Covid-19 Karnataka Update: ಕರ್ನಾಟಕದಲ್ಲಿ 6,976 ಜನರಿಗೆ ಕೊರೊನಾ ದೃಢ, 35 ಸಾವು
ಕೊರೊನಾ ಸೋಂಕಿನಿಂದ ಇಂದು ಒಟ್ಟು 35 ಜನರು ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಈವರೆಗೆ ಕೊರೊನಾದಿಂದ 12,731 ಜನರು ಮೃತಪಟ್ಟಿದ್ದಾರೆ. ಸೋಂಕಿತರ ಪೈಕಿ 9,71,556 (9.71 ಲಕ್ಷ) ಜನರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.
ಬೆಂಗಳೂರು: ಕರ್ನಾಟಕದಲ್ಲಿ ಬುಧವಾರ ಒಂದೇ ದಿನ 6,976 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇದರೊಂದಿಗೆ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 10,33,560ಕ್ಕೆ (10.33 ಲಕ್ಷ) ಏರಿಕೆಯಾಗಿದೆ. ಕೊರೊನಾ ಸೋಂಕಿನಿಂದ ಇಂದು ಒಟ್ಟು 35 ಜನರು ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಈವರೆಗೆ ಕೊರೊನಾದಿಂದ 12,731 ಜನರು ಮೃತಪಟ್ಟಿದ್ದಾರೆ. ಸೋಂಕಿತರ ಪೈಕಿ 9,71,556 (9.71 ಲಕ್ಷ) ಜನರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. 49,254 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ಪ್ರತಿದಿನದಂತೆ ಇಂದೂ ಸಹ ಜಿಲ್ಲಾವಾರು ಲೆಕ್ಕಾಚಾರದಲ್ಲಿ ಬೆಂಗಳೂರು ನಗರದಿಂದಲೇ ಅತಿಹೆಚ್ಚು ಸೋಂಕು ಅಂದರೆ 4991 ಪ್ರಕರಣಗಳು ವರದಿಯಾಗಿವೆ. ಮೈಸೂರು 243, ಬೀದರ್ 214, ಕಲಬುರಗಿ 205, ತುಮಕೂರು 204, ದಕ್ಷಿಣ ಕನ್ನಡ 112, ಬೆಳಗಾವಿ 101 ಜಿಲ್ಲೆಗಳಲ್ಲಿ ಸೋಂಕಿತರ ಸಂಖ್ಯೆ ಮೂರಂಕಿ ದಾಟಿದೆ. ಮೈಸೂರು, ಬೀದರ್, ಕಲಬುರಗಿ ಮತ್ತು ತುಮಕೂರಿನಲ್ಲಿ 200ಕ್ಕೂ ಹೆಚ್ಚು ಮಂದಿಯಲ್ಲಿ ಸೋಂಕು ಪತ್ತೆಯಾಗಿರುವುದು ಗಮನಾರ್ಹ ಸಂಗತಿ.
ಉಳಿದಂತೆ ಹಾಸನ 90, ಉಡುಪಿ 89, ಧಾರವಾಡ 88, ಬೆಂಗಳೂರು ಗ್ರಾಮಾಂತರ 70, ಮಂಡ್ಯ 58, ವಿಜಯಪುರ 50, ಬಳ್ಳಾರಿ 49, ಚಾಮರಾಜನಗರ 39, ಚಿಕ್ಕಮಗಳೂರು 38, ಚಿಕ್ಕಬಳ್ಳಾಪುರ 37, ಉತ್ತರ ಕನ್ನಡ 35, ಶಿವಮೊಗ್ಗ 34, ಯಾದಗಿರಿ 34, ಕೋಲಾರ 29, ರಾಯಚೂರು 28, ರಾಮನಗರ 28, ಕೊಪ್ಪಳ 24, ಚಿತ್ರದುರ್ಗ 20, ದಾವಣಗೆರೆ 20, ಬಾಗಲಕೋಟೆ 13, ಹಾವೇರಿ 12, ಗದಗ 11, ಕೊಡಗು 10 ಜಿಲ್ಲೆಗಳಲ್ಲಿ ಪ್ರಕರಣಗಳು ವರದಿಯಾಗಿವೆ. ರಾಜ್ಯದಲ್ಲಿ ಇಂದು ಕೊರೊನಾ ಸೋಂಕಿನಿಂದ ಒಟ್ಟು 35 ಜನರು ಮೃತಪಟ್ಟಿದ್ದಾರೆ. ಬೆಂಗಳೂರಿನಲ್ಲಿ 25 ಮಂದಿ ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಈವರೆಗೆ ಕೊರೊನಾದಿಂದ 12,731 ಜನರು ಸತ್ತಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ಇಂದಿನ 07/04/2021 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ.https://t.co/d0aeUx1KRU @mla_sudhakar @PriyankKharge @BelladArvind @kiranshaw @WFRising @BangaloreBuzz @RCBTweets @NammaKarnataka_@ADinfodeptBIDAR @MangaloreCity pic.twitter.com/DMt7Mq8ZTM
