ಬೆಂಗಳೂರು, (ಡಿಸೆಂಬರ್ 13): ಈ ಹಿಂದಿನ ಬಿಜೆಪಿ ಸರ್ಕಾರವಧಿಯಲ್ಲಿ ನಡೆದಿದೆ ಎನ್ನಲಾದ ಕೋವಿಡ್ ಅಕ್ರಮ ಆರೋಪಕ್ಕೆ ಸಂಬಂಧಿಸಿದಂತೆ ಇದೀಗ ಎಫ್ಐಆರ್ ದಾಖಲಾಗಿದೆ. ವೈದ್ಯಕೀಯ ಶಿಕ್ಷಣ ಇಲಾಖೆ ಮುಖ್ಯ ಲೆಕ್ಕಾಧಿಕಾರಿ ಡಾ.ಎಂ.ವಿಷ್ಣುಪ್ರಸಾದ್ ಅವರ ದೂರು ಆಧರಿಸಿ ಬೆಂಗಳೂರಿನ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಐವರು ವೈದ್ಯರು, ಲ್ಯಾಗ್ ಎಕ್ಸ್ಪರ್ಟ್ ಕಂಪನಿ ಹಾಗೂ ಜನಪ್ರತಿನಿಧಿಗಳ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಈ ಬಗ್ಗೆ ರಾಜ್ಯ ಸರ್ಕಾರ ಪ್ರಕರಣದ ತನಿಖೆಗೆ SIT ರಚನೆ ಮಾಡುವ ಸಾಧ್ಯತೆ ಇದೆ. ಹೀಗಾಗಿ ಈ ಪ್ರಕರಣ ರಾಜ್ಯ ರಾಜಕಾರಣದಲ್ಲಿ ಸಂಚಲನಕ್ಕೆ ಕಾರಣವಾಗಲಿದೆ.
ಪಿಪಿಇ ಕಿಟ್, N-95 ಮಾಸ್ಕ್ ಖರದಿಯಲ್ಲಿ ಅವ್ಯವಹಾರವಾಗಿರುವುದು ಮೇಲ್ನೋಟಕ್ಕೆ ಕಂಡುಬಂದ ಹಿನ್ನೆಲೆಯಲ್ಲಿ ಹಾಗೂ ನಿಯಮ ಬಾಹಿರವಾಗಿ ಹೆಚ್ಚುವರಿ ಕಿಟ್ ಖರೀದಿಗೆ ಆದೇಶ, ಕೋಟ್ಯಂತರ ಹಣ ಸಂದಾಯದ ಬಳಿಕವೂ ಕಿಟ್ ನೀಡಿಲ್ಲ. ಹಾಗೇ ಷಡ್ಯಂತ್ರ ರೂಪಿಸಿ ಜನರ ಹಣ ದುರ್ಬಳಕೆ ಆರೋಪದಡಿ FIR ದಾಖಲಾಗಿದೆ.
ಒಟ್ಟು 167 ಕೋಟಿಗೂ ಅಧಿಕ ಹಣ ಅಕ್ರಮ ಆರೋಪ ಕೇಳಿಬಂದಿದ್ದು, ಡಾ.ಗಿರೀಶ್, ಜಿ.ಪಿ.ರಘು, .ಮುನಿರಾಜ್, ಲಾಜ್ ಎಕ್ಸ್ಪೋರ್ಟ್, ಪ್ರೂಡೆಂಟ್ ಮ್ಯಾನೆಜ್‌ಮೆಂಟ್ ಸಲೂಷನ್ಸ್ ಕಂಪನಿ ಸೇರಿದಂತೆ ಕೆಲ ಜನಪ್ರತಿನಿಧಿಗಳು, ಸರ್ಕಾರಿ ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಾಗಿದೆ. ಇನ್ನು ಈ ಪ್ರಕರಣದ ತನಿಖೆಗೆ ರಾಜ್ಯ ಸರ್ಕಾರ ಎಸ್ಐಟಿ ರಚನೆ ಮಾಡುವ ಸಾಧ್ಯತೆಗಳಿವೆ. ಹೀಗಾಗಿ ಅಂದಿನ ಸಚಿವರು ಹಾಗು ಕೆಲ ಜನಪ್ರತಿನಿಧಿಗಳ ಎದೆಯಲ್ಲಿ ಢವಢವ ಶುರುವಾಗಿದೆ.
Published On - 11:14 pm, Fri, 13 December 24