ಕೊರೊನಾದಿಂದ ವಾಸಿಯಾದರೂ ಕಂಟಕ ತಪ್ಪಿದ್ದಲ್ಲ! ಎಚ್ಚರಾ..

| Updated By: ಸಾಧು ಶ್ರೀನಾಥ್​

Updated on: Jul 31, 2020 | 10:26 AM

ಬೆಂಗಳೂರು: ಕೊರೊನಾದಿಂದ ಗುಣಮುಖವಾದ್ರೂ ಕಂಟಕ ತಪ್ಪಿದ್ದಲ್ಲ. ಕೊರೊನಾ ಸೋಂಕಿಗೊಳಗಾದವರನ್ನ ಇದೀಗ ಹಲವಾರು ಇತರೆ ಆರೋಗ್ಯ ಸಮಸ್ಯೆಗಳು ಸಹ ಕಾಡ್ತಿದೆಯಂತೆ. ದೇಹವನ್ನೇ ಡ್ಯಾಮೇಜ್ ಮಾಡ್ತಿರೋ ಕಿಲ್ಲರ್ ವೈರಸ್​ನಿಂದ ಕೆಲವರಲ್ಲಿ ಹೃದಯ ಸಮಸ್ಯೆ ಕಾಣಿಸಿಕೊಳ್ತಿದೆ. ಜೊತೆಗೆ, ಕೊರೊನಾದಿಂದ ಗುಣಮುಖರಾದವರಿಗೆ ಪಾರ್ಶ್ವವಾಯು ಅಟ್ಯಾಕ್ ಕೂಡಾ ಆಗುತ್ತೆ ಎಂದು ತಿಳಿದುಬಂದಿದೆ. ಹಾಗಾಗಿ, ಕೊರೊನಾದಿಂದ ಗುಣಮುಖರಾದ ವಯಸ್ಸಾದವರಿಗೆ ಹೆಚ್ಚು ಅಪಾಯ ಕಾದಿದೆಯಂತೆ. ಜೊತೆಗೆ, ಕೊರೊನಾವೈರಸ್​ ಸೋಂಕಿತನ ಸೆಂಟ್ರಲ್ ನರ್ವ್ ಸಿಸ್ಟಂ ಮೇಲೆ ದಾಳಿ ಆಗುತ್ತೆ. ಹೀಗಾಗಿ, ಕೊರೊನಾ ಪೀಡಿತರು ಹೆಚ್ಚು ಖಿನ್ನತೆಗೆ ಒಳಗಾಗುತ್ತಾರೆ. ಖಿನ್ನತೆಗೆ […]

ಕೊರೊನಾದಿಂದ ವಾಸಿಯಾದರೂ ಕಂಟಕ ತಪ್ಪಿದ್ದಲ್ಲ! ಎಚ್ಚರಾ..
Follow us on

ಬೆಂಗಳೂರು: ಕೊರೊನಾದಿಂದ ಗುಣಮುಖವಾದ್ರೂ ಕಂಟಕ ತಪ್ಪಿದ್ದಲ್ಲ. ಕೊರೊನಾ ಸೋಂಕಿಗೊಳಗಾದವರನ್ನ ಇದೀಗ ಹಲವಾರು ಇತರೆ ಆರೋಗ್ಯ ಸಮಸ್ಯೆಗಳು ಸಹ ಕಾಡ್ತಿದೆಯಂತೆ.

ದೇಹವನ್ನೇ ಡ್ಯಾಮೇಜ್ ಮಾಡ್ತಿರೋ ಕಿಲ್ಲರ್ ವೈರಸ್​ನಿಂದ ಕೆಲವರಲ್ಲಿ ಹೃದಯ ಸಮಸ್ಯೆ ಕಾಣಿಸಿಕೊಳ್ತಿದೆ. ಜೊತೆಗೆ, ಕೊರೊನಾದಿಂದ ಗುಣಮುಖರಾದವರಿಗೆ ಪಾರ್ಶ್ವವಾಯು ಅಟ್ಯಾಕ್ ಕೂಡಾ ಆಗುತ್ತೆ ಎಂದು ತಿಳಿದುಬಂದಿದೆ. ಹಾಗಾಗಿ, ಕೊರೊನಾದಿಂದ ಗುಣಮುಖರಾದ ವಯಸ್ಸಾದವರಿಗೆ ಹೆಚ್ಚು ಅಪಾಯ ಕಾದಿದೆಯಂತೆ.

ಜೊತೆಗೆ, ಕೊರೊನಾವೈರಸ್​ ಸೋಂಕಿತನ ಸೆಂಟ್ರಲ್ ನರ್ವ್ ಸಿಸ್ಟಂ ಮೇಲೆ ದಾಳಿ ಆಗುತ್ತೆ. ಹೀಗಾಗಿ, ಕೊರೊನಾ ಪೀಡಿತರು ಹೆಚ್ಚು ಖಿನ್ನತೆಗೆ ಒಳಗಾಗುತ್ತಾರೆ. ಖಿನ್ನತೆಗೆ ಒಳಗಾದ ಸೋಂಕಿತರು ಆತ್ಮಹತ್ಯೆ ಮಾಡಿಕೊಳ್ಳುವ ಸಾಧ್ಯತೆ ಸಹ ಇದೆ. ಆದ್ದರಿಂದ ಸೋಂಕಿತರು ಆತ್ಮಹತ್ಯೆ ಮಾಡಿಕೊಳ್ತಿರೋ ಪ್ರಕರಣಗಳು ಹೆಚ್ಚಾಗಿವೆ.

 

Published On - 9:07 am, Fri, 31 July 20