ಬೆಂಗಳೂರಿನಲ್ಲಿ 15 ದಿನಗಳೊಳಗೆ 71,827 ಸೋಂಕಿತರು ಪತ್ತೆ.. 71 ಸಕ್ರಿಯ ಸೋಂಕಿತರ ಜತೆ 36 ಲಕ್ಷಕ್ಕೂ ಹೆಚ್ಚು ಜನರು ಸಂಪರ್ಕ!

ಬೆಂಗಳೂರಿನಲ್ಲಿ 15 ದಿನಗಳೊಳಗೆ 71,827 ಸೋಂಕಿತರು ಪತ್ತೆ.. 71 ಸಕ್ರಿಯ ಸೋಂಕಿತರ ಜತೆ 36 ಲಕ್ಷಕ್ಕೂ ಹೆಚ್ಚು ಜನರು ಸಂಪರ್ಕ!
ಪ್ರಾತಿನಿಧಿಕ ಚಿತ್ರ

ಆಘಾತಕಾರಿ ವಿಷಯವೆಂದರೆ 71 ಸಕ್ರಿಯ ಸೋಂಕಿತರ ಜತೆಯಲ್ಲಿ 36 ಲಕ್ಷದ 23 ಸಾವಿರ ಜನರು ಪ್ರೈಮರಿ ಹಾಗೂ ಸೆಕೆಂಡರಿ ಕಾಂಟ್ಯಾಕ್ಟ್​ನಲ್ಲಿ ಇದ್ದಾರೆ ಎಂಬ ಅಂಶ ಬಯಲಾಗಿದೆ.

Skanda

| Edited By: Ayesha Banu

Apr 16, 2021 | 8:51 AM


ಬೆಂಗಳೂರು: ಭಾರತದಲ್ಲಿ ಕೊರೊನಾ ಎರಡನೇ ಅಲೆ ವ್ಯಾಪಕವಾಗಿ ಹಬ್ಬುತ್ತಿದ್ದು, ದೇಶದಲ್ಲಿ ಕಳೆದ 24 ಗಂಟೆ ಅವಧಿಯಲ್ಲಿ 2,16,850 ಕೊರೊನಾ ಪ್ರಕರಣಗಳು ದಾಖಲಾಗಿವೆ. ಆ ಮೂಲಕ ಇದೇ ಮೊದಲ ಬಾರಿಗೆ ದಿನವೊಂದರಲ್ಲಿ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಇತ್ತ ರಾಜ್ಯದಲ್ಲಿಯೂ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರುತ್ತಿದ್ದು, ಕೇವಲ 15 ದಿನಗಳಲ್ಲಿ 71,827 ಜನ ಸೋಂಕಿತರು ಪತ್ತೆಯಾಗಿದ್ದಾರೆ. ಅಲ್ಲದೇ ನಿನ್ನೆ ಒಂದೇ ದಿನ 10,497 ಸೋಂಕಿತರು ಪತ್ತೆಯಾಗಿದ್ದು ಬೆಂಗಳೂರಿನಲ್ಲಿ ಈ ವರೆಗೆ 24 ಗಂಟೆಯಲ್ಲಿ ದಾಖಲಾದ ಗರಿಷ್ಠ ಪ್ರಮಾಣದ ಪ್ರಕರಣ ಎಂಬ ದಾಖಲೆ ಸೃಷ್ಟಿಯಾಗಿದೆ.

ಕೊರೊನಾ ಮೊದಲ ಅಲೆ ಸಂದರ್ಭದಲ್ಲಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಗರಿಷ್ಠ 5121 ಸೋಂಕಿತರು ದಿನವೊಂದರಲ್ಲಿ ಪತ್ತೆಯಾಗಿದ್ದರು. ಆದರೆ, ಈಗ ಎರಡನೇ ಅಲೆಯ ಆರಂಭಿಕ ಹಂತದಲ್ಲಿಯೇ ಈ ಸಂಖ್ಯೆ 10 ಸಾವಿರ ದಾಟಿರುವುದು ಆತಂಕ ಸೃಷ್ಟಿಸಿದೆ. ಜತೆಗೆ ನಗರದಲ್ಲಿ ಸೋಂಕಿತರ ಸಂಖ್ಯೆಯಲ್ಲಿ ಏರಿಕೆಯಾಗುತ್ತಲೇ ಇದ್ದು, ಆಸ್ಪತ್ರೆಯಿಂದ ಬಿಡುಗಡೆಗೊಳ್ಳುತ್ತಿರುವವರ ಸಂಖ್ಯೆ ಕಡಿಮೆಯಾಗಿದೆ. ಇದು ಅರೋಗ್ಯ ಇಲಾಖೆಗೆ, ವೈದ್ಯರಿಗೆ ಹೊಸ ಚಿಂತೆ ಹುಟ್ಟುಹಾಕಿದೆ.

