Ayodhya Ram Mandir: ಕೋಮು ಸೂಕ್ಷ್ಮ ಪ್ರದೇಶ ಮಂಗಳೂರಿನಲ್ಲಿ ಹೈ ಅಲರ್ಟ್
ಆಯೋಧ್ಯೆ ರಾಮಮಂದಿರ ಉದ್ಘಾಟನೆ ಹಿನ್ನಲೆ ಕರಾವಳಿಯಾದ್ಯಂತ ರಾಮಮಂದಿರ ಉದ್ಘಾಟನೆ ಸಂಭ್ರಮ ಜೋರಾಗಿದೆ. ಅಲ್ಲಲ್ಲಿ ಕೇಸರಿ ಧ್ವಜ, ರಾಮನ ಫ್ಲೆಕ್ಸ್ ಹಾಕಿ ಭಕ್ತರು ಸಂಭ್ರಮಿಸುತ್ತಿದ್ದಾರೆ. ಪೊಲೀಸರು ಭದ್ರತಾ ತಪಾಸಣೆ ಆರಂಭಿಸಿದ್ದಾರೆ. ಮಂಗಳೂರಿನ ನ್ಯೂಚಿತ್ರ ಟಾಕೇಸ್ ಬಳಿ ತಪಾಸಣೆ ಆರಂಭವಾಗಿದೆ.
ಮಂಗಳೂರು, ಜ.21: ಅಯೋಧ್ಯೆಯ ರಾಮಮಂದಿರಲ್ಲಿ ನಾಳೆ (ಜನವರಿ 22) ರಾಮಲಲ್ಲಾ ವಿಗ್ರಹ ಪ್ರತಿಷ್ಠಾಪನೆ ಸಮಾರಂಭ ನಡೆಯಲಿದೆ (Ayodhya Ram Mandir). ಈ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಯಾವುದೇ ಅಹಿತಕ ಘಟನೆಗಳು ನಡೆಯದಂತೆ ಬಂದೋಬಸ್ತ್ ಕೈಗೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪೊಲೀಸ್ ಇಲಾಖೆ ಸೂಚಿನೆ ನೀಡಿದ್ದಾರೆ. ಹೀಗಾಗಿ ಪೊಲೀಸ್ ಇಲಾಖೆ ಎಲ್ಲೆಡೆ ಕಟ್ಟೆಚ್ಚರ ವಹಿಸಿದೆ. ಅದರಲ್ಲೂ ಕೋಮು ಸೂಕ್ಷ್ಮ ಪ್ರದೇಶ ಎಂದೇ ಕರೆಯುವ ಮಂಗಳೂರಿನಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದು, ಎಲ್ಲೆಡೆ ತಪಾಸಣೆ ನಡೆಸಿದ್ದಾರೆ.
ಆಯೋಧ್ಯೆ ರಾಮಮಂದಿರ ಉದ್ಘಾಟನೆ ಹಿನ್ನಲೆ ಕರಾವಳಿಯಾದ್ಯಂತ ರಾಮಮಂದಿರ ಉದ್ಘಾಟನೆ ಸಂಭ್ರಮ ಜೋರಾಗಿದೆ. ಅಲ್ಲಲ್ಲಿ ಕೇಸರಿ ಧ್ವಜ, ರಾಮನ ಫ್ಲೆಕ್ಸ್ ಹಾಕಿ ಭಕ್ತರು ಸಂಭ್ರಮಿಸುತ್ತಿದ್ದಾರೆ. ಪೊಲೀಸರು ಭದ್ರತಾ ತಪಾಸಣೆ ಆರಂಭಿಸಿದ್ದಾರೆ. ಮಂಗಳೂರಿನ ನ್ಯೂಚಿತ್ರ ಟಾಕೇಸ್ ಬಳಿ ತಪಾಸಣೆ ಆರಂಭವಾಗಿದೆ. ಮಂಗಳೂರು ನಗರದಾದ್ಯಂತ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗುತ್ತಿದೆ. ಇಂದು ಮಧ್ಯರಾತ್ರಿಯಿಂದ ಜ,23ರ ಮುಂಜಾನೆ ವರೆಗೆ ಮದ್ಯ ಮಾರಾಟ ಬಂದ್ ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಫ್ಲೆಕ್ಸ್ ಬಂಟಿಂಗ್ಸ್ ಗಳ ಮೇಲೆ ನಿಗಾ ಇಡಲು ಪಾಲಿಕೆಗೆ ಸೂಚನೆ ನೀಡಿದೆ. 