ಯಶೋಧಮ್ಮ ಎಂಬವರು ಪೂಜಾರಿ ಹಾಗೂ ಸ್ಥಳೀಯ ಕೆಲ ಜನರೊಂದಿಗೆ ಸೇರಿ ಪ್ರಾರ್ಥನೆ ಮಾಡಿ ಈ ಕೊರೊನಾ ಮಾರಮ್ಮ ಗುಡಿ ಸ್ಥಾಪಿಸಿದ್ದಾರೆ.
ಮೂಲಗಳ ಮಾಹಿತಿಯ ಪ್ರಕಾರ, ಕೊಳ್ಳೇಗಾಲ ತಹಶೀಲ್ದಾರ್ ಕೆ. ಕುನಾಲ್ ಹಾಗೂ ಸಬ್ ಇನ್ಸ್ಪೆಕ್ಟರ್ ಅಶೋಕ್ ಮಧುವನಹಳ್ಳಿಗೆ ಭೇಟಿ ನೀಡಿ ಗುಡಿಯ ಸ್ಥಳವನ್ನು ತೆರೆಸಿದ್ದಾರೆ. ಇಂತಹ ಅಕ್ರಮ, ದಾರಿ ತಪ್ಪಿಸುವ ಕೆಲಸ ಮಾಡದಂತೆ ಯಶೋಧಮ್ಮಗೆ ಎಚ್ಚರಿಕೆಯನ್ನೂ ಕೊಟ್ಟಿದ್ದಾರೆ.
18ನೇ ಶತಮಾನದ ಅಂತ್ಯದಲ್ಲಿ ಹಾಗೂ 19ನೇ ಶತಮಾನದ ಆರಂಭದಲ್ಲಿ ಉಂಟಾದ ಪ್ಲೇಗ್ ಮಹಾಮಾರಿಯ ಸಂದರ್ಭ, ಬೆಂಗಳೂರು ಹಾಗೂ ರಾಜ್ಯದ ಗ್ರಾಮೀಣ ಭಾಗದಲ್ಲಿ ಮಾರಮ್ಮನ ಗುಡಿಯನ್ನು ಸ್ಥಾಪಿಸಿದ್ದರು. ಪ್ಲೇಗ್ ರೋಗವು ಮಾರಮ್ಮನ ಶಾಪದಿಂದ ಬಂದಿದೆ ಎಂದು ನಂಬಿದ್ದರು. ಅದಕ್ಕಾಗಿ ಪ್ಲೇಗ್ ಮಾರಮ್ಮನನ್ನು ಸ್ಥಾಪಿಸಿದ್ದರು. ಅಂತಹ ಕೆಲ ದೇವಾಲಯಗಳು ಇಂದಿಗೂ ಇವೆ.
Amid #COVID19 pandemic, a former gram panchayat president along with few villagers in #Karnataka‘s Chamarajanagar district consecrated goddess “Corona Maramma” to protect people from the virus. Place of worship now cleared by the district administration. @IndianExpress pic.twitter.com/79joc3N2oh
— Darshan Devaiah B P (@DarshanDevaiahB) May 24, 2021
ತಮಿಳುನಾಡಿನಲ್ಲಿ ಕೂಡ ಇಂತಹುದೇ ಗುಡಿ ನಿರ್ಮಾಣವಾದ ಬಗ್ಗೆ ಸುದ್ದಿ ಹರಿದಾಡಿತ್ತು. ಭಕ್ತಿ, ನಂಬಿಕೆಯಲ್ಲಿ ತೊಡಗಿರುವ ಜನರು ಕೊರೊನಾ ವೈರಸ್ಗೆ ದೇವರ ಸ್ವರೂಪ ನೀಡಿದ್ದರು. ಕೊಯಮತ್ತೂರಿನ ಜನರು ‘ಕೊರೊನಾ ದೇವಿ’ ಎಂಬ ದೇಗುಲವನ್ನು ನಿರ್ಮಿಸಿ ಸೋಂಕು ಹರಡುವಿಕೆಯನ್ನು ಕಡಿಮೆ ಮಾಡು ಎಂದು ಭಕ್ತಿಯಿಂದ ಪೂಜಿಸಿದ್ದರು.
ಕೊರೊನಾ ಸೋಂಕು ಹರಡುವಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸೋಂಕಿನ ಭೀಕರತೆ ಜನರನ್ನು ಭಯಗೊಳಿಸಿದೆ. ಸೋಂಕು ಹರಡದಂತೆ ವಿಶೇಷ ಪೂಜೆ ಕೈಗೊಳ್ಳುವ ಮೂಲಕ ತಮಿಳು ನಾಡಿನ ಕೊಯಮತ್ತೂರು ಜನರು ದೇವಿಯ ಮೊರೆ ಹೋಗಿದ್ದರು. ಆಶ್ಚರ್ಯವೇನೆಂದರೆ ‘ಕೊರೊನಾ ದೇವಿ’ ಎಂಬ ದೇಗುಲವನ್ನು ನಿರ್ಮಿಸಿ ವಿಶೇಷ ಪೂಜೆ ಜತೆಗೆ ಕೊರೊನಾ ಸೋಂಕು ಬಹುಬೇಗ ನಿಲ್ಲುವಂತೆ ಪ್ರಾರ್ಥಿಸಿದ್ದರು.
ಇದನ್ನೂ ಓದಿ: Karnataka Covid Update: ಬೆಂಗಳೂರಿನ ಸೋಂಕಿತರ ಸಂಖ್ಯೆಯಲ್ಲಿ ಗಣನೀಯ ಇಳಿಕೆ; ರಾಜ್ಯದಲ್ಲಿ 25,311 ಜನರಿಗೆ ಕೊರೊನಾ ದೃಢ
ಕೊರೊನಾ ವಿರುದ್ಧ ಹೋರಾಡಿ ಗೆದ್ದ 107 ವರ್ಷದ ವೃದ್ಧೆ; ಬೆಂಗಳೂರಿನ ಆಸ್ಪತ್ರೆಯಿಂದ ಇಂದು ಶತಾಯುಷಿ ಡಿಸ್ಚಾರ್ಜ್
Published On - 11:17 pm, Mon, 24 May 21