— K’taka Health Dept (@DHFWKA) April 7, 2021
ದಾವಣಗೆರೆ ಜಿಲ್ಲೆಯಲ್ಲಿ ಇಂದು 20 ಜನರಿಗೆ ಕೊರೊನಾ ದೃಢಪಟ್ಟಿದೆ. ದಾವಣಗೆರೆ ನಗರ 14, ಜಗಳೂರು, ಚನ್ನಗಿರಿಯಲ್ಲಿ ತಲಾ 3 ಪ್ರಕರಣಗಳು ಪತ್ತೆಯಾಗಿವೆ. ದಾವಣಗೆರೆ ಜಿಲ್ಲೆಯಲ್ಲಿ 180 ಜನರಲ್ಲಿ ಸೋಂಕು ಸಕ್ರಿಯವಾಗಿದೆ. ಹಾವೇರಿ ಜಿಲ್ಲೆಯಲ್ಲಿ ಇಂದು 12 ಜನರಿಗೆ ಕೊರೊನಾ ದೃಢವಾಗಿದೆ. ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 11,354ಕ್ಕೇರಿಕೆಯಾಗಿದೆ. ರಾಣೆಬೆನ್ನೂರು ತಾಲೂಕು 4, ಹಾವೇರಿ ತಾಲೂಕು 3 ಪ್ರಕರಣಗಳು ಪತ್ತೆಯಾಗಿವೆ. ಹಾವೇರಿ ಜಿಲ್ಲೆಯಲ್ಲಿ 46 ಜನರಲ್ಲಿ ಕೊರೊನಾ ಸೋಂಕು ಸಕ್ರಿಯವಾಗಿದೆ. ಕೊಪ್ಪಳ ಜಿಲ್ಲೆಯಲ್ಲಿ ಇಂದು 20 ಜನರಿಗೆ ಕೊರೊನಾ ದೃಢವಾಗಿದೆ. ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 14,167ಕ್ಕೇರಿಕೆಯಾಗಿದೆ. ಕೊಪ್ಪಳ ತಾಲೂಕಿನಲ್ಲಿ 15 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.
ಮೈಸೂರು ಜಿಲ್ಲೆಯಲ್ಲಿಂದು 243 ಜನರಿಗೆ ಕೊರೊನಾ ದೃಢವಾಗಿದೆ. ಮೈಸೂರು ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 57,169ಕ್ಕೆ ಏರಿದೆ. ಈವರೆಗೆ 54,647 ಜನರು ಗುಣಮುಖರಾಗಿದ್ದಾರೆ. ಈವರೆಗೆ ಕೊರೊನಾದಿಂದ 1,069 ಜನರ ಸಾವನ್ನಪ್ಪಿದ್ದಾರೆ.
ನಿಯಮ ಉಲ್ಲಂಘಿಸಿದ ಹೊಟೆಲ್, ಅಂಗಡಿಗಳಿಗೆ ದಂಡ ಬೆಂಗಳೂರಿನಲ್ಲಿ ಕೊವಿಡ್ ಮಾರ್ಗಸೂಚಿ ಉಲ್ಲಂಘನೆ ಹಿನ್ನೆಲೆಯಲ್ಲಿ ಬೆಂಗಳೂರು ಆಗ್ನೇಯ ವಿಭಾಗದ ಪೊಲೀಸರು ಕಾರ್ಯಾಚರಣೆ ನಡೆಸಿ ಹೋಟೆಲ್, ಅಂಗಡಿಗಳಿಗೆ ದಂಡ ಹಾಕಿದ್ದಾರೆ. ಕೋರಮಂಗಲ, HSR ಲೇಔಟ್ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆದಿದೆ. ಮೋರ್ ಮೆಗಾ ಸ್ಟೋರ್ಗೆ ₹ 25 ಸಾವಿರ, ಎಂಟಿಆರ್, ಮುತ್ತಳ್ಳಿ ವೆಜ್ ಹೋಟೆಲ್ಗೆ ತಲಾ ₹ 10,000, ಕಲ್ಪವೃಕ್ಷ ವೆಜ್ಕೋರ್ಟ್ ಹೋಟೆಲ್ ವಿರುದ್ಧ NDMA ಅಡಿ ಪ್ರಕರಣ ದಾಖಲಿಸಲಾಗಿದೆ.
(Covid 19 Karnataka Update Coronavirus infection confirmed in 6976 people)
ಇದನ್ನೂ ಓದಿ: ಕೊರೊನಾ ಸೋಂಕಿನಿಂದ ಚೇತರಿಸಿಕೊಂಡ ಕೆಲವರಲ್ಲಿ ಮಾನಸಿಕ ಸಮಸ್ಯೆಗಳು
Published On - 10:41 pm, Wed, 7 April 21