AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಕೋಪಕ್ಕೆ ತಿರುಗಿದ ಜಗಳ: ಕಪಾಳಕ್ಕೆ ಹೊಡೆದಿದ್ದಕ್ಕೆ ವ್ಯಕ್ತಿ ಸಾವು

ಜಗಳ ಆಡುವಾಗ ಕಪಾಳಕ್ಕೆ ಹೊಡೆದಿದ್ದರಿಂದ ವ್ಯಕ್ತಿ ಸಾವನ್ನಪ್ಪಿರುವಂತಹ ಘಟನೆ ಬೆಂಗಳೂರಿನ ಬೆಳ್ತೂರು ಕಾಲೋನಿಯಲ್ಲಿ ನಡೆದಿದೆ. ಅನಿಲ್ ಜತೆ ಪ್ರಭುರಾಮ್ ಜಗಳವಾಗಿದೆ. ಈ ವೇಳೆ ಪ್ರಭುರಾಮ್​ ಕೆನ್ನೆಗೆ 4-5 ಬಾರಿ ಅನಿಲ್ ಹೊಡೆದಿದ್ದಾರೆ.​ ಜಗಳದ ಬಳಿಕ ಮನೆಗೆ ಹೋಗಿ ನೋವಿನಲ್ಲೇ ಮಲಗಿದ್ದ ಪ್ರಭುರಾಮ್, ರಾತ್ರಿ 1 ಗಂಟೆ ಸುಮಾರಿಗೆ ಮಲಗಿದ್ದಲ್ಲೇ ಮೃತಪಟ್ಟಿದ್ದಾರೆ.

ವಿಕೋಪಕ್ಕೆ ತಿರುಗಿದ ಜಗಳ: ಕಪಾಳಕ್ಕೆ ಹೊಡೆದಿದ್ದಕ್ಕೆ ವ್ಯಕ್ತಿ ಸಾವು
ವಿಕೋಪಕ್ಕೆ ತಿರುಗಿದ ಜಗಳ: ಕಪಾಳಕ್ಕೆ ಹೊಡೆದಿದ್ದಕ್ಕೆ ವ್ಯಕ್ತಿ ಸಾವು
ಗಂಗಾಧರ​ ಬ. ಸಾಬೋಜಿ
|

Updated on: May 06, 2024 | 3:32 PM

Share

ಬೆಂಗಳೂರು, ಮೇ 5: ಜಗಳ ಆಡುವಾಗ ಕಪಾಳಕ್ಕೆ ಹೊಡೆದಿದ್ದರಿಂದ (hit) ವ್ಯಕ್ತಿ ಸಾವನ್ನಪ್ಪಿರುವಂತಹ ಘಟನೆ ಬೆಂಗಳೂರಿನ ಬೆಳ್ತೂರು ಕಾಲೋನಿಯಲ್ಲಿ ನಡೆದಿದೆ. ಪ್ರಭುರಾಮ್​ ಪ್ರಸಾದ್​(33) ಮೃತ ವ್ಯಕ್ತಿ. ಅನಿಲ್ ಕಪಾಳಕ್ಕೆ ಹೊಡೆದ ವ್ಯಕ್ತಿ. ಮೃತ (death) ಪ್ರಭುರಾಮ್ ನಿನ್ನೆ ಮಗನ ಜೊತೆ ಹಬ್ಬಕ್ಕೆಂದು ಬೈಕ್​​ನಲ್ಲಿ ದೇಗುಲದ ಬಳಿ ಹೋಗಿದ್ದ. ದಾರಿ ಮಧ್ಯೆ ಬೈಕ್​ನಲ್ಲಿ ಸೌಂಡ್ ಬರ್ತಿದೆ ಅಂತಾ ಬೈಕ್​ನ್ನು​ ಸೈಡ್​ ಹಾಕಿ ಪರಿಶೀಲನೆ ಮಾಡುತ್ತಿದ್ದರು. ಈ ವೇಳೆ ಕಾರಿನಲ್ಲಿ ಬಂದ ಪರಿಚಯಸ್ಥ ಮಹಿಳೆ ಬೈಕ್​ಗೆ​ ಟಚ್ ಮಾಡಿದ್ದಾರೆ.​

