ಮೂಡಬಿದ್ರೆ ಇನ್ಸ್​ಪೆಕ್ಟರ್​​​ ಕಾಮಕಾಂಡ ಕೇಸ್​ ಸಿಐಡಿಗೆ ಹಸ್ತಾಂತರ: ‘ಪೋಲಿ’ಸಪ್ಪಗೆ ಮತ್ತೆ ಸಂಕಷ್ಟ

ಮೂಡಬಿದ್ರೆ ಇನ್ಸ್​ಪೆಕ್ಟರ್​​​ ಸಂದೇಶ್​​ ಕಾಮಕಾಂಡ ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರ ಸಿಐಡಿಗೆ ವರ್ಗಾಯಿಸಿದೆ. ಆ ಮೂಲಕ ಮೂಡಬಿದ್ರೆ ಇನ್ಸ್​ಪೆಕ್ಟರ್​​​ ಸಂದೇಶ್​​ಗೆ ಸಂಕಷ್ಟ ಎದುರಾಗಿದೆ. ಸದ್ಯ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ಪ್ರಕರಣವನ್ನು ಸಿಐಡಿಗೆ ಹಸ್ತಾಂತರಿಸಿದ್ದಾರೆ. ಇನ್ನು ಇತ್ತೀಚೆಗೆ ಮಹಿಳೆಯರಿಗೆ ಲೈಂಗಿಕ ಕಿರುಕುಳ ಆರೋಪ ಸುಳ್ಳು ಎಂದು ಪೊಲೀಸ್ ವರದಿ ಕೂಡ ಬಂದಿತ್ತು.

ಮೂಡಬಿದ್ರೆ ಇನ್ಸ್​ಪೆಕ್ಟರ್​​​ ಕಾಮಕಾಂಡ ಕೇಸ್​ ಸಿಐಡಿಗೆ ಹಸ್ತಾಂತರ: ‘ಪೋಲಿ’ಸಪ್ಪಗೆ ಮತ್ತೆ ಸಂಕಷ್ಟ
ಸಂದೇಶ್​​ ಪ್ರಕರಣ
Image Credit source: google
Edited By:

Updated on: Mar 23, 2026 | 5:53 PM

ಮಂಗಳೂರು, ಮಾರ್ಚ್​ 23: ಮೂಡಬಿದ್ರೆ ಪೊಲೀಸ್ ಇನ್ಸ್​ಪೆಕ್ಟರ್​​ ಸಂದೇಶ್ (Inspector Sandesh) ಕಾಮಕಾಂಡದ ಸುದ್ದಿ ಹೊರಬೀಳುತ್ತಲೇ ಅಮಾನತು ಮಾಡಲಾಗಿತ್ತು. ಅವರ ವಿರುದ್ಧ ಆರೋಪ ಮಾಡಿದ್ದ ಸುಮತಿ ನಾಯಕ್ ಮತ್ತು ಅವಿತಾ ಮಿನೇಜಸ್​ ಮಾಡಿದ್ದ ಆರೋಪಗಳು ಸುಳ್ಳು ಅಂತಾ ಪೊಲೀಸ್ ತನಿಖೆ ಹೇಳಿತ್ತು. ಇದೆಲ್ಲದರ ಮಧ್ಯೆ ಇದೀಗ ರಾಜ್ಯ ಸರ್ಕಾರ ಸಿಐಡಿಗೆ ವರ್ಗಾಯಿಸಿ ಸೋಮವಾರ ಆದೇಶ ಹೊರಡಿಸಿದೆ. ಆ ಮೂಲಕ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಸರ್ಕಾರ ಆದೇಶ ಬೆನ್ನಲ್ಲೇ ಸದ್ಯ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ಪ್ರಕರಣವನ್ನು ಸಿಐಡಿಗೆ ಹಸ್ತಾಂತರಿಸಿದ್ದಾರೆ.

ಏನಿದು ಪ್ರಕರಣ?

