AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಂಗಳೂರು: 24 ಅಡಿ ಬಾವಿ ತೋಡಿ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಂಡ 17 ವರ್ಷದ ಬಾಲಕ

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ನೈಲಾ ಗ್ರಾಮದ 17 ವರ್ಷದ ಬಾಲಕ 24 ಅಡಿ ಆಳದ ಬಾವಿ ತೋಡಿದ್ದಾನೆ.

ಮಂಗಳೂರು: 24 ಅಡಿ ಬಾವಿ ತೋಡಿ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಂಡ 17 ವರ್ಷದ ಬಾಲಕ
ಬಾಲಕ ಸಾಜ್ರನ್​​Image Credit source: Times of India
ವಿವೇಕ ಬಿರಾದಾರ
ವಿವೇಕ ಬಿರಾದಾರ|

Updated on:Apr 12, 2023 | 3:24 PM

Share

ಮಂಗಳೂರು: ದಕ್ಷಿಣ ಕನ್ನಡ (Dakshin Kannada) ಜಿಲ್ಲೆಯ ಬಂಟ್ವಾಳ (Bantwal) ತಾಲೂಕಿನ ನೈಲಾ ಗ್ರಾಮದ 17 ವರ್ಷದ ಬಾಲಕ 24 ಅಡಿ ಆಳದ ಬಾವಿಯನ್ನು (Well) ತೋಡಿದ್ದಾನೆ. ಹೌದು ಬಾಲಕ ಸ್ರಾಜನ್ ತನ್ನ ಊರಿನ ನೀರಿನ ಸಮಸ್ಯೆಯನ್ನು ಪರಿಹರಿಸಬೇಕೆಂಬ ನಿಟ್ಟಿನಲ್ಲಿ ಈ ಮಾರ್ಗವನ್ನು ಅನುಸರಿಸಿದ್ದಾರೆ. ಸ್ರಾಜನ್​ನ ಈ ಕಾರ್ಯಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನೈಲಾ ಗ್ರಾಮದ ಟೈಲರ್ ಲೋಕನಾಥ್ ಮತ್ತು ಬೀಡಿ ಸುತ್ತುವ ಕೆಲಸ ಮಾಡುವ ಮೋಹಿನಿ ಅವರ ಪುತ್ರ ಸ್ರಾಜನ್ ​ ಸರ್ಕಾರಿ ಕಾಲೇಜಿನಲ್ಲಿ ಪಿಯು ವ್ಯಾಸಂಗ ಮಾಡುತ್ತಿದ್ದಾರೆ.

ಗ್ರಾಮದಲ್ಲಿ ನೀರಿನ ಸಮಸ್ಯೆ ಅಧಿಕವಾಗಿದೆ. ಇದನ್ನು ಬಗೆಹರಿಸಬೇಕೆಂದು ಬಾವಿ ತೋಡಲು ಬಯಸಿದ್ದೆ. ಗ್ರಾಮಕ್ಕೆ ಪಂಚಾಯತಿ ಮೂಲಕ ನೀರು ಸರಬರಾಜು ಮಾಡಲಾಗುತ್ತದೆ ಆದರೂ ಕೂಡ ನೀರಿನ ಸಮಸ್ಯೆ ಅಧಿಕವಾಗಿದೆ ಎಂದು ಸ್ರಾಜನ್ ​ ಹೇಳಿದರು.

“ಬಾವಿ ತೋಡುವುದು ನನ್ನ ಮನಸ್ಸಿನಲ್ಲಿತ್ತು, ಆದರೆ ನಾನು ಯಶಸ್ವಿಯಾಗುತ್ತೇನೆಯೇ ಎಂದು ನನಗೆ ಖಚಿತವಾಗಿರಲಿಲ್ಲ. ಕೆಲಸ ಕಷ್ಟಕರವಾಗಿತ್ತು, ಆದರೆ ಅದು ಅಸಾಧ್ಯವಲ್ಲ ಎಂದು ನನಗೆ ತಿಳಿದಿತ್ತು. ಎರಡು ವಾರಗಳ ಹಿಂದೆ ಬಾವಿ ತೋಡಲು ಆರಂಭಿಸಬೇಕೆಂದು ಯೋಚಿಸಿದಾಗಸುಮಾರು 15-16 ಅಡಿಯಲ್ಲಿ ನೀರು ಸಿಗಬಹುದು ಎಂದು ಯೋಚಿಸಿದ್ದೆ, ಅದು ನಿಜವಾಯಿತು. ನಾನು ಬಾವಿ ತೋಡುತ್ತಾ 15-16 ಅಡಿ ತಲುಪಿದಾಗ ನೀರು ದೊರೆಯಿತು ಇದರಿಂದ ಅತೀವ ಆನಂದವಾಯಿತು. ನನ್ನ ಶ್ರಮಕ್ಕೆ ತಕ್ಕ ಫಲ ಸಿಕ್ಕಿದೆ ಎಂದು ನನ್ನ ಮನೆಯವರೂ ಖುಷಿ ಪಟ್ಟರು. ಇದು ನನ್ನನ್ನು ಮತ್ತಷ್ಟು ಅಗೆಯಲು ಪ್ರೇರೇಪಿಸಿತು” ಈ ಹಿನ್ನೆಲೆ ನಾನು 24 ಅಡಿ ಬಾವಿ ತೋಡಿದೆ ಎಂದು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:23 pm, Wed, 12 April 23

Follow Us
ವಿವೇಕ ಬಿರಾದಾರ
ವಿವೇಕ ಬಿರಾದಾರ

ಮೂಲತಃ ಧಾರವಾಡ ಜಿಲ್ಲೆಯ ಹುಬ್ಬಳ್ಳಿಯವ. ಪ್ರಸ್ತುತ ಬೆಂಗಳೂರಿನಲ್ಲಿ ವಾಸಿಸುತ್ತಿದ್ದೇನೆ. ಕಳೆದ ಮೂರು ವರ್ಷಗಳಿಂದ ಡಿಜಿಟಲ್​ ಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಚಲಿತ ವಿದ್ಯಮಾನ, ರಾಜಕೀಯ, ಅಪರಾಧ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದೇನೆ.

