Covid-19 Karnataka Update: ಕರ್ನಾಟಕದಲ್ಲಿ 26,962 ಮಂದಿಗೆ ಕೊರೊನಾ ಸೋಂಕು, 190 ಸಾವು

|

Updated on: Apr 23, 2021 | 8:08 PM

ಬೆಂಗಳೂರಿನಲ್ಲಿ ಒಂದೇ ದಿನ 16,662 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, 124 ಜನರು ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಕೊರೊನಾ ಸೋಂಕಿತರ ಒಟ್ಟು ಸಂಖ್ಯೆ 12,74,959ಕ್ಕೆ (12.74 ಲಕ್ಷ) ಏರಿಕೆಯಾಗಿದೆ.

Covid-19 Karnataka Update: ಕರ್ನಾಟಕದಲ್ಲಿ 26,962 ಮಂದಿಗೆ ಕೊರೊನಾ ಸೋಂಕು, 190 ಸಾವು
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು: ಕರ್ನಾಟಕದಲ್ಲಿ ಶುಕ್ರವಾರ ಒಂದೇ ದಿನ 26,962 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. 190 ಮಂದಿ ಸಾವನ್ನಪ್ಪಿದ್ದಾರೆ. ಬೆಂಗಳೂರಿನಲ್ಲಿ ಒಂದೇ ದಿನ 16,662 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, 124 ಜನರು ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಕೊರೊನಾ ಸೋಂಕಿತರ ಒಟ್ಟು ಸಂಖ್ಯೆ 12,74,959ಕ್ಕೆ (12.74 ಲಕ್ಷ) ಏರಿಕೆಯಾಗಿದೆ. ಮೃತರ ಒಟ್ಟು ಸಂಖ್ಯೆ 14,075 ತಲುಪಿದೆ. ಸೋಂಕಿತರ ಪೈಕಿ 10,46,554 ಜನರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. 2,14,311 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ರಾಜ್ಯದಲ್ಲಿ ಇಂದು ಕೊರೊನಾ ಸೋಂಕಿನಿಂದ 190 ಜನರು ಸಾವನ್ನಪ್ಪಿದ್ದಾರೆ. ಬೆಂಗಳೂರು ನಗರ ಜಿಲ್ಲೆಯಲ್ಲಿ ಅತಿಹೆಚ್ಚು ಅಂದರೆ, 124 ಜನರು ಸಾವನಪ್ಪಿದ್ದಾರೆ. ಹಾಸನ ಜಿಲ್ಲೆಯಲ್ಲಿ ಕೊರೊನಾ ಸೋಂಕಿನಿಂದ 8, ಕಲಬುರಗಿ 7, ಬಳ್ಳಾರಿ 6, ತುಮಕೂರು, ಕೋಲಾರ, ಧಾರವಾಡ ಜಿಲ್ಲೆಗಳಲ್ಲಿ ಕೊರೊನಾ ಸೋಂಕಿಗೆ ಐವರು, ಮೈಸೂರು, ಮಂಡ್ಯ, ಬೆಂಗಳೂರು ಗ್ರಾಮಾಂತರ, ಹಾವೇರಿ ಜಿಲ್ಲೆಗಳಲ್ಲಿ ತಲಾ ನಾಲ್ವರು, ಬೆಳಗಾವಿ, ಬೀದರ್, ಚಾಮರಾಜನಗರ, ಚಿಕ್ಕಬಳ್ಳಾಪುರ, ವಿಜಯಪುರ ಜಿಲ್ಲೆಗಳಲ್ಲಿ ತಲಾ ಇಬ್ಬರು ಮೃತಪಟ್ಟಿದ್ದಾರೆ. ಚಿಕ್ಕಮಗಳೂರು, ರಾಮನಗರ, ಶಿವಮೊಗ್ಗ, ಯಾದಗಿರಿ ಜಿಲ್ಲೆಗಳಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಈವರೆಗೆ ಕೊರೊನಾದಿಂದ 14,075 ಜನರು ಸಾವನ್ನಪ್ಪಿದ್ದಾರೆ.

ಯಾವ ಜಿಲ್ಲೆಯಲ್ಲಿ ಎಷ್ಟು ಮಂದಿಗೆ ಸೋಂಕು?
ರಾಜ್ಯದಲ್ಲಿಂದು ಹೊಸದಾಗಿ 26,962 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಪೈಕಿ ಬೆಂಗಳೂರು ನಗರದಲ್ಲಿ ಅತಿಹೆಚ್ಚು ಅಂದರೆ, 16,662 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ತುಮಕೂರು ಜಿಲ್ಲೆಯಲ್ಲಿ ಸತತವಾಗಿ ಸೋಂಕು ಪ್ರಕರಣಗಳ ಸಂಖ್ಯೆ ಒಂದು ಸಾವಿರ ದಾಟುತ್ತಿದೆ. ಇಂದು ತುಮಕೂರು ಜಿಲ್ಲೆಯಲ್ಲಿ 1,004 ಪ್ರಕರಣಗಳು ದೃಢಪಟ್ಟಿದೆ. ಕಲಬುರಗಿ 742, ಬಳ್ಳಾರಿ 695, ಮೈಸೂರು 645, ಬೆಂಗಳೂರು ಗ್ರಾಮಾಂತರ 588, ಮಂಡ್ಯ 519, ಕೋಲಾರ 504, ದಕ್ಷಿಣ ಕನ್ನಡ 485, ಧಾರವಾಡ 472, ಚಿಕ್ಕಬಳ್ಳಾಪುರ 471, ವಿಜಯಪುರ 429, ರಾಯಚೂರು 428, ಬೀದರ್ 416, ಕೊಡಗು 295, ಉಡುಪಿ 282, ಚಾಮರಾಜನಗರ 249, ಚಿಕ್ಕಮಗಳೂರು 229, ಶಿವಮೊಗ್ಗ 225, ರಾಮನಗರ 206, ದಾವಣಗೆರೆ 200, ಉತ್ತರ ಕನ್ನಡ 181, ಹಾಸನ 148, ಚಿತ್ರದುರ್ಗ 133, ಬೆಳಗಾವಿ 120, ಯಾದಗಿರಿ 114, ಬಾಗಲಕೋಟೆ 88, ಕೊಪ್ಪಳ 84, ಗದಗ 74, ಹಾವೇರಿ 74 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.

(Coronavirus Karnataka update 26962 covid19 infections 190 dead on April 23)

ಇದನ್ನೂ ಓದಿ: Coronavirus India Update: ದೇಶದಲ್ಲಿ ಒಂದೇ ದಿನ 2,263 ಸಾವು, 3.32 ಲಕ್ಷ ಕೊವಿಡ್ ಪ್ರಕರಣ ದಾಖಲು

ಇದನ್ನೂ ಓದಿ: Covid-19 Vaccine: ಮೇ 1ರಿಂದ 18 ವರ್ಷದ ಮೇಲ್ಪಟ್ಟ ಎಲ್ಲರಿಗೂ ಕೊವಿಡ್ ಲಸಿಕೆ

Published On - 7:54 pm, Fri, 23 April 21