2018ರಲ್ಲಿ ವೇಣೂರು ಠಾಣೆಯಲ್ಲಿ ಜಮೀನು ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಅಕ್ಕನ ವಿರುದ್ಧ ತಂಗಿ ದೂರು ನೀಡಿದ್ದರು. ಆ ಮಹಿಳೆ ಮತ್ತು ಆತನ ಪತಿ ವಿರುದ್ಧ ದೂರು ದಾಖಲಾಗಿತ್ತು. ಅದೇ ವೇಳೆ ಸರ್ಕಲ್ ಇನ್ಸ್​ಪೆಕ್ಟರ್​​ಆಗಿದ್ದ ಸಂದೇಶ್, ಈ ಕೇಸ್ ವಿಚಾರವಾಗಿ ಬ್ಲ್ಯಾಕ್ ​ಮೇಲ್ ಮಾಡಿದ್ದರಂತೆ. ಆಕೆಗೆ ನಿರಂತರ ಅತ್ಯಾಚಾರ ಮಾಡಿದ್ದಾಗಿ, ಆ ಮಹಿಳೆ ದೂರು ನೀಡಿದ್ದು ಪ್ರಕರಣ ದಾಖಲಾಗಿತ್ತು.

ಇದನ್ನೂ ಓದಿ: ಮೂಡಬಿದ್ರೆ ಇನ್ಸ್​ಪೆಕ್ಟರ್ ಕಾಮಕಾಂಡ ಪ್ರಕರಣ: ಸಂತ್ರಸ್ತೆಗೆ ಜೀವ ಬೆದರಿಕೆ ಹಾಕಿಸಿದ್ರಾ ಸಂದೇಶ್​​​​​?

ಮುಖ್ಯ ಶಿಕ್ಷಕಿಯಾಗಿರುವ ಸಂತ್ರಸ್ತೆ ತನ್ನ ದೂರಿನಲ್ಲಿ ಸಾಕಷ್ಟು ಆರೋಪ ಮಾಡಿದ್ದರು. ಕೇಸ್ ವಿಚಾರದಲ್ಲಿ ಬ್ಲ್ಯಾಕ್ ​ಮೇಲ್ ಮಾಡುತ್ತಾ 2020 ರಿಂದ 2023ರವರೆಗೂ ನಿರಂತರವಾಗಿ ಅತ್ಯಾಚಾರ ಮಾಡಿದ್ದಾಗಿ ಆರೋಪಿಸಿದ್ದರು. ಕೆಲ ಸಮಯದ ಬಳಿಕ ಪ್ರತಿರೋಧ ಒಡ್ಡಿದ್ದಕ್ಕೆ ಕೇಸ್ ರಿ ಓಪನ್ ಮಾಡುವುದಾಗಿ ಬೆದರಿಸಿ ನಿರಂತರವಾಗಿ ಅತ್ಯಾಚಾರ ಮಾಡಿದ್ದಾರೆಂದು ಆರೋಪಿಸಿದ್ದರು.

ಇನ್ನು ಸಂದೇಶ್ ಸೇರಿ ಒಟ್ಟು 4 ಜನರ ಮೇಲೆ ಪ್ರಕರಣ ದಾಖಲಾಗಿತ್ತು. ಸಂದೇಶ್ ಖಾಸಗಿ ಚಾಲಕ ಅಕ್ಬರ್, ಸ್ಮಿತಾ ಮತ್ತು ಸುನೀತಾ ಲೋಬೊ ಎಂಬುವವರ ಮೇಲೆ ದೂರು ದಾಖಲಾಗಿತ್ತು. ಸಂದೇಶ್ ಅತ್ಯಾಚಾರ ಮಾಡಿದ್ದಲ್ಲದೇ 13 ಲಕ್ಷ ರೂ ನಗದು, 3.62 ಲಕ್ಷ ರೂ ಹಣ ಲಪಟಾಯಿಸಿದ್ದಾನಂತೆ. ಅಲ್ಲದೇ ಚಿನ್ನವನ್ನು ಲಪಟಾಯಿಸಿ ಅಕ್ಬರ್ ಹೆಸರಿನಲ್ಲಿ ಫೆಡರಲ್ ಬ್ಯಾಂಕ್​ನಲ್ಲಿ ಅಡವಿಟ್ಟಿದ್ದ.