ಬೆಂಗಳೂರಿನ ಆಸ್ಪತ್ರೆಗಳಲ್ಲಿ ಕೊರೊನಾ ಸೋಂಕಿನಿಂದ ಸಂಪೂರ್ಣ ಗುಣಮುಖರಾಗಿ ಡಿಸ್ಚಾರ್ಜ್​ ಆಗುತ್ತಿರುವವರ ಸಂಖ್ಯೆ ಕೇವಲ ಶೇ.7.77ರಷ್ಟಿದೆ ಎಂದು ತಿಳಿದುಬಂದಿದೆ. ಅಲ್ಲದೇ, ಇನ್ನೂ ಆಘಾತಕಾರಿ ವಿಷಯವೆಂದರೆ 71 ಸಕ್ರಿಯ ಸೋಂಕಿತರ ಜತೆಯಲ್ಲಿ 36 ಲಕ್ಷದ 23 ಸಾವಿರ ಜನರು ಪ್ರೈಮರಿ ಹಾಗೂ ಸೆಕೆಂಡರಿ ಕಾಂಟ್ಯಾಕ್ಟ್​ನಲ್ಲಿ ಇದ್ದಾರೆ ಎಂಬ ಅಂಶ ಬಯಲಾಗಿದೆ.

ಕೊರೊನಾ ಸೋಂಕು ತಡೆಯುವ ಸಲುವಾಗಿ ಬೆಂಗಳೂರು ಸೇರಿದಂತೆ ರಾಜ್ಯದ ಎಂಟು ನಗರಗಳಲ್ಲಿ ಕೊರೊನಾ ಕರ್ಫ್ಯೂ ವಿಧಿಸಲಾಗಿದೆಯಾದರೂ ಸೋಂಕಿತರ ಪ್ರಮಾಣವನ್ನು ಕಡಿಮೆ ಮಾಡಲು ಇನ್ನೂ ಕಠಿಣ ಕ್ರಮಗಳ ಅವಶ್ಯಕತೆ ಇದೆ ಎಂಬ ಮಾತು ವೈದ್ಯರ ವಲಯದಿಂದ ಕೇಳಿಬರುತ್ತಿದೆ. ಏಪ್ರಿಲ್​ 18ನೇ ತಾರೀಖು ರಾಜ್ಯ ಸರ್ಕಾರ ಸರ್ವಪಕ್ಷ ಸಭೆ ನಡೆಸಲು ತೀರ್ಮಾನಿಸಿದ್ದು, ಸಭೆಯಲ್ಲಿ ಎಲ್ಲಾ ಪಕ್ಷಗಳ ನಾಯಕರ ಅಭಿಪ್ರಾಯ ಸಂಗ್ರಹಿಸಿ ಕೊರೊನಾ ತಡೆಗೆ ಲಾಕ್​ಡೌನ್​ ಮಾಡಬೇಕೋ? ಬೇಡವೋ? ಹಾಗೂ ಯಾವೆಲ್ಲಾ ರೀತಿಯ ನಿಯಮಾವಳಿಗಳನ್ನು ರೂಪಿಸಬೇಕು ಎಂಬ ಕುರಿತಾಗಿ ಚರ್ಚಿಸಲಾಗುತ್ತದೆ.

ಇದನ್ನೂ ಓದಿ:
India Corona Cases: ಕೊರೊನಾ 2ನೇ ಅಲೆ ಅಬ್ಬರಕ್ಕೆ ತತ್ತರಿಸಿದ ಭಾರತ.. ಇಂದು 2 ಲಕ್ಷ 16 ಸಾವಿರ ಕೇಸ್ ಪತ್ತೆ 

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಿಯಂತ್ರಣ ತಪ್ಪಿದ ಕೊರೊನಾ; ಸಮುದಾಯಕ್ಕೆ ಹರಡಿದ ಶಂಕೆ

(Coronavirus second wave 71,827 covid patients found within 15 days in Bengaluru)

Follow us on

Related Stories

Most Read Stories

Click on your DTH Provider to Add TV9 Kannada