ಪೈಲ್ಸ್ ಚಿಕಿತ್ಸೆಗೆಂದು ಕರೆದುಕೊಂಡು ಬಂದು ಮಹಿಳೆ ಮೇಲೆ ರೇಪ್, ಬೆತ್ತಲೆ ಫೋಟೋ ಇಟ್ಕೊಂಡು ಬ್ಲಾಕ್ಮೇಲ್
ನಿನ್ನೆಯಷ್ಟೇ ಚಾಮರಾಜನಗರ ಜಿಲ್ಲೆಯ ಹನೂರು(Hanur)ತಾಲೂಕಿನ ಪೊನ್ನಾಚಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪುತ್ರ ವೈದೇಶ್ ಎಂಬಾತ ಆಶ್ರಯ ಮನೆ ಕೊಡಿಸುವುದಾಗಿ ನಂಬಿಸಿ ಮಹಿಳೆ ಮೇಲೆ ಅತ್ಯಾಚಾರ ನಡೆಸಿದ ಘಟನೆ ಬೆಳಕಿಗೆ ಬಂದಿತ್ತು. ಇದರ ಬೆನ್ನಲ್ಲೇ ಇದೀಗ ಪೈಲ್ಸ್ ಚಿಕಿತ್ಸೆಗೆಂದು ಕರೆದುಕೊಂಡು ಬಂದು ಮಹಿಳೆ ಮೇಲೆ ಅತ್ಯಾಚಾರ ನಡೆಸಿದ ಘಟನೆ ಮಂಗಳೂರಿನ(Mangaluru) ಎ.ಜೆ.ಆಸ್ಪತ್ರೆಯಲ್ಲಿ ನಡೆದಿದೆ.
ದಕ್ಷಿಣ ಕನ್ನಡ, ಮೇ.29: ಪೈಲ್ಸ್ ಚಿಕಿತ್ಸೆಗೆಂದು ಕರೆದುಕೊಂಡು ಬಂದು ಮಹಿಳೆ ಮೇಲೆ ಅತ್ಯಾಚಾರ ನಡೆಸಿದ ಘಟನೆ ಮಂಗಳೂರಿನ(Mangaluru) ಎ.ಜೆ.ಆಸ್ಪತ್ರೆಯಲ್ಲಿ ನಡೆದಿದೆ. ಬಳಿಕ ಸಂತ್ರಸ್ಥೆಯ ನಗ್ನ ಫೋಟೋವನ್ನು ತೆಗೆದುಕೊಂಡು ಬ್ಲಾಕ್ ಮೇಲೆ ಮಾಡಿ ನಿರಂತರ ಅತ್ಯಾಚಾರ ಮಾಡಿದ್ದಾನೆ. ಈ ಹಿನ್ನಲೆ ಇದೀಗ ಕೇರಳ ಮೂಲದ ಆರೋಪಿ ಸಜಿತ್ ಎಂಬಾತನನ್ನು ಕದ್ರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಘಟನೆ ವಿವರ
ಇನ್ನು ಆರೋಪಿ, ಖಾಸಗಿ ಆಸ್ಪತ್ರೆ ಹಾಗೂ ಹೋಟೆಲ್ನಲ್ಲಿ ಕೃತ್ಯವೆಸಗಿದ್ದು, ಪೈಲ್ಸ್ ಗೆ ಚಿಕಿತ್ಸೆ ಕೊಡಿಸುವುದಾಗಿ ಮೊದಲು ಎ.ಜೆ.ಆಸ್ಪತ್ರೆಗೆ ಕರೆದುಕೊಂಡು ಬಂದು ಅತ್ಯಾಚಾರ ಮಾಡಿದ್ದಾನೆ. ಬಳಿಕ ನಗರದ ಮಹಾರಾಜ ಹೋಟೆಲ್, ಫಾದರ್ ಮುಲ್ಲರ್ಸ್ ಆಸ್ಪತ್ರೆ ಸೇರಿ ಹಲವೆಡೆ ಫೋಟೋ ಇಟ್ಟುಕೊಂಡು ಬ್ಲ್ಯಾಕ್ಮೇಲ್ ಮಾಡಿ ಕೃತ್ಯ ಎಸಗಿದ್ದಾನೆ.