ಇದನ್ನೂ ಓದಿ: ಮೂಡಬಿದ್ರೆ ಇನ್ಸ್​ಪೆಕ್ಟರ್​ ಸಂದೇಶ್​​ಗೆ ಬಿಗ್​​ ಶಾಕ್​​: ಅತ್ಯಾಚಾರ ಪ್ರಕರಣ ದಾಖಲು

ಹೊಸ ಮನೆ ಕಟ್ಟುವಾಗ ಸಂತ್ರಸ್ತೆ ತೋಟದಿಂದ 2.5 ಲಕ್ಷ ರೂ ಮೌಲ್ಯದ ಸಾಗುವಾನಿ ಮರವನ್ನು ಲಪಟಾಯಿಸಿದ್ದ. ಇನ್ನು ಈತನ ಕರ್ಮಕಾಂಡ ಬಯಲಾಗುತ್ತಿದ್ದಂತೆ ಸ್ಮಿತಾ ಮತ್ತು ಸುನಿತಾ ಲೋಬೊರನ್ನು ಸಂತ್ರಸ್ತೆ ಮನೆಗೆ ಕಳುಹಿಸಿ ನಡೆದ ವಿಚಾರ ಹೊರಗಡೆ ಬಾಯಿ ಬಿಟ್ಟರೆ ಕೇಸ್ ಹಾಕುತ್ತೇನೆ. ಜೀವಂತವಾಗಿ ಬಿಡೋದಿಲ್ಲ ಅಂತಾ ಬೆದರಿಕೆ ಕೂಡ ಹಾಕಿದ್ದ ಅಂತಾ ಆರೋಪಿಸಲಾಗಿತ್ತು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Pruthviraj

ಬಿ.ಯು.ಪೃಥ್ವಿರಾಜ್. ಮೂಲತಹ ಹಾಸನ ಜಿಲ್ಲೆ ಸಕಲೇಶಪುರ ತಾಲೂಕು. ಪತ್ರಿಕೋದ್ಯಮದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಮಾಡಿದ್ದೇನೆ. ವಿದ್ಯಬ್ಯಾಸ ಆದ ತಕ್ಷಣ ಟಿವಿ9 ಕರ್ನಾಟಕದ ಬೆಂಗಳೂರು ಕಚೇರಿಯಲ್ಲಿ ಜಾಯಿನ್ ಆದೆ. ಕಳೆದ 13 ವರ್ಷಗಳಿಂದ ಟಿವಿ9 ನಲ್ಲಿ ಕಾರ್ಯನಿರ್ವಹಿಸುತ್ತಿದ್ದ, ಚಾಮರಾಜನಗರ ಜಿಲ್ಲೆ, ಬೆಂಗಳೂರು ಕೇಂದ್ರ ಕಚೇರಿಯ ಕ್ರೈಂ ಬೀಟ್ ನಲ್ಲಿ ಕಾರ್ಯನಿರ್ವಹಿಸಿ 2016 ರಿಂದ ಮಂಗಳೂರು ಬ್ಯೂರೋದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದಲ್ಲಿ ಹರಕೆ ಗೋವುಗಳು ಕಸಾಯಿಕಾನೆಗೆ ಹೋಗುತ್ತಿದ್ದ ಬಗ್ಗೆ ಸ್ಟಿಂಗ್ ಆಪರೇಷನ್ ಮಾಡಲು ತಮಿಳುನಾಡಿನಲ್ಲಿ ಕಾರ್ಯನಿರ್ವಹಿಸಿದ ಅನುಭವ. ಈ ಸ್ಟಿಂಗ್ ಆಪರೇಷನ್ ಸ್ಟೋರಿಗೆ ರಾಮನಾಥ ಗೋಯಾಂಕ ಪ್ರಶಸ್ತಿಗೆ ನಾಮಿನಿಯಾಗಿದ್ದೆ. ರಾಜಕೀಯ, ಪ್ರವಾಹ, ರಾಷ್ಟ್ರ ಮಟ್ಟದ ಅಪರಾಧ ಪ್ರಕರಣಗಳು, ಎನ್.ಐ.ಎ ತನಿಖೆಗಳು, ಭಯೋತ್ಪಾದಕ ಚಚುವಟಿಕೆಗಳು ಆದಾಗ ಅಲ್ಲಿ ವರದಿಗಾರಿಕೆ. ಮಂಗಳೂರು ಗೋಲಿಬಾರ್, ಬೆಂಗಳೂರು ಕರ್ಫ್ಯೂ, ಏರ್ಪೋರ್ಟ್ ನಲ್ಲಿ ಜೀವಂತ ಬಾಂಬ್ ಆಪರೇಷನ್ ಗಳಲ್ಲಿ ವರದಿ ಮಾಡಿದ ಅನುಭವ.

Read More
Follow Us