Covid 19 Karnataka Update: ಕರ್ನಾಟಕದ 349 ಮಂದಿಗೆ ಕೊರೊನಾ ಸೋಂಕು, 14 ಸಾವು

Covid 19 Karnataka Update: ಕರ್ನಾಟಕದ 349 ಮಂದಿಗೆ ಕೊರೊನಾ ಸೋಂಕು, 14 ಸಾವು
ಪ್ರಾತಿನಿಧಿಕ ಚಿತ್ರ

ಪಾಸಿಟಿವಿಟಿ ಪ್ರಮಾಣ ಶೇ 0.41 ಹಾಗೂ ಸೋಂಕಿತರ ಸಾವಿನ ಸರಾಸರಿ ಶೇ 4.01 ಇದೆ

TV9kannada Web Team

| Edited By: Ghanashyam D M | ಡಿ.ಎಂ.ಘನಶ್ಯಾಮ

Oct 19, 2021 | 7:39 PM

ಬೆಂಗಳೂರು: ಕರ್ನಾಟಕದಲ್ಲಿ ಮಂಗಳವಾರ ಒಟ್ಟು 349 ಮಂದಿಯಲ್ಲಿ ಕೊವಿಡ್ ಸೋಂಕು ದೃಢಪಟ್ಟಿದ್ದು, 14 ಜನರು ಸಾವನ್ನಪ್ಪಿದ್ದಾರೆ. ಒಟ್ಟು 399 ಮಂದಿ ಕೊವಿಡ್​ನಿಂದ ಚೇತರಿಸಿಕೊಂಡು ವಿವಿಧ ಆಸ್ಪತ್ರೆಗಳಿಂದ ಡಿಸ್​ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ ಪ್ರಸ್ತುತ 9100 ಸಕ್ರಿಯ ಪ್ರಕರಣಗಳಿದ್ದು, ಪಾಸಿಟಿವಿಟಿ ಪ್ರಮಾಣ ಶೇ 0.41 ಹಾಗೂ ಸೋಂಕಿತರ ಸಾವಿನ ಸರಾಸರಿ ಶೇ 4.01 ಇದೆ.

ರಾಜ್ಯದಲ್ಲಿ ಈವರೆಗೆ ಒಟ್ಟು 29,84,022 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. 29,36,926 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ರಾಜ್ಯದಲ್ಲಿ ಪ್ರಸ್ತುತ 9,100 ಸಕ್ರಿಯ ಪ್ರಕರಣಗಳಿದ್ದು, ಈವರೆಗೆ 37,967 ಜನರು ಸಾವನ್ನಪ್ಪಿದ್ದಾರೆ.

ಬೆಂಗಳೂರು ನಗರದಲ್ಲಿ 161 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 125 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಐವರು ಮೃತಪಟ್ಟಿದ್ದಾರೆ. ನಗರದ ಒಟ್ಟು ಸೋಂಕಿತರ ಸಂಖ್ಯೆ 12,49,662 ಇದ್ದರೆ, ಚೇತರಿಸಿಕೊಂಡವರ ಸಂಖ್ಯೆ 12,26,666 ಇದೆ. ನಗರದಲ್ಲಿ ಪ್ರಸ್ತುತ 6,776 ಸಕ್ರಿಯ ಪ್ರಕರಣಗಳಿವೆ. ನಗರದಲ್ಲಿ ಕೊವಿಡ್​ನಿಂದ ಈವರೆಗೆ 16,219 ಮಂದಿ ಸಾವನ್ನಪ್ಪಿದ್ದಾರೆ.

ಯಾವ ಜಿಲ್ಲೆಯಲ್ಲಿ ಎಷ್ಟು ಮಂದಿಗೆ ಸೋಂಕು? ಬೆಂಗಳೂರು ನಗರ 161, ಮೈಸೂರು 37, ದಕ್ಷಿಣ ಕನ್ನಡ 24, ಹಾಸನ 23, ಉತ್ತರ ಕನ್ನಡ 19, ತುಮಕೂರು 14, ಶಿವಮೊಗ್ಗ 12, ಚಿಕ್ಕಮಗಳೂರು 8, ಕೋಲಾರ, ಬೆಳಗಾವಿ 5, ಮಂಡ್ಯ, ರಾಮನಗರ, ಚಿತ್ರದುರ್ಗ, ಕೊಡಗು 4, ಬೆಂಗಳೂರು ಗ್ರಾಮಾಂತರ, ಧಾರವಾಡ, ಕೊಪ್ಪಳ 2, ದಾವಣಗೆರೆ, ಚಾಮರಾಜನಗರ, ಬೀದರ್, ಬಳ್ಳಾರಿ, ವಿಜಯಪುರ, ಯಾದಗಿರಿ, ರಾಯಚೂರು 1.

ಯಾವ ಜಿಲ್ಲೆಯಲ್ಲಿ ಎಷ್ಟು ಮಂದಿ ಸಾವು? ಬೆಂಗಳೂರು ನಗರ 5, ಉಡುಪಿ 3 ದಕ್ಷಿಣ ಕನ್ನಡ, ಧಾರವಾಡ, ಕೊಡಗು, ಮೈಸೂರು, ತುಮಕೂರು 1.

ಇದನ್ನೂ ಓದಿ: China Economy: ಕೊರೊನಾ ಬಿಕ್ಕಟ್ಟಿನ ನಂತರ ಮೊದಲ ಬಾರಿಗೆ ಚೀನಾದಲ್ಲಿ ರಿಯಲ್ ಎಸ್ಟೇಟ್, ನಿರ್ಮಾಣ ಕ್ಷೇತ್ರ ಕುಸಿತ ಇದನ್ನೂ ಓದಿ: ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪಗೆ ಸೂಪರ್ ಕೊರೊನಾ ವಾರಿಯರ್ ಪ್ರಶಸ್ತಿ ಪ್ರದಾನ

Follow us on

Related Stories

Most Read Stories

Click on your DTH Provider to Add TV9 Kannada