ಇದನ್ನು ಪ್ರಶ್ನೆ ಮಾಡಿದ್ದಕ್ಕೆ ಮನೆ ಬಳಿ ಬಾ ಎಂದು ಮಹಿಳೆ ಹೊರಟು ಹೋಗಿದ್ದಾರೆ. ಮನೆ ಬಳಿ ಹೋದಾಗ ಮಹಿಳೆ ಪತಿ ಅನಿಲ್ ಜತೆ ಪ್ರಭುರಾಮ್ ಜಗಳವಾಗಿದೆ. ಈ ವೇಳೆ ಪ್ರಭುರಾಮ್​ ಕೆನ್ನೆಗೆ 4-5 ಬಾರಿ ಅನಿಲ್ ಹೊಡೆದಿದ್ದಾರೆ.​

ಇದನ್ನೂ ಓದಿ: ಸೈಬರ್​ ಕ್ರೈಂ: 5.17 ಕೋಟಿ ರೂ. ಕಳೆದುಕೊಂಡ ಬೆಂಗಳೂರು ಉದ್ಯಮಿ

ಜಗಳದ ಬಳಿಕ ಮನೆಗೆ ಹೋಗಿ ನೋವಿನಲ್ಲೇ ಮಲಗಿದ್ದ ಪ್ರಭುರಾಮ್, ರಾತ್ರಿ 1 ಗಂಟೆ ಸುಮಾರಿಗೆ ಮಲಗಿದ್ದಲ್ಲೇ ಮೃತಪಟ್ಟಿದ್ದಾರೆ. ಘಟನೆ ಸಂಬಂಧ ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ಕೇಸ್​ ದಾಖಲಾಗಿದೆ.

ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿಯಾಗಿ ಇಬ್ಬರು ದುರ್ಮರಣ

ಚಿಕ್ಕಮಗಳೂರು: ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿಯಾಗಿ ಇಬ್ಬರು ದುರ್ಮರಣ ಹೊಂದಿರುವಂತಹ ಘಟನೆ ಜಿಲ್ಲೆಯ N​.R​.ಪುರ ತಾಲೂಕಿನ ಕರುಗುಂದ ಗ್ರಾಮದ ಬಳಿ ನಡೆದಿದೆ. ಅಪಘಾತದಲ್ಲಿ ಸುನೀಲ್(30), ಉಮೇಶ್(35) ಮೃತಪಟ್ಟಿದ್ದಾರೆ. ಎನ್​.ಆರ್​.ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಅಪಘಾತದಲ್ಲಿ ಗಾಯಗೊಂಡು 8 ದಿನ ಕೋಮಾದಲ್ಲಿದ್ದ ಬಾಲಕಿ ಚಿಕಿತ್ಸೆ ಫಲಿಸದೇ ಸಾವು

ರಾಮನಗರ: ಅಪಘಾತದಲ್ಲಿ ಗಾಯಗೊಂಡು 8 ದಿನ ಕೋಮಾದಲ್ಲಿದ್ದ ಬಾಲಕಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ಬೆಂಗಳೂರಿನ ಹಾರೋಹಳ್ಳಿಯ ದಯಾನಂದ್ ಸಾಗರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮೋಹಿತಾ(9) ಮೃತ ಪಟ್ಟಿದ್ದಾಳೆ.

ಇದನ್ನೂ ಓದಿ: ಕಾರವಾರ: ಗಂಡ ಹೆಂಡತಿ ಜಗಳಕ್ಕೆ ಮೊಸಳೆಗೆ ತುತ್ತಾದ ಮಗು

ಏ.28ರಂದು ಕನಕಪುರದ ನಾರಾಣಪ್ಪ‌ ಕೆರೆ ಬಳಿ ನಡೆದಿದ್ದ ಅಪಘಾತ ನಡೆದಿತ್ತು. ತಂದೆ ಜೊತೆ ಕಬ್ಬಾಳಮ್ಮ ದೇವಸ್ಥಾನಕ್ಕೆ ತೆರಳುತ್ತಿದ್ದಾಗ ಕಾರು ಗುದ್ದಿ ಮೋಹಿತಾ ತಂದೆ ಸ್ಥಳದಲ್ಲೇ ಮೃತಪಟ್ಟಿದ್ದರು. ಬ್ರೈನ್​ ಡೆಡ್​ ಆಗಿ ಮೋಹಿತಾ ಕೋಮಾಗೆ ಹೋಗಿದ್ದಳು. ಕನಕಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ‌ ದಾಖಲಾಗಿದೆ.