ಇದನ್ನೂ ಓದಿ:ಆಶ್ರಯ ಮನೆ ಕೊಡಿಸುವುದಾಗಿ ನಂಬಿಸಿ ಗ್ರಾ.ಪಂಚಾಯತಿ ಅಧ್ಯಕ್ಷೆ ಪುತ್ರನಿಂದ ಮಹಿಳೆ ಮೇಲೆ ಅತ್ಯಾಚಾರ
ಆಶ್ರಯ ಮನೆ ಕೊಡಿಸುವುದಾಗಿ ನಂಬಿಸಿ ಅತ್ಯಾಚಾರ
ಚಾಮರಾಜನಗರ: ಹನೂರು ತಾಲೂಕಿನ ಪೊನ್ನಾಚಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪುತ್ರ ವೈದೇಶ್ ಎಂಬಾತ ಆಶ್ರಯ ಮನೆ ಕೊಡಿಸುವುದಾಗಿ ನಂಬಿಸಿ ಮಹಿಳೆಯೋರ್ವಳ ಮೇಲೆ ಅತ್ಯಾಚಾರ ನಡೆಸಿದ ಘಟನೆ ನಡೆದಿತ್ತು. ‘ಗ್ರಾಮ ಪಂಚಾಯತಿ ವತಿಯಿಂದ ಮನೆ ಕಟ್ಟಿಸಿ ಕೊಡಬೇಕೆಂದರೆ ನನ್ನ ಜೊತೆ ಮಲಗಬೇಕೆಂದು ಆರೋಪಿ ಹೇಳಿದ್ದ. ಆತನ ಕಾಟ ತಾಳಲಾರದೆ ವೈದೇಶ್ನನ್ನ ಸಂತ್ರಸ್ಥೆ ಮನೆಗೆ ಕರೆದಿದ್ದಾರೆ. ಈ ವೇಳೆ ಸಂತ್ರಸ್ಥೆ ಮನೆ ಒಳ ಹೊಕ್ಕಿ ಆಕೆಯನ್ನು ವಿವಸ್ತ್ರ ಗೊಳಿಸಿ, ಫೋಟೋ ಹಾಗೂ ವಿಡಿಯೋವನ್ನ ಮೊಬೈಲ್ನಲ್ಲಿ ಸೆರೆ ಹಿಡಿದು, ಪದೇ ಪದೇ ಮಹಿಳೆಯನ್ನ ಮಂಚಕ್ಕೆ ಕರೆದು ಪೀಡಿಸುತ್ತಿದ್ದ. ಸಹಕರಿಸದಿದ್ರೆ ಸೋಶಿಯಲ್ ಮಿಡಿಯಾದಲ್ಲಿ ವಿಡಿಯೋ ವೈರಲ್ ಮಾಡೋದಾಗಿ ಧಮ್ಕಿ ಹಾಕಿ ನಿರಂತರ ಅತ್ಯಾಚಾರ ಮಾಡಿದ್ದ.
ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ವೈರಲ್ ಮಾಡಿದ್ದಾನೆ. ಮನನೊಂದ ಮಹಿಳೆ ಘಟನೆ ಕುರಿತು ಮಹದೇಶ್ವರ ಬೆಟ್ಟ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅದರ ಬೆನ್ನಲ್ಲೇ ವೈದೇಶ್ ಹಾಗೂ ವೀಡಿಯೋ ವೈರಲ್ ಮಾಡಿದ ಬಸಮಣಿ , ಶಿವಮ್ಮ ಎಂಬುವರ ವಿರುದ್ದ ಐಪಿಸಿ ಸೆಕ್ಷನ್ 376, 384, 417, 509 ಮತ್ತು ಐಟಿ ಕಾಯ್ದೆ 66(ಇ), 67, 67(ಎ) ಅನ್ವಯ ಪ್ರಕರಣ ದಾಖಲಿಸಲಾಗಿತ್ತು. ಈ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಮಂಗಳೂರಿನಲ್ಲೂ ಇಂತಹುದೇ ಘಟನೆ ನಡೆದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