ಸೌಜನ್ಯ ಪ್ರಕರಣ ಮರು ತನಿಖೆ: SITಯಿಂದ ಕೈಬಿಡುವಂತೆ ಸರ್ಕಾರಕ್ಕೆ AASP ಪತ್ರ
ಸೌಜನ್ಯ ಪ್ರಕರಣ ಮರು ತನಿಖೆ: SITಯಿಂದ ಕೈಬಿಡುವಂತೆ ಸರ್ಕಾರಕ್ಕೆ AASP ಪತ್ರ
ಚಾಮರಾಜನಗರದಲ್ಲಿ ತಡರಾತ್ರಿ ಸುರಿದ ಭಾರಿ ಮಳೆಗೆ ಭಾಗಶಃ ಕೊಚ್ಚಿ ಹೋದ ಸೇತುವೆ!
ಚಾಮರಾಜನಗರದಲ್ಲಿ ತಡರಾತ್ರಿ ಸುರಿದ ಭಾರಿ ಮಳೆಗೆ ಭಾಗಶಃ ಕೊಚ್ಚಿ ಹೋದ ಸೇತುವೆ!
ಭೂಸುಧಾರಣಾ ಕಾಯ್ದೆ ತಿದ್ದುಪಡಿ ವಾಪಸ್​ಗೆ ಆಗ್ರಹಿಸಿ ರಾಹುಲ್​ಗೆ ಪತ್ರ
ಭೂಸುಧಾರಣಾ ಕಾಯ್ದೆ ತಿದ್ದುಪಡಿ ವಾಪಸ್​ಗೆ ಆಗ್ರಹಿಸಿ ರಾಹುಲ್​ಗೆ ಪತ್ರ
ಆಟೋದಲ್ಲಿ ಸೋಮನಾಥಪುರ ದೇವಾಲಯಕ್ಕೆ ಬಂದ ರಜನಿಕಾಂತ್
ಆಟೋದಲ್ಲಿ ಸೋಮನಾಥಪುರ ದೇವಾಲಯಕ್ಕೆ ಬಂದ ರಜನಿಕಾಂತ್
ಪೆಟ್ರೋಲ್ ಬಂಕ್‌ನಲ್ಲಿ ನಿಲ್ಲಿಸಿದ್ದ ಖಾಸಗಿ ಬಸ್ ಕಳವು
ಪೆಟ್ರೋಲ್ ಬಂಕ್‌ನಲ್ಲಿ ನಿಲ್ಲಿಸಿದ್ದ ಖಾಸಗಿ ಬಸ್ ಕಳವು
ನಕಲಿ ಔಷಧ ದಂಧೆಯ ಮತ್ತೊಬ್ಬ ಆರೋಪಿ ಬಾಲಸುಬ್ರಮಣಿಯನ್ ಚೆನ್ನೈನಲ್ಲಿ ಬಂಧನ
ನಕಲಿ ಔಷಧ ದಂಧೆಯ ಮತ್ತೊಬ್ಬ ಆರೋಪಿ ಬಾಲಸುಬ್ರಮಣಿಯನ್ ಚೆನ್ನೈನಲ್ಲಿ ಬಂಧನ
ಟಾಸ್ಕ್​ ವಿಷಯಕ್ಕೆ ತಮ್ಮ ತಂಡದ ವೈರತ್ವ ಕಟ್ಟಿಕೊಂಡ ಗಾನವಿ; ಸುಸ್ತು?
ಟಾಸ್ಕ್​ ವಿಷಯಕ್ಕೆ ತಮ್ಮ ತಂಡದ ವೈರತ್ವ ಕಟ್ಟಿಕೊಂಡ ಗಾನವಿ; ಸುಸ್ತು?
ಬೆಂಗಳೂರಿನಲ್ಲಿ ಭಾರಿ ಮಳೆ, ಕೆಆರ್ ಮಾರುಕಟ್ಟೆಯಲ್ಲಿ ಭಾರಿ ಅವಾಂತರ
ಬೆಂಗಳೂರಿನಲ್ಲಿ ಭಾರಿ ಮಳೆ, ಕೆಆರ್ ಮಾರುಕಟ್ಟೆಯಲ್ಲಿ ಭಾರಿ ಅವಾಂತರ
ಮಳೆಗೆ ಕೆಸರು ಗದ್ದೆಯಂತಾದ ಶಿಡ್ಲಘಟ್ಟದ ರಸ್ತೆ: ಜನರ ಪರದಾಟ
ಮಳೆಗೆ ಕೆಸರು ಗದ್ದೆಯಂತಾದ ಶಿಡ್ಲಘಟ್ಟದ ರಸ್ತೆ: ಜನರ ಪರದಾಟ
ಲಷ್ಕರ್ ಟಾಪ್ ಕಮಾಂಡರ್ ಫೌಜಿ ಮೂಸಾ ಎನ್‌ಕೌಂಟರ್‌ನಲ್ಲಿ ಹತ
ಲಷ್ಕರ್ ಟಾಪ್ ಕಮಾಂಡರ್ ಫೌಜಿ ಮೂಸಾ ಎನ್‌ಕೌಂಟರ್‌ನಲ್ಲಿ ಹತ