ಮಂಗಳೂರು: ಕರಾವಳಿಯಲ್ಲಿ ಮುಂದುವರೆದ ಧರ್ಮಸಂಘರ್ಷ; ಅನ್ಯಧರ್ಮೀಯರಿಗಿಲ್ಲ ವ್ಯಾಪಾರ ಅನುಮತಿ
ತಾಲೂಕಿನ ಕಾವೂರು ಶ್ರೀಮಹಾಲಿಂಗೇಶ್ವರ ಜಾತ್ರೆ ನಡೆಯಲಿದ್ದು. ಅನ್ಯಧರ್ಮೀಯರಿಗೆ ವ್ಯಾಪಾರ ಮಾಡಲು ಅವಕಾಶವಿಲ್ಲವೆಂದು ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳದವರು ದೇವಸ್ಥಾನದಲ್ಲಿ ಬ್ಯಾನರ್ ಅಳವಡಿಸಿದ್ದಾರೆ.
ಮಂಗಳೂರು: ಬಿಜೆಪಿ ಶಾಸಕ ಡಾ.ಭರತ್ ಶೆಟ್ಟಿ ಕ್ಷೇತ್ರದಲ್ಲಿ ವ್ಯಾಪಾರಿ ಧರ್ಮದಂಗಲ್ ಶುರುವಾಗಿದೆ. ಅನ್ಯಧರ್ಮೀಯರ ವ್ಯಾಪಾರ ಬಹಿಷ್ಕರಿಸಿ ದೇವಸ್ಥಾನದ ಆಡಳಿತ ಮಂಡಳಿ ಅನುಮತಿ ಪಡೆದು ಸನಾತನ ಧರ್ಮದ ಆಚರಣೆ ಹಾಗೂ ನಂಬಿಕೆಗಳಲ್ಲಿ ವಿಶ್ವಾಸ ಉಳ್ಳ ಹಿಂದೂ ವ್ಯಾಪಾರಿಗಳಿಗೆ ಮಾತ್ರ ವ್ಯಾಪಾರಕ್ಕೆ ಅವಕಾಶ’ ಎಂದು ವಿಎಚ್ ಪಿ-ಭಜರಂಗದಳದವರು ಬ್ಯಾನರ್ ಅಳವಡಿಸಿದ್ದಾರೆ.
ಮಂಗಳೂರಿನ ಕಾವೂರು ಶ್ರೀಮಹಾಲಿಂಗೇಶ್ವರ ಜಾತ್ರೆಯು ಇಂದಿನಿಂದ ಜ.18 ರವರೆಗೆ ನಡೆಯಲಿದ್ದು ಧರ್ಮದಂಗಲ್ ಶುರುವಾಗಿದೆ. ಈಗಾಗಲೇ ರಾಜ್ಯದ ಹಲವು ಕಡೆಗಳಲ್ಲಿ ಅನ್ಯಧರ್ಮೀಯರಿಗೆ ಹಿಂದೂ ದೇವಸ್ಥಾನದ ಜಾತ್ರೆಗಳಲ್ಲಿ ವ್ಯಾಪಾರ ನಿಷೇಧಿಸಿದ್ದು ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ. ‘ವಿಗ್ರಹಾರಧನೆ ಹರಾಂ ಎಂದು ನಂಬಿದ ಯಾರಿಗೂ ವ್ಯಾಪಾರದ ಅವಕಾಶವಿಲ್ಲ’ ಎಂದು ಬ್ಯಾನರ್ ಅಳವಡಿಕೆ ಮಾಡಲಾಗಿದೆ.
ಇದನ್ನೂ ಓದಿ:ಕ್ರೈಸ್ತ ಧರ್ಮಕ್ಕೆ ಮತಾಂತರ ಆಗಿದ್ದ ಒಂದೇ ಕುಟುಂಬದ 7 ಜನರು ಹಿಂದು ಧರ್ಮಕ್ಕೆ ಘರ್ ವಾಪಸ್ಸಿ
ಈಗಾಗಲೇ ದೇವಸ್ಥಾನದ ಒಳ ಮತ್ತು ಹೊರ ಭಾಗದಲ್ಲಿ ಸ್ಟಾಲ್ಗಳು ನಿರ್ಮಾಣವಾಗಿವೆ. ಧಾರ್ಮಿಕ ದತ್ತಿ ವ್ಯಾಪ್ತಿಗೆ ಒಳಪಡುವ ಕಾವೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನ. ದೇವಸ್ಥಾನದ ಸುತ್ತ ಸಿಎಆರ್ ತುಕಡಿ ಸೇರಿ ಹೆಚ್ಚುವರಿ ಪೊಲೀಸ್ ಭದ್ರತೆ ಮಾಡಲಾಗಿದೆ. ಹಲವು ವರ್ಷಗಳಿಂದ ಮುಸ್ಲಿಂ ವ್ಯಾಪಾರಿಗಳು ವ್ಯಾಪಾರ ನಡೆಸುತ್ತಿದ್ದ ಜಾತ್ರೆ ಇದಾಗಿದ್ದು, ಈ ಬಾರಿ ಭಜರಂಗದಳದ ಕಾರ್ಯಕರ್ತರಿಗೆ ಸ್ಟಾಲ್ಗಳ ನಿರ್ವಹಣೆ ಉಸ್ತುವಾರಿ ನೀಡಿದ್ದು, ದೇವಸ್ಥಾನದ ಆಡಳಿತ ಮಂಡಳಿ ಸಭೆಯಲ್ಲೇ ವ್ಯಾಪಾರ ಬಹಿಷ್ಕಾರದ ನಿರ್ಧಾರವನ್ನ ಕೈಗೊಳ್ಳಲಾಗಿದೆ.
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