196 ಕಡೆ ಧಾರ್ಮಿಕ ಕಾರ್ಯಕ್ರಮ ಸ್ಥಳ ಗುರುತು ಮಾಡಲಾಗಿದ್ದು 131 ಸೂಕ್ಷ್ಮ ಪ್ರದೇಶ ಗುರುತಿಸಲಾಗಿದೆ. ಈ ಪ್ರದೇಶದ ಮೇಲೆ ಹೆಚ್ಚಿನ ಗಮನ ಇಡಲಾಗಿದೆ. 57 ಸೆಕ್ಟರ್ ಮೊಬೈಲ್ ಸ್ವ್ಕಾಡ್ ಹಗಲು ರಾತ್ರಿ ಗಸ್ತು ಮಾಡಲಿದೆ. 14 ಚಕ್ ಪಾಯಿಂಟ್ ನಿಯೋಜಿಸಲಾಗಿದೆ. 9 ಸಿಎಆರ್, 3 ಕೆಎಸ್ಆರ್ಪಿ ತುಕಡಿ ನಿಯೋಜನೆ ಮಾಡಲಾಗಿದೆ. ಮಂಗಳೂರಿನ ಎಲ್ಲಾ ಕಡೆ ವಿದ್ವಂಸಕ ತಪಾಸಣಾ ತಂಡದಿಂದ ತಪಾಸಣೆ ಮಾಡಲಾಗುತ್ತಿದೆ. ಮೆರವಣಿಗೆ, ರ್ಯಾಲಿಗಳಿಗೆ ಅವಕಾಶ ಇಲ್ಲ. 3 ಡಿಸಿಪಿ, 6 ಎಸಿಪಿ, 11 ಪಿಐ, 37 ಪಿಎಸ್ಐ ಹಾಗೂ 781 ಪೊಲೀಸ್ ನಿಯೋಜನೆ ಮಾಡಲಾಗಿದೆ.
ಇದನ್ನೂ ಓದಿ: Ram Mandir: ಅಯೋಧ್ಯೆ ರಾಮನ ಪ್ರಾಣಪ್ರತಿಷ್ಠೆ ಕುರಿತು ಟೀಕಿಸುತ್ತಿದ್ದಂತೆ ಕುಸಿದು ಬಿದ್ದ ವೇದಿಕೆ; ಇಲ್ಲಿದೆ ವಿಡಿಯೋ
ನಾಳೆ ಮಧ್ಯಾಹ್ನ 12 ಗಂಟೆ 29ನಿಮಿಷಕ್ಕೆ ಪ್ರಾಣಪ್ರತಿಷ್ಠಾಪನೆ
ಅಯೋಧ್ಯೆಯ ರಾಮಮಂದಿರದಲ್ಲಿ ಭಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಕ್ಷಣಗಣನೆ ಶುರುವಾಗಿದೆ. ನಾಳೆ ಶತಶತಮಾನಗಳಿಂದ ರಾಮ ಭಕ್ತರ ಕನವರಿಕೆಗೆ ಫಲಸಿಗುವ ಸನ್ನಿವೇಶ ಒದಗಿ ಬರಲಿದೆ. ಅದಕ್ಕಾಗಿ ದೇವನಗರಿ ಅಯೋಧ್ಯೆ ಹಿಂದೆಂದಿಗಿಂತಲೂ ನವ ವೈಭವದಲ್ಲಿ ಅದ್ಧೂರಿಯಾಗಿ ಸಜ್ಜುಗೊಂಡಿದೆ. ನಾಳೆ ಮಧ್ಯಾಹ್ನ 12 ಗಂಟೆ 29ನಿಮಿಷ ಶುಭ ಮುಹೂರ್ತದಲ್ಲಿ. ಬಾಲ ರಾಮನ ಪ್ರಾಣ ಪ್ರತಿಷ್ಠಾಪನೆ ನೆರವೇರಲಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