- Kannada News Photo gallery Chikkaballapur Nandi Hills' Winter Magic: Cyclone-Enhanced Fog and Tourist Delight, taja suddi
ಸೈಕ್ಲೋನ್ ಎಫೆಕ್ಟ್: ನಂದಿಬೆಟ್ಟವನ್ನು ತಬ್ಬಿದ ಮಂಜು
ಚಳಿಗಾಲದ ಆರಂಭದೊಂದಿಗೆ, ವಿಶ್ವವಿಖ್ಯಾತ ನಂದಿಗಿರಿಧಾಮ ಮಂಜಿನಿಂದ ಆವೃತವಾಗಿದೆ. ಚಂಡಮಾರುತದ ಪ್ರಭಾವದಿಂದ ಮಂಜು ಹೆಚ್ಚಾಗಿದ್ದು, ಪ್ರವಾಸಿಗರಿಗೆ ಸ್ವರ್ಗದ ಅನುಭವ ನೀಡುತ್ತಿದೆ. ಪ್ರೇಮಿಗಳು, ಚಾರಣಿಗರು ಮತ್ತು ಪ್ರಕೃತಿ ಪ್ರಿಯರಿಗೆ ನಂದಿಬೆಟ್ಟ ಆದರ್ಶ ತಾಣವಾಗಿದೆ. ಮಂಜಿನ ನಡುವಿನ ಸೌಂದರ್ಯ ಮತ್ತು ಚಳಿಯ ಅನುಭವ ಅನನ್ಯವಾಗಿದೆ. ಇಲ್ಲಿವೆ ಫೋಟೋಸ್
Updated on:Dec 13, 2024 | 9:45 PM

ಅದು ವಿಶ್ವವಿಖ್ಯಾತ ನಂದಿಗಿರಿಧಾಮ. ಅದರಲ್ಲೂ ಈಗ ಚಳಿಗಾಲ, ಜೊತೆಗೆ ಸೈಕ್ಲೋನ್ ಬೇರೆ. ಚಳಿಗಾಲದ ಆರಂಭದ ಜೊತೆ ಜೊತೆಯಲ್ಲೇ ಸೈಕ್ಲೋನ್ ಎಫೆಕ್ಟ್ ಗೆ ನಂದಿಬೆಟ್ಟವಂತೂ ಸಖತ್ ಕೂಲ್ ಕೂಲ್ ಆಗಿದೆ. ಮಂಜಿನಿಂದ ಆವೃತವಾದ ನಂದಿಬೆಟ್ಟ ಪ್ರವಾಸಿಗರ ಪಾಲಿಗೆ ಸ್ವರ್ಗದಂತೆ ಭಾಸವಾಗಿದೆ.

ವಿಶ್ವವಿಖ್ಯಾತ ಚಿಕ್ಕಬಳ್ಳಾಪುರ ತಾಲೂಕಿನ ನಂದಿಗಿರಿಧಾಮ ಸದ್ಯ ಮಂಜಿನಿಂದ ಆವೃತವಾಗಿದೆ. ಎದುರಗಡೆ ಇರುವ ವ್ಯಕ್ತಿಯೂ ಕಣ್ಣಿಗೆ ಕಾಣದಷ್ಟು ಮಂಜು ಆವರಿಸಿದೆ. ಮಂಜಿನ ನಡುವೆಯೇ ಪ್ರೇಮಿಗಳ ಕಲರವ. ನಂದಿಬೆಟ್ಟ ಕೇವಲ ಬೆಟ್ಟವಲ್ಲ ಅದೊಂದು ನಿಸರ್ಗದ ಗಣಿ, ಪ್ರಕೃತಿಯ ಸೌಂದರ್ಯಕ್ಕೆ ಸಾಟಿಯೇ ಇಲ್ಲ ಎನ್ನುವಂತ ಸ್ವರ್ಗಧಾಮವಾಗಿದೆ.

ಚಳಿಗಾಲ ಆರಂಭವಾಗುತ್ತಿದ್ದಂತೆ ನಂದಿಬೆಟ್ಟಕ್ಕೆ ಮಂಜು ಆವೃತವಾಗಲು ಆರಂಭವಾಗುತ್ತದೆ. ಅದರಲ್ಲೂ ಚಳಿಗಾಲದಲ್ಲಿ ಹೆಚ್ಚಾಗಿ ಪ್ರವಾಸಿಗರು, ಚಾರಣಿಗರು, ಪ್ರಕೃತಿ ಪ್ರಿಯರು ನಂದಿಬೆಟ್ಟಕ್ಕೆ ಆಗಮಿಸುತ್ತಿದ್ದಾರೆ. ಅದರಲ್ಲೂ ಈಗ ಸೈಕ್ಲೋನ್ ಬೇರೆ ಇದ್ರಿಂದ ವಿಶ್ವವಿವಿಖ್ಯಾತ ನಂದಿಗಿರಿಧಾಮ ಮಂಜನ್ನೇ ಹೊದ್ದುಕೊಂಡು ಮಲಗಿದಂತೆ ಭಾಸವಾಗುತ್ತಿದೆ.

ಚಳಿಯ ನಡುವೆ ಮಂಜಿನ ಸೊಗಸು ನೋಡುವುದೆ ಚೆಂದ. ಎಷ್ಟೇ ಚಳಿ ಆದರೂ ಬೆಚ್ಚನೆಯ ಕಾಫಿ ಸವಿದು ನಂದಿಬೆಟ್ಟದಲ್ಲಿ ಓಡಾಡುವ ಮಜಾವೇ ಬೇರೆ. ಪ್ರೇಮಿಗಳು ಕೈ ಹಿಡಿದು ಪಿಸು ಮಾತುಗಳನ್ನಾಡುತ್ತಾ ನಂದಿ ಬೆಟ್ಟದಲ್ಲಿ ಕಳೆದ ಕಾಲ ಮರೆಯಲಾಗದ ನೆನಪು. ಇಂತಹ ನಂದಿಬೆಟ್ಟಕ್ಕೆ ಲಗ್ಗೆಯಿಡುವ ಪ್ರೇಮಿಗಳು ಫೋಟೋ, ಸೆಲ್ಫಿ ತೆಗೆದುಕೊಂಡು ಸಖತ್ ಎಂಜಾಯ್ ಮಾಡಿದ್ದು, ನಂದಿಬೆಟ್ಟದ ಸೌಂದರ್ಯಕ್ಕೆ ಮಾರು ಹೋಗುವಂತಾಗಿದೆ.

ಚಳಿಗಾಲ ಆರಂಭವಾಗುತ್ತಿದ್ದಂತೆ ನಂದಿಬೆಟ್ಟ ತನ್ನ ಪ್ರಾಕೃತಿಕ ಸೊಬಗು ಹಿಮ್ಮಡಿಗೊಳಿಸಿದ್ದು, ಪ್ರವಾಸಿಗರನ್ನ ತನ್ನತ್ತ ಕೈಬೀಸಿ ಕರೆಯುತ್ತಿದೆ. ಸೈಕ್ಲೋನ್ ಸಹ ಮತ್ತಷ್ಟು ಮೆರೆಗು ನೀಡಿದ್ದು ಪ್ರವಾಸಿಗರಂತೂ ಮೈ ಚಳಿ ಬಿಟ್ಟು ಹೋಗುವ ಹಾಗೆ ಕುಣಿದು ಕುಪ್ಪಳಿಸುತ್ತಿದ್ದಾರೆ.
Published On - 9:43 pm, Fri, 13 December 24



