ವರದಿ: ಪ್ರದೀಪ್​ 

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಕಾಂಬೋಡಿಯಾದಲ್ಲಿ ಬುಲ್ಡೋಜರ್​​​ನಿಂದ ವಿಷ್ಣು ಪ್ರತಿಮೆ ಧ್ವಂಸ
ಕಾಂಬೋಡಿಯಾದಲ್ಲಿ ಬುಲ್ಡೋಜರ್​​​ನಿಂದ ವಿಷ್ಣು ಪ್ರತಿಮೆ ಧ್ವಂಸ
ಬಿಗ್ ಬಾಸ್ ಕನ್ನಡ 12: ಸ್ಪಂದನಾ ಬಾಲ್ಯದ ಶಾಕಿಂಗ್ ಘಟನೆ ವಿವರಿಸಿದ ತಂದೆ
ಬಿಗ್ ಬಾಸ್ ಕನ್ನಡ 12: ಸ್ಪಂದನಾ ಬಾಲ್ಯದ ಶಾಕಿಂಗ್ ಘಟನೆ ವಿವರಿಸಿದ ತಂದೆ
ಹೈವೇಯಲ್ಲಿ ಅಕೌಂಟೆಂಟ್​​ನನ್ನು ಅಡ್ಡ ಹಾಕಿ 85 ಲಕ್ಷ ದೋಚಿದ ಬೈಕ್ ಸವಾರರು
ಹೈವೇಯಲ್ಲಿ ಅಕೌಂಟೆಂಟ್​​ನನ್ನು ಅಡ್ಡ ಹಾಕಿ 85 ಲಕ್ಷ ದೋಚಿದ ಬೈಕ್ ಸವಾರರು
‘45’ ಸಿನಿಮಾ ಕಲೆಕ್ಷನ್ ಸೂಪರ್: ಸ್ವತಃ ನಿರ್ಮಾಪಕರೇ ಹೇಳಿದ ಮಾತು ಕೇಳಿ..
‘45’ ಸಿನಿಮಾ ಕಲೆಕ್ಷನ್ ಸೂಪರ್: ಸ್ವತಃ ನಿರ್ಮಾಪಕರೇ ಹೇಳಿದ ಮಾತು ಕೇಳಿ..
ಸಿರಿಯಾದ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಬಾಂಬ್ ಸ್ಫೋಟ; 8 ಜನ ಸಾವು
ಸಿರಿಯಾದ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಬಾಂಬ್ ಸ್ಫೋಟ; 8 ಜನ ಸಾವು
ಗಡಿಯಲ್ಲಿ ಸೈನಿಕರಿಗೆ ಸಹಾಯ ಮಾಡಿದ್ದ ಬಾಲಕನಿಗೆ ವಿಶೇಷ ಪುರಸ್ಕಾರ
ಗಡಿಯಲ್ಲಿ ಸೈನಿಕರಿಗೆ ಸಹಾಯ ಮಾಡಿದ್ದ ಬಾಲಕನಿಗೆ ವಿಶೇಷ ಪುರಸ್ಕಾರ
ದೇಶದ ಅತ್ಯುನ್ನತ ಪ್ರಶಸ್ತಿ ಸ್ವೀಕರಿಸಿದ ವೈಭವ್ ಸೂರ್ಯವಂಶಿ
ದೇಶದ ಅತ್ಯುನ್ನತ ಪ್ರಶಸ್ತಿ ಸ್ವೀಕರಿಸಿದ ವೈಭವ್ ಸೂರ್ಯವಂಶಿ
ಫ್ಯಾಮಿಲಿ ನೋಡಿ ಕಣ್ಣೀರಾದ ಬಿಗ್​​ಬಾಸ್ ಮನೆಯ ಟಫ್​ ಮ್ಯಾನ್ ರಘು
ಫ್ಯಾಮಿಲಿ ನೋಡಿ ಕಣ್ಣೀರಾದ ಬಿಗ್​​ಬಾಸ್ ಮನೆಯ ಟಫ್​ ಮ್ಯಾನ್ ರಘು
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?