AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸುವರ್ಣ ಸೌಧವನ್ನ ಬೆಳಗಾವಿಯಲ್ಲಿ ಏಕೆ ಕಟ್ಟಿದ್ದಾರೆ ಎಂದು ಮರೆತು ಬಿಟ್ಟಿದ್ದಾರೆ: ಡಿ.ಕೆ. ಶಿವಕುಮಾರ್

ಕೇಂದ್ರ ಬಜೆಟ್​ನಲ್ಲಿ ನಮ್ಮ ನಿರೀಕ್ಷೆ ಈಡೇರಲ್ಲ. ಕೊವಿಡ್ ಸಮಯದಲ್ಲಿ ನೀಡಿದ ಭರವಸೆ ಈಡೇರಿಲ್ಲ. ಜೊತೆಗೆ ಯುವಕರ ನಿರೀಕ್ಷೆಯೂ ಕೈಗೂಡಿಲ್ಲ. ರಾಜ್ಯಕ್ಕೆ ಹಾಗೂ ಎಲ್ಲಾ ಯುವಕರ ನಿರೀಕ್ಷೆ, ಕೊರೊನಾ ಸಂದರ್ಭದಲ್ಲಿ ಆದ ನಷ್ಟಕ್ಕೆ ಪರಿಹಾರ ಸಿಗುವುದು ಕಾಣುತ್ತಿಲ್ಲ.

ಸುವರ್ಣ ಸೌಧವನ್ನ ಬೆಳಗಾವಿಯಲ್ಲಿ ಏಕೆ ಕಟ್ಟಿದ್ದಾರೆ ಎಂದು ಮರೆತು ಬಿಟ್ಟಿದ್ದಾರೆ: ಡಿ.ಕೆ. ಶಿವಕುಮಾರ್
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್
ಪೃಥ್ವಿಶಂಕರ
| Edited By: |

Updated on: Feb 01, 2021 | 12:22 PM

Share

ಬೆಂಗಳೂರು: ಇಂದು ಕೇಂದ್ರ ಸರ್ಕಾರ ಮಹತ್ತರವಾದ 2021ರ ಬಜೆಟ್​ ಮಂಡನೆ ಮಾಡುತ್ತಿದ್ದು, ಈ ವಿಚಾರದ ಬಗ್ಗೆ ವಿಧಾನಸೌಧದಲ್ಲಿ KPCC ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾತನಾಡಿದ್ದಾರೆ.

ಕೇಂದ್ರ ಬಜೆಟ್​ನಲ್ಲಿ ನಮ್ಮ ನಿರೀಕ್ಷೆ ಈಡೇರಲ್ಲ. ಕೊವಿಡ್ ಸಮಯದಲ್ಲಿ ನೀಡಿದ ಭರವಸೆ ಈಡೇರಿಲ್ಲ. ಜೊತೆಗೆ ಯುವಕರ ನಿರೀಕ್ಷೆಯೂ ಕೈಗೂಡಿಲ್ಲ. ರಾಜ್ಯಕ್ಕೆ ಹಾಗೂ ಎಲ್ಲಾ ಯುವಕರ ನಿರೀಕ್ಷೆ, ಕೊರೊನಾ ಸಂದರ್ಭದಲ್ಲಿ ಆದ ನಷ್ಟಕ್ಕೆ ಪರಿಹಾರ ಸಿಗುವುದು ಕಾಣುತ್ತಿಲ್ಲ. ಉಳಿದ ವಿಚಾರಗಳ ಬಗ್ಗೆ ಸಂಜೆ ಪ್ರತಿಕ್ರಿಯೆ ನೀಡುತ್ತೇನೆ ಎಂದರು.

ಉತ್ತರ ಕರ್ನಾಟಕದ ಜನರಿಗೆ ಅನ್ಯಾಯ ಮಾಡುತ್ತಿದ್ದೀರಿ.. ಬಿಎಸಿ ಸಭೆಗೆ ಕಾಂಗ್ರೆಸ್ ಭಾಗಿ ವಿಚಾರದ ಬಗ್ಗೆ ಮಾತಾನಾಡಿದ ಅವರು, ಯಾವುದೇ ಮಸೂದೆಯನ್ನು ಚರ್ಚೆ ಮಾಡಿ ಮಂಡನೆ ಮಾಡಬೇಕು. ಏಕಾಏಕಿ ಸದನದಲ್ಲಿ ಮಂಡನೆ ಮಾಡಬಾರದು ಎಂಬ ಬೇಡಿಕೆ ಇಟ್ಟಿದ್ದೇವೆ. ಬೆಳಗಾವಿಯಲ್ಲಿ ಅಧಿವೇಶನ ನಡೆಸದೇ ಉತ್ತರ ಕರ್ನಾಟಕದ ಜನರಿಗೆ ಅನ್ಯಾಯ ಮಾಡುತ್ತಿದ್ದೀರಿ, ಬಜೆಟ್ ಅಧಿವೇಶವನ್ನು ಬೆಳಗಾವಿಯಲ್ಲಿ ಮಾಡಬೇಕು ಎಂಬ ಬೇಡಿಕೆ ಇಟ್ಟಿದ್ದೇವೆ.

ಆದರೆ ಬಜೆಟ್ ಅಧಿವೇಶನದ ಬಳಿಕ ಮುಂದಿನ ಅಧಿವೇಶನ ಮಾಡುತ್ತೇವೆ ಎಂದಿದ್ದಾರೆ. ಸುವರ್ಣ ಸೌಧವನ್ನ ಬೆಳಗಾವಿಯಲ್ಲಿ ಏಕೆ ಕಟ್ಟಿದ್ದಾರೆ? ಎಂದು ಮರೆತು ಬಿಟ್ಟಿದ್ದಾರೆ. ಈ ಕಾರಣಕ್ಕಾಗಿ ಅಲ್ಲೇ ಮಾಡಬೇಕು ಎಂದು ಒತ್ತಾಯ ಮಾಡಿದ್ದೇವೆ ಎಂದರು.

‘ಇನ್ನೊಬ್ಬರನ್ನು ಗೆಲ್ಲಿಸಿಕೊಂಡು ಬರಲಾಗದಿದ್ದರೆ ನಾವು ಅನರ್ಹರು..ರಾಜಕೀಯದಲ್ಲಿ ಇರಲು ಅಯೋಗ್ಯರು’